ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಚಳಿಗಾಲದಲ್ಲಿ ಮತ್ತಷ್ಟು ಉಲ್ಬಣಗೊಳ್ಳಲಿದೆ ಕೊರೊನಾ ಸೋಂಕು: ಎಚ್ಚರಿಕೆ

|
Google Oneindia Kannada News

ನವದೆಹಲಿ, ಸೆಪ್ಟೆಂಬರ್ 30: ಚಳಿಗಾಲದಲ್ಲಿ ಕೊರೊನಾ ಸೋಂಕು ಮತ್ತಷ್ಟು ಉಲ್ಬಣಗೊಳ್ಳುವ ಸಾಧ್ಯತೆ ಇದೆ ಎಂದು ವೈದ್ಯರು ಎಚ್ಚರಿಕೆ ನೀಡಿದ್ದಾರೆ.

ಕೊರೊನಾ ವೈರಸ್ ಚಳಿಗಾಲದಲ್ಲಿ ಇಳಿಮುಖವಾಗಲಿದೆಯೇ? ಅಥವಾ ಹಾಗೆಯೇ ಮುಂದುವರೆಯಲಿದೆಯೇ, ಕೊರೊನಾ ಸೋಂಕು ಆರಂಭವಾಗಿ ಎಂಟು ತಿಂಗಳ ನಂತರವೂ , ತಜ್ಞರು ವೈರಸ್ ಬದಲಾಗುತ್ತಿರುವ ಹವಾಮಾನಕ್ಕೆ ಹೇಗೆ ಪ್ರತಿಕ್ರಿಯಿಸುತ್ತದೆ ಎಂಬುದನ್ನು ಅರ್ಥಮಾಡಿಕೊಳ್ಳಲು ಪ್ರಯತ್ನಿಸುತ್ತಿದ್ದಾರೆ.

ಭಾರತದಲ್ಲಿ ಪುರುಷ, ಮಹಿಳೆಯ ತೂಕ ಎಷ್ಟಿರಬೇಕು: ಹೊಸ ಮಾನದಂಡವೇನು? ಭಾರತದಲ್ಲಿ ಪುರುಷ, ಮಹಿಳೆಯ ತೂಕ ಎಷ್ಟಿರಬೇಕು: ಹೊಸ ಮಾನದಂಡವೇನು?

ಬೇಸಿಗೆಯಲ್ಲಿ ಸೂರ್ಯನ ಉಷ್ಣಕ್ಕೆ ಕೊರೊನಾ ಸೋಂಕು ತಗುಲುವುದಿಲ್ಲ ಎಂದು ಕೆಲವು ತಜ್ಞರು ಅಭಿಪ್ರಾಯಪಟ್ಟಿದ್ದರು, ಅದೂ ಸುಳ್ಳಾಯಿತು, ಆದರೆ ಚಳಿಗಾಲದಲ್ಲಿ ಸೋಂಕು ಹೆಚ್ಚಳವಾಗುವ ಸಾಧ್ಯತೆ ಇದೆ ಎಂದು ಎಚ್ಚರಿಕೆ ಸಂದೇಶವನ್ನು ವೈದ್ಯರು ನೀಡಿದ್ದಾರೆ.

ಚಳಿಗಾಲದಲ್ಲಿ ಉಸಿರಾಟ ಸಮಸ್ಯೆ ತೀವ್ರ

ಚಳಿಗಾಲದಲ್ಲಿ ಉಸಿರಾಟ ಸಮಸ್ಯೆ ತೀವ್ರ

ಮುಂದೆ ಹಬ್ಬಗಳು ಕೂಡ ಹೆಚ್ಚಿವೆ, ಚಳಿಗಾಲದಲ್ಲಿ ಉಸಿರಾಟದ ಸಮಸ್ಯೆಗಳು ಹೆಚ್ಚು, ಈಗಾಗಲೇ ಅಸ್ತಮಾ, ಉಸಿರಾಟದ ಸಮಸ್ಯೆಯಿರುವವರನ್ನು ಕೊರೊನಾ ತೀವ್ರವಾಗಿ ಕಾಡುವ ಸಾಧ್ಯತೆ ಇರುತ್ತದೆ. ಹೀಗಾಗಿ ಮುಂದಿನ ಒಂದೆರೆಡು ತಿಂಗಳು ಎಚ್ಚರಿಕೆಯಿಂದಿರಬೇಕು ಎಂದು ನೀತಿ ಆಯೋಗ ಹೇಳಿದೆ.

ಚಳಿಗಾಲ ಸಮೀಪಿಸುತ್ತಿರುವ ಈ ಸಮಯದಲ್ಲಿ ಹೇಗಿರಬೇಕು?

ಚಳಿಗಾಲ ಸಮೀಪಿಸುತ್ತಿರುವ ಈ ಸಮಯದಲ್ಲಿ ಹೇಗಿರಬೇಕು?

ಚಳಿಗಾಲದಲ್ಲಿ ಎಷ್ಟು ಮುನ್ನೆಚ್ಚರಿಕಾ ಕ್ರಮಗಳನ್ನು ಅನುಸರಿಸಿದರೂ ಸಾಲದು, ಮಾಸ್ಕ್ ಧರಿಸಲೇಬೇಕು, ಸಾಮಾಜಿಕ ಅಂತರವನ್ನು ಕಾಪಾಡಿಕೊಳ್ಳಬೇಕು, ಸಮಾರಂಭಗಳಿಗೆ ಹೋಗುವುದನ್ನು ಕಡಿಮೆ ಮಾಡಬೇಕು ಎಂದು ನೀತಿ ಆಯೋಗ ಸದಸ್ಯ ಡಾ. ವಿನೋದ್ ಪಾಲ್ ತಿಳಿಸಿದ್ದಾರೆ.

ವೈರಸ್‌ಗಳು ಚಳಿಗಾಲದಲ್ಲಿ ಮತ್ತಷ್ಟು ಅಪಾಯಕಾರಿ

ವೈರಸ್‌ಗಳು ಚಳಿಗಾಲದಲ್ಲಿ ಮತ್ತಷ್ಟು ಅಪಾಯಕಾರಿ

ಚಳಿಗಾಲದಲ್ಲಿ ವೈರಸ್‌ಗಳು ಮತ್ತಷ್ಟು ಅಪಾಯಕಾರಿಯಾಗಿರಲಿದ್ದು, ಉಸಿರಾಟದ ಸಮಸ್ಯೆಯನ್ನು ಹೆಚ್ಚು ಮಾಡುತ್ತದೆ. ಪ್ರಕರಣಗಳಲ್ಲಿ ಇಳಿಕೆ ತರಲು ನಾವು ಅನೇಕ ಪ್ರಯತ್ನಗಳನ್ನು ಮಾಡಬೇಕಿದೆ.

Recommended Video

ಚಳಿಗಾಲದಲ್ಲಿ ಮತ್ತಷ್ಟು ಉಲ್ಬಣಗೊಳ್ಳಲಿದೆ ಕೊರೊನಾ ಸೋಂಕು | Oneindia Kannada
ವೈರಸ್‌ಗಳ ಉತ್ಪತ್ತಿ

ವೈರಸ್‌ಗಳ ಉತ್ಪತ್ತಿ

ಚಳಿಗಾಲದಲ್ಲಿ ವೈರಸ್‌ಗಳ ಉತ್ಪತ್ತಿ ಹೆಚ್ಚಾಗುತ್ತದೆ. ಇಡೀ ವಿಶ್ವದಲ್ಲೇ ಕೊರೊನಾ ಸೋಂಕಿನ ಎರಡನೇ ಅಲೆ ಆರಂಭವಾದರೆ ಆಶ್ಚರ್ಯವಿಲ್ಲ. ಹೆಚ್ಚೆಚ್ಚು ಕೊರೊನಾ ಪ್ರಕರಣಗಳನ್ನು ಪತ್ತೆ ಮಾಡಿ ಚಿಕಿತ್ಸೆ ನೀಡುವ ಪ್ರಯತ್ನವಾಗುತ್ತಿದೆ. ಹವಾಮಾನ ಬದಲಾವಣೆಯು ಕೂಡ ಕೊರೊನಾ ಸೋಂಕಿನ ಮೇಲೆ ಸಣ್ಣ ಪ್ರಮಾಣದ ಪ್ರಭಾವವನ್ನು ಬೀರುತ್ತದೆ ಹೀಗಾಗಿ ಚಳಿಗಾಲದಲ್ಲಿ ಜಾಗ್ರತರಾಗಿರುವಂತೆ ಸಲಹೆ ನೀಡಲಾಗಿದೆ.

English summary
Are winter months going to herald a drop in coronavirus cases? Will the country hit the peak or the curve will flatten? Even after eight months into the coronavirus pandemic, experts are trying to understand how the virus reacts or may react to changing weather patterns.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X