Atal Setu: ಅಟಲ್ ಸೇತುವೆಯಿಂದ ಜಿಗಿಯಲು ಮಹಿಳೆ ಯತ್ನ; ಚಾಲಕ, ಪೊಲೀಸರಿಂದ ರಕ್ಷಣೆ ವಿಡಿಯೋ ವೈರಲ್
ಮುಂಬೈನ ಅಟಲ್ ಸೇತುವೆ ಎಂದು ಕರೆಯಲಾಗುವ ಮುಂಬೈ ಟ್ರಾನ್ಸ್ ಹಾರ್ಬರ್ ಲಿಂಕ್‌ನಿಂದ ಕೆಳಗೆ ಜಿಗಿಯಲು ಯತ್ನಿಸಿರುವ ಆಘಾತಕಾರಿ ಘಟನೆ ನಡೆದಿದೆ. ಶುಕ್ರವಾರ ಸಂಜೆ ಈ ಘಟನೆ ನಡೆದಿದ್ದು, ಕ್ಯಾಬ್ ಚಾಲಕ ಮತ್ತು ಪೊಲೀಸ್ ಸಿಬ್ಬಂದಿ ಸರಿಯಾದ ಸಮಯಕ್ಕೆ ಆಗಮಿಸಿ ಮಹಿಳೆಯನ್ನು ರಕ್ಷಣೆ ಮಾಡಿದ್ದಾರೆ. ಸದ್ಯ ಮಹಿಳೆಯನ್ನು ರಕ್ಷಣೆ ಮಾಡುವ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.
ಮಹಿಳೆ ಕೆಳಗೆ ಜಿಗಿಯುವ ವೇಳೆ ಚಾಲನಕ ಸಮಯಪ್ರಜ್ಞೆಯಿಂದ ಮಹಿಳೆಯನ್ನು ಹಿಡಿದುಕೊಂಡಿದ್ದು, ತಕ್ಷಣಕ್ಕೆ ಸ್ಥಳಕ್ಕೆ ಆಗಮಿಸಿದ ಪೊಲೀಸರು ಮಹಿಳೆಯನ್ನು ರಕ್ಷಣೆ ಮಾಡಿ ಸುರಕ್ಷಿತವಾಗಿ ಕರೆದೊಯ್ದಿದ್ದಾರೆ. ಆತ್ಮಹತ್ಯೆಗೆ ಯತ್ನಿಸಿದ ಮಹಿಳೆಯನ್ನು 56 ವರ್ಷದ ರೀಮಾ ಮುಖೇಶ್ ಪಟೇಲ್ ಎಂದು ಗುರುತಿಸಲಾಗಿದ್ದು, ಮುಂಬೈನ ಈಶಾನ್ಯ ಭಾಗದಲ್ಲಿರುವ ಮುಲುಂಡ್‌ನ ಉಪನಗರ ನಿವಾಸಿಯಾಗಿದ್ದಾರೆ.

ವೈರಲ್ ಆಗಿದೆ ವಿಡಿಯೋ
ವೈರಲ್ ಆಗಿರುವ ವೀಡಿಯೊದಲ್ಲಿ, ರೀಮಾ ಮುಖೇಶ್ ಪಟೇಲ್ ಅಟಲ್ ಸೇತುವಿನ ಸುರಕ್ಷತಾ ತಡೆಗೋಡೆಯ ಮೇಲೆ ಕುಳಿತಿರುವುದನ್ನು ಕಾಣಬಹುದು. ನಂತರ ಅವರು ಸಮುದ್ರಕ್ಕೆ ಜಿಗಿಯಲು ಪ್ರಯತ್ನಿಸುತ್ತಾರೆ, ಆದರೆ ಚಾಲಕ ಆಕೆಯ ಕೈಯನ್ನು ಹಿಡಿದುಕೊಂಡು, ಮಹಿಳೆ ಕೆಳಗೆ ಬೀಳುವುದನ್ನು ತಪ್ಪಿಸುತ್ತಾನೆ.
Viewers Discretion Advised
— पोलीस आयुक्त, बृहन्मुंबई - CP Mumbai Police (@CPMumbaiPolice) August 16, 2024
Responding promptly to an attempt to die by suicide at MTHL Atal Setu, the on-duty officials, PN Lalit Shirsat, PN Kiran Mahtre, PC Yash Sonawane & PC Mayur Patil of @Navimumpolice jumped over the railing & rescued the individual saving her life.
I… pic.twitter.com/h9JYayucLk
ಸೇತುವೆ ಮೇಲೆ ಗಸ್ತು ತಿರುಗುತ್ತಿದ್ದ ವಾಹನದಲ್ಲಿದ್ದ ಸಿಬ್ಬಂದಿ ತಕ್ಷಣ ಸ್ಥಳಕ್ಕೆ ಧಾವಿಸಿ ಆಕೆಯನ್ನು ಮೇಲಕ್ಕೆ ಎಳೆದುಕೊಳ್ಳಲು ಚಾಲಕನಿಗೆ ಸಹಾಯ ಮಾಡುತ್ತಾರೆ. ಒಂದು ನಿಮಿಷದ ಪ್ರಯತ್ನದ ಬಳಿಕ ಮಹಿಳೆಯನ್ನು ಸುರಕ್ಷಿತವಾಗಿ ಮೇಲಕ್ಕೆ ಎಳೆದುಕೊಳ್ಳಲಾಗುತ್ತದೆ. ಅಂತಿಮವಾಗಿ ಚಾಲಕ ಮತ್ತು ರಕ್ಷಣಾ ಸಿಬ್ಬಂದಿ ಮಹಿಳೆಯನ್ನು ರಕ್ಷಿಸುವಲ್ಲಿ ಯಶಸ್ವಿಯಾಗುತ್ತಾರೆ.
ಪೊಲೀಸರಿಂದ ಮಾಹಿತಿ
"ಎಂಟಿಎಚ್‌ಎಲ್ ಅಟಲ್ ಸೇತುನಲ್ಲಿ ಆತ್ಮಹತ್ಯೆಗೆ ಯತ್ನಿಸಿದ ಬಗ್ಗೆ ತಕ್ಷಣ ಪ್ರತಿಕ್ರಿಯಿಸಿದ ಕರ್ತವ್ಯದಲ್ಲಿದ್ದ ಅಧಿಕಾರಿಗಳಾದ, ಲಲಿತ್ ಶಿರ್ಸತ್, ಕಿರಣ್ ಮಹ್ತ್ರೆ, ಯಶ್ ಸೋನಾವಾನೆ ಮತ್ತು ಮಯೂರ್ ಪಾಟೀಲ್ ರೇಲಿಂಗ್ ಮೇಲೆ ಹಾರಿ ವ್ಯಕ್ತಿಯನ್ನು ರಕ್ಷಿಸಿದ್ದಾರೆ," ಎಂದು ಮುಂಬೈ ಪೊಲೀಸ್ ಕಮಿಷನರ್ ವಿವೇಕ್ ಫನ್ಸಾಲ್ಕರ್ ಎಕ್ಸ್‌ನಲ್ಲಿ ಮಾಹಿತಿ ನೀಡಿದ್ದಾರೆ.
ಜೀವದ ಬೆಲೆಯನ್ನು ಜನ ತಿಳಿದುಕೊಳ್ಳಬೇಕು ಎಂದು ಮನವಿ ಮಾಡಿರುವ ಅವರು, ಯಾವುದೇ ಸಂದರ್ಭದಲ್ಲಿ ಆತ್ಮಹತ್ಯೆಯಂತಹ ಆಲೋಚನೆಗಳನ್ನು ಮಾಡಬೇಡಿ, ನಿಮ್ಮ ಪ್ರೀತಿಪಾತ್ರರ ಬಗ್ಗೆ ಕೂಡ ಯೋಚಿಸಿ ಎಂದು ಅವರು ಕೇಳಿದ್ದಾರೆ.
ಕಳೆದ ತಿಂಗಳು ಕೂಡ 38 ವರ್ಷದ ವ್ಯಕ್ತಿಯೊಬ್ಬರು ಅಟಲ್ ಸೇತುವೆಯಿಂದ ಹಾರಿ ಸಾವನ್ನಪ್ಪಿದ್ದರು. ಡೊಂಬಿವಿಲಿಯ ನಿವಾಸಿ ಕೆ ಶ್ರೀನಿವಾಸ್ ಕಾರನ್ನು ಅಟಲ್ ಸೇತುವೆ ಪಕ್ಕ ನಿಲ್ಲಿಸಿ ಸಮುದ್ರಕ್ಕೆ ಹಾರಿದ್ದ ದೃಶ್ಯಗಳು ಸಿಸಿಟಿವಿಯಲ್ಲಿ ಸೆರೆಯಾಗಿದ್ದವು.
Helplines: COOJ Mental Health Foundation (COOJ)- 0832-2252525, ಪರಿವರ್ತನ್- +91 7676 602 602, Connecting Trust- +91 992 200 1122/+91-992 200 4305 or Sahai- 080-25497777/ [email protected]
ನಿಮ್ಹಾನ್ಸ್, ರೋಟರಿ ಸಂಸ್ಥೆ ಹಾಗೂ ಮೆಡಿಕೊ ಪ್ಯಾಸ್ಟೊರಾಲ್ ಅಸೋಸಿಯೇಷನ್ ನೆರವಿನಿಂದ ಆತ್ಮಹತ್ಯೆ ತಡೆಗಟ್ಟಲು, ಮಾನಸಿಕ ಖಿನ್ನತೆಯಿಂದ ಬಳಲುವವರಿಗಾಗಿ ಸ್ನೇಹಾ ಫೌಂಡೇಷನ್ ಸಹಾಯವಾಣಿ ಇಂತಿದೆ: 04424640050, ಟಾಟಾ ಇನ್ಸ್ಟಿಟ್ಯೂಟ್ ಆಫ್ ಸೋಷಿಯಲ್ ಸೈನ್ಸ್ 02225521111ಗೆ ಕರೆ ಮಾಡಬಹುದು.












Click it and Unblock the Notifications