ಭಾರತದ ಮೊದಲ ಸಂಪೂರ್ಣ ಗ್ರಂಥಾಲಯ ಕ್ಷೇತ್ರ ಯಾವುದು ಗೊತ್ತಾ?
ತಿರುವನಂತಪುರಂ, ಡಿಸೆಂಬರ್ 26: ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರ ಧರ್ಮದಂ ಕ್ಷೇತ್ರವು ಭಾರತದ ಮೊದಲ ಸಂಪೂರ್ಣ ಗ್ರಂಥಾಲಯ ಹೊಂದಿರುವ ಕ್ಷೇತ್ರದ ಸ್ಥಾನವನ್ನು ಪಡೆದಿಸಿದೆ. ಇದು ಭಾರತದಲ್ಲಿ ಮೊದಲನೆಯದು ಎನ್ನಲಾಗಿದೆ.
ಧರ್ಮದಂ ಕ್ಷೇತ್ರದಲ್ಲಿರುವ ಒಟ್ಟು 138 ವಾರ್ಡ್‌ಗಳ ಪೈಕಿ 63 ವಾರ್ಡ್‌ಗಳಲ್ಲಿ ಗ್ರಂಥಾಲಯಗಳಿಲ್ಲ ಎಂದು ವಿಜಯನ್ ತಮ್ಮ ಫೇಸ್‌ಬುಕ್ ಪೋಸ್ಟ್‌ನಲ್ಲಿ ತಿಳಿಸಿದ್ದರು. ಆದರೆ ಈಗ ಈ ವಾರ್ಡ್‌ಗಳಲ್ಲಿಯೂ ಗ್ರಂಥಾಲಯಗಳನ್ನು ತೆರೆಯುವ ಮೂಲಕ ಧರ್ಮದಂ ಸಾಧನೆಯನ್ನು ತಲುಪಿತು. ಕ್ಷೇತ್ರದ ಎಲ್ಲ ವರ್ಗದ ಜನರ ಒತ್ತಾಸೆಯಿಂದ ಸಂಪೂರ್ಣ ಗ್ರಂಥಾಲಯೀಕರಣ ಸಾಧ್ಯವಾಗಿದೆ. ಸಮಾಜ ಅಭಿವೃದ್ಧಿಗಾಗಿ ಜನಾಂದೋಲನ ಸಂಸ್ಥೆಯು ಧರ್ಮದಂ ಕ್ಷೇತ್ರದಲ್ಲಿ ಗ್ರಂಥಾಲಯಗಳನ್ನು ಸ್ಥಾಪಿಸುವ ಹಾಗೂ ಈಗಿರುವ ಗ್ರಂಥಾಲಯಗಳನ್ನು ವಿಸ್ತರಿಸುವ ಕೆಲಸವನ್ನು ಕೈಗೆತ್ತಿಕೊಂಡಿದೆ.
ಸಾಮಾಜಿಕ ಪ್ರಗತಿಯಲ್ಲಿ ಗ್ರಂಥಾಲಯಗಳು ಮತ್ತು ಸಾರ್ವಜನಿಕ ಸ್ಥಳಗಳು ವಿಶಿಷ್ಟವಾದ ಸ್ಥಾನವನ್ನು ಹೊಂದಿವೆ ಎಂದು ಪ್ರಸ್ತಾಪಿಸಿದ ಮುಖ್ಯಮಂತ್ರಿಗಳು, ಅದಕ್ಕಾಗಿಯೇ ಜನರು ಪ್ರತಿ ವಾರ್ಡ್‌ನಲ್ಲಿ ಗ್ರಂಥಾಲಯಗಳನ್ನು ಸ್ಥಾಪಿಸುವ ಕಾರ್ಯಕ್ಕೆ ಮುಂದಾಗಿದ್ದಾರೆ. ಕಾರ್ಯಾಚರಣೆಗಳನ್ನು ಕ್ರೋಢೀಕರಿಸಲು ಮಿಷನ್ ಅನ್ನು ರಚಿಸಲಾಯಿತು. ಮಿಷನ್‌ನ ಭಾಗವಾಗಿರುವ ಜಿಲ್ಲಾ ಗ್ರಂಥಾಲಯ ಪರಿಷತ್ತು ಮತ್ತು ಸ್ಥಳೀಯ ಸ್ವ-ಆಡಳಿತ ಸಂಸ್ಥೆಗಳು ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಭಾಗವಹಿಸಿದವು ಎಂದು ಅವರು ಹೇಳಿದರು.

ಗ್ರಂಥಾಲಯ ನಿರ್ಮಾಣ ಉದ್ದೇಶದ ಅನುಷ್ಠಾನಕ್ಕಾಗಿ ವಾರ್ಡ್ ಮತ್ತು ಪಂಚಾಯಿತಿ ಮಟ್ಟದಲ್ಲಿ ಸಭೆ ನಡೆಸಲಾಗಿದೆ. ಇದಕ್ಕಾಗಿ ಸಮಿತಿಗಳನ್ನು ರಚಿಸಲಾಗಿತು. ಈ ಜನಪರ ಸಮಿತಿಗಳು ಕಾರ್ಯಚಟುವಟಿಕೆಗಳಿಗೆ ಸ್ಥಳೀಯ ನಾಯಕತ್ವವನ್ನು ನೀಡಿವೆ. ಸಾಮಾಜಿಕ ಅಭಿವೃದ್ಧಿಗಾಗಿ ಜನಾಂದೋಲನದ ಮೂಲಕ ಇಡೀ ಕೇರಳಕ್ಕೆ ಗ್ರಂಥಾಲಯಗಳ ನಿರ್ಮಾಣ ಪ್ರೇರಣೆಯಾಗಲಿ ಎಂದು ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ತಿಳಿಸಿದರು.












Click it and Unblock the Notifications