ಚಂಡಿಘಡದ ಪೌಷ್ಠಿಕ್ ಹೊಟೇಲ್ ಬಾಬಾ ರಾಮ್ ದೇವ್ ಗೆ ಸೇರಿದ್ದಾ?!

By: ಒನ್ ಇಂಡಿಯಾ ಪ್ರತಿನಿಧಿ
Subscribe to Oneindia Kannada

ಚಂಡಿಘಡ, ಏಪ್ರಿಲ್ 18: ಚಂಡಿಘಡದ ಪೌಷ್ಠಿಕ್ ಹೊಟೇಲ್ ಬಾಬಾ ರಾಮ್ ದೇವ್ ಗೆ ಸೇರಿದ್ದಾ?! ಚರ್ಚೆ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಪತಂಜಲಿ ಉತ್ಪನ್ನಗಳ ಮೂಲಕ ಸ್ವದೇಶಿ ಉತ್ಪನ್ನಗಳಿಗೂ ಭಾರತದಲ್ಲಿ ಬೆಲೆ ಇದೆ ಎಂಬುದನ್ನು ತೋರಿಸಿಕೊಟ್ಟ ಬಾಬಾ ರಾಮದೇವ್ ಇದೀಗ ಹೊಟೇಲ್ ಉದ್ಯಮಕ್ಕೂ ಕಾಲಿಡುತ್ತಿದ್ದಾರಾ?

ಚಂಡಿಘಡದಲ್ಲಿರುವ ಪೌಷ್ಠಿಕ್ ಎಂಬ ಹೊಟೇಲ್ ಬಾಬಾ ರಾಮದೇವ್ ಅವರಿಗೆ ಸೇರಿದ್ದು ಎಂದು ಹಲವರು ಹೊಟೇಲ್ ಚಿತ್ರದ ಜೊತೆಗೆ ಸಾಮಾಜಿಕ ಜಾಲತಾಣಗಳಲ್ಲಿ ಸ್ಟೇಟಸ್ ಹಾಕಿದ್ದರು. ಪತಂಜಲಿ ಉತ್ಪನ್ನಗಳ ಅಭಿಮಾನಿಗಳು, ಬಾಬಾ ರಾಮದೇವ್ ಅನುಯಾಯಿಗಳು ಈ ಸುದ್ದಿ ಕೇಳಿ ಸಂತಸ ಪಟ್ಟರೆ, ಪತಂಜಲಿ ಉತ್ಪನ್ನಗಳೊಂದಿಗೆ ಸ್ಪರ್ಧಿಸಲಾಗದೆ ನಷ್ಟ ಅನುಭವಿಸಿದ್ದ ಕೆಲವು ಕಂಪೆನಿಗಳು ಈ ಸುದ್ದಿಯನ್ನು ಕೇಳಿ ಆತಂಕ ವ್ಯಕ್ತಪಡಿಸಿದ್ದವು.[ಚೀನಾ, ಮ್ಯಾನ್ಮಾರ್, ಬಾಂಗ್ಲಾಕ್ಕೆ ರಾಮದೇವ್ ಪತಂಜಲಿ ಉತ್ಪನ್ನ!]

Does Postik Restaurant in Chandigarh belong to Baba Ramdev?

ಆದರೆ ಈ ಬಗ್ಗೆ ಮಾತನಾಡಿದ ಹೊಟೇಲ್ ನ ಮಾಲೀಕರು, ಈ ಹೊಟೇಲ್ ನಲ್ಲಿ ಪತಂಜಲಿ ಉತ್ಪನ್ನಗಳನ್ನು ಮಾತ್ರ ಬಳಸಲಾಗುತ್ತದೆ ಎಂಬುದು ನಿಜ. ಆದರೆ ಇದು ಬಾಬಾ ರಾಮದೇವ್ ಅವರ ಹೊಟೇಲ್ ಅಲ್ಲ, ಎಂದು ಸ್ಪಷ್ಟಪಡಿಸಿದ್ದಾರೆ. ನಮ್ಮ ಹೊಟೇಲಿನಲ್ಲಿ ಪ್ರತಿಯೊಂದಕ್ಕೂ ಪತಂಜಲಿ ಉತ್ಪನ್ನಗಳನ್ನೇ ಬಳಸುತ್ತೇವೆ. ಮೆನುಕಾರ್ಡ್ ನಲ್ಲೂ ಇದನ್ನು ಬರೆದಿದ್ದೇವೆ. ಆದ್ದರಿಂದ ಜನರು ತಪ್ಪು ತಿಳಿದುಕೊಂದಿರಬಹುದು ಎಂದು ಅವರು ಹೇಳಿದ್ದಾರೆ.[ಆಯುಷ್ ನಿಂದ ಎಲ್ಲ ಭಾಷೆಗಳಲ್ಲೂ ಯೋಗ ಕಲಿಯಿರಿ: ರಾಮ್ ದೇವ್]

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Does Postik Restaurant in Chandigarh belong to Baba Ramdev? this question is becoming viral in social media. But restaurant told, this is a fake news.
Please Wait while comments are loading...