ನಮ್ಮ ಮಗಳನ್ನು ಹತ್ಯೆ ಮಾಡಿದವರಿಗೆ ಜೀವಾವಧಿ ಶಿಕ್ಷೆಯಾಗಲಿ!
ಇಡೀ ದೇಶವೇ ತಿರುಗಿ ನೋಡುವಂತಹ ತೀರ್ಪು ನಿನ್ನೆ ಹೊರಬಿದ್ದಿದೆ. 2008ರಲ್ಲಿ ರಾಷ್ಟ್ರದ ರಾಜಧಾನಿ ದೆಹಲಿಯಲ್ಲಿ ಪತ್ರಕರ್ತೆ ಸೌಮ್ಯ ವಿಶ್ವನಾಥನ್ ಅವರನ್ನ ಗುಂಡಿಕ್ಕಿ ಹತ್ಯೆ ಮಾಡಿದ್ದ ಕೇಸ್‌ನಲ್ಲಿ, ನಾಲ್ವರನ್ನು ದೋಷಿಗಳೆಂದು ದೆಹಲಿ ಹೈಕೋರ್ಟ್ ಆದೇಶ ನೀಡಿದೆ. ಈ ಕುರಿತು ಪತ್ರಕರ್ತೆ ಸೌಮ್ಯ ವಿಶ್ವನಾಥನ್ ಅವರ ತಾಯಿ ಮಾಧವಿ ವಿಶ್ವನಾಥನ್ 'ಒನ್ ಇಂಡಿಯಾ' ಜೊತೆ ಮಾತನಾಡಿ, ತಮ್ಮ ನೋವನ್ನು ಹಂಚಿಕೊಂಡಿದ್ದಾರೆ.
ಅಂದಹಾಗೆ ಸುದ್ದಿ ವಾಹಿನಿಯಲ್ಲಿ ಪತ್ರಕರ್ತೆಯಾಗಿ ಕೆಲಸ ಮಾಡುತ್ತಿದ್ದ ಸೌಮ್ಯ ವಿಶ್ವನಾಥನ್ ಅವರು, 2008ರ ಸೆಪ್ಟೆಂಬರ್ 30ರಂದು ಕೆಲಸ ಮುಗಿಸಿ ಕಾರಲ್ಲಿ ಮರಳುವ ವೇಳೆ ಗುಂಪೊಂದು ಆಕೆಯನ್ನ ಅಡ್ಡಿಗಟ್ಟಿ ಗುಂಡಿಕ್ಕಿ ಹತ್ಯೆ ಮಾಡಿತ್ತು. ಹೀಗೆ ಸುದೀರ್ಘ ಸುಮಾರು 15 ವರ್ಷಗಳ ನಿರಂತರ ವಿಚಾರಣೆ ಮತ್ತು ತನಿಖೆ ಬಳಿಕ ಇದೀಗ ತೀರ್ಪು ಹೊರಬಿದ್ದಿದೆ. ಹಾಗಾದ್ರೆ ತಮ್ಮ ಮಗಳನ್ನು ಕಳೆದುಕೊಂಡ ಸೌಮ್ಯ ವಿಶ್ವನಾಥನ್ ಅವರ ತಾಯಿ ತೀರ್ಪಿನ ಬಗ್ಗೆ ಹೇಳಿದ್ದು ಏನು ಗೊತ್ತಾ?

ನನ್ನ ಮಗಳನ್ನು ಕೊಂದವರಿಗೆ...
ಈಗ ಸೌಮ್ಯ ವಿಶ್ವನಾಥನ್ ಅವರ ಹತ್ಯೆಗೆ ಸಂಬಂಧಿಸಿದಂತೆ ರವಿ ಕಪೂರ್, ಅಮಿತ್ ಶುಕ್ಲಾ ಮತ್ತು ಬಲ್ಜಿತ್ ಮಲ್ಲಿಕ್, ಅಜಯ್ ಕುಮಾರ್ ಈ ಪ್ರಕರಣದಲ್ಲಿ ದೋಷಿಗಳೆಂದು ಆದೇಶವನ್ನ ನೀಡಲಾಗಿದೆ. ಮತ್ತೊಂದು ಕಡೆ 5ನೇ ಆರೋಪಿ ಅಜಯ್ ಸೇಥಿ, ದೂಷಿಗಳಿಗೆ ಸಹಾಯವನ್ನ ಮಾಡಿದ್ದಕ್ಕಾಗಿ ಅಪರಾಧಿ ಎಂದು ಕೋರ್ಟ್ ತೀರ್ಪು ನೀಡಿದೆ. ಇದೀಗ ತೀರ್ಪಿನ ಬಗ್ಗೆ ಸೌಮ್ಯ ಅವರ ತಾಯಿ ಕಂಬನಿ ತುಂಬಿದ ಕಂಗಳಲ್ಲೇ ಸಂತಸ ವ್ಯಕ್ತಪಡಿಸಿದ್ದು, ಇದೇ ಅಕ್ಟೋಬರ್ 26ರಂದು ದೂಷಿಗಳಿಗೆ ಶಿಕ್ಷೆಯ ಪ್ರಮಾಣ ಪ್ರಕಟವಾಗಲಿದೆ. ಅಂದು ತಪ್ಪು ಮಾಡಿದವರಿಗೆ ಜೀವಾವಧಿ ಶಿಕ್ಷೆ ಪಕ್ಕಾ ಆಗಲಿದೆ ಎಂಬ ಆಶಯವನ್ನು ಮೃತ ಸೌಮ್ಯ ಅವರ ತಾಯಿ ಈಗ ವ್ಯಕ್ತಪಡಿಸಿದ್ದಾರೆ.
ದೆಹಲಿಯ ರಸ್ತೆಗಳು ಸುರಕ್ಷಿತವಾಗಲಿ
ತಮ್ಮ ಮಗಳ ಸಾವಿಗೆ ಕಾರಣರಾದ ಹಾಗೂ ದೆಹಲಿಯ ರಸ್ತೆಗಳಲ್ಲಿ ಭಯ ಹುಟ್ಟಿಸಿದ್ದವರಿಗೆ ಇದೀಗ ಶಿಕ್ಷೆಯಾಗಿದೆ. ಈ ಮೂಲಕ ಮುಂದಿನ ದಿನದಲ್ಲಿ ಇಂತಹ ದುರಂತಗಳನ್ನು ತಪ್ಪಿಸಿ ಜನರ ರಕ್ಷಣೆಗೆ ಈ ತೀರ್ಪು ಪ್ರತಿಬಂಧಕವಾಗಬಹುದು ಎಂದು ಮಾಧವಿ ಹೇಳಿದ್ದಾರೆ. ಇದು ನೋವಿನ ನಡುವೆಯೂ ಸೌಮ್ಯ ಅವರ ಕುಟುಂಬಕ್ಕೆ ತುಸು ನೆಮ್ಮದಿ ನೀಡಿದೆ. ಈ ಮಧ್ಯೆ ಮಗಳನ್ನು ಕಳೆದುಕೊಂಡ ಬಳಿಕ ತಾವು ಅನುಭವಿಸಿದ ನೋವು ಎಂತಹದ್ದು ಎಂಬುದನ್ನ ಕೂಡ ಸೌಮ್ಯ ಅವರ ತಾಯಿ ಮಾಧವಿ ಹಂಚಿಕೊಂಡಿದ್ದಾರೆ. ಅಲ್ಲದೆ ಅ.26 ಕ್ಕೆ ಶಿಕ್ಷೆಯ ಪ್ರಮಾಣ ಘೋಷಿಸುವ ಬಗ್ಗೆ ಅವರು ಅನಿಸಿಕೆ ಹಂಚಿಕೊಂಡಿದ್ದಾರೆ.

ನಾವು ಕೂಡ ಜೀವಾವಧಿ ಶಿಕ್ಷೆ...
ಪ್ರಕರಣದ ಅಪರಾಧಿಗಳಿಗೆ ಜೀವಾವಧಿ ಶಿಕ್ಷೆ ಸಿಗಲಿದೆ ಎಂಬುದು ನಮ್ಮ ಅಚಲ ನಂಬಿಕೆ. ಏಕೆಂದರೆ ನಾವು ಕೂಡ ಈಗ ಜೀವಾವಧಿ ಶಿಕ್ಷೆಯನ್ನೇ ಅನುಭವಿಸುವ ರೀತಿ ಆಗಿದೆ. ಇದು ಅಪರಾಧಿಗಳಿಗೂ ಅನ್ವಯ ಆಗಲಿದೆ. ಹೀಗಾಗಿ ಪ್ರಕರಣದ ಅಪರಾಧಿಗಳಿಗೆ ಜೀವಾವಧಿ ಶಿಕ್ಷೆ ಆಗಬೇಕು ಎಂಬುದು ನಮ್ಮ ನಿರೀಕ್ಷೆ ಎಂದಿದ್ದಾರೆ ಸೌಮ್ಯ ಅವರ ತಾಯಿ ಮಾಧವಿ.
ಸೌಮ್ಯ ಸ್ನೇಹಿತರು ಬೆಂಬಲ ನೀಡಿದರು
ಇನ್ನೊಂದು ಕಡೆ ತಮ್ಮ ಮಗಳ ಕೊಲೆ ಬಳಿಕ, ಘಟನೆಯಲ್ಲಿ ನ್ಯಾಯಕ್ಕೆ ಹೋರಾಟವನ್ನು ಮುಂದುವರಿಸಿದಾಗ ಯಾವೆಲ್ಲಾ ರೀತಿ ಸಂಕಷ್ಟ ಎದುರಾಯ್ತು ಎಂಬುದನ್ನ ಕೂಡ ಸೌಮ್ಯ ತಾಯಿ ಮಾಧವಿ ಹಂಚಿಕೊಂಡಿದ್ದಾರೆ. ತಮ್ಮ ನೋವಿನ ಕ್ಷಣಗಳಲ್ಲಿ ಸೌಮ್ಯ ಅವರ ಇಡೀ ಗೆಳೆಯರ ಬಳಗ ಒಂದಾಗಿ ನಿಂತಿತ್ತು. ನಮ್ಮ ಹೋರಾಟಕ್ಕೆ ಅವರೇ ಬೆಂಬಲ ನೀಡಿದ್ದಾರೆ. ನಾವು ಇಲ್ಲಿಯವರೆಗೆ ಬರಲು ಅವರೇ ಕಾರಣ ಎಂದು, ಸೌಮ್ಯ ಅವರ ಸ್ನೇಹಿತರ ಸಹಾಯ ನೆನೆದಿದ್ದಾರೆ ಮಾಧವಿ. 'ಒನ್ ಇಂಡಿಯಾ'ಗೆ ನೀಡಿದ ವಿಶೇಷ ಸಂದರ್ಶನದಲ್ಲಿ ಮಾಧವಿ ವಿಶ್ವನಾಥನ್ ಅವರು ತಮ್ಮ ಕುಟುಂಬದ ನೋವಿನ ಸ್ಥಿತಿ ಹಂಚಿಕೊಂಡಿದ್ದಾರೆ.
15 ವರ್ಷದಿಂದ ಪ್ರತಿದಿನವೂ ನೋವು
ಮುದ್ದಿನ ಮಗಳು, ಸಮಾಜಕ್ಕೆ ಬುದ್ಧಿ ಹೇಳುವ ಪತ್ರಕರ್ತೆ ಕೂಡ. ಹೀಗೆ ಇಂತಹ ಮಗಳು ನಮ್ಮ ಹೊಟ್ಟೆಯಲ್ಲಿ ಹುಟ್ಟಿದ್ದೇ ನಮ್ಮ ಪುಣ್ಯ ಎಂದು ಭಾವಿಸಿದ್ದರು ಸೌಮ್ಯ ವಿಶ್ವನಾಥನ್ ಅವರ ಪೋಷಕರು. ಆದರೆ ಅದು ಎಲ್ಲಿಂದ ಹಂತಕರು ಬಂದರೋ ಗೊತ್ತಿಲ್ಲ, ದರೋಡೆಗೆ ಸ್ಕೆಚ್ ಹಾಕಿ ಪತ್ರಕರ್ತೆ ಸೌಮ್ಯ ಅವರ ಜೀವ ತೆಗೆದರು. ಹೀಗೆ ಅವ್ರ ಜೀವದ ಜೊತೆ ಮಾತ್ರ ಅಪರಾಧಿಗಳು ಚೆಲ್ಲಾಟ ಆಡಲಿಲ್ಲ. ಜತೆಗೆ ಅವರ ಕುಟುಂಬದ ಜೊತೆಯು ಆಟವಾಡಿದರು. ಹೀಗೆ 15 ವರ್ಷಗಳ ಸುದೀರ್ಘ ಹೋರಾಟ ಮತ್ತು ತಮ್ಮ ಕುಟುಂಬ ಈ ನೋವಿನಲ್ಲಿ ಹೇಗೆ ಪಾರ್ಶ್ವವಾಯು ಪೀಡಿತವಾಗಿತ್ತು ಎಂಬುದನ್ನು ಕೂಡ, ಮೃತ ಸೌಮ್ಯ ವಿಶ್ವನಾಥನ್ ಅವರ ಅಮ್ಮ ಮಾಧವಿ ಹಂಚಿಕೊಂಡಿದ್ದಾರೆ.
ಹಿರಿಯ ಮಗಳು ವಾಪಸ್ ಬರಲು ಮುಂದಾದಳು!
ಸೌಮ್ಯ ವಿಶ್ವನಾಥನ್‌ರ ಅಕ್ಕ, ಅಂದರೆ ಮಾಧವಿ ಅವರ ಹಿರಿಯ ಮಗಳು ನೈರೋಬಿಯಲ್ಲಿ ವಾಸ ಮಾಡುತ್ತಿದ್ದಾರೆ. ಆದರೆ ತನ್ನ ತಂಗಿಯ ಪ್ರಕರಣದಲ್ಲಿ ತಪ್ಪು ಮಾಡಿದವರಿಗೆ ಸೂಕ್ತ ಶಿಕ್ಷೆಯಾದ ವಿಚಾರ ತಿಳಿಯುತ್ತಿದ್ದಂತೆ ಅವರು ನೈರೋಬಿಯಿಂದ ಭಾರತಕ್ಕೆ ಬರಲು ಸಿದ್ಧತೆ ನಡೆಸಿದ್ದರಂತೆ. ಕುಟುಂಬದ ಸದಸ್ಯರು ಅವರ ಮನವೊಲಿಸಿ, ಮಗನನ್ನು ನೋಡಿಕೊಳ್ಳಲು ಸೂಚಿಸಿದರಂತೆ. ಈ ಬಗ್ಗೆ ಮಾಧವಿ ಮಾಹಿತಿ ನೀಡಿದ್ದು, ತಮ್ಮ ಹಿರಿಯ ಮಗಳಿಗೆ ಮಗನ ಆರೈಕೆ ಮಾಡಬೇಕಾದ ಕಾರಣ ನಾವು ಅವಳಿಗೆ ತಿಳಿ ಹೇಳಿದೆವು. ಹಾಗೇ ಈಗ ಹೊರಬಿದ್ದ ಕೋರ್ಟ್ ಆದೇಶದ ಬಗ್ಗೆ ಅವಳು ಖುಷಿಯಾಗಿದ್ದಾಳೆ ಎಂದರು.
ಸಮಾಜಕ್ಕೆ ಧೈರ್ಯ ತುಂಬುತ್ತಾರಾ?
ಇದು ಒಂದೇ ಪ್ರಕರಣ ಅಲ್ಲ, ಸೌಮ್ಯ ವಿಶ್ವನಾಥನ್ ಅವರ ರೀತಿ ಹಲವು ಪ್ರಕರಣ ನಮ್ಮ ಸಮಾಜದಲ್ಲಿ ನಡೆದಿವೆ. ಈ ಬಗ್ಗೆ ಇತರ ಪೋಷಕರಿಗೆ ಧೈರ್ಯ ತುಂಬುವ ಕುರಿತು ಕೇಳಿದ ಪ್ರಶ್ನೆಗೆ ಉತ್ತರಿಸಿರುವ ಸೌಮ್ಯ ವಿಶ್ವನಾಥನ್ ಅವರ ತಾಯಿ, ನಾವು ನಿತ್ಯ ಬದುಕುತ್ತಿದ್ದೇವೆ ಅಷ್ಟೇ. ನಮಗೆ ಖಂಡಿತಾ ತಿಳಿದಿದೆ, ಶಿಕ್ಷೆ ಪ್ರಮಾಣ ಪ್ರಕಟವಾದ ನಂತರ ಅವರು ಅಂದ್ರೆ ದೂಷಿಗಳು ಮೇಲ್ಮನವಿ ಸಲ್ಲಿಸುತ್ತಾರೆ. ಈ ಹೋರಾಟಕ್ಕೆ ಕೂಡ ನಾವು ಈಗ ಸಜ್ಜಾಗಬೇಕಿದೆ ಎಂದಿದ್ದಾರೆ.
ಹಾಗೇ ಅಂತಿಮವಾಗಿ ಮಾಧವಿ ಅವರು ಭವಿಷ್ಯದ ಭರವಸೆ ಬಗ್ಗೆ ಮಾತನಾಡಿದ್ದಾರೆ. ಹೀಗೆ ಇದೇ ರೀತಿಯ ಹಲವು ತೀರ್ಪು ಹೊರಬೀಳಲಿವೆ, ಈ ಮೂಲಕ ದೆಹಲಿ ಸುರಕ್ಷಿತವಾಗಲಿದೆ. ದೆಹಲಿ ಮಾತ್ರವಲ್ಲದೆ ಇಡೀ ಭಾರತ ಮತ್ತು ಎಲ್ಲಾ ಕಡೆ ಸುರಕ್ಷಿತ ವಾತಾವರಣ ನಿರ್ಮಾಣ ಆಗಲಿದೆ. ಆದರೆ ತೀರ್ಪು ಬೇಗ ಹೊರಬೀಳಬೇಕು, 15 ವರ್ಷ ಅವಧಿ ತುಂಬಾ ದೊಡ್ಡದು. ಹೀಗಾದರೆ ಪ್ರಕರಣವನ್ನೇ ಜನ ಮರೆಯುತ್ತಾರೆ, ಹೀಗಾಗಿ ಬೇಗ ತೀರ್ಪು ಹೊರಬೀಳಬೇಕಿದೆ ಎಂದಿದ್ದಾರೆ ಸೌಮ್ಯ ಅವರ ತಾಯಿ.
-
Gold Price Drop: ವಾರದ ಮೊದಲ ದಿನವೇ ಚಿನ್ನ-ಬೆಳ್ಳಿ ದರ ಭರ್ಜರಿ ಕುಸಿತ, ಇಂದಿನ ದರಪಟ್ಟಿ -
Cabinet Reshuffle: ಶಾಸಕರ ದೆಹಲಿಗೆ ಭೇಟಿ ತಪ್ಪಿಲ್ಲ, ಸಂಪುಟ ಪುನರ್ರಚನೆ ಹೈಕಮಾಂಡ್ ವಿವೇಚನೆಗೆ ಬಿಟ್ಟಿದ್ದು: ಸಿದ್ದರಾಮಯ್ಯ -
Karnataka Rains: ಸಮುದ್ರ ಮಲ್ಮೈ ಸುಳಿಗಾಳಿ, ಏಪ್ರಿಲ್ 14-17ರವರೆಗೆ ಬೆಂಗಳೂರು, ಇತರ ಜಿಲ್ಲೆಗಳಲ್ಲಿ ಮಳೆ -
Aditya: ನಿನ್ನೆ ಮೊನ್ನೆ ಬಂದೋರೆಲ್ಲ ದರ್ಶನ್ಗೆ ಕ್ಲೋಸ್ ಅಂತಿದ್ದಾರೆ, ಅವನು ಎಂದಿಗೂ ನನ್ನ ದೋಸ್ತ್: ನಟ ಆದಿತ್ಯ -
ಮುಂಬೈ ವಿರುದ್ಧದ ಹೈವೋಲ್ಟೇಜ್ ಕದನಕ್ಕೆ ಆರ್ಸಿಬಿ ಪ್ಲೇಯಿಂಗ್ 11ನಲ್ಲಿ ಮಹತ್ವದ ಬದಲಾವಣೆ ಸಾಧ್ಯತೆ -
Dhurandhar 2 Pakistan: ಅರಬ್ ರಾಷ್ಟ್ರದ ಸಾಲ ತೀರಿಸಲು ದುರಂಧರ್ 2 ಬಿಡುಗಡೆಗೆ ಮುಂದಾಯ್ತಾ ಪಾಕಿಸ್ತಾನ, ಟ್ವಿಸ್ಟ್ -
Lata Mangeshkar & Asha Bhosle: ಆ ಒಂದು ಕಾರಣಕ್ಕೆ ತಂಗಿ ಆಶಾ ಬೋಸ್ಲೆ ಜೊತೆ ಮಾತು ಬಿಟ್ಟಿದ್ದ ಲತಾ ಮಂಗೇಶ್ಕರ್ -
Karntaka Weather: ಹವಾಮಾನ ವೈಪರೀತ್ಯ! ರಾಜ್ಯದ ಒಳನಾಡು, ಕರಾವಳಿ ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ -
ಗಂಡ-ಹೆಂಡತಿ ಜಗಳ ಇಡೀ ದಿನ ತೋರಿಸಿದರೆ ಸಮಾಜಕ್ಕೆ ಏನು ಪ್ರಯೋಜನ: ಮಾಧ್ಯಮಗಳಿಗೆ ಸಿಎಂ ಪ್ರಶ್ನೆ -
Gas Booking New Rules: ಎಲ್ಪಿಜಿ ಗ್ಯಾಸ್ ಬುಕ್ಕಿಂಗ್ನಲ್ಲಿ ಹೊಸ ನಿಯಮ, ಎಷ್ಟು ದಿನಕ್ಕೆ ಸಿಗುತ್ತೆ ಗ್ಯಾಸ್ ಸಿಲಿಂಡರ್ -
ಮೈಸೂರು-ಬೆಂಗಳೂರು ರೈಲು ಪ್ರಯಾಣಿಕರಿಗೆ ಗುಡ್ನ್ಯೂಸ್ ಕೊಟ್ಟ ವಿ.ಸೋಮಣ್ಣ -
'ಕೋಟಿಗೊಬ್ಬ' ರೀರಿಲೀಸ್: ವಿಷ್ಣುದಾದಾ ಅಭಿಮಾನಿಗಳಿಂದ ಸಂಭ್ರಮ, ಪ್ರಸನ್ನ ಥಿಯೇಟರ್ನಲ್ಲಿ ನಾಳೆ 10,000 ಮಂದಿಗೆ ನಾನ್ವೆಜ್ ಊಟ












Click it and Unblock the Notifications