ಪೊಂಗಲ್ ಗೆ ನಿರ್ಬಂಧಿತ ರಜೆ: ಡಿಎಂಕೆ, ಎಐಡಿಎಂಕೆ ಕಿಡಿ

Posted By: Chethan
Subscribe to Oneindia Kannada

ಚೆನ್ನೈ, ಜ. 10: ತಮಿಳುನಾಡಿನಲ್ಲಿ ಕಾರ್ಯ ನಿರ್ವಹಿಸುತ್ತಿರುವ ಕೇಂದ್ರ ಸರ್ಕಾರಿ ನೌಕರರಿಗೆ ಅಲ್ಲಿನ ಪ್ರಮುಖ ಹಬ್ಬವಾದ ಪೊಂಗಲ್ ಆಚರಣೆ ಸಂದರ್ಭವನ್ನು ನಿರ್ಬಂಧಿತ ರಜೆಯಾಗಿ ಪರಿಗಣಿಸುವಂತೆ ಚಿಂತನೆ ನಡೆಸಿರುವ ಕೇಂದ್ರ ಕ್ರಮವನ್ನು ಡಿಎಂಕೆ ಹಾಗೂ ಎಐಡಿಎಂಕೆ ಪಕ್ಷಗಳು ತೀವ್ರವಾಗಿ ವಿರೋಧಿಸಿವೆ.

ಕೇಂದ್ರದಿಂದ ಈ ಬಗ್ಗೆ ಅಧಿಕೃತ ಆದೇಶ ಬಂದಿಲ್ಲವಾದರೂ, ಈ ಬಗೆಯ ಊಹಾಪೋಹಗಳು ತಮಿಳು ರಾಜಕೀಯ ವಲಯದಲ್ಲಿ ಹರಡಿ ಸಂಚಲನ ಸೃಷ್ಟಿಸಿವೆ.

DMK, AIADMK hit out at Centre over reported move to make Pongal a ‘restricted’ holiday

ಈ ಬಗ್ಗೆ ಪ್ರತಿಕ್ರಿಯಿಸಿರುವ ಎಐಡಿಎಂಕೆ ಮಹಾ ಕಾರ್ಯದರ್ಶಿ ವಿಕೆ ಶಶಿಕಲಾ, "ತಮಿಳುನಾಡಿನಲ್ಲಿ ಪೊಂಗಲ್ ಆಚರಣೆ ವಿಶೇಷವಾಗಿದ್ದು, ಇಲ್ಲಿಎಲ್ಲಾ ಸರ್ಕಾರಿ ಸೇವೆಗಳಿಗೆ ಸಾರ್ವತ್ರಿಕ ರಜೆಯೆಂದು ಈವರೆಗೆ ಘೋಷಿಸಲಾಗಿದೆ. ಆದರೆ, ತಮಿಳುನಾಡಿನಲ್ಲಿ ಸೇವೆ ಸಲ್ಲಿಸುತ್ತಿರುವ ಕೇಂದ್ರ ಸರ್ಕಾರಿ ನೌಕರರಿಗೆ ಪೊಂಗಲ್ ಹಬ್ಬವನ್ನು ನಿರ್ಬಂಧಿತ ರಜೆಯೆಂದು ಘೋಷಣೆ ಮಾಡಲ ಕೇಂದ್ರ ಸರ್ಕಾರ ಮುಂದಾಗಿರುವುದು ಬೇಸರದ ಸಂಗತಿ'' ಎಂದು ಹೇಳಿದ್ದಾರೆ.

ಇನ್ನು, ಈ ಬಗ್ಗೆ ಪ್ರತಿಕ್ರಿಯಿಸಿರುವ ತಮಿಳುನಾಡು ವಿಧಾನಸಭೆಯ ವಿರೋಧ ಪಕ್ಷ ಡಿಎಂಕೆ, ಅಧಿಕೃತ ಪ್ರಕಟಣೆಯನ್ನು ಹೊರಡಿಸಿದ್ದು, "ಬಹು ಸಂಸ್ಕೃತಿಯುಳ್ಳ ದೇಶದಲ್ಲಿ ಇಂಥ ನಿರ್ಬಂಧಗಳನ್ನು ವಿಧಿಸುವುದು ಸಲ್ಲ'' ಎಂದು ಹೇಳಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
Both the DMK and the AIADMK have opposed the Centre’s reported move to convert the holiday given for Pongal festival into restricted one from compulsory list.
Please Wait while comments are loading...