ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಡೆಲ್ಟಾಗಿಂತ ಡೆಲ್ಟಾ ಪ್ಲಸ್ ರೂಪಾಂತರ ಅಪಾಯಕಾರಿಯೇ? ಇಲ್ಲಿದೆ ಎರಡರ ನಡುವಣ ವ್ಯತ್ಯಾಸ

|
Google Oneindia Kannada News

ನವದೆಹಲಿ, ಜೂನ್ 23: ದೇಶದಲ್ಲಿ ಕೊರೊನಾ ಎರಡನೇ ಅಲೆಗೆ ಕಾರಣವಾದ ಡೆಲ್ಟಾ ರೂಪಾಂತರದ ನಂತರ, ಅದರದ್ದೇ ಮತ್ತೊಂದು ರೂಪಾಂತರ "ಡೆಲ್ಟಾ ಪ್ಲಸ್" ಪ್ರಕರಣಗಳು ಪತ್ತೆಯಾಗಿರುವುದು ಆತಂಕಕ್ಕೆ ಎಡೆಮಾಡಿಕೊಟ್ಟಿದೆ. ನೋಡನೋಡುತ್ತಿದ್ದಂತೆ ದೇಶದಲ್ಲಿ ಕೆಲವೇ ದಿನಗಳ ಅಂತರದಲ್ಲಿ ಡೆಲ್ಟಾ ಪ್ಲಸ್ ಪ್ರಕರಣಗಳು ಏರಿಕೆಯಾಗಿದ್ದು, ಈ ರೂಪಾಂತರದಿಂದಲೇ ಕೊರೊನಾ ಮೂರನೇ ಅಲೆ ಸೃಷ್ಟಿಯಾಗುವ ಎಚ್ಚರಿಕೆಯನ್ನು ತಜ್ಞರು ನೀಡಿದ್ದಾರೆ.

ಮಹಾರಾಷ್ಟ್ರದಲ್ಲಿ ಅತಿ ಹೆಚ್ಚಿನ ಡೆಲ್ಟಾ ಪ್ಲಸ್ ಪ್ರಕರಣಗಳು ದಾಖಲಾಗಿದ್ದು, ಮಂಗಳವಾರದಿಂದ ಹಲವು ರಾಜ್ಯಗಳಲ್ಲಿ ಈ ಸೋಂಕಿನ ಪ್ರಕರಣಗಳು ಬೆಳಕಿಗೆ ಬರುತ್ತಿವೆ. ಏಪ್ರಿಲ್ 5ರಂದು ಪರೀಕ್ಷಾ ಮಾದರಿಯೊಂದರಲ್ಲಿ ಈ ರೂಪಾಂತರ ಕಂಡುಬಂದಿದೆ. ಸದ್ಯಕ್ಕೆ ಭಾರತದಲ್ಲಿ ಈ ಪ್ರಕರಣಗಳ ಸಂಖ್ಯೆ ಕಡಿಮೆಯಿದ್ದರೂ ಅತಿ ವೇಗದಲ್ಲಿ ಹರಡುತ್ತಿರುವುದು ಆತಂಕಕ್ಕೆ ಕಾರಣವಾಗಿದೆ. ಈ ಸೋಂಕು ಅಪಾಯಕಾರಿಯಾಗುವ ಎಲ್ಲಾ ಲಕ್ಷಣಗಳೂ ಇವೆಯೆಂದು ತಜ್ಞರು ಎಚ್ಚರಿಕೆಯ ಗಂಟೆ ಬಾರಿಸಿದ್ದಾರೆ. ಡೆಲ್ಟಾಗೂ ಡೆಲ್ಟಾ ಪ್ಲಸ್ ರೂಪಾಂತರಕ್ಕೂ ಇರುವ ವ್ಯತ್ಯಾಸವೇನು? ಡೆಲ್ಟಾ ಪ್ಲಸ್ ಡೆಲ್ಟಾಗಿಂತ ಅಪಾಯಕಾರಿಯೇ? ಇಲ್ಲಿದೆ ಅದರ ವಿವರಣೆ...

 ಡೆಲ್ಟಾ, ಡೆಲ್ಟಾ ಪ್ಲಸ್ ರೂಪಾಂತರದ ವಿವರಣೆ...

ಡೆಲ್ಟಾ, ಡೆಲ್ಟಾ ಪ್ಲಸ್ ರೂಪಾಂತರದ ವಿವರಣೆ...

ಭಾರತದಲ್ಲಿ ಮೊದಲು ಡೆಲ್ಟಾ (B.1.617.2) ರೂಪಾಂತರ ಪತ್ತೆಯಾಗಿ, ದೇಶದಲ್ಲಿ ಕಳವಳಕಾರಿ ಪರಿಸ್ಥಿತಿಗೆ ಕಾರಣವಾಯಿತು. ಕೊರೊನಾ ಎರಡನೇ ಅಲೆಯಲ್ಲಿ ಏರಿದ ಸಾವು ನೋವಿಗೂ ಈ ರೂಪಾಂತರವೇ ಕಾರಣವಾಗಿತ್ತು. ಇದೀಗ ಇದೇ ರೂಪಾಂತರದಿಂದ ಮತ್ತೊಂದು ರೂಪಾಂತರ ಸೃಷ್ಟಿಯಾಗಿದೆ. ಅದೇ ಡೆಲ್ಟಾ ಪ್ಲಸ್ (B.1.617.2.1/(AY.1). ಈ ಸೋಂಕು ಪತ್ತೆಯಾದ ಆರಂಭಿಕ ದಿನಗಳಲ್ಲಿ ಇದು ಕಳವಳಕಾರಿ ಸೋಂಕು ಎಂದು ಪರಿಗಣಿಸಿರಲಿಲ್ಲ. ಆದರೆ ಕೆಲವೇ ದಿನಗಳ ಅಂತರದಲ್ಲಿ ದೇಶದಲ್ಲಿ 40 ಪ್ರಕರಣಗಳು ಪತ್ತೆಯಾಗಿದ್ದು, ಇದು ಮುಂದೆ ಅಪಾಯಕಾರಿ ರೂಪ ಪಡೆಯಬಹುದು ಎಂದು ತಜ್ಞರು ಎಚ್ಚರಿಕೆ ನೀಡಿದ್ದಾರೆ. ಡೆಲ್ಟಾ ಹಾಗೂ ಡೆಲ್ಟಾ ಪ್ಲಸ್ ರೂಪಾಂತರದ ನಡುವೆ K417N ಸ್ಪೈಕ್ ಪ್ರೊಟೀನ್‌ನ ವ್ಯತ್ಯಾಸವಿದೆ ಎಂದು ವಿವರಿಸಿದ್ದಾರೆ.

ಮೂರನೇ ಅಲೆಗೆ ಪ್ರಚೋದನೆಯೇ ಮೂರನೇ ಅಲೆಗೆ ಪ್ರಚೋದನೆಯೇ "ಡೆಲ್ಟಾ ಪ್ಲಸ್"? ಇದರ ಲಕ್ಷಣಗಳೇನು?

 ವಿಶ್ವವ್ಯಾಪಿ ಹರಡುತ್ತಿರುವ ಸೋಂಕು

ವಿಶ್ವವ್ಯಾಪಿ ಹರಡುತ್ತಿರುವ ಸೋಂಕು

ಡೆಲ್ಟಾ ರೂಪಾಂತರ ಭಾರತದಲ್ಲಿ ಕಂಡುಬಂದಿತ್ತು. ಡೆಲ್ಟಾ ಪ್ಲಸ್ ರೂಪಾಂತರವನ್ನು ಇಂಗ್ಲೆಂಡ್‌ನ ಪಬ್ಲಿಕ್ ಹೆಲ್ತ್ ಜೂನ್ 11ರ ಬುಲೆಟಿನ್‌ನಲ್ಲಿ ವರದಿ ಮಾಡಿದೆ. ಜೂನ್ 7ರ ಹೊತ್ತಿಗೆ ಭಾರತದ ಆರು ಜೆನೋಮ್‌ಗಳಲ್ಲಿ ಈ ಹೊಸ ರೂಪಾಂತರ ಪತ್ತೆಯಾಗಿದೆ ಎಂದು ವರದಿ ಹೇಳಿದೆ. ಭಾರತದಲ್ಲಿ ಪತ್ತೆಯಾದ ಡೆಲ್ಟಾ ರೂಪಾಂತರ ಸೋಂಕು ಬ್ರಿಟನ್‌ನಲ್ಲಿ 99% ಸೋಂಕು ಹರಡುವಿಕೆಗೆ ಕಾರಣವಾಗಿತ್ತು. ಇದೀಗ ಪತ್ತೆಯಾಗಿರುವ ಡೆಲ್ಟಾ ಪ್ಲಸ್ ಯುರೋಪ್, ಏಷ್ಯಾ, ಅಮೆರಿಕಾಗಳಲ್ಲಿಯೂ ಕಂಡುಬಂದಿದೆ. ಜೂನ್ 18ರವರೆಗೆ ವಿಶ್ವದಾದ್ಯಂತ 205 ಡೆಲ್ಟಾ ಪ್ಲಸ್ ಪ್ರಕರಣಗಳು ಪತ್ತೆಯಾಗಿವೆ. ಭಾರತದಲ್ಲಿ ಮಹಾರಾಷ್ಟ್ರ, ಮಧ್ಯಪ್ರದೇಶ, ಕೇರಳ, ಕರ್ನಾಟಕ, ತಮಿಳುನಾಡು, ಜಮ್ಮು, ಪಂಜಾಬ್ ಆಂಧ್ರಪ್ರದೇಶದಲ್ಲಿ ಪತ್ತೆಯಾಗಿದೆ.

 ಡೆಲ್ಟಾಗಿಂತ ಡೆಲ್ಟಾ ಪ್ಲಸ್ ವೇಗವಾಗಿ ಹರಡುವುದೇ?

ಡೆಲ್ಟಾಗಿಂತ ಡೆಲ್ಟಾ ಪ್ಲಸ್ ವೇಗವಾಗಿ ಹರಡುವುದೇ?

ದೇಶದಲ್ಲಿ ಡೆಲ್ಟಾ ರೂಪಾಂತರ ಎರಡನೇ ಅಲೆಗೆ ಕಾರಣವಾಗಿತ್ತು. ಈ ರೂಪಾಂತರದಿಂದ ಅತಿ ಹೆಚ್ಚು ಸಾವಿನ ಪ್ರಕರಣಗಳು ದಾಖಲಾದವು. ಕೊರೊನಾ ಮೊದಲ ಅಲೆ ವಯಸ್ಸಾದವರನ್ನು ಹೆಚ್ಚು ಕಾಡಿದ್ದರೆ, ಎರಡನೇ ಅಲೆ ಯುವಜನರು, ಮಧ್ಯವಯಸ್ಕರ ಮೇಲೇ ಪರಿಣಾಮ ಬೀರಿತ್ತು. ಹಲವು ದೇಶಗಳು ಡೆಲ್ಟಾ ರೂಪಾಂತರ ಅಪಾಯಕಾರಿ ಎಂದು ಪರಿಗಣಿಸಿ ಸೋಂಕು ಹರಡುವಿಕೆ ತಡೆಗೆ ನಿರ್ಬಂಧಗಳನ್ನು ಹೇರಿದ್ದವು.

ಡೆಲ್ಟಾ ಪ್ಲಸ್; ಕರ್ನಾಟಕಕ್ಕೆ ನೆರೆ ರಾಜ್ಯಗಳಿಂದಲೇ ಅಪಾಯಡೆಲ್ಟಾ ಪ್ಲಸ್; ಕರ್ನಾಟಕಕ್ಕೆ ನೆರೆ ರಾಜ್ಯಗಳಿಂದಲೇ ಅಪಾಯ

ಇದೀಗ ಡೆಲ್ಟಾ ಪ್ಲಸ್ ಡೆಲ್ಟಾಗಿಂತ ಅಪಾಯಕಾರಿಯಾಗುವ ಎಚ್ಚರಿಕೆ ನೀಡಲಾಗಿದೆ. ಇದು ಮೂರನೇ ಅಲೆಗೆ ಪ್ರಚೋದನೆ ನೀಡಬಹುದು ಎಂದು ವಿಜ್ಞಾನಿಗಳು ತಿಳಿಸಿದ್ದಾರೆ. ಆಲ್ಫಾ ಸೋಂಕಿಗೆ ಹೋಲಿಸಿದರೆ ಈ ಸೋಂಕು 35-60% ಹೆಚ್ಚು ವೇಗವಾಗಿ ಹರಡಬಲ್ಲದಾಗಿದೆ. ಈ ಸೋಂಕಿನ ಕುರಿತು ವಿಶ್ಲೇಷಣೆಗಳು ನಡೆಯುತ್ತಿವೆ.

 ಡೆಲ್ಟಾ-ಡೆಲ್ಟಾ ಪ್ಲಸ್ ಲಕ್ಷಣಗಳಲ್ಲಿ ಭಿನ್ನತೆ

ಡೆಲ್ಟಾ-ಡೆಲ್ಟಾ ಪ್ಲಸ್ ಲಕ್ಷಣಗಳಲ್ಲಿ ಭಿನ್ನತೆ

ಪ್ರಾಥಮಿಕ ಅಧ್ಯಯನದಿಂದ ಈ ಹೊಸ ರೂಪಾಂತರದ ಕೆಲವು ಲಕ್ಷಣಗಳನ್ನು ತಜ್ಞರು ಪಟ್ಟಿ ಮಾಡಿದ್ದಾರೆ. "ಡೆಲ್ಟಾ ರೂಪಾಂತರದಲ್ಲಿ ಕೆಮ್ಮು, ಜ್ವರ, ಸುಸ್ತು, ಮುಖ್ಯವಾಗಿ ಉಸಿರಾಟದ ಸಮಸ್ಯೆ ಕಂಡುಬಂದಿತ್ತು. ಶ್ವಾಸಕೋಶದ ಮೇಲೆ ಹೆಚ್ಚು ಪರಿಣಾಮ ಬೀರಿತ್ತು. ಆದರೆ ಡೆಲ್ಟಾ ಪ್ಲಸ್‌ನಲ್ಲಿ ಈ ಲಕ್ಷಣಗಳ ಹೊರತಾಗಿ ಹೊಟ್ಟೆ ನೋವು, ಹಸಿವಾಗದಿರುವುದು, ವಾಂತಿ, ಕೀಲು ನೋವು, ಕಿವಿ ಕೇಳಿಸದಿರುವುದು ಆಗಬಹುದು. ಡೆಲ್ಟಾ ರೂಪಾಂತರವೇ ಆದ್ದರಿಂದ ಇದು ಕೂಡ ವೇಗವಾಗಿ ಪಸರಿಸಬಹುದು ಹಾಗೂ ಇದರಲ್ಲಿ ಮಾನವನ ಜೀವಕೋಶಕ್ಕೆ ಹಾನಿ ತರುವ ಲಕ್ಷಣಗಳು ಕಂಡುಬಂದಿವೆ," ಎಂದು ದೆಹಲಿ ಸಿಎಸ್‌ಐಆರ್ ಜೆನೋಮಿಕ್ ಇನ್‌ಸ್ಟಿಟ್ಯೂಟ್ ತಜ್ಞ ವಿನೋದ್ ಸ್ಕಾರಿಯಾ ತಿಳಿಸಿದ್ದಾರೆ.

Recommended Video

ನ್ಯೂಜಿಲೆಂಡ್ ವಿರುದ್ಧ ಸೇಡು ತೀರಿಸಿಕೊಳ್ಳೋದಕ್ಕೆ ಟೀಮ್ ಇಂಡಿಯಾಗೆ ಸಿಕ್ತು ಮತ್ತೊಂದು ಚಾನ್ಸ್ | Oneindia Kannada
 ಕೇಂದ್ರದಿಂದ ರಾಜ್ಯಗಳಿಗೆ ಸೂಚನೆ

ಕೇಂದ್ರದಿಂದ ರಾಜ್ಯಗಳಿಗೆ ಸೂಚನೆ

ಡೆಲ್ಟಾ ಪ್ಲಸ್ ರೂಪಾಂತರ ಪ್ರಕರಣಗಳು ಹಲವು ರಾಜ್ಯಗಳಲ್ಲಿ ಪತ್ತೆಯಾಗುತ್ತಿರುವ ಬೆನ್ನಲ್ಲೇ ಮಂಗಳವಾರ ಕೇಂದ್ರ ಸರ್ಕಾರ ರಾಜ್ಯಗಳಿಗೆ ಈ ರೂಪಾಂತರದ ಕುರಿತು ನಿಗಾ ವಹಿಸಲು ಸೂಚನೆ ನೀಡಿದೆ. "ಸಣ್ಣ ಸಮಸ್ಯೆ ದೊಡ್ಡ ಸ್ವರೂಪ ಪಡೆಯುವುದಕ್ಕೆ ಅವಕಾಶ ಮಾಡಿಕೊಡಬಾರದು. ಈಗಲೇ ಈ ಹೊಸ ರೂಪಾಂತರದ ಕುರಿತು ನಿಗಾ ವಹಿಸಿ" ಎಂದು ನೀತಿ ಆಯೋಗ ಸದಸ್ಯ ವಿ.ಕೆ. ಪೌಲ್ ತಿಳಿಸಿದ್ದಾರೆ. ಬೆಂಗಳೂರು, ಹೈದರಾಬಾದ್, ನವದೆಹಲಿ ಹಾಗೂ ಪುಣೆಯಂಥ ಪ್ರಮುಖ ನಗರಗಳಲ್ಲಿ ಎಚ್ಚರಿಕೆ ರವಾನಿಸಲಾಗಿದೆ.

English summary
How this newly detected delta plus variant different from delta variant? Here is details...
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X