Haryana Results: ಹರಿಯಾಣದಲ್ಲಿ ಹೀನಾಯ ಸೋಲಿನ ಸುಳಿಗೆ ಸಿಲುಕಿದ ಬಿಜೆಪಿ?
ಭಾರತದ ಬಹುತೇಕ ರಾಜ್ಯಗಳಲ್ಲಿ ಅರಳಿ, ಇನ್ನು ಮುಂದೆ ಯಾರೂ ಟಚ್ ಮಾಡಲು ಆಗಲ್ಲ ಎನ್ನುವಷ್ಟರ ಮಟ್ಟಿಗೆ ಬೆಳೆದು ನಿಂತಿದ್ದ ಬಿಜೆಪಿ ಪಕ್ಷ ಇದೀಗ ಒಂದೊಂದೇ ರಾಜ್ಯ ಕೈಯಿಂದ ಕಳೆದುಕೊಳ್ಳುತ್ತಿದೆ. ಅದರಲ್ಲೂ ಉತ್ತರ ಭಾರತದಲ್ಲೇ ಬಿಜೆಪಿ ಪಕ್ಷಕ್ಕೆ ಭಾರಿ ದೊಡ್ಡ ಹಿನ್ನಡೆ ಎದುರಾಗುತ್ತಿದೆ. ದಕ್ಷಿಣ ಭಾರತದಲ್ಲಿ ಸಾಲು ಸಾಲು ಸೋಲು ಕಂಡು ಕಂಗಾಲಾಗಿ ಕೂತಿದ್ದ ಕಮಲ ಪಾಳಯದ ನಾಯಕರಿಗೆ ಇದೀಗ ಉತ್ತರ ಭಾರತದಲ್ಲೂ ಆಘಾತ ಸಿಗುತ್ತಿದೆ. ಹಾಗಿದ್ರೆ ಹರಿಯಾಣ & ಜಮ್ಮು ಕಾಶ್ಮೀರದಲ್ಲಿ ಕಮಲ ಪಾಳಯಕ್ಕೆ ಏನಾಯ್ತು? ಬನ್ನಿ ತಿಳಿಯೋಣ.
2014 ರಲ್ಲಿ ಶುರುವಾಗಿದ್ದ ಬಿಜೆಪಿ ಹವಾ 2023ರ ತನಕ ಭರ್ಜರಿಯಾಗಿ ಇತ್ತು. ಆದರೆ ಹೀಗೆ ಬಿಜೆಪಿ ದೊಡ್ಡ ಮಟ್ಟದಲ್ಲಿ ಗೆಲುವು ಕಾಣುತ್ತಾ, ಸಾಲು ಸಾಲು ರಾಜ್ಯಗಳಲ್ಲಿ ಗೆದ್ದು ಬೀಗುವ ಸಮಯದಲ್ಲೇ ಮುಗ್ಗರಿಸಿತ್ತು. 2023ರ ಕರ್ನಾಟಕ ವಿಧಾನಸಭೆ ಚುನಾವಣೆ ಹೀನಾಯ ಸೋಲು ಬಿಜೆಪಿ ನಾಯಕರನ್ನ ಕಂಗಾಲು ಮಾಡಿದ್ದು, ಮುಂದಿನ ಪರಿಸ್ಥಿತಿ ಏನು? ಎಂಬಂತಹ ಸ್ಥಿತಿ ಸೃಷ್ಟಿಸಿತ್ತು. ಹೀಗೆ 2023ರ ಕರ್ನಾಟಕ ವಿಧಾನಸಭೆ ಚುನಾವಣೆ ಸೋಲಿನ ಬೆನ್ನಲ್ಲೇ 2024ರ, ಲೋಕಸಭಾ ಚುನಾವಣೆಯಲ್ಲಿ ಕೂಡ ಬಿಜೆಪಿ ನೇತೃತ್ವದ ಎನ್‌ಡಿಎ ದೊಡ್ಡ ಹಿನ್ನಡೆ ಕಂಡು ಟಿಡಿಪಿ & ಜೆಡಿಯು ಬೆಂಬಲದ ಮೂಲಕ ಕೇಂದ್ರದಲ್ಲಿ ಸರ್ಕಾರವನ್ನ ರಚಿಸಿತ್ತು. ಹೀಗೆ ಸಾಲು, ಸಾಲು ಸೋಲಿನ ಸುಳಿಯಲ್ಲಿ ಸಿಲುಕಿರುವ ಬಿಜೆಪಿಗೆ ಇದೀಗ ಮತ್ತೊಂದು ಆಘಾತ ಎದುರಾಗಿದೆ.

ಹರಿಯಾಣ ಕಳೆದುಕೊಳ್ಳುವತ್ತ ಬಿಜೆಪಿ?
ಹ್ಯಾಟ್ರಿಕ್ ಗೆಲುವಿನ ನಿರೀಕ್ಷೆಯಲ್ಲಿ ಹರಿಯಾಣ ವಿಧಾನಸಭೆ ಚುನಾವಣೆಗೆ ಭರ್ಜರಿಯಾಗಿಯೇ ಸಿದ್ಧವಾಗಿದ್ದ ಬಿಜೆಪಿ ಪಕ್ಷಕ್ಕೆ, ಸೋಲಿನ ಆಘಾತ ಎದುರಾಗುತ್ತಿದೆ. ಹರಿಯಾಣ ರಾಜ್ಯದಲ್ಲಿ, ಬಿಜೆಪಿ ದೊಡ್ಡ ದೊಡ್ಡ ನಾಯಕರೇ ಬಂದು ಪ್ರಚಾರ ಕೂಡ ನಡೆಸಿ ಹೋಗಿದ್ದರು. ಆದರೆ ಹರಿಯಾಣ ರಾಜ್ಯವೇ ಇದೀಗ ಬಿಜೆಪಿ ಪಕ್ಷದ ಕೈಬಿಟ್ಟು ಹೋಗುವ ವಾತಾವರಣ ನಿರ್ಮಾಣ ಆಗುತ್ತಿದೆ.
ಇತ್ತೀಚಿನ ಮಾಹಿತಿಗಳ ಪ್ರಕಾರ, ಹರಿಯಾಣ ರಾಜ್ಯದ ಒಟ್ಟು 90 ಸ್ಥಾನಗಳ ಪೈಕಿ ಕಾಂಗ್ರೆಸ್ ಭರ್ಜರಿ 55 ಸ್ಥಾನದಲ್ಲಿ ಮುನ್ನಡೆ ಕಾಯ್ದುಕೊಂಡರೆ, ಬಿಜೆಪಿ ಕೇವಲ 31 ಸ್ಥಾನದಲ್ಲಿ ಮುನ್ನಡೆ ಕಾಯ್ದುಕೊಂಡಿದೆ. ಈ ಮೂಲಕ ಹರಿಯಾಣ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ರಚನೆ ಆಗುತ್ತಾ? ಎಂಬ ಕುತೂಹಲ ಮೂಡಿದೆ. ಹಾಗೇ ಇಬ್ಬರ ನಡುವೆ ಈ ರಾಜ್ಯದಲ್ಲಿ ಭರ್ಜರಿ ಕದನ ಕೂಡ ಏರ್ಪಟ್ಟಿದೆ.
ಬಿಜೆಪಿ ಕೈಬಿಟ್ಟ ಮತದಾರ ಪ್ರಭು?
ಹರಿಯಾಣ ರಾಜ್ಯದ ವಿಧಾನಸಭೆ ಚುನಾವಣೆ ಫಲಿತಾಂಶ ನೋಡುತ್ತಿದ್ದರೆ, ಇದೀಗ ಅಲ್ಲಿನ ಮತದಾರರು ಅಂದ್ರೆ, ಹರಿಯಾಣ ರಾಜ್ಯದ ಮತದಾರ ಪ್ರಭು ಬಿಜೆಪಿ ಕೈಬಿಟ್ಟರಾ? ಎಂಬ ಬಗ್ಗೆ ಕುತೂಹಲ ಕೆರಳುತ್ತಿದೆ. ಹಾಗೇ ಸೋಲಿಗೆ ಹತ್ತಿರವಾಗುತ್ತಿರುವ ಬಿಜೆಪಿ ಮತ್ತೆ ಫಿನಿಕ್ಸ್ ರೀತಿ, ಚುನಾವಣೆ ಫಲಿತಾಂಶದಲ್ಲಿ ಎದ್ದು ಬರುತ್ತಾ? ಅಂತಾ ಸಂಜೆ ತನಕ ಕಾದು ನೋಡಬೇಕು. ಈ ನಡುವೆ ಜಮ್ಮು & ಕಾಶ್ಮೀರದಲ್ಲು ಕೂಡ ಬಿಜೆಪಿ ನೇತೃತ್ವದ ಒಕ್ಕೂಟಕ್ಕೆ ಹಿನ್ನಡೆ ಆಗುತ್ತಿದೆ.












Click it and Unblock the Notifications