ಬೆಂಗಳೂರಲ್ಲಿ ಬ್ಯುಸಿನೆಸ್‌ಮ್ಯಾನ್, ಈಗ ರಾಜಸ್ಥಾನದ ವಿಧಾನಸಭೆಗೆ ಶಾಸಕ!
ರಾಜಧಾನಿ ಬೆಂಗಳೂರಿನಲ್ಲಿ ಕನ್ನಡಿಗರನ್ನ ಬಿಟ್ಟು ಬೇರೆ ಬೇರೆ ರಾಜ್ಯದಿಂದ ಬಂದ ಜನಗಳ ಸಂಖ್ಯೆಯೇ ಹೆಚ್ಚು. ಹೀಗಾಗಿ ಬೆಂಗಳೂರಲ್ಲಿ ಇನ್ನು ಕೆಲವೇ ವರ್ಷಗಳಲ್ಲಿ ಕನ್ನಡವೆ ಖಾಲಿ ಆಗುತ್ತೆ ಎಂಬ ಭಯ ಆವರಿಸಿದೆ. ಹೀಗಿದ್ದಾಗ ಬೆಂಗಳೂರಲ್ಲಿ ನೆಲೆಸಿದ್ದ ಉದ್ಯಮಿಯೊಬ್ರು, ಇದೀಗ ರಾಜಸ್ಥಾನದ ವಿಧಾನಸಭೆ ಚುನಾವಣೆಯಲ್ಲಿ ಭರ್ಜರಿ ಗೆಲುವು ಸಾಧಿಸಿದ್ದಾರೆ! ಅರೆ ಅದು ಹೇಗೆ ಸಾಧ್ಯವಾಯ್ತು ಅಂದ್ರಾ? ರಿಯಲ್ ಸ್ಟೋರಿಯ, ಕಂಪ್ಲೀಟ್ ಕಹಾನಿ ಇಲ್ಲಿದೆ.
ಹೌದು, ರಾಜಸ್ಥಾನ ವಿಧಾನಸಭಾ ಅಖಾಡದಲ್ಲಿ ಕಾಂಗ್ರೆಸ್‌ಗೆ ಖೆಡ್ಡಾ ತೋಡಿದ ಬಿಜೆಪಿಯ ನಾಯಕರು ಭರ್ಜರಿ ಗೆಲುವು ಸಾಧಿಸಿದ್ದಾರೆ. 199 ಸದಸ್ಯ ಬಲದ ರಾಜಸ್ಥಾನದಲ್ಲಿ ಇದೀಗ ಬಿಜೆಪಿ ಭರ್ಜರಿ ಗೆಲುವಿನೊಂದಿಗೆ ಅಧಿಕಾರ ಹಿಡಿದಿದ್ದು, 115 ಸ್ಥಾನಗಳಲ್ಲಿ ಬಿಜೆಪಿಗೆ ಜಯ ಸಿಕ್ಕಿದೆ. ಹೀಗಿದ್ದಾಗ ಬೆಂಗಳೂರು ವ್ಯಾಪಾರಿ ರಾಜಸ್ಥಾನಕ್ಕೆ ಹೋಗಿ ಶಾಸಕನಾದ ವಿಚಾರದ ಬಗ್ಗೆ ಸಾಕಷ್ಟು ಚರ್ಚೆ ಶುರುವಾಗಿದೆ. ಹಾಗಾದರೆ ಯಾರು ಆ ಬೆಂಗಳೂರಿನ ವ್ಯಾಪಾರಿ..? ಈ ವ್ಯಾಪಾರಿ ರಾಜಸ್ಥಾನದ ವಿಧಾನಸಭೆ ಚುನಾವಣೆಯಲ್ಲಿ ಗೆದ್ದಿದ್ದು ಹೇಗೆ?

ಭರ್ಜರಿ 1.17 ಲಕ್ಷ ಮತ!
ಹೌದು ಇದು ಬೆಂಗಳೂರಿನ ಉದ್ಯಮಿ ಒಬ್ಬರು, ರಾಜಸ್ಥಾನ ಶಾಸಕರಾಗಿ ಆಯ್ಕೆಯಾಗಿರುವ ಕಥೆ. ಅಂದಹಾಗೆ ಬೆಂಗಳೂರು ನಗರದ, ಚಿಕ್ಕಪೇಟೆಯ ಬಟ್ಟೆ ವ್ಯಾಪಾರಿ ಇದೀಗ ರಾಜಸ್ಥಾನದ ಸಹಾರಾ ಕ್ಷೇತ್ರದ ಶಾಸಕರಾಗಿ ಆಯ್ಕೆಯಾಗಿದ್ದಾರೆ. ಈ ಬಾರಿಯ ರಾಜಸ್ಥಾನ ಚುನಾವಣೆಯಲ್ಲಿ 1.17 ಲಕ್ಷ ಮತ ಗಳಿಸಿ, ಲಾಡುಲಾಲ ಪಿಟ್ಲಿಯಾ ಎನ್ನುವವರು ಜಯ ಗಳಿಸಿದ್ದಾರೆ.
ಈ ವ್ಯಕ್ತಿ ಬೇರೆ ಯಾರೂ ಅಲ್ಲ ಬೆಂಗಳೂರಿನ ಚಿಕ್ಕಪೇಟೆಯಲ್ಲಿ ಬಟ್ಟೆ ವ್ಯಾಪಾರ ನಡೆಸುತ್ತಿರುವವರು. ಪಿಟ್ಲಿಯಾ ಅವರ ಪ್ರತಿಸ್ಪರ್ಧಿ ಕಾಂಗ್ರೆಸ್‌ನ ಅಭ್ಯರ್ಥಿ ರಾಜೇಂದ್ರ ತ್ರಿವೇದಿ 54,684 ಪಡೆದಿದ್ದರೆ ಲಾಡುಲಾಲ ಪಿಟ್ಲಿಯಾ ಅವರು ಬರೋಬ್ಬರಿ 1.17 ಲಕ್ಷ ಮತ ಗಳಿಸಿದ್ದಾರೆ.

ಬೆಂಗಳೂರಿನಲ್ಲೇ ಬಂಗಲೆ ಇದೆ!
ಇಷ್ಟು ಮಾತ್ರವಲ್ಲ, ಬೆಂಗಳೂರಿನ ರಾಜಾಜಿನಗರ ಜುಗನಹಳ್ಳಿಯ 2ನೇ ಬ್ಲಾಕ್‌ನ ಬಂಗಲೆಯಲ್ಲಿ ಪಿಟ್ಲಿಯಾ ವಾಸವಾಗಿದ್ದರು. ಚಿಕ್ಕಪೇಟೆಯಲ್ಲಿ ಜವಳಿ ವ್ಯಾಪಾರವನ್ನು ನಡೆಸುತ್ತಿದ್ದರು. ಸದ್ಯ ಅವರ ಮಕ್ಕಳು ಆ ವ್ಯಾಪಾರ ಮುಂದುವರೆಸಿಕೊಂಡು ಹೋಗುತ್ತಿದ್ದಾರಂತೆ. ಈಗ ಪಿಟ್ಲಿಯಾ ಅವರು ರಾಜಸ್ಥಾನದ ಶಾಸಕರಾಗಿ ಆಯ್ಕೆ ಆಗಿದ್ದಾರೆ. 2018ರಲ್ಲಿ ರಾಜಸ್ಥಾನದ ವಿಧಾನ ಸಭೆ ಚುನಾವಣೆಯಲ್ಲಿ ಪಿಟ್ಲಿಯಾ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದರು.
ದೇಶದ ಗಮನ ಸೆಳೆದ ಸುದ್ದಿ
ಇನ್ನು 2018ರಲ್ಲಿ, ರಾಜಸ್ಥಾನದ ವಿಧಾನಸಭೆ ಚುನಾವಣೆಯಲ್ಲಿ ಪಿಟ್ಲಿಯಾ ಅವರು ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಹಿನ್ನೆಲೆ ಬಿಜೆಪಿಗೆ ಸಮಸ್ಯೆ ಆಗಿತ್ತು ಎನ್ನಲಾಗಿದೆ. ಒಟ್ನಲ್ಲಿ ಈ ಮೂಲಕ ಆಗ ಸೋತರು ಮತ್ತೊಮ್ಮೆ ಪ್ರಯತ್ನ ಮಾಡಿ ಬೆಂಗಳೂರು ಮೂಲದ ಉದ್ಯಮಿ ಈಗ ರಾಜಸ್ಥಾನದ ಶಾಸಕರಾಗಿದ್ದಾರೆ. ಇದು ದೇಶದ ಗಮನ ಸೆಳೆಯುತ್ತಿರುವುದು ಸುಳ್ಳಲ್ಲ.












Click it and Unblock the Notifications