ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಜಲಾಂತರ್ಗಾಮಿ ಕ್ಷಿಪಣಿ ಬಗ್ಗೆ ರೀಲು ಬಿಟ್ಟಿತಾ ಪಾಕಿಸ್ತಾನ ?

|
Google Oneindia Kannada News

ನವದೆಹಲಿ, ಜ. 10: ಬಾಬರ್ -3 ಎಂಬ ಪರಮಾಣು ಶಸ್ತ್ರಾಸ್ತ್ರ ಹೊತ್ತೊಯ್ಯುವ ಸಾಮರ್ಥ್ಯದ ಜಲಾಂತರ್ಗಾಮಿ ಕ್ಷಿಪಣಿಯ ಪರೀಕ್ಷೆಯನ್ನು ತಾನು ಯಶಸ್ವಿಯಾಗಿ ಮುಗಿಸಿರುವುದಾಗಿ ಪಾಕಿಸ್ತಾನ ಹೆಮ್ಮೆಯಿಂದ ಹೇಳಿಕೊಂಡ ಬೆನ್ನಲ್ಲೇ ಈ ಪರೀಕ್ಷೆ ಬಗ್ಗೆ ಕೆಲವಾರು ತಜ್ಞರು ಹಲವಾರು ಅನುಮಾನಗಳನ್ನು ವ್ಯಕ್ತಪಡಿಸಿದ್ದಾರೆ.

ಬಾಬರ್ ಯಶಸ್ವಿ ಪರೀಕ್ಷೆ ಕುರಿತಂತೆ ಪಾಕಿಸ್ತಾನ ಸರ್ಕಾರ ಬಿಡುಗಡೆ ಮಾಡಿರುವ ವೀಡಿಯೊ ತುಣುಕನ್ನು ವೀಕ್ಷಿಸಿರುವ ಭಾರತದ ಪಠಾಣ್ ಕೋಟ್ ನಲ್ಲಿರುವ ಉಪಗ್ರಹ ಚಿತ್ರ ತಜ್ಞರು, ಕ್ಷಿಪಣಿ ತಜ್ಞರು, ವೀಡಿಯೊ ತುಣುಕು ಗ್ರಾಫಿಕ್ಸ್ ನಿಂದ ಕೂಡಿದ್ದು, ಕ್ಷಿಪಣಿಯ ನೈಜ ಸಾಮರ್ಥ್ಯಕ್ಕಿಂತ ಹೆಚ್ಚಾಗಿ ಅದನ್ನು ಬಿಂಬಿಸಲಾಗಿದೆ ಎಂಬ ಅನುಮಾನ ವ್ಯಕ್ತಪಡಿಸಿದ್ದಾರೆ.[ಪಾಕ್ ನ ಜಲಾಂತರ್ಗಾಮಿ ಕ್ಷಿಪಣಿ ಬಾಬರ್-III ಯಶಸ್ವಿ]

Doubts have raised on Pakistan's newly lauched Babur-3 cruise missile

ಪರೀಕ್ಷೆ ನಡೆಸಿರುವುದು ನಿಜವಾದರೂ ವೀಡಿಯೊದಲ್ಲಿ ಕ್ಷಿಪಣಿಯು ಚಿಮ್ಮುವ ರಭಸ ಹಾಗೂ ತಲುಪುವ ದೂರ ನೋಡಿದರೆ, ಇದರಲ್ಲಿ ಗ್ರಾಫಿಕ್ಸ್ ಅಳವಡಿಸಿರುವಂತೆ ಭಾಸವಾಗುತ್ತದೆ ಎಂದು ಕೆಲ ತಜ್ಞರು ಟ್ವೀಟರ್ ಮೂಲಕ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

Doubts have raised on Pakistan's newly lauched Babur-3 cruise missile

ಈ ಬಗ್ಗೆ ಮತ್ತಷ್ಟು ಮಾಹಿತಿ ನೀಡಿರುವ ಭಾರತೀಯ ಸೇನೆಯ ನಿವೃತ್ತ ಕರ್ನಲ್ ಹಾಗೂ ಛಾಯಾಚಿತ್ರ ತಜ್ಞ ವಿನಾಯಕ್ ಭಟ್, "ಪಾಕಿಸ್ತಾನ ಬಿಡುಗಡೆಗೊಳಿಸಿರುವ ವೀಡಿಯೊದಲ್ಲಿಬಾಬರ್ ಕ್ಷಿಪಣಿಯು ಉಡಾವಣೆಗೊಂಡ ನಂತರ ಕ್ರಮೇಣ ಬಿಳಿ ಬಣ್ಣದಿಂದ ಕಿತ್ತಳೆ ಬಣ್ಣಕ್ಕೆ ತಿರುಗುತ್ತದೆ. ಇದು ವಿಚಿತ್ರವೆನಿಸುತ್ತದೆ. ಅಲ್ಲದೆ, ಪಾಕಿಸ್ತಾನದ ಕ್ಷಿಪಣಿ ಅತಿ ವೇಗದಲ್ಲಿ ಸಾಗುವುದನ್ನು ನೋಡಬಹುದಾಗಿದೆ. ಆದರೆ, ವಾಸ್ತವದಲ್ಲಿ ಇಷ್ಟು ವೇಗದಲ್ಲಿ ಕ್ಷಿಪಣಿಗಳು ಸಾಗುವುದು ಅಸಾಧ್ಯ" ಎಂದು ಹೇಳಿದ್ದಾರೆ.

English summary
After Pakistan proudly announced the launch of the nuclear-capable Babur-3 cruise missile, reports today suggested that Islamabad may have faked the launch video.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X