Doctor Earning:‌ ₹3 ಲಕ್ಷ ಗಳಿಸುವ ವೈದ್ಯರಿಗೆ ₹18 ಸಾವಿರದ ಡ್ರೈವರ್‌ ವೇತನವೇ ದೊಡ್ಡ ಖರ್ಚು! ಕಾರಣವೇನು?

ನವದೆಹಲಿ: ತಿಂಗಳಿಗೆ ₹3 ಲಕ್ಷ ಆದಾಯ ಗಳಿಸುತ್ತಿದ್ದರೂ ವೈಯಕ್ತಿಕ ಡ್ರೈವರ್ಗೆ ₹18,000 ವೇತನ ನೀಡಬೇಕೇ ಎಂಬ ಗೊಂದಲದಲ್ಲಿದ್ದ ವೈದ್ಯರೊಬ್ಬರ ಪೋಸ್ಟ್‌ ಇದೀಗ ಸಾಮಾಜಿಕ ಜಾಲತಾಣದಲ್ಲಿ ಚರ್ಚೆಗೆ ಗ್ರಾಸವಾಗಿದೆ. ಪ್ರತಿದಿನ ಸುಮಾರು 60 ಕಿ.ಮೀ ಕಾರು ಚಾಲನೆ ಮಾಡುತ್ತಾ ಎರಡು ಆಸ್ಪತ್ರೆಗಳಿಗೆ ತೆರಳಬೇಕಾಗಿರುವುದರಿಂದ ತೀವ್ರವಾಗಿ ದಣಿಯುತ್ತಿರುವುದಾಗಿ ವೈದ್ಯರು ತಿಳಿಸಿದ್ದಾರೆ.

ರೆಡಿಟ್‌ನಲ್ಲಿ ತಮ್ಮ ಅನುಭವ ಹಂಚಿಕೊಂಡ ವೈದ್ಯರು, ಸುಮಾರು 25 ಕಿ.ಮೀ ಅಂತರದಲ್ಲಿರುವ ಎರಡು ಆಸ್ಪತ್ರೆಗಳಲ್ಲಿ ಕೆಲಸ ಮಾಡುತ್ತಿರುವುದಾಗಿ ಹೇಳಿದ್ದಾರೆ. ಹೀಗಾಗಿ ಪ್ರತಿದಿನ ಕಾರಿನಲ್ಲಿ ಸುಮಾರು 60 ಕಿ.ಮೀ ಪ್ರಯಾಣಿಸಬೇಕಾಗಿದ್ದು, ನಗರದಲ್ಲಿನ ಟ್ರಾಫಿಕ್‌ ದಟ್ಟಣೆ ಹಾಗೂ ಪಾರ್ಕಿಂಗ್‌ ಸಮಸ್ಯೆಯಿಂದಾಗಿ ವಾಹನ ಚಲಾಯಿಸುವುದು ಸಾಕಷ್ಟು ಆಯಾಸ ಉಂಟುಮಾಡುತ್ತಿದೆ ಎಂದು ವಿವರಿಸಿದ್ದಾರೆ.

Doctor Earning earning 3 Lakh a Month Hesitates to Spend 18 000 on a Driver Social Media Reacts

₹18 ಸಾವಿರ ಖರ್ಚು ಮಾಡಲು ಹಿಂದೇಟು

ತಿಂಗಳಿಗೆ ₹3 ಲಕ್ಷ ಸಂಪಾದಿಸುತ್ತಿದ್ದರೂ ಡ್ರೈವರ್‌ಗಾಗಿ ಪ್ರತಿ ತಿಂಗಳು ಸುಮಾರು ₹18,000 ಖರ್ಚು ಮಾಡಬೇಕಾಗುತ್ತದೆ ಎಂಬುದು ವೈದ್ಯರ ಗೊಂದಲಕ್ಕೆ ಕಾರಣವಾಗಿದೆ. ಹೀಗಾಗಿ 'ನಾನು ಡ್ರೈವರ್‌ ನೇಮಿಸಿಕೊಳ್ಳಬೇಕೇ?' ಎಂದು ಅವರು ಸಾಮಾಜಿಕ ಜಾಲತಾಣದಲ್ಲಿ ಪ್ರಶ್ನಿಸಿದ್ದಾರೆ.

ವೈದ್ಯರ ಪ್ರಶ್ನೆಗೆ ಪ್ರತಿಕ್ರಿಯಿಸಿರುವ ಹಲವರು, ಹಣಕ್ಕಿಂತ ಸಮಯ, ಮಾನಸಿಕ ನೆಮ್ಮದಿ ಹಾಗೂ ಸುರಕ್ಷತೆಗೆ ಹೆಚ್ಚಿನ ಆದ್ಯತೆ ನೀಡಬೇಕು ಎಂದು ಸಲಹೆ ನೀಡಿದ್ದಾರೆ.

'ದಣಿದ ಸ್ಥಿತಿಯಲ್ಲಿ ವಾಹನ ಚಲಾಯಿಸುವುದು ಅಪಾಯಕಾರಿ'

ಒಬ್ಬ ಬಳಕೆದಾರರು, ಈಗಾಗಲೇ ಕೆಲಸದಿಂದ ದಣಿದಿರುವ ಸಂದರ್ಭದಲ್ಲಿ ಪ್ರತಿದಿನ ವಾಹನ ಚಲಾಯಿಸುವುದು ಅಪಾಯಕಾರಿಯಾಗಬಹುದು ಎಂದು ಹೇಳಿದ್ದಾರೆ. ನಿದ್ರೆಯ ಕೊರತೆ ಅಥವಾ ತೀವ್ರ ಆಯಾಸದಿಂದ ಚಾಲನೆ ಮಾಡುವಾಗ ಕೆಲವೇ ಕ್ಷಣಗಳ ಗಮನ ಬೇರೆಡೆ ಹೋದರೂ ಅಪಘಾತ ಸಂಭವಿಸುವ ಸಾಧ್ಯತೆ ಇದೆ. ಅಂತಹ ಸಂದರ್ಭದಲ್ಲಿ ಕಾನೂನುಬದ್ಧ ಹೊಣೆಗಾರಿಕೆಯನ್ನೂ ಎದುರಿಸಬೇಕಾಗಬಹುದು. ಹೀಗಾಗಿ ಡ್ರೈವರ್‌ ನೇಮಿಸಿಕೊಳ್ಳುವುದು ಸೂಕ್ತ ಎಂದು ಸಲಹೆ ನೀಡಿದ್ದಾರೆ.

ಮತ್ತೊಬ್ಬರು ತಮ್ಮ ಅನುಭವ ಹಂಚಿಕೊಂಡಿದ್ದು, ತಮ್ಮ ಮಾಸಿಕ ಆದಾಯ ₹1 ಲಕ್ಷಕ್ಕಿಂತ ಕಡಿಮೆ ಇದ್ದಾಗಲೇ ಡ್ರೈವರ್‌ ನೇಮಿಸಿಕೊಂಡಿದ್ದಾಗಿ ಹೇಳಿದ್ದಾರೆ. ದೀರ್ಘ ಪ್ರಯಾಣದ ಸಮಯವನ್ನು ಉಳಿಸಿಕೊಳ್ಳಲು ಡ್ರೈವರ್‌ ಸಹಾಯ ಮಾಡಿದ್ದು, ಮುಂದಿನ ಹಲವು ವರ್ಷಗಳ ಕಾಲ ಅದು ತಮ್ಮ ಅತ್ಯಂತ ಉಪಯುಕ್ತ ಖರ್ಚುಗಳಲ್ಲಿ ಒಂದಾಗಿತ್ತು ಎಂದು ತಿಳಿಸಿದ್ದಾರೆ.‌

ಡ್ರೈವರ್‌ ಇದ್ದ ಕಾರಣ ಕಾರಿನಲ್ಲಿ ಪ್ರಯಾಣಿಸುವ ಸಮಯವನ್ನು ವಿಶ್ರಾಂತಿ, ಫೋನ್‌ ಕರೆಗಳು ಅಥವಾ ವೈಯಕ್ತಿಕ ಕೆಲಸಗಳಿಗೆ ಬಳಸಿಕೊಳ್ಳಲು ಸಾಧ್ಯವಾಗಿತ್ತು. ಇದರಿಂದ ಕೆಲಸದಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸಲು ಹಾಗೂ ಕುಟುಂಬದೊಂದಿಗೆ ಹೆಚ್ಚು ಸಮಯ ಕಳೆಯಲು ನೆರವಾಯಿತು ಎಂದು ಅವರು ಹೇಳಿದ್ದಾರೆ.

ಮತ್ತೊಬ್ಬ ಬಳಕೆದಾರರು, ಜೀವನಮಟ್ಟ ಸುಧಾರಿಸಿಕೊಳ್ಳಲು ಮಾಡಬಹುದಾದ ಪ್ರಮುಖ ಬದಲಾವಣೆಗಳಲ್ಲಿ ಡ್ರೈವರ್‌ ನೇಮಿಸಿಕೊಳ್ಳುವುದೂ ಒಂದು ಎಂದು ಅಭಿಪ್ರಾಯಪಟ್ಟಿದ್ದಾರೆ. ₹18,000 ವೇತನವು ಕಡಿಮೆ ಮೊತ್ತವಾಗಿರಬಹುದು ಎಂದೂ ಅವರು ಹೇಳಿದ್ದಾರೆ.

'ಸಮಯ ಮತ್ತು ಜೀವನದ ಮೌಲ್ಯ ಹಣಕ್ಕಿಂತ ಹೆಚ್ಚು'

ಇದೇ ಚರ್ಚೆಯಲ್ಲಿ ಮತ್ತೊಬ್ಬ ವೈದ್ಯರು, ತಾವು ಇತ್ತೀಚೆಗೆ MD ಪರೀಕ್ಷೆ ಪೂರ್ಣಗೊಳಿಸಿದ್ದು, ಮುಂದಿನ ದಿನಗಳಲ್ಲಿ ಎರಡು ಕನ್ಸಲ್ಟೆಂಟ್‌ ಹುದ್ದೆಗಳಲ್ಲಿ ಕೆಲಸ ಮಾಡುವ ಉದ್ದೇಶ ಹೊಂದಿರುವುದಾಗಿ ಹೇಳಿದ್ದಾರೆ. ಡ್ರೈವರ್‌ ನೇಮಿಸಿಕೊಳ್ಳುವುದು ತಮ್ಮ ಗುರಿಗಳಲ್ಲೊಂದು ಎಂದಿರುವ ಅವರು, ಇದು ಹಣವನ್ನು ವಿವೇಚನೆಯಿಲ್ಲದೆ ಖರ್ಚು ಮಾಡುವುದಲ್ಲ; ತಮ್ಮ ಸಮಯ ಮತ್ತು ಜೀವನಕ್ಕೆ ಹೆಚ್ಚಿನ ಮೌಲ್ಯ ನೀಡುವುದರಿಂದ ಡ್ರೈವರ್‌ ಬೇಕೆಂದು ಹೇಳಿದ್ದಾರೆ.

ಕಾರಿನಲ್ಲಿ ಪ್ರಯಾಣಿಸುವ ಸಮಯವನ್ನು ನಿದ್ರೆ ಪೂರ್ಣಗೊಳಿಸಲು ಅಥವಾ ಅಗತ್ಯ ಕರೆಗಳನ್ನು ಮಾಡಲು ಬಳಸಿಕೊಳ್ಳಬಹುದು. ತಾವು ಸ್ವತಃ ವಾಹನ ಚಲಾಯಿಸಲು ಬಯಸುವ ದಿನಗಳಲ್ಲಿ ಡ್ರೈವರ್‌ಗೆ ರಜೆ ನೀಡಬಹುದು ಎಂದೂ ಅವರು ಹೇಳಿದ್ದಾರೆ.

₹3 ಲಕ್ಷ ಮಾಸಿಕ ಆದಾಯ ಹೊಂದಿರುವ ವೈದ್ಯರ ₹18,000 ಡ್ರೈವರ್‌ ವೆಚ್ಚದ ಗೊಂದಲಕ್ಕಿಂತಲೂ, ಸಮಯ, ಸುರಕ್ಷತೆ, ಆಯಾಸ ಮತ್ತು ಮಾನಸಿಕ ನೆಮ್ಮದಿಗೆ ಎಷ್ಟು ಮೌಲ್ಯ ನೀಡಬೇಕು? ಎಂಬ ವಿಚಾರವೇ ಸಾಮಾಜಿಕ ಜಾಲತಾಣದಲ್ಲಿ ಚರ್ಚೆಯ ಕೇಂದ್ರವಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+