ಉತ್ತರಕಾಶಿ ಸುರಂಗ ಕಾರ್ಯಾಚರಣೆ ಬಗ್ಗೆ ಸಿಎಂ ಸಿದ್ದರಾಮಯ್ಯ ಹೇಳಿದ್ದೇನು
ಉತ್ತರಾಖಂಡದ ಉತ್ತರಕಾಶಿಯಲ್ಲಿ ನಿರ್ಮಾಣ ಹಂತದಲ್ಲಿದ್ದ ಸಿಲ್ಕ್ಯಾರಾ ಸುರಂಗ ಕುಸಿತವಾಗಿ, 41 ಕಾರ್ಮಿಕರು ಕಳೆದ 17 ದಿನಗಳಿಂದ ನರಳಾಡುತ್ತಿದ್ದರು. ಅವರನ್ನೆಲ್ಲಾ ಇದೀಗ ಬೃಹತ್ ಕಾರ್ಯಾಚರಣೆ ಮೂಲಕ ಸುರಕ್ಷಿತವಾಗಿ ಹೊರಗಡೆ ಕರೆದುಕೊಂಡು ಬರಲಾಗಿದೆ. ಹೀಗಾಗಿ ಸಿಎಂ ಸಿದ್ದರಾಮಯ್ಯ ಅವರು ಟ್ವೀಟ್ ಮೂಲಕ ಹೇಳಿದ್ದೇನು? ಕಾರ್ಯಾಚರಣೆ ಕುರಿತಾಗಿ ಕರ್ನಾಟಕ ಸಿಎಂ ಪ್ರತಿಕ್ರಿಯೆ ಹೇಗಿತ್ತು?
ಇಡೀ ಜಗತ್ತೇ ಇಂದು ಉತ್ತರಾಖಂಡದ ಉತ್ತರಕಾಶಿ ಮೇಲೆ ಗಮನ ಇಟ್ಟು ಕುಳಿತಿತ್ತು. ಇದು ಯಾಕೆ ಅಂದ್ರೆ ಅಲ್ಲಿನ ಸುರಂಗದಲ್ಲಿ ಸಿಲುಕಿದ್ದ 41 ಕಾರ್ಮಿಕರ ಜೀವ ರಕ್ಷಣೆಗೆ, ಹಗಲು & ರಾತ್ರಿ ಲೆಕ್ಕಿಸದೆ ಹೋರಾಟ ನಡೆಯುತ್ತಿತ್ತು. ಹೀಗಿದ್ದಾಗಲೆ ಇಂದು ಸಂಜೆ ವೇಳೆಗೆ ಸಿಹಿಸುದ್ದಿ ಸಿಕ್ಕಿದ್ದು, 41 ಕ್ಕೆ 41 ಕಾರ್ಮಿಕರು ಸುರಕ್ಷಿತವಾಗಿ ಹೊರಗೆ ಬಂದು ತಮ್ಮ ಕುಟುಂಬಗಳನ್ನು ಸೇರಿದ್ದಾರೆ. ಹೀಗಾಗಿ ಇಡೀ ದೇಶಕ್ಕೆ ದೇಶ ಸುರಂಗ ತಜ್ಞರನ್ನು ಮತ್ತು ಈ ಕಾರ್ಯಾಚರಣೆಗೆ ಸಹಕರಿಸಿದ ಪ್ರತಿಯೊಬ್ಬರನ್ನೂ ಸ್ಮರಿಸುತ್ತಿದೆ. ಇದೇ ಸಮಯದಲ್ಲಿ, ಸಿಎಂ ಸಿದ್ದರಾಮಯ್ಯ ಅವರು ಕೂಡ ಪ್ರತಿಕ್ರಿಯೆ ನೀಡಿದ್ದಾರೆ.

ಕಾರ್ಯಾಚರಣೆ ಬಗ್ಗೆ ಸಿಎಂ ಪ್ರತಿಕ್ರಿಯೆ
ಸಿಎಂ ಸಿದ್ದರಾಮಯ್ಯ ಅವರು ಈ ಬಗ್ಗೆ ಟ್ವೀಟ್ ಮಾಡಿದ್ದು, 'ಸತತ ಹದಿನೇಳು ದಿನಗಳ ರಕ್ಷಣಾ ಕಾರ್ಯಾಚರಣೆ ನಂತರ ಉತ್ತರಾಖಂಡದ ಸುರಂಗದೊಳಗೆ ಸಿಲುಕಿಕೊಂಡಿದ್ದ ಎಲ್ಲಾ 41 ಕಾರ್ಮಿಕರು ಸುರಕ್ಷಿತವಾಗಿ ಹೊರಬಂದಿರುವುದು ನೋಡಿ ಅತ್ಯಂತ ಖುಷಿಯಾಯಿತು. ಈ ಸವಾಲಿನ ಕಾರ್ಯಾಚರಣೆಯಲ್ಲಿ ಪಾಲ್ಗೊಂಡ ಎಲ್ಲಾ ರಕ್ಷಣಾ ಸಿಬ್ಬಂದಿಗಳಿಗೆ ಧನ್ಯವಾದಗಳು. ನಿಮ್ಮ ಶ್ರಮ ಮತ್ತು ನಿರಂತರ ಪ್ರಯತ್ನದಿಂದ ಸುರಂಗದೊಳಗೆ ಸಿಲುಕಿದ್ದ ಕಾರ್ಮಿಕರಿಗೆ ಮರುಹುಟ್ಟು ಸಿಕ್ಕಂತಾಗಿದೆ. ಕೋಟ್ಯಂತರ ಭಾರತೀಯರ ಹಾರೈಕೆಗಳು, ಕಾರ್ಮಿಕರ ಕುಟುಂಬ ಸದಸ್ಯರ ಪ್ರಾರ್ಥನೆ ಈ ಕ್ಷಣ ಫಲ ನೀಡಿದೆ.' ಎಂದಿದ್ದಾರೆ.
ಸತತ ಹದಿನೇಳು ದಿನಗಳ ರಕ್ಷಣಾ ಕಾರ್ಯಾಚರಣೆ ನಂತರ ಉತ್ತರಾಖಂಡದ ಸುರಂಗದೊಳಗೆ ಸಿಲುಕಿಕೊಂಡಿದ್ದ ಎಲ್ಲಾ 41 ಕಾರ್ಮಿಕರು ಸುರಕ್ಷಿತವಾಗಿ ಹೊರಬಂದಿರುವುದು ನೋಡಿ ಅತ್ಯಂತ ಖುಷಿಯಾಯಿತು. ಈ ಸವಾಲಿನ ಕಾರ್ಯಾಚರಣೆಯಲ್ಲಿ ಪಾಲ್ಗೊಂಡ ಎಲ್ಲಾ ರಕ್ಷಣಾ ಸಿಬ್ಬಂದಿಗಳಿಗೆ ಧನ್ಯವಾದಗಳು.
— CM of Karnataka (@CMofKarnataka) November 28, 2023
ನಿಮ್ಮ ಶ್ರಮ ಮತ್ತು ನಿರಂತರ ಪ್ರಯತ್ನದಿಂದ ಸುರಂಗದೊಳಗೆ ಸಿಲುಕಿದ್ದ…
ಘಟನೆ ನಡೆದಿದ್ದು ಹೇಗೆ?
17 ದಿನಗಳ ಹಿಂದೆ ಅಂದ್ರೆ ನ. 12 ರಂದು, ಉತ್ತರಾಖಂಡದ ಉತ್ತರಕಾಶಿಯಲ್ಲಿ ನಿರ್ಮಾಣ ಹಂತದಲ್ಲಿ ಇದ್ದ ಸಿಲ್ಕ್ಯಾರಾ ಸುರಂಗ ಕುಸಿತವಾಗಿತ್ತು. ಆದ್ರೆ ದಿಢೀರ್ ಹೀಗೆ ಸುರಂಗ ಕುಸಿತ ಕಂಡ ಕಾರಣ ಅದರೊಳಗೆ ಸಿಲುಕಿದ್ದ 41 ಕಾರ್ಮಿಕರು ನರಳಾಡಿಬಿಟ್ಟರು. ಹೀಗಾಗಿ ಅವರ ರಕ್ಷಣೆಗಾಗಿ ಕಳೆದ 17 ದಿನದಿಂದ ಜಗತ್ತಿನ ವಿವಿಧ ದೇಶಗಳಿಂದ ಬಂದಿದ್ದ, ತಜ್ಞರ ಸಹಾಯ ಪಡೆದು ಕಾರ್ಯಾಚರಣೆ ನಡೆಸಲಾಗಿತ್ತು. ಇದೀಗ ಕಾರ್ಯಾಚರಣೆ ಯಶಸ್ವಿಯಾಗಿ ನಡೆದು, 41 ಕಾರ್ಮಿಕರನ್ನು ಒಬ್ಬೊಬ್ಬರಾಗಿ ಹೊರಗಡೆ ತರಲಾಗಿದೆ.
'ರ‍್ಯಾಟ್ ಹೋಲ್' ತಂತ್ರದ ಮೊರೆ
41 ಜನರ ಜೀವ ಉಳಿಸಲು ಹಲವು ತಂತ್ರ ಪ್ರಯೋಗ ಮಾಡಿದ್ದರು ತಜ್ಞರು. ಕಾರ್ಮಿಕರನ್ನ ಉಳಿಸಲು ರಕ್ಷಣಾ ತಂಡಗಳು ಅಂತಿಮವಾಗಿ ಬಂಡೆ ತೆರವುಗೊಳಿಸಿದ್ದವು. ಇಷ್ಟೆಲ್ಲಾ ಮಾಡಿ, ಬಡ ಕಾರ್ಮಿಕರ ಜೀವ ಉಳಿಸಲು ಯತ್ನಿಸಿದರೂ ಅದು ಪ್ರಯೋಗಕ್ಕೆ ಬಂದಿರಲಿಲ್ಲ. ಇದೇ ಕಾರಣಕ್ಕೆ 'ರ‍್ಯಾಟ್ ಹೋಲ್' ತಂತ್ರಜ್ಞಾನದ ಮೊರೆ ಹೋಗಿ ರಂಧ್ರ ಕೊರೆದು ಒಟ್ಟಾರೆ 41 ಕಾರ್ಮಿಕರನ್ನು ರಕ್ಷಿಸಿ ಹೊರಗೆ ಕರೆತರಲಾಗಿದೆ. ಹೈಟೆಕ್ ಯಂತ್ರಗಳು ಅಥವಾ ಆಗರ್‌ಗಳು ಸುಮಾರು 60 ಮೀಟರ್ ಬಂಡೆಯನ್ನ ಕೊರೆಯಲು ವಿಫಲವಾದ ನಂತರ, 'ರ‍್ಯಾಟ್ ಹೋಲ್' ತಂತ್ರದ ಮೂಲಕ ಸುರಂಗ ಕೊರೆದು 41 ಜೀವಗಳನ್ನು ಇದೀಗ ಉಳಿಸಲಾಗಿದೆ.












Click it and Unblock the Notifications