ಕುಡಿದ ಮತ್ತಿನಲ್ಲಿ ಬೆಂಗಳೂರಿನಿಂದ ಮುಂಬೈಗೆ ಬಿರಿಯಾನಿ ಆರ್ಡರ್ ಮಾಡಿದ ಹುಡುಗಿ ! ಅಸಲಿತ್ತು ಏನು ಗೊತ್ತೇ ?

ಮುಂಬೈ,ಜನವರಿ 23: ಮಧ್ಯಪ್ರೀಯರ ನೆಚ್ಚಿನ ಗಾಯಕ ಜಗಜಿತ್ ಸಿಂಗ್ ಅವರ ಮೆ ನಶೆ ಮೇ ಹೂ...ಎನ್ನುವ ಹಾಡಿನಂತೆ ಮುಂಬೈ ಮೂಲದ ಹುಡುಗಿಯೊಬ್ಬಳು ಕುಡಿದ ಅಮಲಿನಲ್ಲಿ ಆನ್‌ಲೈನ್‌ನಲ್ಲಿ ಅಂತರಾಜ್ಯದಿಂದ ಬಿರಿಯಾನಿ ಆರ್ಡರ್ ಮಾಡುವ ಮೂಲಕ ಹುಬ್ಬೇರಿಸುವಂತೆ ಮಾಡಿದ್ದಾಳೆ.

ಸಾಮಾನ್ಯವಾಗಿ ಹತ್ತಿರದಲ್ಲಿರುವ ಹೋಟೆಲ್‌ಗಳಿಂದ ಆಹಾರವನ್ನು ಆರ್ಡರ್ ಮಾಡಲಾಗುತ್ತದೆ. ಆದರೇ ಈ ಹುಡುಗಿ ಕುಡಿತ ಮತ್ತಿನಲ್ಲಿ ಆನ್‌ಲೈನ್ ಮೂಲಕ ಬೆಂಗಳೂರಿನ ಪ್ರತಿಷ್ಠಿತ ಮೇಘನಾ ಫುಡ್ಸ್‌ ಹೋಟೆಲ್‌ನಿಂದ ಮುಂಬೈನಲ್ಲಿರುವ ತನ್ನ ನಿವಾಸಕ್ಕೆ ಬಿರಿಯಾನಿ ಆರ್ಡರ್‌ ಮಾಡಿರುವ ವಿಚಿತ್ರ ಘಟನೆಯೊಂದ ಸಂಭವಿಸಿದೆ.

ಅಮಲೇರಿದ ಸ್ಥಿತಿಯಲ್ಲಿದ್ದ ಹುಡುಗಿ ಆನ್‌ಲೈನ್ ಮೂಲಕ ಬಿರಿಯಾನಿ ಆರ್ಡರ್ ಮಾಡಲು ಮುಂದಾಗಿದ್ದಾಳೆ. ಕಣ್ಣುಗಳು ಮಂಜು ಮಂಜಾಗಿ ಕಾಣಿಸಿದ್ದು ತಪ್ಪಾಗಿ ಬೆಂಗಳೂರಿನ ಹೋಟೆಲ್ ಆಯ್ಕೆ ಮಾಡಿಕೊಂಡಿದ್ದಾಳೆ. ಅಷ್ಟೇ ಅಲ್ಲದೇ 2500 ರೂ ಸಹ ಪಾವತಿಸಿದ್ದಾಳೆ.

 Drunk Mumbai girl orders Rs. 2,500 worth of biryani from Bengaluru; What Happened Next

ನಶೆಯ ಪ್ರಮಾಣ ಕ್ರಮೇಣ ಇಳಿಯುತ್ತಿದ್ದಂತೆ, ಆರ್ಡರ್ ಮಾಡಿದ ವಿಳಾಸವನ್ನು ಪುನಃ ಪರಿಶೀಲಿಸಿದಾಗ ತಾನು ಮಾಡಿದ ತಪ್ಪು ಅರಿವಿಗೆ ಬಂದಿದೆ. ನಂತರ ನಶೆಯಲ್ಲಿ ನನ್ನೊಂದಿಗೆ ಈ ತರಹದ ಘಟನೆಯೊಂದು ಸಂಭವಿಸಿದೆ ಎಂದು ಟ್ವಿಟ್‌ ಮಾಡಿದ್ದು, ಈ ಪೋಸ್ಟ್‌ಗೆ ಜೊಮ್ಯಾಟೋ ಸೇರಿದಂತೆ ಅನೇಕ ಟ್ವಿಟರ್ ಬಳಕೆದಾರರಿಂದ ಆಸಕ್ತಿದಾಯಕ ಕಾಮೆಂಟ್‌ಗಳು ಬಂದಿವೆ.

ಟ್ವಿಟ್‌ನಲ್ಲಿ ಏನಿದೆ !

ಅಮಲೇರಿದ ಸ್ಥಿತಿಯಲ್ಲಿದ್ದ ಹುಡುಗಿ ಬೆಂಗಳೂರಿನ ಮೇಘನಾ ಫುಡ್ಸ್ ರೆಸ್ಟೋರೆಂಟ್‌ನಿಂದ ತಪ್ಪಾಗಿ ಬಿರಿಯಾನಿ ಆರ್ಡರ್ ಮಾಡಿದ್ದಾಳೆ. 2500 ರೂಪಾಯಿ ಪಾವತಿಸಿದ್ದಾಳೆ. ನಶೆಯ ಪ್ರಮಾಣ ಕಡಿಮೆಯಾದಾಗ ಮತ್ತೇ ಆರ್ಡರ್ ಸ್ಟೇಟಸ್‌ ಚೆಕ್‌ ಮಾಡಲು ಮುಂದಾದಾಗ ಈ ಘಟನೆ ಸಂಭವಿಸಿರುವುದು ಖಚಿತವಾಗಿದೆ.ಅವಳು ತನ್ನ ಆದೇಶದ ಸ್ಕ್ರೀನ್‌ಶಾಟ್ ತೆಗೆದುಕೊಂಡು ಅದನ್ನು ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದಾಳೆ. "ನಾನು ಬೆಂಗಳೂರಿನಿಂದ 2500 ರೂಪಾಯಿ ಮೌಲ್ಯದ ಬಿರಿಯಾನಿಯನ್ನು ಆರ್ಡರ್ ಮಾಡಿದ್ದೇನೆಯೇ? ಎಂದು ಕ್ಯಾಪ್ಷನ್ ಬರೆದುಕೊಂಡಿದ್ದಾಳೆ.

ಜನವರಿ 21ರಂದು ಈ ಪೋಸ್ಟ್‌ ಹಾಕಲಾಗಿದ್ದು, ಮತ್ತು ಈಗಾಗಲೇ 492.5k ಬಾರಿ ವೀಕ್ಷಿಸಲಾಗಿದೆ. ಸುಬಿ, ಆರ್ಡರ್ ನಿಮ್ಮ ಮನೆ ಬಾಗಿಲಿಗೆ ಬಂದ ನಂತರ ನೀವು ಸಂತೋಷದ ಹ್ಯಾಂಗೊವರ್ ಹೊಂದಿರುತ್ತೀರಿ. ನಿಮ್ಮ ಅನುಭವದ ಬಗ್ಗೆ ನಮಗೆ ತಿಳಿಸಿ ಎಂದು ಜೊಮ್ಯಾಟೋ ಕಾಮೆಂಟ್ ಮಾಡಿದೆ.

ಆರ್ಡರ್‌ ಸ್ವೀಕರಿಸಿರುವ ಯುವತಿ ಬಿರಿಯಾನಿಯೊಂದಿಗಿನ ಸಲಾನ್, ರೈತಾ ಮತ್ತು ಚಿಪ್ಸ್ಗಳನ್ನು ಹೊಂದಿರುವ ಚಿತ್ರಗಳನ್ನು ಸಹ ಹಂಚಿಕೊಂಡಿದ್ದಾರೆ. ಅದರೊಂದಿಗೆ ಅತ್ಯುತ್ತಮ ನಿರ್ಧಾರ ಜೊಮ್ಯಾಟೋ, ನನ್ನ ಸಂಬಳ ಎಲ್ಲಿದೆ ಎಂದು ತಮಾಷೆಯಾಗಿ ಕ್ಯಾಪ್ಷನ್ ಬರೆದುಕೊಂಡಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+