ಅಮರ್ ಚಿತ್ರಕಥಾ ಕಾದಂಬರಿಗಳು ಡೌನ್ ಲೋಡಿಗೂ ಲಭ್ಯ

ಮುಂಬೈ, ಜು.3: ಭಾರತದ ಅತ್ಯಂತ ಜನಪ್ರಿಯ ಕಾಮಿಕ್ ಸರಣಿ ಅಮರ್ ಚಿತ್ರ ಕಥಾ ಸರಣಿ ಮತ್ತೆ ಜೀವ ಪಡೆದುಕೊಳ್ಳುತ್ತಿದೆ. ಜನಪ್ರಿಯ ಕಾದಂಬರಿಯನ್ನು ಮತ್ತೊಮ್ಮೆ ಕಥಾಸರಣಿ ರೂಪದಲ್ಲಿ ಹೊರ ತರಲಾಗುತ್ತಿದೆ. ಎಲ್ಲಾ ಕಾದಂಬರಿಗಳು ಆನ್ ಲೈನ್ ನಲ್ಲೂ ಡೌನ್ ಲೋಡಿಗೆ ಲಭ್ಯವಿರುತ್ತದೆ.

ಎಪಿಕ್ ಸ್ಟೋರಿಸ್ ಅಲೈವ್ ಅಡಿಯಲ್ಲಿ ಕಾದಂಬರಿ ಗುಚ್ಛ ಸಿದ್ಧವಾಗಿದೆ. ಜುಲೈ 1ರಿಂದಲೇ ಕೌಂಟರ್ ಥೆಫ್ಟ್ ಹೆಸರಿನ ಕಾದಂಬರಿ ಎಲ್ಲಾ ಪ್ರಮುಖ ಪುಸ್ತಕ ಮಳಿಗೆಗಳಲ್ಲಿ ಲಭ್ಯವಿರಲಿದೆ. 225 ರು ಬೆಲೆಯ ಈ ಕಾದಂಬರಿಯನ್ನು ಆನ್ ಲೈನ್ ಪುಸ್ತಕ ಮಳಿಗೆಗಳಿಗೂ ಬಿಡಲಾಗುತ್ತಿದ್ದು, ಆಸಕ್ತರು ಡೌನ್ ಲೋಡ್ ಮಾಡಿಕೊಳ್ಳಬಹುದು.

ಕಿಂಡ್ಲ್, ಐಬುಕ್, ಮಗ್ ಸ್ಟರ್ ಮುಂತಾದ ತಾಣಗಳಲ್ಲಿ ಜುಲೈ 7ರಿಂದ ಡೌನ್ ಲೋಡ್ ಗೆ ಲಭ್ಯವಿರುತ್ತದೆ. ಟಿಂಕಲ್, ಕರಡಿ ಕಥೆಗಳನ್ನು ಸುಮಾರು 20 ಭಾಷೆಗಳಲ್ಲಿ 90 ಲಕ್ಷಕ್ಕೂ ಅಧಿಕ ಮಂದಿಗೆ ಪರಿಚಯಿಸಿರುವ ಅಮರ ಚಿತ್ರಕಥಾ ಈಗ ಹೊಸ ಪ್ರಯತ್ನಕ್ಕೆ ಕೈ ಹಾಕಿದೆ ಎಂದು ಸಂಸ್ಥೆಯ ಸ್ಥಾಪಕ ಸಂಪಾದಕ ರಾಜೇಶ್ ಅಯ್ಯರ್ ಹೇಳಿದ್ದಾರೆ.[ಗೂಗಲ್ ಡೂಡ್ಲ್ ನಲ್ಲಿ ಕಾಮಿಕ್ಸ್ ಅಂಕಲ್ ಪೈ ಚಿತ್ರ]

Amar Chitra Katha launches novel
ಚಿಲ್ಡ್ರನ್ಸ್ ಬುಕ್ ಟ್ರಸ್ಟ್ ನ ಐದು ಬಾರಿ ವಿಜೇತರಾದ ಮುಂಬೈ ನಿವಾಸಿ ರೇಣುಕಾ ವಿಶ್ವನಾಥನ್ ಅವರ ಚಂದ್ರಲೇಖ ಕಥೆ ಜೊತೆಗೆ ದೇಶದ ಅನೇಕ ಕಾದಂಬರಿಕಾರರಿಂದ ವೈವಿಧ್ಯಮಯ ಕಥೆಗಳನ್ನು ಮುಂದಿಡಲಾಗುವುದು ಎಂದು ಸಂಸ್ಥೆ ಹೇಳಿದೆ.

ಕರ್ನಾಟಕ ಕಾರ್ಕಳ ಮೂಲದ ಅನಂತ್ ಪೈ ಅವರು ಅಮರ ಚಿತ್ರಕಥಾ ಹಾಗೂ ಟಿಂಕಲ್ ಕಾಮಿಕ್ಸ್ ಮೂಲಕ ಮನೆ ಮಾತಾಗಿದ್ದನ್ನು ಇಲ್ಲಿ ಸ್ಮರಿಸಬಹುದು.ಅಮರ್ ಚಿತ್ರಕಥಾ ಸರಣಿಯಲ್ಲಿ ಭಾರತೀಯ ಸಂಸ್ಕೃತಿ, ಇತಿಹಾಸ, ಸ್ಥಳ ಮಹಾತ್ಮೆ, ಚಕ್ರವರ್ತಿಗಳ ಪರಂಪರೆ ಅಷ್ಟೇ ಅಲ್ಲದೆ, ಶೈಕ್ಷಣಿಕ ಬೋಧನೆ, ಮಕ್ಕಳಿಗೆ ಮನರಂಜನೆ ಕೂಡಾ ಇರುತ್ತದೆ. ಆನ್ ಲೈನ್ ನಲ್ಲಿ ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+