Vadodara Expressway: ಮುಂಬೈ ಮಂದಿಗೆ ದೆಹಲಿ ದಾರಿ ಇನ್ನೂ ಹತ್ತಿರ!
ದೆಹಲಿ-ಮುಂಬೈ ಎಕ್ಸ್‌ಪ್ರೆಸ್‌ವೇ ಭಾರತದ ಭವಿಷ್ಯವನ್ನೇ ಬದಲಾಯಿಸಲು ಸಜ್ಜಾಗಿದೆ. ಇದೇ ಯೋಜನೆ ಮೂಲಕ ಭಾರತದ ರಾಜಧಾನಿ ದೆಹಲಿ ಹಾಗೂ ಆರ್ಥಿಕ ರಾಜಧಾನಿ ಮುಂಬೈಗೆ ನೇರ ಸಂಪರ್ಕ ಬೆಸೆಯಲಿದೆ. ಸುಮಾರು 1 ಲಕ್ಷ ಕೋಟಿ ರೂಪಾಯಿ ಮೊತ್ತದ ಯೋಜನೆ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ, ಬನ್ನಿ ತಿಳಿಯೋಣ.
ದೆಹಲಿ-ಮುಂಬೈ ಎಕ್ಸ್‌ಪ್ರೆಸ್‌ವೇ ಸುಮಾರು 1,382 ಕಿಲೋ ಮೀಟರ್ ಉದ್ದದ ಬೃಹತ್ ಹೆದ್ದಾರಿ ಯೋಜನೆ. ಈ ಪೈಕಿ ಗುಜರಾತ್ ಸೇರಿ ಮುಂಬೈ ಹಾಗೂ ಮಧ್ಯಪ್ರದೇಶದ ಜನರಿಗೂ ಇದರಿಂದ ಸಾಕಷ್ಟು ಉಪಯೋಗ ಇದೆ. ಅದರಲ್ಲೂ ಇತ್ತೀಚೆಗೆ ದೆಹಲಿ ಹಾಗೂ ಮುಂಬೈ ಎಕ್ಸ್‌ಪ್ರೆಸ್‌ವೇ ಹೆದ್ದಾರಿಯ ವಡೋದರಾ ಮಾರ್ಗವನ್ನು ಪ್ರಧಾನಿ ಉದ್ಘಾಟನೆ ಮಾಡಿದ್ದರು. ಈ ಮೂಲಕ ಇಷ್ಟುದಿನ ಪರದಾಡುತ್ತಾ ದೆಹಲಿ ಸೇರುತ್ತಿದ್ದ ಜನರಿಗೆ, ಇನ್ನು ಮುಂದೆ ಹಾಯಾಗಿ ಪ್ರಯಾಣ ಮಾಡಲು ಅನುಕೂಲ ಮಾಡಿದಂತಾಗಿದೆ. ಈಗ ದೆಹಲಿ ಹಾಗೂ ವಡೋದರಾ ನಡುವಿನ ಪ್ರಯಾಣ ಕೇವಲ 10 ಗಂಟೆಗೆ ಇಳಿಕೆ ಕಂಡಿದೆ.

ಟೋಲ್ ಚಾರ್ಜ್ ಎಷ್ಟಾಗುತ್ತೆ ಗೊತ್ತಾ?
ಮೊದಲೇ ಹೇಳಿದಂತೆ ದೆಹಲಿ-ಮುಂಬೈ ಎಕ್ಸ್‌ಪ್ರೆಸ್‌ವೇ ಸುಮಾರು 1,382 ಕಿಲೋ ಮೀಟರ್ ಉದ್ದ ಇದ್ದು, ಇಷ್ಟು ದೂರ ಕ್ರಮಿಸಲು ಸುಮಾರು 2,965 ರೂಪಾಯಿ ಟೋಲ್ ಚಾರ್ಜ್ ಆಗುತ್ತದೆ. ಅದೇ ರೀತಿ ದೆಹಲಿ ಮೂಲಕ ವಡೋದರಾಗೆ ಹೋಗಲು 903 ಕಿಲೋ ಮೀಟರ್ ದೂರ ಇದ್ದು, ಇದಕ್ಕೆ 1,977 ರೂಪಾಯಿ ಹಣ ನೀಡಬೇಕಿದೆ. ಇನ್ನು ಈ ಯೋಜನೆಯು 2024ಕ್ಕೆ ಪೂರ್ಣಗೊಳ್ಳುವ ಸಾಧ್ಯತೆ ಇದ್ದು, ಈಗಾಗಲೇ ಬಹುತೇಕ ಮಾರ್ಗ ಕಾರ್ಯಾಚರಣೆ ಆರಂಭಿಸಿದೆ. ಈ ಮೂಲಕ ಜನರ ಓಡಾಟಕ್ಕೆ ಅನುಕೂಲವಾಗುತ್ತಿದೆ. ದೆಹಲಿ-ಮುಂಬೈ ಎಕ್ಸ್‌ಪ್ರೆಸ್‌ವೇ ಸಂಪೂರ್ಣ ಯೋಜನೆಯ ವೆಚ್ಚ ಸುಮಾರು 1 ಲಕ್ಷ ಕೋಟಿ ರೂಪಾಯಿ.
Stunning views from Vadodara - Virar Section of Delhi-Mumbai Expressway. Limiting the distance for prosperous India. #PragatiKaHighway #GatiShakti
— Nitin Gadkari (@nitin_gadkari) January 21, 2023
PC- @cbdhage pic.twitter.com/BPnU6eCZwt
ರಾಷ್ಟ್ರ ರಾಜಧಾನಿ & ಆರ್ಥಿಕ ರಾಜಧಾನಿ!
ದೆಹಲಿ ರಾಷ್ಟ್ರ ರಾಜಧಾನಿಯಾಗಿದ್ದರೆ, ಷೇರು ಮಾರುಕಟ್ಟೆ ಸೇರಿದಂತೆ ದೇಶದ ಬಹುತೇಕ ವ್ಯಾಪಾರ ವಹಿವಾಟು ನಡೆಸುವ ಮುಂಬೈ ಭಾರತದ ಆರ್ಥಿಕ ರಾಜಧಾನಿ. ಹೀಗೆ ರಾಷ್ಟ್ರದ ರಾಜಧಾನಿ ಹಾಗೂ ಆರ್ಥಿಕ ರಾಜಧಾನಿ ನಡುವೆ ಈಗ ಓಡಾಡಲು ಸಾಕಷ್ಟು ಸಮಯವೂ ವ್ಯರ್ಥವಾಗುತ್ತಿದೆ. ಆದ್ರೆ ದೆಹಲಿ-ಮುಂಬೈ ಎಕ್ಸ್‌ಪ್ರೆಸ್‌ವೇ ಸಂಪೂರ್ಣವಾದರೆ ಈ ಯೋಜನೆ ಇತಿಹಾಸ ನಿರ್ಮಿಸಲಿದೆ. ಏಕೆಂದರೆ ಈಗಿನ ಲೆಕ್ಕಾಚಾರ ಪ್ರಕಾರ ದೆಹಲಿಯಿಂದ ಮುಂಬೈಗೆ ತಲುಪಲು ಇನ್ನು ಮುಂದೆ ಕೇವಲ 12 ಗಂಟೆ ಸಾಕಾಗಲಿದೆಯಂತೆ!
ಯಾವೆಲ್ಲಾ ರಾಜ್ಯಗಳಲ್ಲಿ ಸಾಗಲಿದೆ?
ಸುಮಾರು 1,382 ಕಿಲೋ ಮೀಟರ್ ಉದ್ದದ ಈ ಎಕ್ಸ್‌ಪ್ರೆಸ್‌ವೇ ದೆಹಲಿ, ಹರ್ಯಾಣ ಸೇರಿ ರಾಜಸ್ಥಾನ, ಮಧ್ಯಪ್ರದೇಶ, ಗುಜರಾತ್ & ಮಹಾರಾಷ್ಟ್ರ ರಾಜ್ಯಗಳಲ್ಲಿ ಹಾದು ಹೋಗಿದೆ. 1 ಲಕ್ಷ ಕೋಟಿ ರೂಪಾಯಿ ಮೊತ್ತದ ಯೋಜನೆಯಲ್ಲಿ ಈಗಾಗಲೇ 1,200 ಕಿಲೋ ಮೀಟರ್ ಉದ್ದದ ಹೆದ್ದಾರಿ ನಿರ್ಮಾಣ ಪೂರ್ಣವಾಗಿದೆ. 2018ರಲ್ಲಿ ಯೋಜನೆಗೆ ಶರವೇಗವು ಸಿಕ್ಕಿತ್ತು. ಇನ್ನು 2024ರಲ್ಲಿ ಯೋಜನೆ ಪೂರ್ಣಗೊಳ್ಳುವ ಸಾಧ್ಯತೆ ಇದೆ. ಈ ಮೂಲಕ ಮುಂಬೈ & ದೆಹಲಿ ನಡುವಿನ ಪ್ರಯಾಣದ ಸಮಯ ಕೇವಲ 12 ಗಂಟೆಗೆ ಇಳಿಕೆ ಕಾಣಲಿದೆ.












Click it and Unblock the Notifications