Tirupati- Tirumala: ದೇವಸ್ಥಾನದ ಆವರಣದಲ್ಲಿ ನಟಿ ಕೃತಿ ಸನನ್‌, ನಿರ್ದೇಶಕ ಓಂ ರಾವುತ್ ಕಿಸ್‌- ಬೆಂಕಿ ಹೊತ್ತಿಸಿದ ವಿವಾದ

ತಿರುಪತಿ, ಜೂನ್‌ 08: ಪ್ರಭಾಸ್, ಕೃತಿ ಸನೋನ್, ಸನ್ನಿ ಸಿಂಗ್ ಮತ್ತು ಓಂ ರಾವತ್ ಸೇರಿದಂತೆ 'ಆದಿಪುರುಷ' ಚಿತ್ರತಂಡ ನಿನ್ನೆ ರಾತ್ರಿ ತಿರುಪತಿಯಲ್ಲಿ ಚಿತ್ರದ ಅಂತಿಮ ಟ್ರೇಲರ್ ಅನ್ನು ಬಿಡುಗಡೆ ಮಾಡಿದೆ. ಜೂನ್ 7 ರಂದು, ಓಂ ರಾವತ್ ಮತ್ತು ಕೃತಿ ಸನೊನ್‌ ತಿರುಪತಿಯ ವೆಂಕಟೇಶ್ವರ ದೇವಸ್ಥಾನದಲ್ಲಿ ಕಾಣಿಸಿಕೊಂಡರು.

ಆದಿಪುರುಷ್‌ ಚಿತ್ರತಂಡದ ಭೇಟಿಯು ಈಗಾಗಲೇ ದೊಡ್ಡ ಸುದ್ದಿಯನ್ನು ಮಾಡಿದೆ. ತೆಲುಗು ನಟ ಪ್ರಭಾಸ್‌ ಅವರು ತಿರುಪತಿಯ ದೇವಸ್ಥಾನಕ್ಕೆ ಭೇಟಿ ವೆಂಕಟೇಶ್ವರನ ಆಶೀರ್ವಾದ ಪಡೆದರು. ಇದಾದ ಬಳಿಕ ಚಿತ್ರತಂಡದ ನಾಯಕಿ ಕೃತಿ ಸನನ್‌ ಸೇರಿದಂತೆ ನಿರ್ದೇಶಕ ಓ ರಾಹುತ್‌ ದೇವಸ್ಥಾನದಕ್ಕೆ ಭೇಟಿ ನೀಡಿದರು.

Director Om Raut and Kriti Sanons Goodbye Kiss At Tirupati Creates Outrages in BJP Leader

ದೇವಾಲಯದ ಆವರಣದ ಹೊರಗೆ ಓಂ ರಾವತ್‌ ಅವರು ಕೃತಿ ಸನನ್‌ಗೆ ವಿದಾಯ ಹೇಳಿದರು. ಆ ಸಮಯದಲ್ಲಿ ಕೃತಿ ಸನನ್‌ ಹಾಗು ನಿರ್ದೇಶಕ ಓ ರಾವತ್‌ ಅವರು ಚುಂಬಿಸುವ ವಿಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ಅವರು ಚುಂಬಿಸಿ ಫ್ಲೈಯಿಂಗ್‌ ಕಿಸ್‌ ಕೊಡುವ ಮೂಲಕ ಭಾರೀ ವಿವಾದಕ್ಕೆ ಕಾರಣರಾಗಿದ್ದಾರೆ. ಬಿಜೆಪಿ ನಾಯಕರೊಬ್ಬರು ಇದನ್ನು ಪ್ರಶ್ನಿಸಿ ಟ್ವೀಟ್ ಮಾಡಿದ್ದಾರೆ.

ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿರುವ ವಿಡಿಯೊದಲ್ಲಿ, ಚಲನಚಿತ್ರ ನಿರ್ದೇಶಕರು ಕೃತಿಗೆ ವಿದಾಯ ಹೇಳುವಾಗ ಆಕೆಯ ಕೆನ್ನೆಗೆ ಚುಂಬಿಸುತ್ತಿರುವುದನ್ನು ಕಾಣಬಹುದು. ಇದರ ವಿಡಿಯೊ ತುಣುಕನ್ನು ಬಿಜೆಪಿ ರಾಜ್ಯ ಕಾರ್ಯದರ್ಶಿ ರಮೇಶ್ ನಾಯ್ಡು ನಗೋತು ಹಂಚಿಕೊಂಡು ಆಕ್ರೋಶ ವ್ಯಕ್ತಪಡಿಸಿದ್ದಾರೆ.

'ನಿಮ್ಮ ಚೇಷ್ಟೆಗಳನ್ನು ಪವಿತ್ರ ಸ್ಥಳಕ್ಕೆ ತರುವುದು ನಿಜವಾಗಿಯೂ ಅಗತ್ಯವಿದೆಯೇ? ತಿರುಮಲದ ವೆಂಕಟೇಶ್ವರ ಸ್ವಾಮಿ ದೇವಾಲಯದ ಮುಂದೆ ಚುಂಬನ ಮತ್ತು ಅಪ್ಪುಗೆಯಂತಹ ಕ್ರಿಯೆಗಳನ್ನು ಸಾರ್ವಜನಿಕವಾಗಿ ಪ್ರದರ್ಶಿಸುವುದು ಅಗೌರವ ಮತ್ತು ಸ್ವೀಕಾರಾರ್ಹವಲ್ಲ' ಎಂದು ರಮೇಶ್‌ ನಾಯ್ಡು ಆರೋಪಿಸಿದ್ದಾರೆ.

Director Om Raut and Kriti Sanons Goodbye Kiss At Tirupati Creates Outrages in BJP Leader

ದೇವಸ್ಥಾನಕ್ಕೆ ಭೇಟಿ ನೀಡಿದ ಬಗ್ಗೆ ಟ್ವೀಟ್‌ ಮಾಡಿರುವ ನಿರ್ದೇಶಕ ಓಂ ರಾವುತ್, 'ದೇವಸ್ಥಾನಕ್ಕೆ ಬಂದ ನಂತರ, ನನಗೆ ತುಂಬಾ ಸಂತಸವಾಗಿದೆ. ನಾನು ಸಂತೋಷವನ್ನು ಅನುಭವಿಸಿದೆ. ನಾವು ಇಂದು ಬೆಳಿಗ್ಗೆ ಉತ್ತಮ ದರ್ಶನವನ್ನು ಮಾಡಿದ್ದೇವೆ. ನಿನ್ನೆ, ನಾವು ಟ್ರೇಲರ್ ಅನ್ನು ಬಿಡುಗಡೆ ಮಾಡಿದ್ದೇವೆ. ಇದು ಒಂದು ಮೋಡಿಮಾಡುವ ಭಾವನೆಯಾಗಿದೆ ಮತ್ತು ನಾನು ಅದನ್ನು ಪದಗಳಲ್ಲಿ ಹೇಳಲು ಸಾಧ್ಯವಿಲ್ಲ' ಎಂದು ತಿಳಿಸಿದ್ದಾರೆ.

'ಆದಿಪುರುಷ' ಚಿತ್ರದಲ್ಲಿ ಸೈಫ್ ಅಲಿ ಖಾನ್ ಕೂಡ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಚಿತ್ರವು ಜೂನ್ 16 ರಂದು ಥಿಯೇಟರ್‌ಗಳಿಗೆ ಬರಲಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+