chhattisgarh Elections: ಕಾಂಗ್ರೆಸ್ ಕೈ ಕೊಟ್ಟು ಮತ್ತೆ ಬಿಜೆಪಿ ಕೈಹಿಡಿದ ಮತದಾರ ಪ್ರಭು!
2024ರ ಲೋಕಸಭೆ ಚುನಾವಣೆ ಬಿಜೆಪಿ ಪಕ್ಷಕ್ಕೆ ಮತ್ತೊಮ್ಮೆ ಭರ್ಜರಿ ಜಯ ತಂದುಕೊಡಲಿದ್ದು, ಪ್ರಧಾನಿ ನರೇಂದ್ರ ಮೋದಿ ಅವರ ಸರ್ಕಾರ ಹ್ಯಾಟ್ರಿಕ್ ಬಾರಿಸಲಿದೆ. ಅಷ್ಟಕ್ಕು ಈ ಮಾತು ಹೇಳುತ್ತಿದ್ದ ಬಿಜೆಪಿ ಬೆಂಬಲಿಗರಿಗೆ ಹಾಗೂ ನಾಯಕರಿಗೆ ಇಂದು ಸಿಹಿಸುದ್ದಿ ಸಿಕ್ಕುಬಿಟ್ಟಿದೆ. ಪಂಚರಾಜ್ಯ ಚುನಾವಣೆ ಅಖಾಡದಲ್ಲಿ ಸಮೀಕ್ಷೆಗಳ ಫಲಿತಾಂಶ ಸುಳ್ಳಾಗಿದ್ದು, ಕಾಂಗ್ರೆಸ್ ಕೈ ಕೊಟ್ಟು ಮತ್ತೆ ಬಿಜೆಪಿ ಕೈಹಿಡಿದಿದ್ದಾನೆ ಮತದಾರ ಪ್ರಭು!
ಛತ್ತೀಸ್‌ಗಢ, ಮಧ್ಯಪ್ರದೇಶ, ರಾಜಸ್ಥಾನ, ತೆಲಂಗಾಣ, ಮಿಜೋರಾಂ ಎಲೆಕ್ಷನ್ ನಡೆದಿದ್ದು ಇಂದು 4 ರಾಜ್ಯಗಳ ಫಲಿತಾಂಶ ಹೊರಬಿದ್ದಿದೆ. ಹೀಗೆ ಹೊರಬಿದ್ದಿರುವ 4 ರಾಜ್ಯದ ರಿಸಲ್ಟ್ ಪೈಕಿ ಈಗಾಗಲೇ ರಾಜಸ್ಥಾನ ಮತ್ತು ಮಧ್ಯಪ್ರದೇಶ ರಾಜ್ಯದಲ್ಲಿ ಬಿಜೆಪಿ ಭರ್ಜರಿ ಗೆಲುವನ್ನು ಕಂಡಿದೆ. ಹಾಗೇ ಛತ್ತೀಸ್‌ಗಢ ಅಖಾಡದಲ್ಲೂ ಕಾಂಗ್ರೆಸ್‌ಗೆ ಸೋಲು ಕರುಣಿಸುತ್ತಿದೆ ಬಿಜೆಪಿ. ಈ ಸಮಯದಲ್ಲೇ ಸೋಲಿನ ಪರಿಣಾಮ, ಕಾಂಗ್ರೆಸ್ ನಾಯಕರು ಕೈ-ಕೈ ಹಿಸುಕಿಕೊಳ್ಳುವ ಪರಿಸ್ಥಿತಿ ನಿರ್ಮಾಣವಾಗಿದೆ.

ಹಾಫ್ ಸೆಂಚ್ಯುರಿ ಬಾರಿಸಿದ ಬಿಜೆಪಿ!
ಇದೀಗ ಛತ್ತೀಸ್‌ಗಢ ರಾಜ್ಯದಲ್ಲಿ ಬಿಜೆಪಿ ಪಕ್ಷ 52 ಸ್ಥಾನದಲ್ಲಿ ಬಹುತೇಕ ಗೆಲುವು ಸಾಧಿಸಿದ್ದರೆ, ಕಾಂಗ್ರೆಸ್ ಕೇವಲ 36 ಸ್ಥಾನದಲ್ಲಿ ಬಹುತೇಕ ಗೆಲುವು ಸಾಧಿಸಿದೆ. ಹೀಗಾಗಿ ಭಾಗಶಃ ಛತ್ತೀಸ್‌ಗಢ ಬಿಜೆಪಿ ತೆಕ್ಕೆಗೆ ಬಿದ್ದಂತಾಗಿದೆ. ಇನ್ನೇನು ಕೆಲ ಕ್ಷಣದಲ್ಲಿ ಅಂತಿಮ ಫಲಿತಾಂಶ ಹೊರಬೀಳಲಿದೆ. ಇಷ್ಟುದಿನ ಭರ್ಜರಿ ಜಯದ ನಿರೀಕ್ಷೆಯಲ್ಲಿ ಇದ್ದ ಛತ್ತೀಸ್‌ಗಢ ಕಾಂಗ್ರೆಸ್ ನಾಯಕರಿಗೆ ಈಗ ಆಘಾತ ಎದುರಾಗಿದೆ.
ಖುದ್ದು ಸಿಎಂಗೂ ಸೋಲಿನ ಭೀತಿ!
ಛತ್ತೀಸ್‌ಗಢ ರಾಜ್ಯದಲ್ಲಿ ಹಾಲಿ ಸಿಎಂ ಮತ್ತು ಕಾಂಗ್ರೆಸ್ ಅಭ್ಯರ್ಥಿ ಭೂಪೇಶ್ ಬಘೇಲ್ 407 ಮತ ಅಂತರದಲ್ಲಿ ಹಿನ್ನಡೆ ಅನುಭವಿಸಿದ್ದಾರೆ. ಹೀಗೆ ಭಾಗಶಃ ಛತ್ತೀಸ್‌ಗಢ ಬಿಜೆಪಿ ತೆಕ್ಕೆಗೆ ಬಿದ್ದಂತಾಗಿದೆ. ಇನ್ನೇನು ಕೆಲ ಕ್ಷಣದಲ್ಲಿ ಅಂತಿಮ ರಿಸಲ್ಟ್ ಹೊರಬೀಳಲಿದ್ದು, ಹೀಗಿದ್ದಾಗ ದೊಡ್ಡ ಅಂತರದ ಗೆಲುವು ಸಾಧಿಸುವ ನಿರೀಕ್ಷೆಯಲ್ಲಿ ಇದ್ದ ಕಾಂಗ್ರೆಸ್ ಪಕ್ಷದ ವರಿಷ್ಠರಿಗೂ ಭಾರಿ ಶಾಕ್ ಸಿಕ್ಕಂತಾಗಿದೆ. ಕಾಂಗ್ರೆಸ್‌ನ ಛತ್ತೀಸ್‌ಗಢ ನಾಯಕರು ಕೂಡ ಈಗ ಚಿಂತೆಯಲ್ಲಿ ಮುಳುಗಿದ್ದಾರೆ.
ಒಟ್ನಲ್ಲಿ ಛತ್ತೀಸ್‌ಗಢದಲ್ಲಿ ಕಾಂಗ್ರೆಸ್ ಸೋಲಿಗೆ ಹತ್ತಿರವಾಗಿದೆ ಮಧ್ಯ ಭಾರತದಲ್ಲಿ ಕಾಂಗ್ರೆಸ್ ಅಧಿಕಾರದಲ್ಲಿ ಇದ್ದ ರಾಜ್ಯ ಕೈತಪ್ಪಿದೆ. ಮತ್ತೊಂದೆಡೆ ರಾಜಸ್ಥಾನ ಕೂಡ ಹಿಂಗೆ ಆಗಿದ್ದು, ಮಧ್ಯಪ್ರದೇಶ ಸ್ಥಿತಿ ಇನ್ನೂ ಹೀನಾಯವಾಗಿದೆ. ಇದೆಲ್ಲವನ್ನೂ ನೋಡುತ್ತಿದ್ದರೆ ಲೋಕಸಭೆ ಮೊದಲು ಕಾಂಗ್ರೆಸ್‌ಗೆ ದೊಡ್ಡ ಸವಾಲು ಎದುರಾಗುವುದು ಪಕ್ಕಾ. ಇದರ ಜತೆ ಇಂಡಿಯಾ ಒಕ್ಕೂಟ ಕೂಡ ಸಾಲು ಸಾಲು ಸವಾಲು ಎದುರಿಸುವ ಭೀತಿ ಆವರಿಸಿದೆ.












Click it and Unblock the Notifications