Train: ರೈಲು ಹಳಿ ಮೇಲೆ ‘ಹಾವಿನ ಪಟಾಕಿ’ ಹಚ್ಚಿದ ಯುಟ್ಯೂಬರ್! ಮುಂದೆ ಏನಾಯ್ತು?
'ಯುಟ್ಯೂಬರ್' ಆಗಬೇಕು, ಸಬ್‌ಸ್ಕ್ರೈಬರ್ಸ್ ಗಳಿಸಬೇಕು ಅನ್ನೋದು ಕೋಟ್ಯಂತರ ಜನರ ಕನಸು. ಆದರೂ ಕನಸು ಕಟ್ಟಿಕೊಂಡು ಬರುವ ಕೋಟ್ಯಂತರ ಜನರಲ್ಲಿ ಬೆರಳೆಣಿಕೆಯಷ್ಟು ಜನ ಮಾತ್ರ ಗುರಿ ತಲುಪುತ್ತಾರೆ. ಹೀಗಿದ್ದಾಗ ಏನಾದ್ರೂ ಮಾಡಿ ತಮ್ಮ ಚಾನಲ್ ಬೆಳೆಯಲಿ ಅಂತ ಏನೇನೋ ಮಾಡಿ ಸಂಕಷ್ಟಕ್ಕೆ ಸಿಲುಕುವವರೆ ಹೆಚ್ಚು. ಈ ರೀತಿ ಇಲ್ಲೊಬ್ಬ ಕಿರಾತಕ ರೈಲು ಹಳಿ ಮೇಲೆ ಬೆಂಕಿ ಹಚ್ಚಿದ್ದಾನೆ ಅನ್ನೋ ಆರೋಪ ಕೇಳಿಬಂದಿದೆ.
ಆಗಾಗ ಕೆಲ 'ಯುಟ್ಯೂಬರ್'ಗಳ ಅತಿರೇಕ ಸುದ್ದಿಯಾಗುತ್ತಲೇ ಇರುತ್ತದೆ. ಹಾಗೇ ಕೆಲವರು ಏನೇನೋ ಮಾಡಿ ಸಮಸ್ಯೆ ಕೂಡ ಎದುರಿಸಿದ್ದಾರೆ. ಹೀಗೆ ಕೆಲ ಯುಟ್ಯೂಬರ್ಸ್ ಮಾಡುವ ಹುಚ್ಚಾಟದಿಂದ ಬೇರೆಯವರ ಜೀವಕ್ಕೆ ಸಮಸ್ಯೆ ಎದುರಾಗುತ್ತಿದೆ. ಈಗ ಇಲ್ಲೊಬ್ಬ ಮಾಡಿದ ಎಡವಟ್ಟು ರೈಲು ಪ್ರಯಾಣಿಕರನ್ನ ಸಮಸ್ಯೆಗೆ ದೂಡುವ ಭಯ ಆವರಿಸಿತ್ತು. ರೈಲು ಹಳಿ ಮೇಲೆ, ಹಾವಿನ ಪಟಾಕಿ ಹಚ್ಚಿದ ಈತ ಮುಂದೆ ಮಾಡಿದ್ದೇನು ಗೊತ್ತಾ? ವಿಡಿಯೋ ಇದೆ ನೋಡಿ, ನಿಮಗೆ ತಿಳಿಯುತ್ತೆ.

ರೈಲು ಹಳಿ ಮೇಲೆ ಬೆಂಕಿ & ಹೊಗೆ!
ಹೌದು, ರೈಲು ಹಳಿ ಮೇಲೆ ಏನೇನೋ ಹುಚ್ಚಾಟ ಮಾಡುವವರು ಪೊಲೀಸರ ಅತಿಥಿ ಆಗಿ ಕಂಬಿ ಎಣಿಸಿದ್ದಾರೆ. ಈಗ ಇಲ್ಲೊಬ್ಬ ಯುಟ್ಯೂಬರ್, ರೈಲು ಹಳಿ ಮೇಲೆ ತಾನು ತಂದಿದ್ದ ಸ್ನೇಕ್ ಪಟಾಕಿ (ಹಾವಿನ ಗುಳಿಗೆ) ಹಚ್ಚಿ ಅಟ್ಟಹಾಸ ಮೆರೆದಿದ್ದಾನೆ. ಈತನ ವಿವರ ಹಾಗೂ ಮಾಹಿತಿ ಸದ್ಯಕ್ಕೆ ತಿಳಿದುಬಂದಿಲ್ಲ. ಆದ್ರೆ ಟ್ರೈನ್ಸ್ ಆಫ್ ಇಂಡಿಯಾ (Trains Of India) ಎಂಬ ಟ್ವಿಟ್ಟರ್ ಖಾತೆಯಲ್ಲಿ ಈ ಬಗ್ಗೆ ವಿಡಿಯೋ ಶೇರ್ ಮಾಡಲಾಗಿದ್ದು, ಹಾಗೇ ಈತನ ವಿರುದ್ಧ ಕ್ರಮ ಕೈಗೊಳ್ಳುವಂತೆ ಆಗ್ರಹಿಸಲಾಗಿದೆ.
ಯಾವ ಪ್ರದೇಶದಲ್ಲಿ ನಡೆದ ಘಟನೆ?
ವಾಯವ್ಯ ರೇಲ್ವೆಯ ವಲಯದಲ್ಲಿ ಈ ಘಟನೆ ನಡೆದಿದೆ ಎನ್ನಲಾಗಿದೆ. ರಾಜಸ್ತಾನದ ಫುಲೇರ & ಅಜ್ಮೀರ್ ವಿಭಾಗದ ದಾಂತ್ರಾ ರೈಲು ನಿಲ್ದಾಣ ಬಳಿ ಘಟನೆ ನಡೆದಿದೆ ಅಂತ ಹೇಳಲಾಗ್ತಿದೆ. ಹೀಗಾಗಿ ಸಂಬಂಧಪಟ್ಟ ಅಧಿಕಾರಿಗಳು ಈ ಘಟನೆಯನ್ನು ಕಠಿಣವಾಗಿ ಪರಿಗಣಿಸಬೇಕಿದ್ದು, ಆ ಮೂಲಕ ಸೂಕ್ತ ಕ್ರಮ ಕೈಗೊಳ್ಳಬೇಕು ಎಂಬ ಆಗ್ರಹ ಕೇಳಿಬಂದಿದೆ. ಯಾಕಂದ್ರೆ ಇದು ರೈಲು ಪ್ರಯಾಣಿಕರ ಜೀವಕ್ಕೂ ಅಪಾಯದ ಸಂಗತಿ, ಹೀಗಾಗಿ ಇಂತಹ ಘಟನೆಗಳ ಕುರಿತು ಕಠಿಣ ಕ್ರಮ ಅಗತ್ಯ ಅಂತಿದ್ದಾರೆ ಜನರು.
YouTuber bursting crackers on Railway Tracks!!
— Trains of India 🇮🇳 (@trainwalebhaiya) November 7, 2023
Such acts may lead to serious accidents in form of fire, Please take necessary action against such miscreants.
Location: 227/32 Near Dantra Station on Phulera-Ajmer Section.@NWRailways @rpfnwraii @RpfNwr @DrmAjmer @GMNWRailway pic.twitter.com/mjdNmX9TzQ
ಪಕ್ಕದಲ್ಲೇ ಹಾದು ಹೋದ ರೈಲು!
ಈ ತಿಕ್ಕಲು 'ಯುಟ್ಯೂಬರ್' ರೈಲು ಹಳಿ ಮೇಲೆ 'ಹಾವಿನ ಪಟಾಕಿ' ಅಂಟಿಸಿದ ನಂತರ, ಈತನ ಪಕ್ಕದಲ್ಲೇ ರೈಲು ಒಂದು ಹಾದು ಹೋಗಿದೆ. ಆದರೆ ರೈಲು ದೂರ ಇದ್ದ ಕಾರಣ, ಯಾವುದೇ ರೀತಿ ಹಾನಿ ಆಗಿಲ್ಲ. ಹೀಗಿದ್ದರೂ, ಅಕಸ್ಮಾತ್ ಈತ 'ಹಾವಿನ ಪಟಾಕಿ' ಹಚ್ಚಿ ನಿಂತಿದ್ದ ಹಳಿ ಮೇಲೆ ರೈಲು ಹೋಗಿದ್ರೆ ಕಥೆ ಏನು? ಈಗಾಗಲೇ ಸಾಕಷ್ಟು ಅಗ್ನಿ ದುರಂತ ರೈಲಿನಲ್ಲಿ ನಡೆದು ಭಯದ ವಾತಾವರಣ ಶುರುವಾಗಿದೆ. ಹೀಗಾಗಿ ಈತನ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಸೋಷಿಯಲ್ ಮೀಡಿಯಾದಲ್ಲಿ ಆಗ್ರಹ ಕೇಳಿಬಂದಿದೆ.
ಒಟ್ನಲ್ಲಿ ಭಾರತೀಯ ರೈಲ್ವೆ ಇಲಾಖೆ ಅಂದ್ರೆ ಒಂದು ಹೆಮ್ಮೆ ಇದೆ
ಜಗತ್ತಿನಾದ್ಯಂತ ನಮ್ಮ ದೇಶದ ರೈಲುಗಳು ಅಂದ್ರೆ ಗೌರವ ಇದೆ. ಹಾಗೇ ನಮ್ಮ ರೈಲ್ವೆ ಇಲಾಖೆ ಬೇರೆ ದೇಶಗಳಿಗು ಮಾದರಿಯಾಗಿ ಬೆಳೆದಿದೆ. ಪರಿಸ್ಥಿತಿ ಹೀಗಿದ್ದಾಗ ಯಾರೋ ಮಾಡುವ ಎಡವಟ್ಟು, ದೇಶಕ್ಕೆ ಸಮಸ್ಯೆ ತರಬಾರದು. ಅಲ್ದೆ ಭಾರತದ ರೇಲ್ವೆ ಇಲಾಖೆ ಘನತೆಗೆ ಧಕ್ಕೆ ಬರಬಾರದು ಎಂಬ ಮಾತುಗಳು ಕೇಳಿಬರುತ್ತಿವೆ. ಹೀಗಾಗಿ ಈಗ ರೈಲು ಹಳಿ ಮೇಲೆ, ಪಟಾಕಿ ಹಚ್ಚಿರುವ ವ್ಯಕ್ತಿ ವಿರುದ್ಧ ಯಾವ ರೀತಿ ಕ್ರಮ ಕೈಗೊಳ್ಳುತ್ತಾರೆ? ಅನ್ನೋದನ್ನ ಕಾದು ನೋಡಬೇಕಿದೆ. ಇಲ್ಲ ಅಂದ್ರೆ ಸೋಷಿಯಲ್ ಮೀಡಿಯಾದಲ್ಲಿ ಇದೇ ರೀತಿ ಆಕ್ರೋಶ ಮೊಳಗುತ್ತದೆ.
-
ಸೌದಿ ಅರೇಬಿಯಾದಲ್ಲಿ ಪಾಕಿಸ್ತಾನಿ ಸೇನಾಪಡೆ ನಿಯೋಜನೆ: ಮಿತ್ರ ರಾಷ್ಟ್ರಕ್ಕೆ 13,000 ಸೈನಿಕರು, ಯುದ್ಧ ವಿಮಾನಗಳ ರವಾನೆ -
Weekly Horoscope: ನಾಲ್ಕು ರಾಶಿಯವರಿಗೆ ಅದೃಷ್ಟ ಹೊತ್ತು ತರುವ ವಾರ ಇದು: ಹೇಗಿದೆ ನೋಡಿ ನಿಮ್ಮ ವಾರ ಭವಿಷ್ಯ -
Bengaluru Property: ಬೆಂಗಳೂರು ಮೆಟ್ರೋದ ಈ ಮಾರ್ಗಗಳಲ್ಲಿ ಭೂಮಿ, ಪ್ರಾಪರ್ಟಿ ಬೆಲೆ ಶೇ 20% ರಿಂದ ಶೇ 30% ಹೆಚ್ಚಳ -
PUC Revaluation: ಸ್ಕ್ಯಾನ್ ಪ್ರತಿ ಪಡೆದವರ ಉತ್ತರ ಪತ್ರಿಕೆ ಮರುಮೌಲ್ಯಮಾಪನ; ಶುಲ್ಕ, ಪ್ರಮುಖ ದಿನಾಂಕಗಳು -
Gold Rings: ಅಕ್ಷಯ ತೃತೀಯಕ್ಕೆ ಖರೀದಿಸಬಹುದಾದ ಆಕರ್ಷಕ ವಿನ್ಯಾಸದ 5 ಚಿನ್ನದ ಉಂಗುರಗಳು -
Career Break: ಅಲಾರಂ ಇಲ್ಲದ ಜೀವನ ಬೇಕು ಎಂದು ಗೂಗಲ್ ಕೆಲಸ ಬಿಟ್ಟ ಯುವ ಟೆಕ್ಕಿ, ನೆಟ್ಟಿಗರ ಮೆಚ್ಚುಗೆ -
Bengaluru Mumbai Vande Bharat: ಬೆಂಗಳೂರು - ಮುಂಬೈ ಹೊಸ ರೈಲು: ಮಹಾ ಸಿಎಂ ಮಹತ್ವದ ಟ್ವೀಟ್, ಯಾವಾಗ ಪ್ರಾರಂಭ -
Gold Price Drop: ವಾರದ ಮೊದಲ ದಿನವೇ ಚಿನ್ನ-ಬೆಳ್ಳಿ ದರ ಭರ್ಜರಿ ಕುಸಿತ, ಇಂದಿನ ದರಪಟ್ಟಿ -
ಎರಡು ಬಾರಿ ಕೆಲಸ ಕಳೆದುಕೊಂಡ ಯುವಕನಿಂದ ರೆಸ್ಟೋರೆಂಟ್ ಬ್ಯುಸಿನೆಸ್: ಈಗ ತಿಂಗಳಿಗೆ 1.3 ಕೋಟಿ ರೂ. ಆದಾಯ -
School Holiday: ರಾಜ್ಯದಲ್ಲಿ 2026-27ನೇ ಸಾಲಿನ ಶೈಕ್ಷಣಿಕ ವೇಳಾಪಟ್ಟಿ ಪ್ರಕಟ: ದಸರಾ, ಬೇಸಿಗೆ ರಜೆ, ಕೆಲಸದ ದಿನಗಳ ವಿವರ -
E-Khata: ಜನ ಸೇವಕ ಯೋಜನೆ: ಮನೆಯಲ್ಲೇ ಕುಳಿತು ಇ - ಖಾತಾ ಪಡೆಯಿರಿ, ಈ 5 ದಾಖಲೆಗಳಿದ್ದರೆ ಸಾಕು -
ಬ್ರೋ.. ಒಂದು ವಿಕೆಟ್ ಕಿತ್ತರೂ ನನ್ನ ಫೋಟೋ ಹಾಕಿಲ್ಲ ಯಾಕೆ?; ಆರ್ಸಿಬಿ ಮೆಂಟರ್ ಡಿಕೆಗೆ ಕೃನಾಲ್ ಪಾಂಡ್ಯ ಪ್ರಶ್ನೆ












Click it and Unblock the Notifications