Tirupati Staff Dress Code: ತಿರುಪತಿಯಲ್ಲಿ ಸಿಬ್ಬಂದಿಗೂ ಡ್ರೆಸ್ ಕೋಡ್: ಶ್ರೀವಾರಿಯ ಹೆಸರಿನಿಂದಲೇ ಮಾತು ಆರಂಭ..
ಶ್ರೀಮಂತ ದೇವರುಗಳ ಪಟ್ಟಿಯಲ್ಲಿರುವ ತಿರುಪತಿ ತಿರುಮಲ ದೇವಸ್ಥಾನಕ್ಕೆ ಬರುವ ಭಕ್ತರಿಗೆ ವಸ್ತ್ರಸಹಿತೆ ಜಾರಿಗೊಳಿಸುವುದು ಮಾತ್ರವಲ್ಲದೆ ಸಿಬ್ಬಂದಿಗಳಿಗೂ ಈ ನಿಯಮವನ್ನು ಟಿಟಿಡಿ ಕಡ್ಡಾಯಗೊಳಿಸಿದೆ.
ಹೌದು... ತಿರುಪತಿ ತಿರುಮಲ ದೇಗುಲದಲ್ಲಿ ದೇವಸ್ಥಾನದ ಸಿಬ್ಬಂದಿಗೆ ಡ್ರೆಸ್ ಕೋಡ್ ಜಾರಿಗೊಳಿಸಲಾಗಿದೆ. ಇದಲ್ಲದೆ ಸಿಬ್ಬಂದಿಗಳ ಹಣೆಯ ಮೇಲೆ ವಿಭೂತಿ ಮತ್ತು ಕುಂಕುಮ ಕಡ್ಡಾಯವಾಗಿ ಇರಬೇಕು ಎಂದು ಸೂಚಿಸಲಾಗಿದೆ. ನಿಯಮ ಪಾಲಿಸದ ನೌಕರರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ದೇವಸ್ಥಾನ ಟ್ರಸ್ಟ್ ತಿಳಿಸಿದೆ.

ಶನಿವಾರ ಸಿಬ್ಬಂದಿಗಳಿಗೆ ಬಿಳಿ ಬಟ್ಟೆ ಕಡ್ಡಾಯ
ತಿರುಪತಿ ಶ್ರೀವಾರಿ ದೇವಸ್ಥಾನದಲ್ಲಿ ಮಾತ್ರ ಅಲ್ಲದೆ ತಿರುಪತಿಯ ಯಾವುದೇ ದೇವಸ್ಥಾನದಲ್ಲಿ ಸಿಬ್ಬಂದಿಗಳು ಡ್ರೆಸ್ ಕೋಡ್ ಅನ್ನು ಅನುಸರಿಸಬೇಕು. ಅಂದರೆ ಹೆಂಗಸರು ದುಪಟ್ಟಾ ಇಲ್ಲದೆ ಡ್ರೆಸ್ ಹಾಕುವಂತಿಲ್ಲ. ಮಹಿಳೆಯರು ಜೀನ್ಸ್, ಶಾರ್ಟ್ ಸ್ಕರ್ಟ್ ಇತ್ಯಾದಿ ಧರಿಸುವಂತಿಲ್ಲ.
ಅದೇ ರೀತಿ ಪುರುಷರು ಕೂಡ ಜೀನ್ಸ್, ಟೀ ಶರ್ಟ್, ಶಾರ್ಟ್ಸ್ ಧರಿಸುವಂತಿಲ್ಲ. ಬದಲಿಗೆ ಲುಂಗಿ ಅಥವಾ ಸಾಮಾನ್ಯ ಪ್ಯಾಂಟ್ ಧರಿಸಬೇಕು. ಬಹುತೇಕ ದೇವಸ್ಥಾನಗಳಲ್ಲಿ ಈ ಡ್ರೆಸ್ ಕೋಡ್ ಕಡ್ಡಾಯವಾಗಿದೆ. ಹೀಗೆ ಭಕ್ತರಿಗೆ ಮಾತ್ರವಲ್ಲದೆ ದೇವಾಸ್ಥಾನದಲ್ಲಿ ಕೆಲಸ ಮಾಡುವ ಎಲ್ಲ ನೌಕರರಿಗೂ ಡ್ರೆಸ್ ಕೋಡ್ ಜಾರಿಗೊಳಿಸಲಾಗಿದೆ. ಅಲ್ಲದೆ ಶನಿವಾರದಂದು ಎಲ್ಲಾ ಉದ್ಯೋಗಿಗಳು ಬಿಳಿ ಬಟ್ಟೆ ಮತ್ತು ಬಿಳಿ ಅಂಗಿ ಧರಿಸಿ ಕೆಲಸ ಮಾಡಬೇಕು.
ಪ್ರತಿನಿತ್ಯ ಎಲ್ಲಾ ನೌಕರರು ಹಣೆಯ ಮೇಲೆ ತಿಲಕ, ಕುಂಕುಮ ಮತ್ತು ವಿಭೂತಿಯನ್ನು ಇಟ್ಟುಕೊಳ್ಳಬೇಕು. ಅದೇ ರೀತಿ ಮಹಿಳಾ ನೌಕರರು ಸೀರೆ ಕುಪ್ಪಸ, ದುಪಟ್ಟಾದೊಂದಿಗೆ ಸುಡಿಲವಾದ ಬಟ್ಟೆ ಧರಿಸಿ ಹಣೆಗೆ ತಿಲಕ, ಕುಂಕುಮ, ಸ್ಟಿಕ್ಕರ್ ಇಟ್ಟುಕೊಳ್ಳಬೇಕು.

ಶ್ರೀವಾರಿಯ ನಾಮ ಹೇಳುವ ಮೂಲಕ ಮಾತು ಆರಂಭ
ಅಲ್ಲದೆ ದೇವಸ್ಥಾನದಲ್ಲಿರುವ ಎಲ್ಲಾ ನೌಕರರು ಪರಸ್ಪರ ಭೇಟಿಯಾಗುವಾಗ ಗೋವಿಂದಾ ಅಥವಾ ಓಂ ನಮೋ ವೆಂಕಟೇಶಾಯ ಎಂದು ಹೇಳುವ ಮೂಲಕ ತಮ್ಮ ಭಾಷಣವನ್ನು ಪ್ರಾರಂಭಿಸಬೇಕು. ದೇವಸ್ಥಾನಕ್ಕೆ ಬರುವ ಬಖ್ತರೊಂದಿಗೆ ಮಾತನಾಡುವಾಗಲೂ ಸಿಬ್ಬಂದಿಗಳು ಇದೇ ರೀತಿ ಮಾತನ್ನು ಆರಂಭಿಸಿಬೇಕು.
ಈ ನಿರ್ಬಂಧಗಳನ್ನು ಪಾಲಿಸದ ನೌಕರರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಲಾಗಿದೆ.
ಏಳುಬೆಟ್ಟದ ಒಡೆಯ ಶ್ರೀವಾರಿ
ತಿರುಪತಿ ಶ್ರೀವಾರಿ ದರ್ಶನಕ್ಕೆ ನಿತ್ಯ ಸಾವಿರಾರು ಭಕ್ತರು ಭೇಟಿ ನೀಡುತ್ತಾರೆ. ಸರದಿ ಸಾಲಿನಲ್ಲಿ ಗಂಟೆಗಟ್ಟಲೆ ಕಾದು ತಿಮ್ಮಪ್ಪನ ದರ್ಶನ ಪಡೆಯುತ್ತಾರೆ. ಶ್ರೀವಾರಿ ದರ್ಶನಕ್ಕಾಗಿ ಬರುವ ಭಕ್ತರಿಗೆ ಲಡ್ಡು ಪ್ರಸಾದವನ್ನು ನೀಡಲಾಗುತ್ತದೆ. ದೇವಸ್ಥಾನದಲ್ಲಿ ಉಚಿತ ದರ್ಶನಕ್ಕಾಗಿ ಭಕ್ತರು 10 ಗಂಟೆಗೂ ಹೆಚ್ಚು ಕಾಲ ಕಾಯಬೇಕಾಗುತ್ತದೆ.
ನಿತ್ಯ ಸಾವಿರಾರು ಸಂಖ್ಯೆಯಲ್ಲಿ ಸೆಳೆಯುವ ಶ್ರೀವಾರಿಗೆ ಭಕ್ತರು ಹರಕೆ ಕೂಡ ತೀರಿಸುತ್ತಾರೆ. ಹೀಗಾಗಿ ತಿಂಗಳಾಂತ್ಯದಲ್ಲಿ ತಿರುಪತಿ ಹಿಂಡಿಯಲ್ಲಿ ದೇಣಿಗೆ ರೂಪದಲ್ಲಿ ಸಾಕಷ್ಟು ಹಣ, ಬೆಲೆಬಾಳುವ ಆಭರಣಗಳು ಸಂಗ್ರಹವಾಗುತ್ತವೆ.












Click it and Unblock the Notifications