ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವಾಟ್ಸಾಪ್ ಗ್ರೂಪ್ ಸೃಷ್ಟಿಸಿದ್ದೇ ದಿಶಾ ರವಿ, ಖಲಿಸ್ತಾನ ಪರ ಪಿಜೆಎಫ್ ಸೇರಿಕೊಂಡಿದ್ದು ಆಮೇಲೆ

|
Google Oneindia Kannada News

ನವದೆಹಲಿ, ಫೆಬ್ರವರಿ 17: ರೈತರ ಪ್ರತಿಭಟನೆಯ ಕುರಿತು ಗ್ರೆಟಾ ಥನ್‌ಬರ್ಗ್ ಹಂಚಿಕೊಂಡ ಟೂಲ್‌ಕಿಟ್‌ನಲ್ಲಿನ ವಿವರಗಳಿಗೆ ಸಂಬಂಧಿಸಿದಂತೆ ಫೆ. 13ರಂದು ಬೆಂಗಳೂರಿನಲ್ಲಿ ಬಂಧನಕ್ಕೆ ಒಳಗಾದ ದಿಶಾ ರವಿ, ಟೂಲ್ ಕಿಟ್ ಸಂಪಾದನೆ ಮಾಡಿದ್ದಷ್ಟೇ ಅಲ್ಲ, ಈ ಪ್ರತಿಭಟನೆ ವಿಚಾರವಾಗಿ ಅನೇಕ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದರು ಎಂದು ದೆಹಲಿ ಪೊಲೀಸರು ಹೇಳಿದ್ದಾರೆ.

ದೇಶದ್ರೋಹ, ಅಪರಾಧ ಸಂಚು ಮತ್ತು ಗುಂಪುಗಳ ನಡುವೆ ಸಾಮರಸ್ಯ ಕದಡುವ ಪ್ರಯತ್ನದ ಆರೋಪಗಳನ್ನು ಎದುರಿಸುತ್ತಿರುವ ದಿಶಾ ರವಿ ಅವರೇ ವಾಟ್ಸಾಪ್ ಗ್ರೂಪ್ ಒಂದನ್ನು ಸೃಷ್ಟಿಸಿದ್ದರು ಎಂದು ತಿಳಿಸಿದ್ದಾರೆ. 2020ರ ಡಿಸೆಂಬರ್ 6ರಂದು 'ಮುಚ್ಚಿದ' ವಾಟ್ಸಾಪ್ ಗ್ರೂಪ್‌ಅನ್ನು ದಿಶಾ ತೆರೆದಿದ್ದರು. ಈ ಗುಂಪಿಗೆ ಡಿ 11ರಂದು ನಿಕಿತಾ ಜೇಕಬ್ ಸೇರ್ಪಡೆಯಾಗಿದ್ದರು. ಅದರ ಮರುದಿನ ಮೋ ಧಲಿವಾಲ್ ಸ್ಥಾಪಿಸಿರುವ ಖಲಿಸ್ತಾನ ಪರ ಸಂಘಟನೆ ವಿವಾದಾತ್ಮಕ ಪೊಯೆಟಿಕ್ ಜಸ್ಟೀಸ್ ಫೌಂಡೇಷನ್ (ಪಿಜೆಎಫ್) ಈ ಗ್ರೂಪ್‌ಗೆ ಸೇರಿಕೊಂಡಿತ್ತು ಎನ್ನಲಾಗಿದೆ.

ಲಾಕ್‌ಡೌನ್‌ ವೇಳೆ ಕೋಳಿಮಾಂಸ ಸಾಗಣೆ: 5 ಮಂದಿಗೆ ಜಾಮೀನು ನೀಡಿದ ಕೋರ್ಟ್ಲಾಕ್‌ಡೌನ್‌ ವೇಳೆ ಕೋಳಿಮಾಂಸ ಸಾಗಣೆ: 5 ಮಂದಿಗೆ ಜಾಮೀನು ನೀಡಿದ ಕೋರ್ಟ್

'ವಾಟ್ಸಾಪ್ ಗ್ರೂಪ್‌ಗೆ ಪಿಜೆಎಫ್‌ಅನ್ನು ಸೇರಿಸಿದ್ದು ಯಾರು ಎಂಬ ಬಗ್ಗೆ ತನಿಖೆ ನಡೆಸಲಾಗುತ್ತಿದೆ. ಈ ಬಗ್ಗೆ ಫೆ. 12ರಂದು ನಿಕಿತಾ ಅವರನ್ನು ವಿಚಾರಣೆಗೆ ಒಳಪಡಿಸಲು ದೆಹಲಿ ಪೊಲೀಸರು ಬಯಸಿದ್ದರು. ಅದಕ್ಕೂ ಹಿಂದಿನ ದಿನ ಆಕೆಯ ಪೋಷಕರ ಸಮ್ಮುಖದಲ್ಲಿ ಮನೆಯಲ್ಲಿ ಪರಿಶೀಲನೆ ನಡೆಸಿದ್ದರು. ಮರುದಿನವೂ ತನಿಖಾಧಿಕಾರಿ ಮನೆಗೆ ಬರುವುದರಿಂದ ಮನೆಯಲ್ಲಿ ಇರುವಂತೆ ಪೊಲೀಸರು ನೋಟಿಸ್ ನೀಡಿದ್ದರು. ಆದರೆ ತಂಡವು ಆಕೆಯ ಮನೆಗೆ ಮರು ದಿನ ಹೋದಾಗಲೂ ನಿಕಿತಾ ಮನೆಯಲ್ಲಿ ಇರಲಿಲ್ಲ' ಎಂದು ಮೂಲಗಳು ತಿಳಿಸಿವೆ.

Disha Ravi Created WhatsApp Group, Pro-Khalistani PJF Joined Later

ವಿವಾದಾತ್ಮಕ ಟೂಲ್‌ಕಿಟ್ ಸೃಷ್ಟಿಸಿದವರ ವಿರುದ್ಧ ಪ್ರಕರಣ ದಾಖಲಿಸಿಕೊಂಡ ಬಳಿಕ ದಿಶಾ ಆ ವಾಟ್ಸಾಪ್ ಗ್ರೂಪ್‌ಅನ್ನು ಡಿಲೀಟ್ ಮಾಡಿದ್ದರು ಎಂದು ದೆಹಲಿ ಪೊಲೀಸರು ಹೇಳಿದ್ದಾರೆ.

English summary
Toolkit Case: Disha Ravi has created WhatsApp group and pro-Khalistani outfir PJF joined later.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X