Black Money: ಕಪ್ಪು ಹಣ ಹೂತಿಡಲು ದ್ವೀಪರಾಷ್ಟ್ರದ ಮೊರೆ ಹೋದ ಭಾರತೀಯ ಧನಿಕರು
ಭಾರತದಲ್ಲಿ ಸಿರಿವಂತರಿಗೆ ಏನು ಕಮ್ಮಿ ಇಲ್ಲ. ಹಾಗೇ ಬಡವರ ಸಂಖ್ಯೆಯೂ ಹೆಚ್ಚಳವಾಗಿದೆ. ಭಾರತದಲ್ಲಿ ಕಪ್ಪು ಹಣ ತಾಂಡವ ಆಡುತ್ತಿದೆ. ಇದನ್ನು ಹತ್ತಿಕ್ಕಲು ಸರ್ಕಾರ ಹಲವು ಕ್ರಮಗಳನ್ನು ಕೈಗೊಂಡರೂ, ಜನರು ಮಾತ್ರ ಬೇರೆ ಬೇರೆ ವಾಮ ಮಾರ್ಗಗಳನ್ನು ಬಳಿಸುತ್ತಲೇ ಇದ್ದಾರೆ.
ಮೊದಲೆಲ್ಲಾ ಸ್ವಿಸ್ ಬ್ಯಾಂಕ್‌ನಲ್ಲಿ ಹಣವನ್ನು ಇಡುತ್ತಿದ್ದ ಹಣಿಕರು, ಈಗ ಹಣ ಇಡುವ ಸ್ವರೂಪವನ್ನು ಚೇಂಜ್ ಮಾಡಿಕೊಂಡಿದ್ದಾರೆ. ಭಾರತದಿಂದ ಕೇವಲ ಸಾವಿರಾರು ಕಿಲೋಮೀಟರ್ ದೂರ ಪಕ್ಕದಲ್ಲೇ ಇರುವ ದ್ವೀಪ ರಾಷ್ಟ್ರ ಭಾರತದ ಕುಬೇರರ ಹಣವನ್ನು ಹೂತು ಇಡುವ ಸ್ಥಳವಾಗಿದೆ. ಏನಪ್ಪಾ ಇದು, ಯಾವುದು ಆ ಸ್ಥಳ ಅನ್ನುವ ಕುತೂಹಲನಾ ಇಲ್ಲಿದೆ ವರದಿ.

ಭಾರತೀಯರು ಹಣ ಹೂಡುತ್ತಿರುವುದು ಏಲ್ಲಿ?
ಹೌದು ಭಾರತದಲ್ಲಿನ ಶ್ರೀಮಂತ ವ್ಯಕ್ತಿಗಳು ಈಗ ತಮ್ಮಲ್ಲಿರುವ ಹಣವನ್ನು ದುಬೈನಲ್ಲಿ ಹೂಡಿಕೆ ಮಾಡುತ್ತಿದ್ದಾರೆ. ದುಬೈನಲ್ಲಿ ಯಾವ ದೇಶಗಳಿಂದ ಜನರು ಆಸ್ತಿ ಖರೀದಿಸುತ್ತಿದ್ದಾರೆ ಎಂದು ಈ ವರದಿಯಲ್ಲಿ ತಿಳಿಸಲಾಗಿದೆ. ದುಬೈನಲ್ಲಿ ಭಾರತೀಯರು ಹೆಚ್ಚು ಆಸ್ತಿ ಹೊಂದಿದ್ದಾರೆ ಎಂದು ಜಿಯೋ ನ್ಯೂಸ್ ವರದಿಯನ್ನು ಉಲ್ಲೇಖಿಸಿದೆ. ಇನ್ನು ಈ ಪಟ್ಟಿಯಲ್ಲಿ ಆರ್ಥಿಕ ತೊಂದರೆ ಅನುಭವಿಸುತ್ತಿರುವ ಪಾಕ್ ದೇಶದ ಹೆಸರಾಂತ ಶ್ರೀಮಂತರೂ ಸೇರಿದ್ದಾರೆ. ಜಾಗತಿಕ ತನಿಖಾ ಪತ್ರಿಕೋದ್ಯಮ ಯೋಜನೆಯು ಇದನ್ನು ಬಹಿರಂಗಪಡಿಸಿದೆ.
ಯಾವ ಕ್ಷೇತ್ರದಲ್ಲಿ ಹಣ ಹೂಡಿಕೆ
ಕಳೆದ ಕೆಲವು ದಶಕಗಳಲ್ಲಿ ದುಬೈನಲ್ಲಿ ರಿಯಲ್ ಎಸ್ಟೇಟ್ ನಲ್ಲಿ ಹೂಡಿಕೆ ಮಾಡುತ್ತಿರುವವರ ಸಂಖ್ಯೆ ಏರಿಕೆ ಆಗಿದೆ. ಭಾರತದ ಅನೇಕ ದೊಡ್ಡ ವ್ಯಕ್ತಿಗಳು ಹೂಡಿಕೆಗಾಗಿ ದುಬೈನಲ್ಲಿ ಆಸ್ತಿಗಳನ್ನು ಹೊಂದಿದ್ದಾರೆ. ಜಾಗತಿಕ ನಿರ್ಬಂಧಗಳು ಮತ್ತು ಮನಿ ಲಾಂಡರಿಂಗ್ ಆರೋಪಕ್ಕೆ ಗುರಿಯಾಗಿರುವ ಜನರು ಸಹ ಇಲ್ಲಿ ಆಸ್ತಿಯಲ್ಲಿ ಹೂಡಿಕೆ ಮಾಡಿದ್ದಾರೆ ಎಂದು ವರದಿ ಹೇಳುತ್ತದೆ.

ಆರ್ಥಿಕ ಅಪರಾಧಿಗಳು ತಮ್ಮ ಕಪ್ಪು ಹಣವನ್ನು ದುಬೈನ ರಿಯಲ್ ಎಸ್ಟೇಟ್ ನಲ್ಲಿ ಹೂಡಿಕೆ ಮಾಡುತ್ತಿದ್ದಾರೆ. ಆದರೆ ದುಬೈನಲ್ಲಿ ಹೂಡಿಕೆ ಮಾಡುವ ಪ್ರತಿಯೊಬ್ಬರ ಬಳಿ ಕಪ್ಪು ಹಣವಿದೆ ಎಂದು ಇದರ ಅರ್ಥವಲ್ಲ. ಅಮೆರಿಕದ ನ್ಯೂಯಾರ್ಕ್ ಮತ್ತು ಲಂಡನ್‌ನಲ್ಲಿ ರಿಯಲ್ ಎಸ್ಟೇಟ್ ಕೂಡ 'ಕಪ್ಪು ಹಣವನ್ನು' ಆಕರ್ಷಿಸುತ್ತದೆ ಎಂದು ವರದಿ ಹೇಳುತ್ತದೆ. ಆದರೆ ಪಾಶ್ಚಿಮಾತ್ಯ ದೇಶಗಳಲ್ಲಿ ನಿರ್ಬಂಧನೆಗಳು ಇರುವುದರಿಂದ ಜನರು ದುಬೈನಲ್ಲಿ ಆಸ್ತಿ ಖರೀದಿಸಲು ಬಯಸುತ್ತಾರೆ.
ಭಾರತೀಯರು ಹೂಡಿಕೆ ಮಾಡಿದ ಹಣ ಎಷ್ಟು?
ಯುಎಇಯಲ್ಲಿ ವಾಸಿಸುತ್ತಿರುವ ಅನ್ಯ ದೇಶವಾಸಿಗಳ ಸಂಖ್ಯೆಯನ್ನು ನೋಡಿದರೆ ಈ ಪಟ್ಟಿಯಲ್ಲಿ ಭಾರತ ಮೊದಲನೇ ಸ್ಥಾನದಲ್ಲಿದೆ. ದುಬೈ ಅನ್‌ಲಾಕ್‌ನ ಮಾಹಿತಿಯ ಪ್ರಕಾರ, 29700 ಭಾರತೀಯರು ಇಲ್ಲಿ ಆಸ್ತಿಯನ್ನು ಖರೀದಿಸಿದ್ದಾರೆ. ಈ ಆಸ್ತಿಗಳ ಅಂದಾಜು ಮೌಲ್ಯ $17 ಬಿಲಿಯನ್ ಎಂದು ಅಂದಾಜಿಸಲಾಗಿದೆ.
ಪಾಕಿಸ್ತಾನದ ನಾಯಕರ ಹೆಸರು
ಪಾಕಿಸ್ತಾನಿ ನಾಯಕರು ಮತ್ತು ಸೇನಾ ಅಧಿಕಾರಿಗಳು ದುಬೈನಲ್ಲಿ ತಮ್ಮ ಅಕ್ರಮ ಹಣವನ್ನು ರಿಯಲ್ ಎಸ್ಟೇಟ್‌ನಲ್ಲಿ ಹೂಡಿಕೆ ಮಾಡಿದ್ದಾರೆ ಎಂದು ಹಿಂದೆಯೂ ಆರೋಪಿಸಲಾಗಿತ್ತು. ಈ ಪಟ್ಟಿಯಲ್ಲಿ ಪಾಕಿಸ್ತಾನದ ಅಧ್ಯಕ್ಷ ಆಸಿಫ್ ಅಲಿ ಜರ್ದಾರಿ ಅವರ ಕುಟುಂಬ ಮತ್ತು ಪಾಕಿಸ್ತಾನದ ದಿವಂಗತ ಜನರಲ್ ಪರ್ವೇಜ್ ಮುಷರಫ್ ಅವರ ಹೆಸರು ಸೇರಿದೆ.
ಪಾಕಿಸ್ತಾನದ ಹೆಸರಾಂತ ರಾಜಕಾರಣಿಗಳು ಹಾಗೂ ಅಧಿಕಾರಿಗಳು ದುಬೈನಲ್ಲಿ ಇನ್ವೆಸ್ಟ್ ಮಾಡಿದ್ದಾರೆ. ಪಾಕಿಸ್ತಾನಿಗಳು ಈ ದೇಶದಲ್ಲಿ 23000 ಆಸ್ತಿಗಳನ್ನು ಹೊಂದಿದ್ದಾರೆ.












Click it and Unblock the Notifications