ಡ್ರೈವರ್ ಲೆಸ್ ಕಾರುಗಳಿಗೆ ಭಾರತ ಪ್ರವೇಶವಿಲ್ಲ: ಸಚಿವ ನಿತಿನ್ ಗಡ್ಕರಿ

Posted By:
Subscribe to Oneindia Kannada

ನವದೆಹಲಿ, ಜುಲೈ 25: ವಿಶ್ವ ಆಟೊಮೊಬೈಲ್ ಕ್ಷೇತ್ರದಲ್ಲಿ ಸದ್ದು ಮಾಡುತ್ತಿರುವ ಚಾಲಕ ರಹಿತ ಕಾರುಗಳನ್ನು ಭಾರತದಲ್ಲಿ ಯಾವುದೇ ಕಾರಣಕ್ಕೂ ಅನುವು ಮಾಡುವುದಿಲ್ಲ ಎಂದು ಕೇಂದ್ರ ಸಾರಿಗೆ ಸಚಿವ ನಿತಿನ್ ಗಡ್ಕರಿ ತಿಳಿಸಿದ್ದಾರೆ.

ಡ್ರೈವರ್ ಲೆಸ್ ಕಾರುಗಳನ್ನು ಭಾರತದಲ್ಲಿ ಅನುವು ಮಾಡುವುದರ ಬದಲು, ದೇಶದ ಎಲ್ಲೆಡೆ ಉತ್ತಮ ಚಾಲನಾ ಕಲಿಕೆ ತರಬೇತಿಗಳನ್ನು ನೀಡಿ, ಮುಂದಿನ ದಿನಗಳಲ್ಲಿ ಸುಮಾರು 50 ಲಕ್ಷ ಹೊಸ ಚಾಲಕರಿಗೆ ಉದ್ಯೋಗಾವಕಾಶ ನೀಡಬಹದು. ಸರ್ಕಾರ ಇಂಥ ಸಾರ್ಥಕ ಕೆಲಸಗಳಿಗೆ ಕೈ ಹಾಕಲಿದೆಯೇ ಹೊರತು ಡ್ರೈವರ್ ಲೆಸ್ ಕಾರುಗಳನ್ನು ಭಾರತಕ್ಕೆ ಅನುವು ಮಾಡುವಂಥ ನಿರ್ಧಾರ ಗಳನ್ನು ಕೈಗೊಳ್ಳುವುದಿಲ್ಲ ಎಂದು ತಿಳಿಸಿದರು.

Driver less Cars Won’t Be Allowed in India, Says Transport Minister Nitin Gadkari

ತಮ್ಮ ಮಾತುಗಳನ್ನು ಸಮರ್ಥಿಸಿಕೊಂಡ ಅವರು, ''ದೇಶದಲ್ಲಿನ ಖಾಸಗಿ ವಾಹನಗಳಿಗೆ ಸದ್ಯದ ಮಟ್ಟಿಗೆ 22 ಲಕ್ಷ ಚಾಲಕ ಕೊರತೆಯಿದೆ. ಇದರ ಲಾಭವನ್ನು ಕ್ಯಾಬ್ ಮಾಲೀಕರು ಪಡೆಯುತ್ತಿದ್ದಾರೆ. ಇದನ್ನು ತಪ್ಪಿಸಲು ನಾವು ಹೊಸ ಪೀಳಿಗೆಯ ಚಾಲಕರನ್ನು ಸೃಷ್ಟಿ ಮಾಡಬೇಕಿದೆ. ಇದಕ್ಕಾಗಿ ನಾವು ಹೊಸ ತಂತ್ರಜ್ಞಾನವನ್ನು ತರಬೇಕಿಲ್ಲ. ಆದರೆ, ನಿರುದ್ಯೋಗ ಯುವಕರಿಗೆ ಸೂಕ್ತ ರೀತಿಯಲ್ಲಿ ಚಾಲನಾ ತರಬೇತಿ ನೀಡಿ ಅವರ ಕೆಲಸಕ್ಕೆ ದಾರಿ ಮಾಡಿಕೊಟ್ಟರೆ, ಅವರ ಬಾಳಿಗೂ ಅದು ನೆರವಾಗುತ್ತದೆ'' ಎಂದು ಗಡ್ಕರಿ ತಿಳಿಸಿದ್ದಾರೆ.

Cases found Vendors applying GST and also Excise and VAT taxes | Oneindia Kannada

ಇದೇ ವೇಳೆ, ಶೀಘ್ರವೇ ಕೇಂದ್ರ ಸರ್ಕಾರವು ಕ್ಯಾಬ್ ಆಯ್ಕೆ ವೆಬ್ ಸೈಟ್ ಆರಂಭಿಸಲಿದ್ದು, ದೇಶದ ಯಾವುದೇ ನಗರದಲ್ಲಿ ಪ್ರಯಾಣ ಬೆಳೆಸಲು ಬಯಸುವ ನಾಗರಿಕರು, ಎಲೆಕ್ಟ್ರಿಕ್ ಕಾರು, ಇಂಧನವುಳ್ಳ ಕಾರು ಅಥವಾ ದ್ವಿಚಕ್ರ ವಾಹನಗಳಲ್ಲಿ ಒಂದನ್ನು ಆಯ್ಕೆ ಮಾಡಿಕೊಳ್ಳುವ ಅನುಕೂಲ ಕಲ್ಪಿಸಲಾಗುವುದು ಎಂದು ತಿಳಿಸಿದರು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Union minister Nitin Gadkari on Monday said driver less cars will not be allowed in India as it will lead to joblessness. The road transport minister further said that instead the government will focus on training drivers as adequate driving skills can provide employment to about 50 lakh people.
Please Wait while comments are loading...