ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ತಾಲಿಬಾನಿಗರು ಮಲಯಾಳಂ ಮಾತನಾಡುತ್ತಾರೆಯೇ, ಪ್ರಶ್ನೆ ಹುಟ್ಟಿದಾದರೂ ಯಾಕೆ?

|
Google Oneindia Kannada News

ನವದೆಹಲಿ, ಆ. 19: ಅಫ್ಘಾನಿಸ್ತಾನವನ್ನು ತನ್ನ ವಶಕ್ಕೆ ಪಡೆದುಕೊಂಡದ ಬಳಿಕ ಸಂತಸದಿಂದ ತಾಲಿಬಾನಿ ಉಗ್ರನೋರ್ವ ಅಳುತ್ತಿರುವ ವಿಡಿಯೋವೊಂದು ಈಗ ಭಾರೀ ಚರ್ಚೆಗೆ ಕಾರಣವಾಗಿದೆ. ಆ ಇಬ್ಬರು ವಿಡಿಯೋದಲ್ಲಿರುವ ಇಬ್ಬರು ವ್ಯಕ್ತಿಗಳು ಮಲಯಾಳಿಗರೇ ಎಂಬ ಪ್ರಶ್ನೆಯನ್ನು ಮೂಡಿಸಿದೆ.

ಕಾಂಗ್ರೆಸ್‌ ಸಂಸದ ಶಶಿ ತರೂರ್‌ ಇಬ್ಬರು ತಾಲಿಬಾನಿಗರು ಮಲಯಾಳಂನಲ್ಲಿ ಮಾತನಾಡುತ್ತಿರುವಂತೆ ಕಂಡು ಬರುವ ವಿಡಿಯೋವೊಂದನ್ನು ಟ್ವೀಟ್‌ ಮಾಡಿದ್ದಾರೆ. ಹಾಗೆಯೇ ಈ ವ್ಯಕ್ತಿಗಳು ಮಲಯಾಳಂನಲ್ಲಿ ಮಾತನಾಡಿದ್ದಾರೆ ಎಂದು ಹೇಳಿಕೊಂಡಿದ್ದಾರೆ. "ಈ ವಿಡಿಯೋವು ನಮಗೆ ತಾಲಿಬಾನಿಗರಲ್ಲಿ ಕಡಿಮೆ ಎಂದರೆ ಇಬ್ಬರಾದರೂ ಮಲಯಾಳಿಗಳು ಇದ್ದಾರೆ ಎಂಬ ಬಗ್ಗೆ ಸುಳಿವು ನೀಡುತ್ತದೆ. ಈ ಪೈಕಿ ಓರ್ವ ಸಂಸಾರಿಕೆಟೆ (ಆತನನನ್ನು ಮಾತನಾಡಲು ಬಿಡು) ಎಂದು ಹೇಳುತ್ತಾನೆ. ಈ 8 ಸೆಕೆಂಡುಗಳ ವಿಡಿಯೋದಲ್ಲಿ ಈ ಸಂಭಾಷಣೆ ನಡೆದಿದೆ. ಇನ್ನೋರ್ವ ಈ ಮಾತು ಅರ್ಥವಾಗುವವನು," ಎಂದು ಟ್ವೀಟ್‌ ಮಾಡಿದ್ದಾರೆ.

ಸುನಂದಾ ಪುಷ್ಕರ್‌ ಪ್ರಕರಣ: ಈ ನಿಗೂಢ ಸಾವಿನ ಎಲ್ಲಾ ತಿರುವುಗಳ ಟೈಮ್‌ಲೈನ್ಸುನಂದಾ ಪುಷ್ಕರ್‌ ಪ್ರಕರಣ: ಈ ನಿಗೂಢ ಸಾವಿನ ಎಲ್ಲಾ ತಿರುವುಗಳ ಟೈಮ್‌ಲೈನ್

ಕಳೆದ ಹಲವು ವರ್ಷಗಳಿಂದ ಕನಿಷ್ಠ 100 ಕೇರಳದ ಯುವಕರು ಕೇರಳ ತೊರೆದಿದ್ದಾರೆ. ಹಾಗೆಯೇ ಐಎಸ್‌ಐಎಸ್‌ ನಂತಹ ಉಗ್ರ ಸಂಘಟನೆಗೆ ಸೇರಿದ್ದಾರೆ ಎಂಬ ಸುದ್ದಿಗಳಿಗೆ ಪುಷ್ಠಿಯನ್ನು ನೀಡಿದೆ. ಮಂಗಳವಾರವಷ್ಟೇ ಐಎಸ್‌ಐಎಸ್‌ ಜೊತೆ ನಂಟು ಇದ್ದ ಇಬ್ಬರು ಕೇರಳ ಯುವತಿಯರನ್ನು ಎನ್‌ಐಎ ವಶಕ್ಕೆ ಪಡೆದಿದೆ. ಕೆಲ ಬಿಜೆಪಿಗರು ಈ ವಿಡಿಯೋದಲ್ಲಿ ಮಲಯಾಳಂ ಮಾತನಾಡುತ್ತಿದ್ದಾರೆ ಎಂದು ದೂರಿದ್ದಾರೆ. ಆದರೆ ಈ ವಿಡಿಯೋದ ಸತ್ಯಾಸತ್ಯತೆ ಇನ್ನೂ ತಿಳಿದು ಬಂದಿಲ್ಲ.

ತಾಲಿಬಾನ್‌ನಲ್ಲಿ ಕೇರಳದವರು ಇಲ್ಲ

ತಾಲಿಬಾನ್‌ನಲ್ಲಿ ಕೇರಳದವರು ಇಲ್ಲ

ಆದರೆ ಈ ವಿಡಿಯೋವನ್ನು ಪೋಸ್ಟ್‌ ಮಾಡಿದ ರಮೀಝ್‌ ಎಂಬ ವ್ಯಕ್ತಿ ಶಶಿ ತರೂರ್‌ಗೆ ತಿರುಗೇಟು ನೀಡಿದ್ದಾರೆ. "ಅಲ್ಲಿ ಯಾವುದೇ ಕೇರಳದವರು ಇಲ್ಲ. ಇನ್ನೂ ತಾಲಿಬಾನಿಗರ ಬಗ್ಗೆ ಹೇಳಬೇಕಾದರೆ ಅವರು ಝಾಬುಲ್‌ ಪ್ರಾಂತ್ಯದಿಂದ ಬಂದವರು. ಅವರು ಬ್ರಾಹ್‌ವಿ ಹಾಗೂ ಬ್ರಾವ್‌ಹಿ ಭಾಷೆಯನ್ನು ಮಾತನಾಡುತ್ತಾರೆ. ಇದು ದ್ರಾವಿಡ ಭಾಷೆಗಳಾದ ತೆಲುಗು, ತಮಿಳು, ಮಲಯಾಳಂಗೆ ಕೊಂಚ ಸಾಮ್ಯತೆಯನ್ನು ಹೊಂದಿದೆ," ಎಂದು ಅಭಿಪ್ರಾಯಿಸಿದ್ದಾರೆ.

ಅಫ್ಘಾನ್‌ ಖಜಾನೆ ಹೊತ್ತು ಪಲಾಯನವಾದ ಅಧ್ಯಕ್ಷ ಅಬುಧಾಬಿಯಲ್ಲಿಅಫ್ಘಾನ್‌ ಖಜಾನೆ ಹೊತ್ತು ಪಲಾಯನವಾದ ಅಧ್ಯಕ್ಷ ಅಬುಧಾಬಿಯಲ್ಲಿ

 ಇದನ್ನು ಭಾಷಾಶಾಸ್ತ್ರಜ್ಞರು ಕಂಡು ಹಿಡಿಯಲಿ

ಇದನ್ನು ಭಾಷಾಶಾಸ್ತ್ರಜ್ಞರು ಕಂಡು ಹಿಡಿಯಲಿ

ತರೂರ್‌ ಇದ್ದಕ್ಕೆ ಪ್ರತಿಕ್ರಿಯೆ ನೀಡಿ, "ಇದನ್ನು ಭಾಷಾಶಾಸ್ತ್ರಜ್ಞರು ಇದನ್ನು ಕಂಡು ಹಿಡಿಯಲಿ. ಆದರೆ ತಪ್ಪು ದಾರಿಗೆ ಹೋದ ಮಲಯಾಳಿಗರು ತಾಲಿಬಾನ್‌ ಸೇರಿದ್ದಾರೆ. ಆದ್ದರಿಂದ ಸಾಧ್ಯತೆಯನ್ನು ನಾವು ಸಂಪೂರ್ಣವಾಗಿ ತಳ್ಳಿಹಾಕುವಂತಿಲ್ಲ," ಎಂದು ಹೇಳಿದ್ದಾರೆ. ಈ ನಡುವೆ ಬಿಜೆಪಿ ರಾಜ್ಯಾಧ್ಯಕ್ಷ ಜೆ ಪಿ ನಡ್ಡಾ ಕೂಡಾ ಈ ವಿಚಾರದಲ್ಲಿ ಕೇರಳದ ವಿರುದ್ದ ವಾಗ್ದಾಳಿ ನಡೆಸಿದ್ದಾರೆ. ಕೇರಳ ಉಗ್ರವಾದಿಗಳಿಗೆ ತಮ್ಮ ಸಂಘಟನೆಗೆ ನೇಮಕಾತಿ ಮಾಡಲಿರುವ ಪ್ರದೇಶದಂತೆ ಆಗಿದೆ ಎಂದು ದೂರಿದ್ದಾರೆ. ಹಾಗೆಯೇ ಎಡ ಪಕ್ಷಗಳು ಇದನ್ನು ನಿಯಂತ್ರಿಸುವಲ್ಲಿ ಎಡವಿದೆ ಎಂದು ಆರೋಪ ಮಾಡಿದ್ದಾರೆ.

 ಪತ್ನಿ ಎಂಬ ಅರ್ಥದ ಶಬ್ದ ಕಂಡರೆ ತರೂರ್‌ಗೆ ಭಯ!

ಪತ್ನಿ ಎಂಬ ಅರ್ಥದ ಶಬ್ದ ಕಂಡರೆ ತರೂರ್‌ಗೆ ಭಯ!

ಇನ್ನು ಮಲಯಾಳಿ ತಾಲಿಬಾನ್‌ ಹೇಳಿಕೆಯನ್ನು ಶಶಿ ತರೂರ್‌ ಮಾತ್ರ ಸಮರ್ಥಿಸಿಕೊಂಡಿದ್ದಾರೆ. ಈ ಹೇಳಿಕೆಗೆ ತೀವ್ರ ವಿರೋಧ ವ್ಯಕ್ತಪಡಿಸಿರುವ ಮಲಯಾಳಂ ಲೇಖಲ ಎನ್‌ಎಸ್‌ ಮಾಧವನ್‌, "ಈ ವಿಡಿಯೋವನ್ನು ಪದೇ ಪದೇ ಕೇಳಿದೆ. ಈ ವ್ಯಕ್ತಿಯೂ ಸಂಸಾರಿಕ್ಕೆಟೆ ಎಂದು ಹೇಳಿಲ್ಲ. ಈ ವ್ಯಕ್ತಿ ಝಮ್‌ಝಮ್‌ ಎಂದು ಹೇಳಿರುವ ಸಾಧ್ಯತೆ ಇದೆ. ಅರೇಬಿಕ್‌ನಲ್ಲಿ ಪವಿತ್ರ ನೀರು ಎಂದು ಇದರ ಅರ್ಥ ಅಥವಾ ತಮಿಳಿನ ಸಂಮ್‌ಸರಾಮ್‌ ಆಗಿರಬಹುದು. ಅಂದರೆ ಪತ್ನಿ ಎಂದು ಅರ್ಥ. ಅಥವಾ ತನ್ನ ಸ್ಥಳೀಯ ಭಾಷೆಯಲ್ಲಿ ಬೇರೇನೋ ಹೇಳಿರಬಹುದು. ಈ ಪತ್ನಿ ಎಂಬ ಅರ್ಥ ಬರುವ ಶಬ್ದವು ಸಂಸದರಿಗೆ ತಲೆ ನೋವು ಉಂಟು ಮಾಡುವುದಾದರೆ, ಅದಕ್ಕೆ ಈ ವಿಷಯದಲ್ಲಿ ಮಲಯಾಳಿಗರನ್ನು ಏಕೆ ಸುಮ್ಮನೇ ಎಳೆಯಬೇಕು," ಎಂದು ಪರೋಕ್ಷವಾಗಿ ಶಶಿ ತರೂರ್‌ ಪತ್ನಿ ಸುನಂದಾ ಪುಷ್ಕರ್‌ ಸಾವು ಪ್ರಕರಣದ ವಿಚಾರದಲ್ಲಿ ಸಂಸದ ಶಶಿ ತರೂರ್‌ ಕಾಲೆಳೆದಿದ್ದಾರೆ.

 ಸಮರ್ಥಿಸಿಕೊಂಡ ಶಶಿ ತರೂರ್‌

ಸಮರ್ಥಿಸಿಕೊಂಡ ಶಶಿ ತರೂರ್‌

ಈ ಎಲ್ಲದರ ನಡುವೆ ಶಶಿ ತರೂರ್‌ ಕೇರಳಿಗರು ಅಫ್ಘಾನಿಸ್ತಾನಕ್ಕೆ ಐಎಸ್‌ ಸೇರಲು ಹೋದ ವರದಿಯನ್ನು ಉಲ್ಲೇಖ ಮಾಡಿದ್ದಾರೆ. "ಮಲಯಾಳಿಗರು ತಾಲಿಬಾನ್‌ನಲ್ಲಿ ಇರುವ ಬಗ್ಗೆ ನನ್ನ ಟ್ವೀಟ್‌ ಅನ್ನು ಯಾರು ಟೀಕೆ ಮಾಡಿದಾರೋ ಅಫ್ಘಾನಿಸ್ತಾನದ ಜೈಲಿನಿಂದ ಬಿಡುಗಡೆಯಾದ ಕೇರಳದ ವ್ಯಕ್ತಿಯ ಬಗ್ಗೆ ತಿಳಿಯಬೇಕು," ಎಂದು ಹೇಳಿದ್ದಾರೆ. ಈ ಸುದ್ದಿಯಲ್ಲಿ ತಾಲಿಬಾನ್‌ ಕಾಬೂಲ್‌ ಅನ್ನು ವಶಕ್ಕೆ ಪಡೆದ ಕೂಡಲೇ ಕಾಬೂಲ್‌ನ ಜೈಲಿನಲ್ಲಿದ್ದ ಐದು ಸಾವಿರ ತಾಲಿಬಾನ್‌-ಅಲ್‌ ಖೈದಾ ಗುಂಪಿನವರು ಬಿಡುಗಡೆ ಮಾಡಿದ್ದಾರೆ. ಇದರಲ್ಲಿ ಕೇರಳಿಗರು ಇದ್ದಾರೆ ಎಂದು ವರದಿ ಹೇಳಿದೆ.

(ಒನ್‌ ಇಂಡಿಯಾ)

Recommended Video

ಅಫ್ಘಾನ್ ಮೇಲೆ ತಾಲಿಬಾನ್ ದಂಡೆತ್ತಿದ್ದು ಯಾವಾಗ ಗೊತ್ತಾ? | Oneindia Kannada

English summary
A video believed to be that of a Taliban militant crying out of joy has triggered a suspicion that two Taliban fighters were Malayalis.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X