ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಡಿಆರ್‌ಡಿಒದ 'ಅಭ್ಯಾಸ್' ಪರೀಕ್ಷಾರ್ಥ ಹಾರಾಟ ಯಶಸ್ವಿ

|
Google Oneindia Kannada News

ನವದೆಹಲಿ, ಸೆಪ್ಟೆಂಬರ್ 23: ರಕ್ಷಣಾ ಸಂಶೋಧನಾ ಮತ್ತು ಅಭಿವೃದ್ಧಿ ಸಂಸ್ಥೆ (ಡಿಆರ್‌ಡಿಒ) ಮಂಗಳವಾರ ಒಡಿಶಾದ ಬಾಲಸೋರ್‌ನಲ್ಲಿ ಸ್ವದೇಶಿ ವಿನ್ಯಾಸದ ಅಭ್ಯಾಸ್ ಹೈ ಸ್ಪೀಡ್ ಎಕ್ಸ್‌ಪಾಂಡಬಲ್ ಏರಿಯಲ್ ಟಾರ್ಗೆಟ್ (ಎಚ್‌ಇಎಟಿ) ವಿಮಾನದ ಯಶಸ್ವಿ ಪರೀಕ್ಷೆ ನಡೆಸಿದೆ.

ಮಧ್ಯಂತರ ಪರೀಕ್ಷಾ ಮಟ್ಟದ ಪ್ರಯೋಗದಲ್ಲಿ ಎರಡು ಪ್ರದರ್ಶಕ ವಾಹನಗಳನ್ನು ಯಶಸ್ವಿಯಾಗಿ ಹಾರಿಸಲಾಯಿತು. ಈ ವಾಹನವು ಡ್ರೋನ್ ಸ್ವರೂಪದ್ದಾಗಿದ್ದು, ವಿವಿಧ ಕ್ಷಿಪಣಿ ವ್ಯವಸ್ಥೆಯ ಗುರಿಯನ್ನಾಗಿ ಬಳಸಿಕೊಳ್ಳಬಹುದಾಗಿದೆ. ಅಲ್ಲದೆ, ಇದನ್ನು ಅಗತ್ಯಬಿದ್ದಾಗ ಹಾರಾಟದ ವಿಮಾನವಾಗಿ ಸಹ ಬಳಸಬಹುದು ಎಂದು ಡಿಆರ್‌ಡಿಒ ತಿಳಿಸಿದೆ.

ಕ್ಷಿಪಣಿ ತಂತ್ರಜ್ಞಾನದಲ್ಲಿ ಭಾರತದ ಮಹತ್ವದ ಸಾಧನೆ: ಏನಿದು ಹೈಪರ್‌ಸಾನಿಕ್ ಕ್ಷಿಪಣಿ ವಾಹನ?ಕ್ಷಿಪಣಿ ತಂತ್ರಜ್ಞಾನದಲ್ಲಿ ಭಾರತದ ಮಹತ್ವದ ಸಾಧನೆ: ಏನಿದು ಹೈಪರ್‌ಸಾನಿಕ್ ಕ್ಷಿಪಣಿ ವಾಹನ?

'ಐಟಿಆರ್ ಬಾಲಸೋರ್‌ನಲ್ಲಿ ಅಧಿಕ ವೇಗದ ವಿಸ್ತರಿಸಬಹುದಾದ ವೈಮಾನಿಕ ಗುರಿ (ಹೀಟ್) ಅಭ್ಯಾಸ್ ಅನ್ನು ಯಶಸ್ವಿಯಾಗಿ ಪರೀಕ್ಷಾರ್ಥ ಹಾರಾಟ ನಡೆಸುವ ಮೂಲಕ ಡಿಆರ್‌ಡಿಒ ಮೈಲುಗಲ್ಲು ಸಾಧಿಸಿದೆ. ವಿವಿಧ ಕ್ಷಿಪಣಿ ವ್ಯವಸ್ಥೆಗಳಲ್ಲಿ ಇದನ್ನು ಬಳಸಿಕೊಳ್ಳಬಹುದಾಗಿದೆ. ಈ ಸಾಧನೆಗಾಗಿ ಡಿಆರ್‌ಡಿಒ ಹಾಗೂ ಇತರೆ ಪಾಲುದಾರರನ್ನು ಅಭಿನಂದಿಸುತ್ತೇನೆ' ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ತಿಳಿಸಿದ್ದಾರೆ.

DRDO Conducts Successful Flight Test Of Abhyas In Balasore

ದೇಶದಲ್ಲಿ ಡಿಆರ್‌ಡಿಒ ಟಾರ್ಗೆಟ್ ವಾಹನದ ಯಶಸ್ವಿ ಪರೀಕ್ಷಾರ್ಥ ಹಾರಾಟ ನಡೆಸುತ್ತಿರುವುದು ಇದು ಎರಡನೆಯ ಬಾರಿ. ಮೊದಲ ಯಶಸ್ವಿ ಪ್ರಯೋಗ 2019ರ ಮೇನಲ್ಲಿ ನಡೆದಿತ್ತು. ಆದರೆ ಮಂಗಳವಾರದ ಪರೀಕ್ಷಾರ್ಥ ಹಾರಾಟದಲ್ಲಿ ಅಭ್ಯಾಸ್ ವಿಮಾನವು ಅದರ ಎಲ್ಲ ಮಾನದಂಡಗಳನ್ನೂ ಸಂಪೂರ್ಣವಾಗಿ ಕ್ರಮಿಸಿದೆ.

ಶಿವಮೊಗ್ಗದಲ್ಲಿ ಡಿಆರ್‌ಡಿಓ ಪ್ರಯೋಗಾಲಯ ಸ್ಥಾಪನೆಗೆ ಕೇಂದ್ರದ ಒಪ್ಪಿಗೆ ಶಿವಮೊಗ್ಗದಲ್ಲಿ ಡಿಆರ್‌ಡಿಓ ಪ್ರಯೋಗಾಲಯ ಸ್ಥಾಪನೆಗೆ ಕೇಂದ್ರದ ಒಪ್ಪಿಗೆ

ಈ ವಾಹನವು 5 ಕಿಮೀ ಹಾರಾಟ ಎತ್ತರ, ಶಬ್ಧದ ಅರ್ಧದಷ್ಟು ವೇಗವಾದ 0.5 ಮ್ಯಾಕ್, 30 ನಿಮಿಷಗಳ ಹಾರಾಟ ಸಾಮರ್ಥ್ಯ ಮತ್ತು 2ಜಿ ತಿರುವಿನ ಸಾಮರ್ಥ್ಯವನ್ನು ಮುಟ್ಟಿದೆ ಎಂದು ಡಿಆರ್‌ಡಿಒ ಹೇಳಿದೆ.

English summary
DRDO on Tuesday has successfully conducted the flight test of the missile target vehicle Abhyas.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X