Police Custody Death: ಪೊಲೀಸ್ ಕಸ್ಟಡಿಯಲ್ಲಿ 687 ಮಂದಿ ಸಾವು!

ನವದೆಹಲಿ: ಆರೋಪಿಗಳನ್ನ ವಿಚಾರಣೆ ನಡೆಸುವಾಗ ಪೊಲೀಸರು ತಮ್ಮದೇ ಭಾಷೆಯಲ್ಲಿ ವಿಚಾರಣೆ ನಡೆಸುವುದು ಮಾಮೂಲು. ಆರೋಪಿಗಳ ಬಾಯಿ ಬಿಡಿಸಿ ಸತ್ಯ ಹೊರತೆಗೆಸಲು ಪೊಲೀಸರು ಇಂತಹ ಕ್ರಮ ಕೈಗೊಳ್ಳುತ್ತಾರೆ ಎಂಬ ಸಮರ್ಥನೆಯೂ ಇದೆ. ಆದ್ರೆ ಕಳೆದ 5 ವರ್ಷದಲ್ಲಿ ಪೊಲೀಸ್ ಕಸ್ಟಡಿಯಲ್ಲಿ ಮೃತಪಟ್ಟಿದ್ದು ಎಷ್ಟು ಜನ ಗೊತ್ತಾ? ಯಾವ ರಾಜ್ಯ ಈ ಪಟ್ಟಿಯಲ್ಲಿ ಮುಂದಿದೆ? ಸಂಪೂರ್ಣ ಮಾಹಿತಿ ಇಲ್ಲಿದೆ ತಿಳಿಯಿರಿ.

ಅಂದಹಾಗೆ ಪೊಲೀಸ್ ಕಸ್ಟಡಿಯಲ್ಲಿ ಮೃತಪಟ್ಟವರ ಸಾಲಲ್ಲಿ ಗುಜರಾತ್ ಮೊದಲ ಸ್ಥಾನ ಅಲಂಕರಿಸಿದೆ. ಕಳೆದ 5 ವರ್ಷದಲ್ಲಿ ಗುಜರಾತ್ ರಾಜ್ಯದಲ್ಲಿ ಪೊಲೀಸ್ ಕಸ್ಟಡಿಯಲ್ಲಿ 81 ಮಂದಿ ಮೃತಪಟ್ಟಿದ್ದಾರೆ. ಹಾಗೇ ನಂತರದ ಸ್ಥಾನದಲ್ಲಿ ಮಹಾರಾಷ್ಟ್ರ ಇದ್ದು 80 ಜನರು ಪೊಲೀಸ್ ಕಸ್ಟಡಿಯಲ್ಲಿ ಜೀವ ಬಿಟ್ಟಿದ್ದಾರೆ. ಈ ಕುರಿತು ಲೋಕಸಭೆಯಲ್ಲಿ ಮಾಹಿತಿಯನ್ನ ನೀಡಲಾಗಿದೆ. ಹೀಗೆ ದೇಶಾದ್ಯಂತ 2018ರ ಏಪ್ರಿಲ್ ತಿಂಗಳಿಂದ 2023ರ ಮಾರ್ಚ್ ತನಕ ಒಟ್ಟಾರೆ 687 ಮಂದಿ ಪೊಲೀಸ್ ಕಸ್ಟಡಿಯಲ್ಲಿ ಮೃತಪಟ್ಟಿದ್ದಾರೆ. ಹಾಗಾದರೆ ಗುಜರಾತ್ & ಮಹಾರಾಷ್ಟ್ರ ನಂತರ ಸ್ಥಾನದಲ್ಲಿ ಯಾವ ಯಾವ ರಾಜ್ಯಗಳಿವೆ ಎಂಬುದರ ಗ್ರಾಫ್ ಇಲ್ಲಿದೆ ತಿಳಿಯಿರಿ.

Discover how many deaths in Police custody from last 5 years

ಕಸ್ಟಡಿ ಸಾವಿನಿಂದ ಹೆಚ್ಚಾಯ್ತು ಆತಂಕ!
ಇನ್ನು ಪೊಲೀಸರ ಕಸ್ಟಡಿಯಲ್ಲೇ ಆರೋಪಿಗಳು ಮೃತಪಡುತ್ತಿರುವ ಘಟನೆಗಳಿಂದ ಆತಂಕ ತೀವ್ರವಾಗಿದೆ. ಈ ಬಗ್ಗೆ ಸಾಕಷ್ಟು ಚರ್ಚೆಗಳು ಕೂಡ ನಡೆಯುತ್ತಿವೆ. ಗುಜರಾತ್ ಮೊದಲ ಸ್ಥಾನ ಪಡೆದರೆ, ಮಹಾರಾಷ್ಟ್ರ ಎರಡನೇ ಸ್ಥಾನ ಪಡೆದಿದೆ. ಹಾಗೇ ಮಧ್ಯಪ್ರದೇಶ ಮೂರು ಮತ್ತು ಬಿಹಾರ ನಾಲ್ಕನೇ ಸ್ಥಾನದಲ್ಲಿ ಇದೆ. ಹೀಗೆ ಉತ್ತರ ಪ್ರದೇಶ ಐದನೇ ಸ್ಥಾನ ಪಡೆದು ಪಶ್ಚಿಮ ಬಂಗಾಳ ಆರನೇ ಸ್ಥಾನದಲ್ಲಿದೆ. ತಮಿಳುನಾಡು ಏಳು ಹಾಗೂ ರಾಜಸ್ಥಾನ ಎಂಟು ಸೇರಿದಂತೆ 9ನೇ ಸ್ಥಾನದಲ್ಲಿ ಪಂಜಾಬ್ ಇದ್ದು, ಕರ್ನಾಟಕ 10ನೇ ಸ್ಥಾನದಲ್ಲಿದೆ. ಅದರ ಸಂಪೂರ್ಣ ಮಾಹಿತಿ ಇರುವ ಗ್ರಾಫ್ ಇಲ್ಲಿದೆ.

Discover how many deaths in Police custody from last 5 years

ಒಟ್ನಲ್ಲಿ ದೇಶದಲ್ಲಿ ಪೊಲೀಸ್ ಕಸ್ಟಡಿಯಲ್ಲಿ ಮೃತಪಡುತ್ತಿರುವ ಆರೋಪಿಗಳ ಸಂಖ್ಯೆಯು ಏರಿಕೆ ಕಾಣುತ್ತಿರುವುದು ತೀವ್ರ ಚರ್ಚೆಗೆ ಗ್ರಾಸವಾಗಿದೆ. ಆಯಾ ರಾಜ್ಯ ಸರ್ಕಾರಗಳು, ಗೃಹ ಇಲಾಖೆಗಳು ಇಂಥ ಘಟನೆಗಳು ನಡೆದಾಗ ಕಠಿಣ ಕ್ರಮ ಕೈಗೊಳ್ಳುತ್ತಿವೆ. ಆದರೂ ಪರಿಸ್ಥಿತಿ ಇನ್ನೂ ಹಿಡಿತಕ್ಕೆ ಸಿಕ್ಕಿಲ್ಲ. ಅದರಲ್ಲೂ ಗುಜರಾತ್‌ನಲ್ಲಿ ಕಳೆದ 5 ವರ್ಷದಲ್ಲಿ ಬರೋಬ್ಬರಿ 81 ಜನರು ಮೃತಪಟ್ಟಿದ್ದಾರೆ. ಕರ್ನಾಟಕದಲ್ಲಿ ಇಂತಹ ಘಟನೆಗಳ ಪ್ರಮಾಣವು ಕಡಿಮೆ ಎನ್ನಬಹುದಾದರೂ, ಪೊಲೀಸ್ ಕಸ್ಟಡಿಯಲ್ಲಿ ಮೃತಪಟ್ಟವರ ಪಟ್ಟಿಯಲ್ಲಿ ಕರ್ನಾಟಕ 10ನೇ ಸ್ಥಾನ ಪಡೆದಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+