DMK MP Gaumutra: ‘ಗೋ ಮೂತ್ರದ ರಾಜ್ಯಗಳಲ್ಲಿ ಮಾತ್ರ ಬಿಜೆಪಿಗೆ ಗೆಲುವು’ ಹಿಂಗೆ ಹೇಳಿದ್ದು ಯಾರು?
ಪಂಚರಾಜ್ಯ ಚುನಾವಣೆಯಲ್ಲಿ ಹ್ಯಾಟ್ರಿಕ್ ರಾಜ್ಯಗಳಲ್ಲಿ ಗೆದ್ದು ಬೀಗಿರುವ ಬಿಜೆಪಿ, ಕರ್ನಾಟಕದ ಸೋಲಿನ ಸುಳಿಯಿಂದ ಹೊರಬಂದಿದೆ. ಒಟ್ಟು 3 ರಾಜ್ಯಗಳಲ್ಲಿ ಭರ್ಜರಿ ಗೆಲುವು ಸಾಧಿಸಿದೆ. ಇದೇ ಸಮಯದಲ್ಲಿ ಡಿಎಂಕೆ ಸಂಸದ ಸೆಂಥಿಲ್ ಕುಮಾರ್, 'ಗೋ ಮೂತ್ರದ ರಾಜ್ಯಗಳಲ್ಲಿ ಮಾತ್ರ ಬಿಜೆಪಿಗೆ ಗೆಲುವು' ಎಂದಿದ್ದು ಇದೀಗ ವಿವಾದದ ಬಿರುಗಾಳಿ ಎಬ್ಬಿಸಿದೆ. ಅದ್ರಲ್ಲೂ ಸಂಸತ್‌ನಲ್ಲಿ ಸೆಂಥಿಲ್ ಕುಮಾರ್ ಹೀಗೆ ಹೇಳಿಕೆ ನೀಡಿರುವುದು ಸಂಚಲನ ಸೃಷ್ಟಿಸಿದೆ.
ಅಂದಹಾಗೆ ಇಂದು ಸಂಸತ್‌ನಲ್ಲಿ ಪಂಚರಾಜ್ಯ ಚುನಾವಣೆ ಬಗ್ಗೆ ಮಾತನಾಡುವಾಗ ಬಿಜೆಪಿ ಗೆಲುವಿನ ವಿಚಾರ ಪ್ರಸ್ತಾಪ ಮಾಡಿದ್ದಾರೆ ಸೆಂಥಿಲ್ ಕುಮಾರ್. ಈ ವೇಳೆ ಬಿಜೆಪಿ ಗೆಲುವಿನ ಬಗ್ಗೆ ಹೇಳುತ್ತಾ, 'ಗೋ ಮೂತ್ರದ ರಾಜ್ಯಗಳಲ್ಲಿ ಮಾತ್ರ ಬಿಜೆಪಿಗೆ ಗೆಲುವನ್ನು ಸಾಧಿಸಿದೆ' ಎಂದಿದ್ದಾರೆ. ಅಲ್ಲದೆ ದಕ್ಷಿಣ ಭಾರತದ ವಿಚಾರವನ್ನ ಪ್ರಸ್ತಾಪಿಸಿ, ಬಿಜೆಪಿ ಕೇಂದ್ರ ನಾಯಕ ಪಡೆಯನ್ನೂ ಕೆಣಕಿದ್ದಾರೆ. ಹಾಗಾದರೆ ಡಿಎಂಕೆ ಸಂಸದ ಸೆಂಥಿಲ್ ಕುಮಾರ್ ಹೀಗೆ ಹೇಳಿಕೆ ನೀಡಿದ್ದು ಏಕೆ? ಸಂಪೂರ್ಣ ಮಾಹಿತಿ ಇಲ್ಲಿದೆ ಮುಂದೆ ಓದಿ.

'ಗೋ ಮೂತ್ರ'ದ ರಾಜ್ಯ ಎಂದಿದ್ದು ಯಾರಿಗೆ?
ಅಷ್ಟಕ್ಕೂ 2023ರ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಮಧ್ಯಪ್ರದೇಶ, ಛತ್ತೀಸ್‌ಗಢ ಹಾಗೂ ರಾಜಸ್ಥಾನ ರಾಜ್ಯಗಳಲ್ಲಿ ಗೆದ್ದಿದೆ. ಆದರೆ ತೆಲಂಗಾಣದಲ್ಲಿ ಸೋಲು ಕಂಡಿದೆ. ಕೆಲ ತಿಂಗಳ ಹಿಂದೆ ಕರ್ನಾಟಕದಲ್ಲೂ ಬಿಜೆಪಿ ಅಧಿಕಾರ ಕಳೆದುಕೊಂಡಿತ್ತು. ಈ ಮೂಲಕ ದಕ್ಷಿಣದಲ್ಲಿ ಅಂದ್ರೆ ದಕ್ಷಿಣ ಭಾರತದಲ್ಲಿ ಬಿಜೆಪಿ ಸಂಪೂರ್ಣ ಖಾಲಿ ಆಗಿದೆ ಎಂಬ ಅರ್ಥದಲ್ಲಿ ಡಿಎಂಕೆ ಸಂಸದ ವಾಗ್ದಾಳಿ ನಡೆಸಿದ್ದಾರೆ. ಈ ವೇಳೆ 'ಗೋ ಮೂತ್ರದ ರಾಜ್ಯಗಳಲ್ಲಿ ಮಾತ್ರ, ಬಿಜೆಪಿ ಗೆಲುವನ್ನು ಸಾಧಿಸಿದೆ' ಎಂಬ ಪದ ಬಳಸಿದ್ದಾರೆ.
#WATCH | Winter Session of Parliament | DMK MP DNV Senthilkumar S says "...The people of this country should think that the power of this BJP is only winning elections mainly in the heartland states of Hindi, what we generally call the 'Gaumutra' states..." pic.twitter.com/i37gx9aXyI
— ANI (@ANI) December 5, 2023
2022ರಲ್ಲೂ ಹಿಂಗೆ ಹೇಳಿದ್ರು!
ಡಿಎಂಕೆ ಸಂಸದ ಸೆಂಥಿಲ್ ಕುಮಾರ್ ಹೀಗೆ 'ಗೋ ಮೂತ್ರ'ದ ಬಿರುಗಾಳಿ ಎಬ್ಬಿಸಿರುವುದು ಇದೇ ಮೊದಲಲ್ಲ. 2022ರಲ್ಲೂ ಇದೇ ರೀತಿ ಮಾತನಾಡಿದ್ದ ಸಂಸದ ಸೆಂಥಿಲ್ ಕುಮಾರ್, ವಿವಾದದ ಬಿರುಗಾಳಿ ಎಬ್ಬಿಸಿದ್ದರು. ರಾಷ್ಟ್ರೀಯ ಶಿಕ್ಷಣ ನೀತಿ ವಿಚಾರವಾಗಿ 2022 ರಲ್ಲೂ ಚರ್ಚೆ ನಡೆಯುವಾಗ ಇದೇ ಮಾತು ಹೇಳಿದ್ದರು, ಹಿಂದಿ ಭಾಷಿಕ ಪ್ರದೇಶವನ್ನ 2022ರಲ್ಲಿ 'ಗೋ ಮೂತ್ರದ ರಾಜ್ಯಗಳು' ಎಂದು ಕರೆದಿದ್ದರು, ಡಿಎಂಕೆ ಸಂಸದ ಸೆಂಥಿಲ್ ಕುಮಾರ್. ಇದೀಗ ಮತ್ತೊಮ್ಮೆ ಬಿಜೆಪಿ ಗೆಲುವಿನ ಬಗ್ಗೆ ಲೇವಡಿ ಮಾಡುತ್ತಾ, ಹಿಂದಿ ಮಾನತಾಡುವ ರಾಜ್ಯಗಳನ್ನು 'ಗೋ ಮೂತ್ರದ ರಾಜ್ಯಗಳು' ಎಂದಿದ್ದಾರೆ. ಇದು ವಿವಾದದ ಬಿರುಗಾಳಿಯ ಎಬ್ಬಿಸಿದೆ.
ಒಟ್ಟಾರೆ ಫೈಟಿಂಗ್ ಬಲು ಜೋರಾಗಿದೆ, ಲೋಕಸಭಾ ಚುನಾವಣೆ ಅಖಾಡದಲ್ಲಿ ಬಿಜೆಪಿಗೆ ಗೆಲುವು ಸಿಗಲಿದೆ ಎನ್ನುವ ಮುನ್ಸೂಚನೆ ಪಂಚರಾಜ್ಯ ಎಲೆಕ್ಷನ್‌ನ ಫಲಿತಾಂಶದಲ್ಲಿ ಸಿಕ್ಕಿದೆ. ಹಾಗೂ ಇದೇ ಸಮಯದಲ್ಲಿ ಡಿಎಂಕೆ ಸಂಸದ ನೀಡಿರುವ ಹೇಳಿಕೆ ಸಂಚಲನ ಸೃಷ್ಟಿಸಿದೆ. ಹೀಗಾಗಿ ಇದೆಲ್ಲಾ ಮುಂದೆ ಎಲ್ಲಿಗೆ ಬಂದು ನಿಲ್ಲುತ್ತೆ? ಅಂತಾ ಕಾದು ನೋಡಬೇಕಿದೆ.












Click it and Unblock the Notifications