ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ದೇಶಾದ್ಯಂತ ಡಿಆರ್‌ಡಿಒದಿಂದ 500 ಆಮ್ಲಜನಕ ಘಟಕಗಳ ನಿರ್ಮಾಣಕ್ಕೆ ತಯಾರಿ

|
Google Oneindia Kannada News

ನವದೆಹಲಿ, ಮೇ 5: ಕೊರೊನಾ ಸೋಂಕಿನಿಂದಾಗಿ ಆಸ್ಪತ್ರೆಗೆ ಸೇರುವವರ ಸಂಖ್ಯೆಯಲ್ಲಿ ಏರಿಕೆಯಾಗಿದ್ದು, ಆಸ್ಪತ್ರೆಗಳಲ್ಲಿ ಆಮ್ಲಜನಕಕ್ಕೆ ತೀವ್ರ ಅಭಾವ ಎದುರಾಗಿದೆ. ದೆಹಲಿಯ ಆಸ್ಪತ್ರೆಗಳಲ್ಲಿನ ಪರಿಸ್ಥಿತಿ ಮತ್ತಷ್ಟು ಚಿಂತಾಜನಕವಾಗಿದೆ. ಆಮ್ಲಜನಕವಿಲ್ಲದೇ ಸಾವಿರಾರು ಮಂದಿ ಪ್ರಾಣ ಬಿಡುವ ಸ್ಥಿತಿ ಎದುರಾಗಿದೆ.

ಹೀಗಾಗಿ ದೆಹಲಿ ಏಮ್ಸ್‌ ನಲ್ಲಿನ ಟ್ರೌಮಾ ಸೆಂಟ್‌ನಲ್ಲಿ ಹಾಗೂ ರಾಮ್ ಮನೋಹರ ಲೋಹಿಯಾ ಆಸ್ಪತ್ರೆಯಲ್ಲಿ ಬುಧವಾರ ರಕ್ಷಣಾ ಸಂಶೋಧನೆ ಹಾಗೂ ಅಭಿವೃದ್ಧಿ ಸಂಸ್ಥೆ (ಡಿಆರ್‌ಡಿಒ) ಎರಡು ಆಮ್ಲಜನಕ ಉತ್ಪಾದನಾ ಘಟಕಗಳನ್ನು ಸ್ಥಾಪಿಸಿದೆ.

ಸೈನಿಕರಿಗಾಗಿ ಹಗುರ ಬುಲೆಟ್ ಪ್ರೂಫ್ ಜಾಕೆಟ್ ತಯಾರಿಸಿದ ಡಿಆರ್‌ಡಿಒಸೈನಿಕರಿಗಾಗಿ ಹಗುರ ಬುಲೆಟ್ ಪ್ರೂಫ್ ಜಾಕೆಟ್ ತಯಾರಿಸಿದ ಡಿಆರ್‌ಡಿಒ

ದೆಹಲಿ ಹಾಗೂ ಹರಿಯಾಣದಲ್ಲಿ ಇಂಥದ್ದೇ ಐದು ಆಮ್ಲಜನಕ ಉತ್ಪಾದನಾ ಘಟಕಗಳನ್ನು ಸ್ಥಾಪಿಸುವ ಯೋಜನೆ ಹೊಂದಲಾಗಿದೆ.

DRDO Plans To Set Up 500 Oxygen Plants Across Country

ಪಿಎಂ ನಿಧಿಯಿಂದ ಇಂಥ ಐನೂರು ಆಮ್ಲಜನಕ ಉತ್ಪಾದನಾ ಘಟಕಗಳನ್ನು ದೇಶದಾದ್ಯಂತ ನಿರ್ಮಿಸುವ ಯೋಜನೆಯಿರುವುದಾಗಿ ಡಿಆರ್‌ಡಿಒ ಹೆಚ್ಚುವರಿ ನಿರ್ದೇಶಕರು ಮಾಹಿತಿ ನೀಡಿದ್ದಾರೆ.

ಏಮ್ಸ್‌ನಲ್ಲಿ ನಿರ್ಮಿಸಲಾಗಿರುವ ಈ ಆಮ್ಲಜನಕ ಉತ್ಪಾದನಾ ಘಟಕ ಒಂದು ನಿಮಿಷಕ್ಕೆ ಸಾವಿರ ಲೀಟರ್ ಆಮ್ಲಜನಕ ಉತ್ಪಾದನೆ ಮಾಡುವ ಸಾಮರ್ಥ್ಯ ಹೊಂದಿದೆ. ಒಂದೇ ಬಾರಿ ಇದರಿಂದ 190 ರೋಗಿಗಳಿಗೆ ಆಮ್ಲಜನಕ ನೀಡಬಹುದಾಗಿದೆ. ದೆಹಲಿಯಲ್ಲಿ ಇಂಥ ಐದು ಘಟಕಗಳನ್ನು ನಿರ್ಮಿಸಲಾಗುತ್ತಿದೆ.

ಈ ಹಿಂದೆಯು ಡಿಆರ್ ಡಿಒ ಆಮ್ಲಜನಕ ಸಿಲಿಂಡರ್‌ಗಳನ್ನು ದೆಹಲಿ ಹಾಗೂ ಹೈದರಾಬಾದ್‌ಗೆ ಸರಬರಾಜು ಮಾಡಿತ್ತು. ಕಳೆದ ತಿಂಗಳು ಗುಜರಾತ್ ಸರ್ಕಾರದ ಸಹಯೋಗದಲ್ಲಿ ಡಿಆರ್ ಡಿಒ ಅಹಮದಾಬಾದ್‌ನಲ್ಲಿ 900 ಹಾಸಿಗೆಗಳ ಕೋವಿಡ್ ಆಸ್ಪತ್ರೆಯನ್ನು ನಿರ್ಮಿಸಿತ್ತು. ಇದೀಗ ದೇಶಾದ್ಯಂತ 500 ಆಮ್ಲಜನಕ ಉತ್ಪಾದನಾ ಘಟಕಗಳ ಸ್ಥಾಪನೆಗೆ ತಯಾರಿ ಮಾಡಿಕೊಳ್ಳಲಾಗುತ್ತಿದೆ.

English summary
DRDO set up two oxygen plants in delhi on wednesday and it plans to set up 500 oxygen plants across country,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X