ಹೊಸೂರಿನಲ್ಲಿ ವಿಮಾನ ನಿಲ್ದಾಣ ಕಾಮಗಾರಿ ವಿಳಂಬ ಮಾಡ್ಬೇಡಿ: ಸರ್ಕಾರಕ್ಕೆ ಕೈಗಾರಿಕೆಗಳ ಮನವಿ

Hosur Airport: ಬೆಂಗಳೂರಿನಲ್ಲಿ ಈಗಾಗಲೇ ಕೆಂಪೇಗೌಡ ಅಂತಾರಾರಾಷ್ಟ್ರೀಯ ವಿಮಾನ ನಿಲ್ದಾಣವಿದೆ. ಇದು ಎರಡು ಟರ್ಮಿನಲ್‌ಗಳನ್ನು ಹೊಂದಿದ್ದರೂ, ಪ್ರಯಾಣಿಕರ ದಟ್ಟಣ ಮಾತ್ರ ಕಡಿಮೆಯಾಗುತ್ತಿಲ್ಲ. ಈ ಹಿನ್ನೆಲೆ ಎರಡನೇ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಸರ್ಕಾರ ಮುಂದಾಗಿದೆ. ಈಗಾಗಲೇ ಐದು ಸ್ಥಳಗಳನ್ನು ಗುರುತಿಸಲಾಗಿದ್ದು, ಈ ಪೈಕಿ ಇನ್ನೂ ಯಾವುದೆಂದು ಫೈನಲ್‌ ಆಗಬೇಕಿದೆ. ಈ ನಡುವೆಯೇ ಹೊಸೂರಿನ ವಿಮಾನ ನಿಲ್ದಾಣ ನಿರ್ಮಾಣ ಕಾಮಗಾರಿಯ ಅಪ್ಡೇಟ್‌ವೊಂದು ಲಭ್ಯವಾಗಿದೆ.

ಹೊಸೂರಿನಲ್ಲಿ ನಿರ್ಮಾಣ ಮಾಡಲು ಉದ್ದೇಶಿಸಿಸಲಾಗಿರುವ ವಿಮಾನ ನಿಲ್ದಾಣದ ಕಾಮಗಾರಿಯನ್ನ ವಿಳಂಬ ಮಾಡಬಾರದು ಎಂದು ವಿವಿಧ ಕೈಗಾರಿಕೆಗಳ ಒಕ್ಕೂಟಗಳು ತಮಿಳುನಾಡು ಸರ್ಕಾರಕ್ಕೆ ಮನವಿ ಮಾಡಿವೆ ಎನ್ನುವ ಮಾಹಿತಿಯೊಂದು ಲಭ್ಯವಾಗಿದೆ.

Don t Delay Airport Construction Work in Hosur Appeal to government

ಹೊಸೂರಿನ ತನೇಜಾ ಏರೋಸ್ಪೇಸ್ ಮತ್ತು ಏವಿಯೇಷನ್ ಲಿಮಿಟೆಡ್ ಒಡೆತನದ ಖಾಸಗಿ ವಿಮಾನ ನಿಲ್ದಾಣದ ಸಮೀಪದಲ್ಲಿ ಇರುವ ಗ್ರಾಮಗಳು ನೂತನ ವಿಮಾನ ನಿಲ್ದಾಣ ನಿರ್ಮಾಣಕ್ಕೆ ಸೂಕ್ತ ಜಾಗ ಎಂದು ಹೊಸೂರು ಕೈಗಾರಿಕೆಗಳ ಒಕ್ಕೂಟ ಹಾಗೂ ಹೊಸೂರು ಸಣ್ಣ ಮತ್ತು ಅತಿಸಣ್ಣ ಒಕ್ಕೂಟ ಅಭಿಪ್ರಾಯಪಟ್ಟಿದೆ. ಈ ಯೋಜನೆಯನ್ನು ಅಂತಿಮಗೊಳಿಸಿದ ಬಳಿಕವೂ ಕಾಮಾಗರಿ ವಿಳಂಬ ಅರಿಯಲ್ಲ ಅಂತಲೂ ಹೇಳಿವೆ.

ಡಿಎಂಕೆ ಸರ್ಕಾರದ ಮಹತ್ವಾಕಾಂಕ್ಷೆಯ ಗ್ರೀನ್‌ಫೀಲ್ಡ್‌ ವಿಮಾನ ನಿಲ್ದಾಣ ಯೋಜನೆಗಾಗಿ ಹೊಸೂರು ಮತ್ತು ಸುಮತ್ತಮುತ್ತಲಿನ ಐದು ಸ್ಥಳಗಳನ್ನು ತಮಿಳುನಾಡು ಸರ್ಕಾರದ ಕೋರಿಕೆ ಮೇರೆಗೆ ಭಾರತೀಯ ವಿಮಾನ ನಿಲ್ದಾಣಗಳ ಪ್ರಾಧಿಕಾರ ಪರಿಶೀಲನೆ ಮಾಡಿತ್ತು. ಈ ಪೈಕಿ ಎರಡು ಸ್ಥಳಗಳನ್ನು ಆಯ್ಕೆ ಮಾಡಿದ್ದು, ಎಎಐ ವಿಸ್ತೃತ ಅಧ್ಯಯನದ ಬಳಿಕ ಒಂದು ತಾಣವನ್ನು ಅಂತಿಮಗೊಳಿಸಲಿದೆ ಎನ್ನುವ ಮಾಹಿತಿ ಲಭ್ಯವಾಗಿದೆ.

ಇದೀಗ ಗುರುತಿಸಿರುವ ಎರಡು ಸ್ಥಳಗಳು ಬೆಳಗೊಂಡಪಲ್ಲಿ ಗ್ರಾಮದಿಂದ ಕ್ರಮವಾಗಿ 2 ಕಿಲೋ ಮೀಟರ್ ಮತ್ತು 10 ಕಿಲೋ ಮೀಟರ್ ದೂರದಲ್ಲಿದೆ.

ಹೊಸೂರಿನಲ್ಲಿ 2,000 ಹೆಕ್ಟೇರ್ ಪ್ರದೇಶದಲ್ಲಿ ನೂತನ ವಿಮಾನ ನಿಲ್ದಾಣ ನಿರ್ಮಾಣ ಮಾಡಲಾಗುವುದು ಎಂದು ತಮಿಳುನಾಡು ಸಿಎಂ ಎಂ.ಕೆ.ಸ್ಟಾಲಿನ್ ಅವರು ಕಳೆದ ವರ್ಷದ ಜೂನ್‌ನಲ್ಲಿ ‍ಘೋಷಣೆ ಮಾಡಿದ್ದರು. ಆದರೆ ಇದೀಗ ಈ ವಿಮಾನ ನಿಲ್ದಾಣ ನಿರ್ಮಾಣ ಕಾಮಗಾರಿ ವಿಳಂಬಕ್ಕೆ ಹಲವು ಒಕ್ಕೂಟಗಳು ಅಸಮಾಧಾನ ವ್ಯಕ್ತಪಡಿಸಿವೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+