ತುಂಬುತ್ತಿದೆ ಕಾವೇರಿ ನದಿಗೆ ಅಡ್ಡಲಾಗಿ ಕಟ್ಟಿರುವ ಈ ಜಲಾಶಯ!

ಮಳೆಯೇ ಇಲ್ಲ.. ಮಳೆ ಬಂದಿಲ್ಲ.. ಬೆಳೆ ಒಣಗಿ ಹೋಗುತ್ತಿದೆ.. ಅಷ್ಟಕ್ಕೂ ರಾಜ್ಯದಲ್ಲಿ ಎಲ್ಲೇ ಹೋದರೂ ರೈತರ ಬಾಯಲ್ಲಿ ಕೇಳಿಬರುವ ನೋವಿನ ಮಾತು ಇದು. ಕಳೆದ 5-6 ವರ್ಷಗಳಿಂದ ಕನ್ನಡಿಗರ ಮೇಲೆ ಕರುಣೆ ತೋರಿದ್ದ ವರುಣ ದೇವ, ಈ ವರ್ಷ ಯಾಕೋ ಗೊತ್ತಿಲ್ಲ ಮುನಿಸಿಕೊಂಡಿದ್ದಾನೆ. ಇದಕ್ಕೆಲ್ಲ 'ಎಲ್ ನಿನೋ' ಎಂಬ ಪ್ರಾಕೃತಿಕ ವಿದ್ಯಮಾನ ಕಾರಣ ಅಂತಾ ಭೂ ವಿಜ್ಞಾನಿಗಳು ಹೇಳುವಾಗಲೇ, ಕಾವೇರಿ ನದಿಯ ಈ ಜಲಾಶಯ ಈಗ ತುಂಬಿಕೊಳ್ಳುತ್ತಿದೆ!

ಹೌದು, ನೋಡ ನೋಡುತ್ತಲೇ ಮೋಡ ಮರೆಯಾಗಿ, ಗಿರಿ ಶಿಖರಗಳ ನಾಡು & ಕಾವೇರಿ ತವರು ಕೊಡಗಿನಲ್ಲೂ ಸಾಕಷ್ಟು ಮಳೆ ಕೊರತೆ ಎದುರಾಗಿ ಕೃಷಿ ಚಟುವಟಿಕೆಗೆ ಪೆಟ್ಟು ಬಿದ್ದಿದೆ. ರಾಜ್ಯದ ಹಳೇ ಮೈಸೂರು ಭಾಗದ ರೈತರು ಆಕಾಶ ನೋಡುತ್ತಾ ಕೂರುವಂತಾಗಿದೆ. ಇದರಿಂದ ನೆರೆಯ ರಾಜ್ಯ ತಮಿಳುನಾಡು ಮತ್ತು ಕರ್ನಾಟಕದ ಮಧ್ಯೆ ಭಾರಿ ಫೈಟಿಂಗ್ ನಡೆದಿದೆ. ಕನ್ನಡಿಗರು ಇದರ ಬಿಸಿ ಅನುಭವಿಸಿ, ಎರಡೆರಡು ಬಂದ್‌ಗಳನ್ನೂ ನೋಡಬೇಕಾಗಿ ಬಂತು. ಮೊದಲು ಬೆಂಗಳೂರು ಬಂದ್ ಮತ್ತು ನಂತರ ಕರ್ನಾಟಕ ಬಂದ್ ಆಚರಿಸಲಾಗಿತ್ತು. ಆದ್ರೆ ಮಳೆಯ ಅಬ್ಬರ ದಿಢೀರ್ ಶುರುವಾಗಿದ್ದು, ಕಾವೇರಿ ನದಿಯ ಈ ಡ್ಯಾಂ ತುಂಬಲು ಆರಂಭಿಸಿದೆ.

Discover The Water Level Of Mettur Dam And Inflow Of Today

ಕಾವೇರಿ ಕೊಳ್ಳಕ್ಕೆ ಮತ್ತೆ ಜೀವಕಳೆ?

ಅಂದಹಾಗೆ ಈಗ ತುಂಬುತ್ತಿರುವ ಕಾವೇರಿ ಕೊಳ್ಳದ ಜಲಾಶಯ ಇರುವುದು ಕರ್ನಾಟಕದಲ್ಲಿ ಅಲ್ಲ, ಬದ್ಲಾಗಿ ನೆರೆಯ ತಮಿಳುನಾಡಿನಲ್ಲಿ. ಹೌದು ತಮಿಳುನಾಡಿನ ಬಹುದೊಡ್ಡ ಮತ್ತು ಅತಿಮುಖ್ಯ ಜಲಾಶಯ ಎಂಬ ಕೀರ್ತಿ ಪಡೆದಿರುವ ಮೆಟ್ಟೂರು ಡ್ಯಾಂ ಈಗ ನಿಧಾನವಾಗಿ ತುಂಬಿಕೊಳ್ಳುತ್ತಿದೆ. ಬರೊಬ್ಬರಿ 30 ಅಡಿಗೆ ಕುಸಿತ ಕಾಣುತ್ತಿದ್ದ ಮೆಟ್ಟೂರು ಡ್ಯಾಂಗೆ ಇದೀಗ ಭಾರಿ ಪ್ರಮಾಣದ ನೀರು ಹರಿದು ಬರುತ್ತಿದೆ. ಹಾಗಾದರೆ ಈಗ ಎಷ್ಟಿದೆ ಗೊತ್ತಾ ಮೆಟ್ಟೂರು ಡ್ಯಾಂ ನೀರಿನ ಮಟ್ಟ?

ನೆರೆ ರಾಜ್ಯಕ್ಕೆ ನೋ ಟೆನ್ಷನ್?

ತಮಿಳುನಾಡು ಕೂಡ ಈ ಬಾರಿ ಬರದ ಬೇಗೆಯಲ್ಲಿ ನರಳಾಡುತ್ತಿದೆ ಮಳೆ ಕೊರತೆ ಕಾರಣದಿಂದ ತಮಿಳುನಾಡು ಡ್ಯಾಂಗಳು ಕೂಡ ಒಣಗಿವೆ. ಮೆಟ್ಟೂರು ಡ್ಯಾಂ ಭಾಗಶಃ ಖಾಲಿಯಾಗಿ ಆತಂಕ ಸೃಷ್ಟಿಯಾಗಿತ್ತು. ಈಗ ವೇಗವಾಗಿ ಮೆಟ್ಟೂರು ಡ್ಯಾಂ ತುಂಬುತ್ತಿದೆ ಮಳೆ ಅಬ್ಬರವು ಜೋರಾದ ಕಾರಣ ಮೆಟ್ಟೂರು ಡ್ಯಾಂಗೆ ಭಾರಿ ಪ್ರಮಾಣದಲ್ಲಿ ನೀರು ಹರಿದು ಬರುತ್ತಿದೆ. ಈಗಿನ ಮಾಹಿತಿ ಪ್ರಕಾರ 120 ಅಡಿ ಎತ್ತರ ಇರುವ ಮೆಟ್ಟೂರು ಡ್ಯಾಂನಲ್ಲಿ 51.16 ಅಡಿ ನೀರು ಸಂಗ್ರಹವಾಗಿದೆ. ಹಾಗೇ 4,424 ಕ್ಯುಸೆಕ್ ಒಳಹರಿವು ದಾಖಲಾಗಿದ್ದು, ಇದೀಗ 500 ಕ್ಯುಸೆಕ್ ನೀರನ್ನು ಹೊರಗೆ ಬಿಡಲಾಗುತ್ತಿದೆ.

ಇಷ್ಟೆಲ್ಲಾ ಕಿರಿಕ್ ಮಾಡಿದ್ದು ಯಾಕೆ?

ಒಟ್ನಲ್ಲಿ ತಮಿಳುನಾಡಿನ 24 ಜಿಲ್ಲೆಗಳು ಅವಲಂಬಿಸಿರುವುದು ಮೆಟ್ಟೂರು ಡ್ಯಾಂನ ನೀರನ್ನು. ಹೀಗಾಗಿ ಕಾವೇರಿ ವಿಚಾರಕ್ಕೆ ತಮಿಳುನಾಡು ದೊಡ್ಡ ಕಿರಿಕ್ ತೆಗೆಯುತ್ತದೆ. ಆದರೆ ಕುಡಿಯುವ ನೀರನ್ನ ಮೊದಲು ರಕ್ಷಣೆ ಮಾಡುವ ಬದಲು, ತಮಿಳುನಾಡು ಸರ್ಕಾರ ಕೃಷಿಗೆ ಆದ್ಯತೆ ನೀಡಿದೆ ಎಂಬ ಆರೋಪವು ಕೇಳಿಬಂದಿತ್ತು. ಎಲ್ಲಾ ಕಿರಿಕಿರಿ ನಡುವೆ ಮೆಟ್ಟೂರು ಡ್ಯಾಂ ನೀರಿನ ಮಟ್ಟ ಕುಸಿದಿದ್ದು ಭಯ ಮೂಡಿಸಿತ್ತು. ಆದರೆ ಇದೀಗ ಮೆಟ್ಟೂರು ಡ್ಯಾಂ ನೀರಿನ ಮಟ್ಟ ಸುಧಾರಿಸಿ, ರೈತರು ಹಾಗೂ ಜನರಲ್ಲಿ ಹೊಸ ನಿರೀಕ್ಷೆಯನ್ನ ಮೂಡಿಸುತ್ತಿದೆ.

Discover The Water Level Of Mettur Dam And Inflow Of Today

ಕರ್ನಾಟಕದಲ್ಲೂ ಮಳೆ ಆಗುತ್ತಾ?

ಪ್ರಾಕೃತಿಕವಾಗಿ ಕರ್ನಾಟಕಕ್ಕೆ ಮುಂಗಾರು ಮಳೆಯೇ ಗಟ್ಟಿ, ಯಾಕಂದ್ರೆ ಹಿಂಗಾರು ಮಳೆ ಬಿದ್ದು ಡ್ಯಾಂಗಳು ತುಂಬುವುದು ಕಷ್ಟ. ಅಕಸ್ಮಾತ್ ಸೈಕ್ಲೋನ್ ಅಥವಾ ಇನ್ಯಾವುದೋ ಪ್ರಾಕೃತಿಕ ವಿಕೋಪ ಎದುರಾಗಿ ಮಳೆ ಬಿದ್ದರೆ ಜಲಾಶಯಗಳು ತುಂಬಬಹುದು. ಹೀಗಾಗಿ ಕರ್ನಾಟಕದ ರೈತರು ಚಿಂತೆ ಮಾಡುವಂತಾಗಿದೆ. ಅದರಲ್ಲೂ ಕಾವೇರಿ ಕೊಳ್ಳದ ಪರಿಸ್ಥಿತಿ ಆತಂಕ ಹುಟ್ಟಿಸುವ ರೀತಿ ಇದ್ದು, ಮುಂದಿನ ದಿನಗಳಲ್ಲಿ ಏನು ಮಾಡುವುದು? ಎಂಬ ಚಿಂತೆಯಲ್ಲಿ ರೈತ ಸಮುದಾಯ ಮುಳುಗಿದೆ. ಕೆ.ಆರ್.ಎಸ್ ಡ್ಯಾಂನಲ್ಲಿ ಈಗ 22.41 ಟಿಎಂಸಿ ನೀರು ಇದ್ದು, ಒಳಹರಿವು ಕೇವಲ 710 ಕ್ಯುಸೆಕ್ ದಾಖಲಾಗುತ್ತಿದೆ. ಹಾಗೇಯೇ ಹೊರಹರಿವು ಕೇವಲ 567 ಕ್ಯುಸೆಕ್ ಇದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+