ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಆಕೆಯ ತಲೆಬುರುಡೆಯೊಳಗಿತ್ತು ಜೀವಂತ ಜಿರಳೆ!

ಆಸ್ಪತ್ರೆಯಿಂದ ಆಸ್ಪತ್ರೆಗಳಿಗೆ ಅಲೆದಾಡಿದ ತಮಿಳುನಾಡಿನ ಇಂಜಾಬಕ್ಕಮ್ ನಲ್ಲಿ ಮಹಿಳೆಯೊಬ್ಬಳ ಪಡಿಪಾಟಲು. ಕೊನೆಗೂ ಸ್ಕ್ಯಾನಿಂಗ್ ನಲ್ಲಿ ಪತ್ತೆಯಾಯಿತು ಜೀವಂತ ಜಿರಳೆ.

|
Google Oneindia Kannada News

ಇಂಜಾಬಕ್ಕಮ್ (ತಮಿಳುನಾಡು), ಫೆಬ್ರವರಿ 7: ತನ್ನ ತಲೆಯೊಳಗೆ ಎನೋ ಓಡಾಡುತ್ತಿದೆ ಎಂದು ಗಾಬರಿಗೊಂಡು ತಮ್ಮ ಬಳಿ ಚಿಕಿತ್ಸೆಗೆ ಬಂದ ಆಕೆಯನ್ನು ಪರೀಕ್ಷಿಸಿದ ವೈದ್ಯರೇ ಬೆಚ್ಚಿಬಿದ್ದಿದ್ದಾರೆ. ಆಕೆಯ ತಲೆಯೊಳಗೆ ಜಿರಳೆ ಇರುವುದನ್ನು ಕಂಡು, ಸೂಕ್ತ ಚಿಕಿತ್ಸೆಯ ಮೂಲಕ ಆ ಜಿರಳೆಯನ್ನು ಹೊರತಗೆದಿದ್ದಾರೆ. ಆದರೆ, ಇಷ್ಟಾಗುವ ಹೊತ್ತಿಗೆ ನಾಲ್ಕು ಆಸ್ಪತ್ರೆಗಳನ್ನು ಸುತ್ತಿದ್ದ ಆ ಮಹಿಳೆ ಪಡಿಪಾಟಲು ಬೀಳುವಂತಾಗಿದೆ.

ಹೌದು. ಇದಾಗಿರುವುದು ತಮಿಳುನಾಡಿನಲ್ಲಿ. ಇಂಜಾಬಕ್ಕಮ್ ನ ತಮ್ಮ ಮನೆಯಲ್ಲಿ ಎಂದಿನಂತೆ ರಾತ್ರಿ ಊಟ ಮುಗಿಸಿ ಮಲಗಿದ್ದ 42 ವರ್ಷದ ಸೆಲ್ವಿ ಎಂಬ ಮಹಿಳೆಗೆ ಮಧ್ಯರಾತ್ರಿಯ ವೇಳೆಗೆ ಆಕೆಯ ಮುಖದ ಬಲಭಾಗದಲ್ಲಿ ಮೂಗಿನ ಹಿಂಭಾಗದಲ್ಲಿ ಒಳಗೆ ಏನೋ ಓಡಾಡಿದಂತೆ ಭಾಸವಾಗಿದೆ.

Doctors Found A Live Cockroach In Her Skull

ತಕ್ಷಣವೇ ಎದ್ದು ಕುಳಿತ ಆಕೆ ಭಯಭೀತಳಾಗಿದ್ದಾಳೆ. ಒಳಗೆ ಜಿರಳೆ ಓಡಾಡುತ್ತಿದೆಯೆಂದು ಆಕೆಗೆ ಗೊತ್ತೇ ಆಗಿಲ್ಲ. ಆಕೆ ಅದನ್ನು ಕಲ್ಪನೆಯಲ್ಲೂ ಎಣಿಸಿರಲಿಲ್ಲ.

ಆದರೆ, ಮಧ್ಯರಾತ್ರಿಯಲ್ಲಿ ಆದ ಆ ತೊಂದರೆಯಿಂದ ಭಾರೀ ಚಿತ್ರ ಹಿಂಸೆ ಅನುಭವಿಸುವಂತಾಗಿದೆ. ಇದರಿಂದ ನಿದ್ರೆ ಮಾಡದ ಆಕೆ ರಾತ್ರಿಯಿಡೀ ಬೆಳಗಾಗುವುದನ್ನೇ ಕಾದಿದ್ದಾಳೆ. ಬೆಳಗಾದ ನಂತರ ಆಸ್ಪತ್ರೆಯತ್ತ ಓಡಿದ್ದಾಳೆ.

ತಮ್ಮ ಮನೆಗೆ ಹತ್ತಿರವಿರುವ ಕ್ಲಿನಿಕ್ ಗೆ ಓಡಿದ ಆಕೆ, ವೈದ್ಯರಿಗೆ ಸಮಸ್ಯೆ ಹೇಳಿಕೊಳ್ಳಲಾಗಿ, ವೈದ್ಯರು ಆಕೆಯನ್ನು ಹೆಚ್ಚಿನ ಪರೀಕ್ಷೆಗಾಗಿ ಹತ್ತಿರದಲ್ಲೇ ಇರುವ ಆಸ್ಪತ್ರೆಗೆ ಹೋಗುವಂತೆ ಸಲಹೆ ನೀಡಿದ್ದಾರೆ.

ಅಲ್ಲಿ, ಆಕೆಯನ್ನು ಪರೀಕ್ಷಿಸಿದ ವೈದ್ಯರು ಮೂಗಿನೊಳಗೆ ದುರ್ಮಾಂಸ ಬೆಳೆದಿರಬೇಕೆಂದು ಬಗೆದು ಹೆಚ್ಚಿನ ಪರೀಕ್ಷೆಗೆ ಮತ್ತೊಂದು ಆಸ್ಪತ್ರೆಗೆ ಹೋಗುವಂತೆ ಹೇಳಿದ್ದಾರೆ.

ಮತ್ತೊಂದು ಆಸ್ಪತ್ರೆಯ ಡಾಕ್ಟರ್, ಆಕೆಯನ್ನು ಸ್ಕಾನಿಂಗ್ ಗೊಳಪಡಿಸಬೇಕೆಂದು ಹೇಳಿದ್ದರೂ ಅದಕ್ಕಾಗಿ ಬೇರೊಂದು ಆಸ್ಪತ್ರೆಗೆ ಹೋಗುವಂತೆ ತಿಳಿಸಿದ್ದಾರೆ.

ಅವರು ಹೇಳಿದಂತೆ ಸ್ಟ್ಯಾನ್ಲಿ ಮೆಡಿಕಲ್ ಕಾಲೇಜು ಆಸ್ಪತ್ರೆಗೆ ಭೇಟಿ ನೀಡಿದಾಗ ಆಕೆಯನ್ನು ಪರೀಕ್ಷಿಸಿದ ಎಂ.ಎನ್. ಶಂಕರ್ ಎಂಬ ವೈದ್ಯರು ಮೊದಲು ಆಕೆಗೆ ಎಂಡೋಸ್ಕೊಪಿ ಮಾಡಿದ್ದಾರೆ. ಆಗ, ಜೀವಂತ ಜಿರಳೆಯಿರುವುದು ಪತ್ತೆಯಾಗಿದೆ.

ಆ ಜಿರಳೆ ಆಕೆಯ ತಲೆಬುರುಡೆಯೊಳಗೆ ಜಿರಳೆ ಹೋಗಿದ್ದು ಹೇಗೆಂಬುದಕ್ಕೆ ಉತ್ತರ ಸಿಕ್ಕಿಲ್ಲದಿದ್ದರೂ, ಸುಮಾರು 45 ನಿಮಿಷಗಳ ಚಿಕಿತ್ಸೆಯ ನಂತರ ಜಿರಳೆಯನ್ನುಹೊರ ತಗೆಯುವಲ್ಲಿ ವೈದ್ಯರು ಯಶಸ್ವಿಯಾಗಿದ್ದಾರೆ.

ಈ ಬಗ್ಗೆ ಪ್ರತಿಕ್ರಿಯಿಸಿರುವ ವೈದ್ಯರು, ಸೆಲ್ವಿ ತಲೆಬುರುಡೆಯೊಳಗಿದ್ದ ಜಿರಳೆ, ಪೂರ್ಣ ಬೆಳವಣಿಗೆ ಹೊಂದಿದ್ದ ಜಿರಳೆಯಾಗಿತ್ತು ಎಂದಿದ್ದಾರೆ.

English summary
A doctor successfully removed the a live cockroach out of the skull of 42 year old lady named Selvi in Tamilnadu.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X