ರಾಹುಲ್ ಏನು ಮಾಡಿಲ್ಲ, ಸುಮ್ಕೆ ಬೈಬೇಡಿ : ಕಾಂಗ್ರೆಸ್
ನವದೆಹಲಿ, ಡಿ.8: ನಾಲ್ಕು ರಾಜ್ಯಗಳ ಚುನಾವಣಾ ಫಲಿತಾಂಶದ ಟ್ರೆಂಡಿಂಗ್ ನೋಡೇ ಬೆಚ್ಚಿರುವ ಕಾಂಗ್ರೆಸ್ ಪಕ್ಷ ಬಿಜೆಪಿ ಕ್ಲೀನ್ ಸ್ವೀಪ್, ಆಮ್ ಆದ್ಮಿ ಪಕ್ಷ ಏಳಿಗೆ ಕಂಡು ಚಿಂತೆಗೀಡಾಗಿದೆ. ಈಗಲೇ ಈ ರೀತಿಯಾದರೆ ಇನ್ಮುಂದೆ ಹೇಗೆ ಎಂಬ ಯೋಚನೆಯಲ್ಲಿರುವ ಕಾಂಗ್ರೆಸ್ ಅವನತಿಗೆ ರಾಹುಲ್ ಗಾಂಧಿ ನೇರ ಕಾರಣ ಎಂಬ ಹೇಳಿಕೆಯನ್ನು ಕಾಂಗ್ರೆಸ್ ಅಲ್ಲಗೆಳೆದಿದೆ.
'ಇದು ಸಂಘಟಿತ ವೈಫಲ್ಯ. ಕಾಂಗ್ರೆಸ್ ಒನ್ ಮ್ಯಾನ್ ಶೋನಲ್ಲಿ ನಂಬಿಕೆ ಇರಿಸಿಕೊಂಡಿಲ್ಲ. ಜನತೆ ಕೊಟ್ಟ ತೀರ್ಪು ಒಪ್ಪಿಕೊಳ್ಳಬೇಕಿದೆ. ಸೋಲಿನ ಕಾರಣ ಹುಡುಕಬೇಕಿದೆ' ಎಂದು ಕೇಂದ್ರ ಸಚಿವೆ ಜಯಂತಿ ನಟರಾಜನ್ ಹೇಳಿದ್ದಾರೆ.
ಅಸೆಂಬ್ಲಿ ಚುನಾವಣೆ ಫಲಿತಾಂಶಕ್ಕೂ ಲೋಕಸಭೆ ಚುನಾವಣೆಗೂ ವ್ಯತ್ಯಾಸವಿದೆ. 1998-99ರಲ್ಲಿ ಅಸೆಂಬ್ಲಿ ಚುನಾವಣೆ ಗೆದ್ದರೂ ಲೋಕಸಭೆಯಲ್ಲಿ ಜಯಭೇರಿ ಬಾರಿಸಲು ಸಾಧ್ಯವಾಗಿರಲಿಲ್ಲ. ಇದೇ ರೀತಿ 2003ರಲ್ಲಿ ಬಿಜೆಪಿಗೂ ಇದೇ ಪರಿಸ್ಥಿತಿ ಅನುಭವಿಸಿತ್ತು ಎಂದಿದ್ದಾರೆ.
ಆದರೆ, ಕಾಂಗ್ರೆಸ್ ಎಷ್ಟೇ ರೀತಿಯಲ್ಲಿ ಕಾಂಗ್ರೆಸ್ ಯುವರಾಜ ರಾಹುಲ್ ಮುಚ್ಚಿಡಲು ಯತ್ನಿಸಿದರೂ ಸಾಮಾಜಿಕ ಜಾಲ ತಾಣಗಳಲ್ಲಿ ಮತ್ತೊಮ್ಮೆ Pappu can't dance Saala ಎಂಬ ಸಾಲುಗಳು ರಾಹುಲ್ ಕುರಿತ ಜೋಕುಗಳು ಹರಿದಾಡಿವೆ.
ಈ ನಡುವೆ ರಾಹುಲ್ ಗಾಂಧಿ ವಿರುದ್ಧ ನೇರವಾಗಿ ಕಿಡಿಕಾರಿರುವ ಜಮ್ಮು ಮತ್ತು ಕಾಶ್ಮೀರ ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ 'ಜನಪ್ರಿಯ ಯೋಜನೆಗಳು ಯಾವುದೇ ರೀತಿ ಮತಗಳನ್ನು ತಂದುಕೊಟ್ಟಿಲ್ಲ' ಎಂದಿದ್ದಾರೆ. ಸಾಮಾಜಿಕ ಜಾಲ ತಾಣಗಳಲ್ಲಿ ರಾಹುಲ್ ವಿರುದ್ಧ ಹರಿದಾಡಿರುವ ಟ್ವೀಟ್ಸ್ ಬಹುತೇಕ ಸತ್ಯವನ್ನೇ ಹೇಳುತ್ತಿದೆ. 15 ವರ್ಷಗಳ ನಂತರ ದೆಹಲಿ, 31 ವರ್ಷ ನಂತರ ರಾಜಸ್ಥಾನ ಕಳೆದುಕೊಂಡ ಕಾಂಗ್ರೆಸ್ಸಿಗೆ ಉತ್ತೇಜನ ನೀಡಲು ರಾಹುಲ್ ಎಲ್ಲಾ ರೀತಿಯಿಂದ ಸೋತಿರುವುದು ಸ್ಪಷ್ಟವಾಗಿದೆ. ರಾಹುಲ್ ಬಗ್ಗೆ ಜನತೆ ಏನು ಹೇಳಿದ್ದಾರೆ ಮುಂದೆ ಓದಿ...
|
ಅತಿ ಜನಪ್ರಿಯ ಟ್ವೀಟ್
ರಾಹುಲ್ ಗಾಂಧಿ ಬಗ್ಗೆ ಅತಿ ಜನಪ್ರಿಯ ಟ್ವೀಟ್
|
ವಿವಿಧ ಪಕ್ಷಗಳ ಹೆಸರು
ವಿವಿಧ ಪಕ್ಷಗಳ ಹೆಸರು ಹಾಗೂ ಇಂದಿನ ಸ್ಥಿತಿ ಗತಿ ಬಗ್ಗೆ ಟ್ವೀಟ್
|
ರಾಹುಲ್ ಪರ ಟ್ವೀಟ್
ಅಪರೂಪಕ್ಕೆ ರಾಹುಲ್ ಗಾಂಧಿ ಪರ ಸಾರ್ವಜನಿಕರಿಂದ ಟ್ವೀಟ್
|
ಟ್ರಿಂಗ್ ಟ್ರಿಂಗ್ ಜೋಕ್
ದೆಹಲಿಯಲ್ಲಿ ಸೋತು ಸುಣ್ಣವಾಗಿರುವ ಶೀಲಾ ಮೇಡಂ ಗೆ ಕಾಂಗ್ರೆಸ್ ಉಪಾಧ್ಯಕ್ಷ ಕರೆ ಮಾಡಿ ಕೇಳಿದ್ದೇನು?
|
ರಾಜಕೀಯ ತೊರೆದರೆ ರಾಹುಲ್ ಗತಿ?
ಇತಿಹಾಸಗಾರ ರಾಮಚಂದ್ರ ಗುಹ ರಾಹುಲ್ ಬೇರೆ ವೃತ್ತಿ ಆರಿಸಿಕೊಳ್ಳಲಿ ಎಂದಿದ್ದಕೆ ಪ್ರತಿಯಾಗಿ ಬಂದ ಟ್ವೀಟ್
|
ಬಿಗ್ ಬಾಸ್ ಕೂಡಾ ಖುಷ್
ಬಿಗ್ ಬಾಸ್ ಕೂಡಾ ಖುಷ್ ಅಂತೆ. ಮುಂದಿನ ಸರಣಿಗೆ ಶೀಲಾ ದೀಕ್ಷಿತ್ ಹಾಗೂ ರಾಹುಲ್ ಸ್ಪರ್ಧಿಗಳಾಗಬಹುದಂತೆ.
|
ರಾಹುಲ್ ಎಲ್ಲಿ
ರಾಹುಲ್ ಎಲ್ಲಿ ಎಂದರೆ ನೌಕ್ರಿ.ಕಾಂ ನಲ್ಲಿ ಹುಡುಕಿ, ಹೊಸ ಕೆಲಸಕ್ಕೆ ಅರ್ಜಿ ಹಾಕಿರಬಹುದು.












Click it and Unblock the Notifications