18 ವರ್ಷದ ಯುವಕನ 18 ಸೆಂ.ಮೀ ಉದ್ದದ ಬಾಲ ಕಟ್!

ನಾಗ್ಪುರ, ಅಕ್ಟೋಬರ್ 05: ಸುಮಾರು 18 ಸೆಂಟಿ ಮೀಟರ್ ಉದ್ದದ ಬಾಲ ಹೊಂದಿದ್ದ 18 ವರ್ಷದ ಯುವಕನಿಗೆ ಕೊನೆಗೂ ಬಾಲದಿಂದ ಮುಕ್ತಿ ಸಿಕ್ಕಿದೆ. ನಾಗಪುರದ ವೈದ್ಯರು ಯಶಸ್ವಿ ಶಸ್ತ್ರಚಿಕಿತ್ಸೆ ನಡೆಸಿ ಬಾಲ ಕಟ್ ಮಾಡಿದ್ದಾರೆ.

ಹುಟ್ಟಿದ ದಿನದಿಂದಲೇ ಬಾಲ ಬೆಳೆಯುತ್ತಿದ್ದ ಈ ಬಾಲದಿಂದ ಯುವಕ ಮುಜುಗರಕ್ಕೆ ಒಳಗಾಗಿದ್ದ. ಆದರೆ, ಇಷ್ಟು ಉದ್ದ ಬೆಳೆದರೂ ಆತನ ಕುಟುಂಬದವರು ವೈದ್ಯರನ್ನು ಸಂರ್ಪಸಿರಲಿಲ್ಲ. ಆದರೆ, ಇತ್ತೀಚೆಗೆ ಬಾಲದಿಂದ ತೀವ್ರ ನೋವು ಕಾಣಿಸಿಕೊಂಡ ಪರಿಣಾಮ ಕೊನೆಗೂ ವೈದ್ಯರ ನೆರವು ಕೋರಿದ್ದಾರೆ.

Doctors remove 18 cm tail from Nagpur boy's back

ನಾಗ್ಪುರದ ಸರ್ಕಾರಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯ ನರರೋಗ ತಜ್ಞರ ತಂಡ ಯಶಸ್ವಿಯಾಗಿ ಶಸ್ತ್ರಚಿಕಿತ್ಸೆ ನಡೆಸಿ ಬಾಲವನ್ನು ತೆಗೆದು ಹಾಕಿದೆ ಎಂದು ವಿಭಾಗದ ಮುಖ್ಯಸ್ಥ ಡಾ. ಪ್ರಮೋದ್ ಗಿರಿ ಹೇಳಿದ್ದಾರೆ.

ಬಾಲ ದೊಡ್ಡದಾಗಿ ಬೆಳೆದಂತೆ ಬಾಲದಲ್ಲಿ ಮೂಳೆಗಳ ಬೆಳವಣಿಗೆ ಆಗುತ್ತದೆ. ಬಾಲದ ಮೂಳೆ ಯುವಕನ ಬೆನ್ನಿಗೆ ಚುಚ್ಚುತ್ತಿದ್ದ ಪರಿಣಾಮ ಆತನಿಗೆ ಅಸಾಧ್ಯ ನೋವು ಕಾಣಿಸಿಕೊಂಡಿತ್ತು. ಬೆನ್ನುಹುರಿ, ಕೈಕಾಲು ನೋವು, ಜಠರ ಬೇನೆ ಹೀಗೆ ಎಲ್ಲಾ ರೀತಿ ಸಮಸ್ಯೆಗಳನ್ನು ಸಣ್ಣ ಬಾಲ ತಂದೊಡ್ಡಬಲ್ಲದು ಎಂದು ಡಾ. ಗಿರಿ ವಿವರಿಸಿದ್ದಾರೆ.

ಡಾ ಗಿರಿ, ಡಾ. ದಿವಿಕ್ ಮಿತ್ತಲ್ ತಂಡಕ್ಕೆ ಡಾ ವಿವೇಕ್ ಅಗರವಾಲ್, ಡಾ. ಲೂಲು ಫತೇಮಾ ವಾಲಿ, ಡಾ. ಅಭಯ್ ಹಾಗೂ ಡಾ ವೈಭವ್ ಚೌಹಾಣ್ ತಂಡ ಸಾಥ್ ನೀಡಿ ಈ ಅಪರೂಪದ ಶಸ್ತ್ರಚಿಕಿತ್ಸೆಯನ್ನು ಯಶಸ್ವಿಗೊಳಿಸಿದ್ದಾರೆ. (ಪಿಟಿಐ)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+