ಮಹಾರಾಷ್ಟ್ರ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ಗೆಲ್ಲಲೇಬೇಕಾದ ಅನಿವಾರ್ಯ ಸ್ಥಿತಿ!
ಮಹತ್ವದ ಮಹಾರಾಷ್ಟ್ರ ಚುನಾವಣೆ ಇನ್ನೇನು ಕೆಲವೇ ನಿಮಿಷಗಳಲ್ಲಿ ಮುಕ್ತಾಯವಾಗಲಿದೆ. ಉತ್ತರ ಭಾರತ & ದಕ್ಷಿಣ ಭಾರತದ ನಡುವೆ ಕೊಂಡಿಯಂತೆ ಆಗಿರುವ ಮಹಾರಾಷ್ಟ್ರ ರಾಜ್ಯಕ್ಕೆ ಹಾಗೂ ಕರ್ನಾಟಕಕ್ಕೂ ಅವಿನಾಭಾವ ನಂಟು ಇದೆ. ಹೀಗಿದ್ದಾಗ ಕರ್ನಾಟಕದಲ್ಲಿ ಗೆದ್ದಿರುವ ಕಾಂಗ್ರೆಸ್ ಪಕ್ಷಕ್ಕೆ ಇದೀಗ ಮಹಾರಾಷ್ಟ್ರ ವಿಧಾನಸಭೆ ಚುನಾವಣೆ ಅಖಾಡದಲ್ಲೂ ಗೆಲ್ಲಬೇಕಾದ ಅನಿವಾರ್ಯತೆ ಇದೆ. ಅಕಸ್ಮಾತ್ ಕಾಂಗ್ರೆಸ್ ಸೋತು ಹೋದರೆ ಏನೆಲ್ಲಾ ಆಗಬಹುದು? ಈ ಹಾದಿಯಲ್ಲಿ ಕಾಂಗ್ರೆಸ್ ಮಹಾರಾಷ್ಟ್ರ ವಿಧಾನಸಭೆ ಚುನಾವಣೆ ಗೆದ್ದರೆ ಏನಾಗುತ್ತದೆ? ಬನ್ನಿ ತಿಳಿಯೋಣ.
ಮಹಾರಾಷ್ಟ್ರ ವಿಧಾನಸಭೆ ಚುನಾವಣೆ ಕೇವಲ ರಾಜಕೀಯ ಅಖಾಡವಾಗಿ ಉಳಿದಿಲ್ಲ. ಯಾಕೆ ಅಂದ್ರೆ ಕಾಂಗ್ರೆಸ್ ನಾಯಕರ ಪಾಲಿಗೆ ಈ ರಾಜ್ಯದಲ್ಲಿ ಗೆದ್ದೇ ಗೆಲ್ಲಬೇಕಾದ ಅನಿವಾರ್ಯ ಸ್ಥಿತಿ ಕೂಡ ಇದೆ. ಹರ್ಯಾಣ ಸೇರಿದಂತೆ ಅದಕ್ಕೂ ಹಿಂದಿನ ವಿಧಾನಸಭಾ ಚುನಾವಣೆಗಳು ಸ್ವತಃ ಕಾಂಗ್ರೆಸ್ ನಾಯಕರಿಗೆ ಆಘಾತ ನೀಡಿವೆ. ದಕ್ಷಿಣ ಭಾರತದಲ್ಲಿ ಬಲವಾಗಿ ನಿಲ್ಲುತ್ತಿರುವಾಗಲೇ ಕಾಂಗ್ರೆಸ್ ನಾಯಕರಿಗೆ ಉತ್ತರ ಭಾರತ & ಮಧ್ಯ ಭಾರತದಲ್ಲಿ ಸಾಕಷ್ಟು ಪ್ರತಿರೋಧ ಬಿಜೆಪಿ ಮತ್ತು ಮಿತ್ರ ಪಕ್ಷಗಳಿಂದ ಎದುರಾಗುತ್ತಿದೆ. ಇಂತಹ ಸಮಯದಲ್ಲೇ...

ಕಾಂಗ್ರೆಸ್ ಪಕ್ಷಕ್ಕೆ ಈ ಗೆಲುವು ಅನಿವಾರ್ಯ!
ಹೌದು, ಇನ್ನೇನು ಕೆಲವೇ ನಿಮಿಷದಲ್ಲಿ ಮಹಾರಾಷ್ಟ್ರ ವಿಧಾನಸಭೆ ಚುನಾವಣೆಯ ಸಮೀಕ್ಷೆ ಹೊರ ಬೀಳಲಿದೆ. ಹೀಗೆ ಚುನಾವಣೋತ್ತರ ಸಮೀಕ್ಷೆಗಳು ಏನು ಹೇಳಲಿವೆ? ಎಂಬ ಕುರಿತು ಮತದಾರರು ಕೂಡ ಸಾಕಷ್ಟು ಕುತೂಹಲದಿಂದ ಎದುರು ನೋಡುತ್ತಿದ್ದಾರೆ. ಆದರೆ ಅದಕ್ಕೆ ಮೊದಲು ಕಾಂಗ್ರೆಸ್ ನಾಯಕರು ಮಹಾರಾಷ್ಟ್ರ ರಾಜ್ಯದಲ್ಲಿ ಗೆದ್ದೇ ಗೆಲ್ಲಬೇಕು ಎಂಬ ಭಾರಿ ಒತ್ತಡ ಎದುರಿಸುತ್ತಿದ್ದಾರೆ ಎಂಬ ಮಾತು ಕೇಳಿ ಬಂದಿದೆ.
ಉತ್ತರ ಭಾರತದಲ್ಲಿ ಹುಟ್ಟಿ, ಎಲ್ಲಾ ಕಡೆಗೂ ಹರಡಿದ್ದ ಕಾಂಗ್ರೆಸ್ ಪಕ್ಷಕ್ಕೆ ಈಗ ಉತ್ತರದಲ್ಲೇ ನೆಲೆ ಸಿಗುತ್ತಿಲ್ಲ ಎಂಬುದು ಎದುರಾಳಿಗಳ ಆರೋಪ. ಹಾಗೇ ಮತ್ತೊಂದು ಕಡೆ ದಕ್ಷಿಣ ಭಾರತ ಕಾಂಗ್ರೆಸ್ ಪಕ್ಷಕ್ಕೆ ಸುರಕ್ಷಿತ ಜಾಗವಾಗಿದ್ದರೆ, ಉತ್ತರ ಭಾರತದಲ್ಲಿ ಪ್ರಬಲ ರಾಜ್ಯಗಳನ್ನ ಈಗ ಉಳಿಸಿಕೊಳ್ಳಬೇಕಾದ ಅನಿವಾರ್ಯ ಸ್ಥಿತಿಗೆ ಕಾಂಗ್ರೆಸ್ ಸಿಲುಕಿದೆ. ಇಲ್ಲವಾದರೆ ಭವಿಷ್ಯದಲ್ಲಿ, ಕಾಂಗ್ರೆಸ್ ಪಕ್ಷ ದಕ್ಷಿಣ ಭಾರತಕ್ಕೆ ಸೀಮಿತವಾಗುವ ಅಪಾಯ ಆವರಿಸಿದೆ.
ಜಾರ್ಖಂಡ್ ಗೆಲ್ಲಲು ಕಾಂಗ್ರೆಸ್ ಪ್ಲಾನ್ ಏನು?
ಮಹಾರಾಷ್ಟ್ರ ಮಾತ್ರವಲ್ಲ ಇಂದು ಜಾರ್ಖಂಡ್ ರಾಜ್ಯದಲ್ಲೂ ವಿಧಾನಸಭೆ ಚುನಾವಣೆಯು ನಡೆದಿದೆ. ಒಟ್ಟು 2 ಹಂತದಲ್ಲಿ ಜಾರ್ಖಂಡ್ ರಾಜ್ಯದ ವಿಧಾನಸಭೆಗೆ ಮತದಾನ ನಡೆದಿದ್ದು, ಇಂದು 2ನೇ ಮತ್ತು ಕೊನೆಯ ಹಂತದಲ್ಲಿ ವೋಟಿಂಗ್ ಆಗಿದೆ. ಹೀಗಿದ್ದಾಗ ಜಾರ್ಖಂಡ್‌ನಲ್ಲಿ ಕಾಂಗ್ರೆಸ್ ಮೈತ್ರಿಕೂಟ ಆಡಳಿತ ನಡೆಸುತ್ತಿದ್ದು, ಈಗ ಅಧಿಕಾರ ಉಳಿಸಿಕೊಳ್ಳುವ ಅನಿವಾರ್ಯ ಪರಿಸ್ಥಿತಿ ಎದುರಾಗಿದೆ. ಹೀಗಾಗಿ ಶನಿವಾರದ ತನಕ ರಿಸಲ್ಟ್ ನೋಡಲು ಕಾಯಬೇಕಿದೆ!












Click it and Unblock the Notifications