Women Reservation Bill: ಮಹಿಳಾ ಮೀಸಲಾತಿ, ದೇವರು ಕೊಟ್ಟ ಅವಕಾಶ ಎಂದ ಪ್ರಧಾನಿ!
ಭಾರತದ ಇತಿಹಾಸದಲ್ಲಿ ಈ ದಿನ ಎಂದಿಗೂ ಮರೆಯಾಗದು. ಏಕೆಂದರೆ ದೇಶದಲ್ಲಿ ನಾರಿ ಶಕ್ತಿ ಪ್ರದರ್ಶನಕ್ಕೆ 19/09/2023ರ ಈ ದಿನ ಮಹತ್ವದ ಕೊಡುಗೆ ನೀಡಿದೆ. ಬಹು ನಿರೀಕ್ಷಿತ ಮಹಿಳಾ ಮೀಸಲಾತಿ ಮಸೂದೆ ಲೋಕಸಭೆಯಲ್ಲಿ ಮಂಡನೆಯಾಗಿದೆ. ಈ ವೇಳೆ ಪ್ರಧಾನಿ ಮೋದಿ ಅವರು 'ಮಹಿಳಾ ಮೀಸಲಾತಿ' ಮಸೂದೆ ಬಗ್ಗೆ ಮಹತ್ವದ ಹೇಳಿಕೆ ನೀಡಿದ್ದಾರೆ. ಇದು ದೇವರು ನನಗೆ ನೀಡಿದ ಅವಕಾಶ ಎನ್ನುವ ಮೂಲಕ ಪ್ರಧಾನಿ ಗಮನ ಸೆಳೆದರು.
ನಿನ್ನೆ ಪ್ರಧಾನಿ ಮೋದಿ ನೇತೃತ್ವದಲ್ಲಿ ನಡೆದ ಕ್ಯಾಬಿನೆಟ್ ಸಭೆಯಲ್ಲಿ ಮಹಿಳಾ ಮೀಸಲಾತಿ ಮಸೂದೆಗೆ ಒಪ್ಪಿಗೆ ಸಿಕ್ಕಿತ್ತು. ಹಾಗೇ ಈಗಾಗಲೇ ರಾಜ್ಯಸಭೆಯಲ್ಲಿ 'ಮಹಿಳಾ ಮೀಸಲಾತಿ' ಮಸೂದೆಗೆ ರಾಜಸಭೆ ಅನುಮೋದನೆ ನೀಡಿದೆ. ಹೀಗಾಗಿ ಇಂದು ಲೋಕಸಭೆಯಲ್ಲಿ ಬಿಲ್ ಮಂಡನೆಯಾಗಿದೆ. ಈ ಮೂಲಕ ಐತಿಹಾಸಿಕ ಕ್ಷಣಗಳಿಗೆ ಲೋಕಸಭೆ ಸಾಕ್ಷಿಯಾಗಿದೆ. ಆದ್ರೆ ಈ ಸಂದರ್ಭದಲ್ಲೇ ಪ್ರಧಾನಿ ಮೋದಿ ಅವರು 'ಮಹಿಳಾ ಮೀಸಲಾತಿ' ಮಸೂದೆಯ ಬಗ್ಗೆ ಹೆಮ್ಮೆಯ ಮಾತನಾಡಿದ್ದಾರೆ.

ಮಹಿಳಾ ಮೀಸಲಾತಿ ಮಸೂದೆಗೆ ಏನು ಹೆಸರು?
ಇಂದು ಬೆಳಗ್ಗೆ ಹಳೆಯ ಸಂಸತ್ ಭವನದಲ್ಲಿ ಸಂಸದರ ಗ್ರೂಪ್ ಫೋಟೋ ತೆಗೆದ ನಂತರ ಹೊಸ ಸಂಸತ್ ಭವನಕ್ಕೆ ಪ್ರಧಾನಿ ಮೋದಿ ನೇತೃತ್ವದಲ್ಲಿ ಕಾಲ್ನಡಿಗೆಯಲ್ಲಿ ಬರಲಾಯಿತು. ಈ ವೇಳೆ ಸೋನಿಯಾ ಗಾಂಧಿ ಸೇರಿದಂತೆ ವಿಪಕ್ಷಗಳ ನಾಯಕರು ಹಾಜರಿದ್ದರು. ಆ ಬಳಿಕ ಮಾತನಾಡಿದ ಪ್ರಧಾನಿ 'ಮಹಿಳಾ ಮೀಸಲಾತಿ' ಮಸೂದೆ ಬಗ್ಗೆ ಹೆಮ್ಮೆ ವ್ಯಕ್ತಪಡಿಸಿದ್ದಾರೆ. 'ನಾರಿ ಶಕ್ತಿ ವಂದನ್ ಅಧಿನಿಯಮ್' ಎಂದು ಈ ಮಸೂದೆಗೆ ನಾಮಕರಣ ಮಾಡಲಾಗಿದೆ.
ಮಾಜಿ ಪ್ರಧಾನಿ ವಾಜಪೇಯಿ ನೆನಪು
ಈ ಬಗ್ಗೆ ನೂತನ ಸಂಸತ್ ಭವನದಲ್ಲಿ ಮಾತನಾಡಿದ ಪ್ರಧಾನಿ ಮೋದಿ ಅವರು, ದೇಶದ ಮಹಿಳೆಯರಿಗೆ ಮಸೂದೆ ಯಾವ ರೀತಿ ಸಹಾಯಕವಾಗಲಿದೆ ಎಂಬುದನ್ನು ವಿವರಿಸಿದ್ದಾರೆ. ಈ ಮಸೂದೆ ಲೋಕಸಭೆ ಹಾಗೂ ರಾಜ್ಯಸಭೆಯಲ್ಲಿ ಮಹಿಳೆಯರ ಸದಸ್ಯತ್ವ ವಿಸ್ತರಿಸುವ ಗುರಿ ಹೊಂದಿದೆ. ಈ ಬಗ್ಗೆ ಪ್ರಧಾನಿ ಮೋದಿ ಅವರು, ಮಹಿಳಾ ಮೀಸಲಾತಿ ಮಸೂದೆಯ ಚರ್ಚೆ ಸಾಕಷ್ಟು ವರ್ಷಗಳಿಂದಲು ನಡೆದಿದೆ. ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ಅವಧಿಯಲ್ಲಿ ಮಹಿಳಾ ಮೀಸಲಾತಿ ಮಸೂದೆ ಹಲವಾರು ಬಾರಿ ಮಂಡಿಸಲಾಯಿತು ಎಂದು ಮೆಲುಕು ಹಾಕಿದರು.

ದೇವರು ಕೊಟ್ಟ ಅವಕಾಶ...
ಹಾಗೇ ತಮ್ಮ ಮಾತು ಮುಂದುವರಿಸಿ ಹಿಂದಿನ ಘಟನೆ ಮೆಲುಕು ಹಾಕಿದ ಪಿಎಂ ಮೋದಿ, ಹಲವು ಬಾರಿ ಮಂಡನೆ ಆದರೂ ಮಹಿಳಾ ಮೀಸಲಾತಿ ಮಸೂದೆ ಅಂಗೀಕಾರ ಆಗಲಿಲ್ಲ. ಮಸೂದೆ ಅಂಗೀಕರಿಸಲು ಬಹುಮತ ಇರಲಿಲ್ಲ. ಎಲ್ಲಾ ಕಾರಣದಿಂದ ಮಸೂದೆ ಜಾರಿಯ ಕನಸು ಕನಸಾಗಿಯೇ ಉಳಿದಿತ್ತು. ಆದರೆ ಇಂದು ಈ ಕಾರ್ಯವನ್ನು ಮಾಡಲು ದೇವರೇ ನನಗೆ ಈ ಅವಕಾಶ ನೀಡಿದ್ದು, ಮಹಿಳಾ ಮೀಸಲಾತಿ ಮಸೂದೆಗೆ ಒಪ್ಪಿಗೆ ಸಿಗುತ್ತಿರುವುದು ಹೆಮ್ಮೆಯ ವಿಚಾರ ಎಂದಿದ್ದಾರೆ.
ಮಸೂದೆ ಮಂಡಿಸಿದ್ದು ಯಾರು?
ಕೇಂದ್ರ ಕಾನೂನು ಸಚಿವ ಅರ್ಜುನ್ ಮೇಘವಾಲ್ ಅವರು ಲೋಕಸಭೆಯಲ್ಲಿ ಇಂದು ಮಹಿಳಾ ಮೀಸಲಾತಿ ಮಸೂದೆ ಮಂಡಿಸಿದ್ರು. ಹೊಸ ಸಂಸತ್ ಭವನದಲ್ಲಿ ಮಂಡಿಸಿದ ಹಿನ್ನೆಲೆಯಲ್ಲಿ ಸಾಕಷ್ಟು ಮಹತ್ವ ಪಡೆದಿದೆ. ಲೋಕಸಭೆ ಹಾಗೂ ರಾಜ್ಯ ವಿಧಾನಸಭೆಗಳಲ್ಲಿ ಮಹಿಳೆಯರಿಗೆ ಶೇ 33ರಷ್ಟು ಸೀಟು ಮೀಸಲಿಡುವ ಮಸೂದೆ ಇದಾಗಿದೆ. ನಿನ್ನೆಯಷ್ಟೇ ಮಸೂದೆಗೆ ಕೇಂದ್ರದ ಕ್ಯಾಬಿನೆಟ್ ಸಭೆಯಲ್ಲಿ ಗ್ರೀನ್ ಸಿಗ್ನಲ್ ಸಿಕ್ಕಿತ್ತು. ಹೀಗಾಗಿ ಇಂದು ಈ ವಿಶೇಷ ಮಸೂದೆಯ ಲೋಕಸಭೆ ಎಂಟ್ರಿ ಭರ್ಜರಿಯಾಗಿತ್ತು.

ಒಟ್ನಲ್ಲಿ ಭಾರತದ ಇತಿಹಾಸದಲ್ಲೇ ಈ ದಿನ ಅಜರಾಮರ ಎನ್ನಬಹುದು. ದೇಶದ ಮಹಿಳಾ ಸಬಲೀಕರಣ ಹೆಜ್ಜೆಯಲ್ಲಿ ಇದು ದೊಡ್ಡ ಪ್ರಯತ್ನ. ಕಳೆದ ಎರಡೂವರೆ ದಶಕ ಅಂದರೆ 27 ವರ್ಷಗಳಿಂದಲೂ ಮಹಿಳಾ ಮೀಸಲಾತಿ ಮಸೂದೆ ಜಾರಿಗೆ ತರಲು ಬಿಜೆಪಿ & ಕಾಂಗ್ರೆಸ್ ಯತ್ನಿಸಿದ್ದವು. ಆದರೆ ರಾಜ್ಯಸಭೆಯಲ್ಲಿ ಒಪ್ಪಿಗೆ ಸಿಕ್ಕರೂ ಈ ಮಸೂದೆ ಜಾರಿಗೆ ಹಲವಾರು ಅಡೆತಡೆ ಎದುರಾಗಿತ್ತು. ಇಂದು ಅದ್ಧೂರಿಯಾಗಿ ಲೋಕಸಭೆಯಲ್ಲಿ ಮಹಿಳಾ ಮೀಸಲಾತಿ ಮಸೂದೆ ಮಂಡನೆಯಾಗಿದ್ದು, ನಾಳೆ ಲೋಕಸಭೆಯಲ್ಲೂ ಈ ಬಿಲ್ ಪಾಸ್ ಆಗುವುದು ಗ್ಯಾರಂಟಿ.
ವಿಧಾನಸಭೆ & ಲೋಕಸಭೆ ಚಿತ್ರಣವೇ ಬದಲು
ಈಗಿನ ಲೆಕ್ಕಾಚಾರ ಹೇಳುವುದಾದ್ರೆ ಪ್ರಸಕ್ತ ಲೋಕಸಭೆಯಲ್ಲಿ 78 ಮಹಿಳಾ ಸದಸ್ಯರು ಇದ್ದಾರೆ. ಹೀಗಾಗಿ ಒಟ್ಟಾರೆ ಸದಸ್ಯರಲ್ಲಿ ಇದು ಶೇ. 15ಕ್ಕಿಂತ ಕಡಿಮೆ. ರಾಜ್ಯಸಭೆ ಮಹಿಳಾ ಪ್ರಾತಿನಿಧ್ಯ ಶೇಕಡಾ 14ರಷ್ಟಿದೆ ಎಂದು ಕೇಂದ್ರ ಸರ್ಕಾರ ಡಿಸೆಂಬರ್‌ನಲ್ಲಿ ಸಂಸತ್ತಿಗೆ ತಿಳಿಸಿತ್ತು. ಇದಕ್ಕಿಂತ ಬೇಸರದ ಸಂಗತಿ ಎಂದರೆ ಹಲವು ರಾಜ್ಯಗಳ ವಿಧಾನಸಭೆಗಳು ಶೇ 10ಕ್ಕಿಂತ ಕಡಿಮೆ ಮಹಿಳಾ ಪ್ರಾತಿನಿಧ್ಯ ಹೊಂದಿವೆ. ನಾಳೆ ಲೋಕಸಭೆಯಲ್ಲಿ 'ಮಹಿಳಾ ಮೀಸಲಾತಿ' ಮಸೂದೆ ಒಪ್ಪಿಗೆ ಸಿಕ್ಕು, ಈ ಬಿಲ್ ಜಾರಿಗೆ ಬಂದ್ರೆ ಭಾರತದ ಲೋಕಸಭೆ ಮತ್ತು ವಿಧಾನಸಭೆಯಲ್ಲಿ ಮಹಿಳೆಯರ ಪ್ರಾತಿನಿಧ್ಯ ಕನಿಷ್ಠ ಶೇಕಡಾ 33ಕ್ಕೆ ತಲುಪಲಿದೆ.

ಭಾರತದ ಇತಿಹಾಸದಲ್ಲೇ ದಿಟ್ಟ ಹೆಜ್ಜೆ
ದೇಶದಲ್ಲಿ ಬಹುತೇಕ ರಾಜ್ಯದಲ್ಲಿ ಮಹಿಳೆಯರ ಪ್ರಾತಿನಿಧ್ಯ ಶೇಕಡಾ 10ಕ್ಕಿಂತ ಕಡಿಮೆ ಇದೆ. ಆಂಧ್ರಪ್ರದೇಶ, ಅಸ್ಸಾಂ, ಅರುಣಾಚಲ ಪ್ರದೇಶವು ಸೇರಿ ಗೋವಾ, ಗುಜರಾತ್, ಹಿಮಾಚಲ ಪ್ರದೇಶ, ಕರ್ನಾಟಕ, ಮಧ್ಯಪ್ರದೇಶ, ಮಹಾರಾಷ್ಟ್ರ, ಮಣಿಪುರ, ಮೇಘಾಲಯ, ಒಡಿಶಾ, ಸಿಕ್ಕಿಂ, ತಮಿಳುನಾಡು, ತೆಲಂಗಾಣ, ತ್ರಿಪುರ & ಪುದುಚೇರಿ ರಾಜ್ಯಗಳು ಈ ಪಟ್ಟಿಗೆ ಸೇರಿವೆ. ಅಂದ್ರೆ ಈ ರಾಜ್ಯಗಳಲ್ಲಿ ಶೇಕಡಾ 10ಕ್ಕಿಂತ ಕಡಿಮೆ ಮಹಿಳಾ ಪ್ರಾತಿನಿಧ್ಯವಿದೆ.
ಇನ್ನು ಬಿಹಾರ, ಹರಿಯಾಣ, ಪಂಜಾಬ್, ರಾಜಸ್ಥಾನ, ಉತ್ತರಾಖಂಡ, ಉತ್ತರ ಪ್ರದೇಶ, ದೆಹಲಿ ರಾಜ್ಯಗಳಲ್ಲಿ ಶೇಕಡಾ 10-12 ರಷ್ಟು ಮಹಿಳಾ ಶಾಸಕರಿದ್ದು. ಛತ್ತೀಸ್‌ಗಢ, ಪಶ್ಚಿಮ ಬಂಗಾಳ, ಜಾರ್ಖಂಡ್ ರಾಜ್ಯ ಕ್ರಮವಾಗಿ ಶೇ.14.44, ಶೇ.13.7 & ಶೇ.12.35 ಮಹಿಳಾ ಶಾಸಕರೊಂದಿಗೆ ಅಗ್ರಸ್ಥಾನ ಪಡೆದಿವೆ.
ಮಸೂದೆಗೆ ನಾಳೆ ಅವಿರೋಧ ಬೆಂಬಲ?
ಈಗ 'ಮಹಿಳಾ ಮೀಸಲಾತಿ' ಮಸೂದೆ ಜಾರಿಗೆ ಬಂದ್ರೆ ಎಲ್ಲವೂ ಬದಲಾಗಲಿದೆ. ಮತ್ತೊಂದು ಕಡೆ ಭಾರತದ ಇತಿಹಾಸದಲ್ಲೇ ಎಂದೂ ಮರೆಯಾಗದ ನಿರ್ಧಾರ ಕೂಡ ಇದಾಗಲಿದೆ. ಹೀಗಾಗಿ ಇಂದು ಪ್ರಧಾನಿ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಮಹಿಳಾ ಮೀಸಲಾತಿ ಬಿಲ್ ಅನ್ನ ಲೋಕಸಭೆಯಲ್ಲಿ ಇಂದು ಮಂಡನೆ ಮಾಡಿದೆ. ನಾಳೆಗೆ ಲೋಕಸಭೆ ಮುಂದೂಡಿಕೆ ಆಗಿದೆ, ಹೀಗಾಗಿ ನಾಳೆಯೆ ಮಹಿಳಾ ಮೀಸಲಾತಿ ಮಸೂದೆಗೆ ಅವಿರೋಧ ಬೆಂಬಲ ಸಿಗುವ ನಿರೀಕ್ಷೆ ಕೂಡ ದಟ್ಟವಾಗಿದೆ.
ಇಷ್ಟೆಲ್ಲಾ ಬೆಳವಣಿಗೆ ನಡುವೆ ಈಗಾಗಲೇ ಮಹಿಳಾ ಮೀಸಲಾತಿ ಮಸೂದೆಯ ಕ್ರೆಡಿಟ್‌ಗಾಗಿ ಎನ್‌ಡಿಎ ಮತ್ತು ಇಂಡಿಯಾ ಒಕ್ಕೂಟದ ನಡುವೆ ಫೈಟ್ ಶುರುವಾಗಿದೆ. ಹೀಗಾಗಿ ನಾಳೆಯ ಸಂಸತ್ ಸಧನದ ಆರಂಭದಲ್ಲಿ ಈ ಕಿತ್ತಾಟ ಇನ್ನಷ್ಟು ಜೋರಾಗುವ ನಿರೀಕ್ಷೆ ಇದೆ. ಆದರೆ ಏನೇ ಕಿತ್ತಾಟ ನಡೆದರೂ ಮಹಿಳಾ ಮೀಸಲಾತಿ ಮಸೂದೆ ನಾಳೆ ಲೋಕಸಭೆಯಲ್ಲಿ ಪಾಸ್ ಆಗುವುದು ಬಹುತೇಕ ಗ್ಯಾರಂಟಿ.
-
ಇರಾನ್ ಅಧ್ಯಕ್ಷರ ಜೊತೆ ಪ್ರಧಾನಿ ಮೋದಿ ಮಾತುಕತೆ: ಜಾಗತಿಕ ಪೂರೈಕೆ ವ್ಯತ್ಯಯದ ಬಗ್ಗೆ ಆತಂಕ -
Power Cut: ನಾಳೆ ಮಾ.22 ರಿಂದ 25ರವರೆಗೆ ಈ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯ: ಬೆಸ್ಕಾಂ -
Ration: ಪಡಿತರ ಚೀಟಿದಾರರಿಗೆ ಭರ್ಜರಿ ಗುಡ್ ನ್ಯೂಸ್ ಕೊಟ್ಟ ಕೇಂದ್ರ ಸರ್ಕಾರ -
ಆರ್ಸಿಬಿ ಮತ್ತೆ ಚಾಂಪಿಯನ್ ಆಗೋದು ಫಿಕ್ಸ್, ಹ್ಯಾಜಲ್ವುಡ್ ಅಲಭ್ಯತೆ ತಂಡಕ್ಕೆ ವರದಾನ ಎಂದ ಆರ್.ಅಶ್ವಿನ್ -
March 21 Horoscope: 12 ರಾಶಿಗಳ ಇಂದುದಿನ ಭವಿಷ್ಯ – ಹಣ, ಆರೋಗ್ಯ, ಕೆಲಸದ ಫಲಿತಾಂಶ -
SWR: ವಿಜಯಪುರ-ಮಂಗಳೂರು ಎಕ್ಸ್ಪ್ರೆಸ್ ರೈಲು ಸಂಚಾರದಲ್ಲಿ ಭಾಗಶಃ ರದ್ದು, ವೇಳಾಪಟ್ಟಿ ಗಮನಿಸಿ -
ಜಿಯೋ, ಏರ್ಟೆಲ್ಗೆ ಸೆಡ್ಡು ಹೊಡೆಯಲು BSNL ಮಾಸ್ಟರ್ ಪ್ಲಾನ್: ವೊಡಾಫೋನ್ ಐಡಿಯಾ ಜತೆ ಮಹತ್ವದ ಹೆಜ್ಜೆ -
Rain Alert: ಕರ್ನಾಟಕದಲ್ಲಿ ಮಾ.27ರವರೆಗೆ ಗುಡುಗು ಸಹಿತ ಮಳೆ, ಕರಾವಳಿಗೆ ಉಷ್ಣ ಅಲೆ ಎಚ್ಚರಿಕೆ -
ಯುವತಿಯರ ಜೊತೆ ಸೆಕ್ಯೂರಿಟಿ ಗಾರ್ಡ್ ಭರ್ಜರಿ ಸ್ಟೆಪ್ಸ್: 'ಬೇಬಿ ಡಾಲ್' ಡ್ಯಾನ್ಸ್ ವಿಡಿಯೋ ಸಖತ್ Viral -
Gold Price Today: ಇಂದು ಚಿನ್ನ-ಬೆಳ್ಳಿ ದರದಲ್ಲಿ ದಾಖಲೆಯ ಇಳಿಕೆ, 30000 ರೂ ಕುಸಿದ ಬಿಳಿ ಲೋಹ -
India Rain Forecast: ಮುಂದಿನ 5 ದಿನ ಈ ಭಾಗಗಳಲ್ಲಿ ವ್ಯಾಪಕ ಮಳೆ, ಉಷ್ಣ ಅಲೆ ಎಚ್ಚರಿಕೆ -
ಶೃಂಗೇರಿ ಮಠದಿಂದ ಶಾಲಾ ಮಕ್ಕಳಿಗೆ ಸುವರ್ಣಾವಕಾಶ: 'ರಾಮಾಯಣ ಪರೀಕ್ಷೆ' ಬರೆದು 50 ಸಾವಿರ ರೂ. ನಗದು ಗೆಲ್ಲಿ












Click it and Unblock the Notifications