ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಉತ್ತರಾಖಂಡ್ ಪ್ರವಾಹ: ಅಪಾಯದ ಹಂತಕ್ಕೆ ತಲುಪಿದ ಧೌಲಿ ಗಂಗಾ ನದಿ ನೀರಿನ ಮಟ್ಟ

|
Google Oneindia Kannada News

ಉತ್ತರಾಖಂಡ್,ಫೆಬ್ರವರಿ 08: ಜೋಶಿಮಠದ ಧೌಲಿ ಗಂಗಾ ನದಿಯ ನೀರಿನ ಮಟ್ಟ ಅಪಾಯಕಾರಿ ಹಂತವನ್ನು ತಲುಪಿದೆ. ಇಷ್ಟು ವರ್ಷದ ದಾಖಲೆಯನ್ನು ಮುರಿದಿದೆ ಎಂದು ಕೇಂದ್ರ ಜಲ ಆಯೋಗದ ಅಧಿಕಾರಿಗಳು ತಿಳಿಸಿದ್ದಾರೆ.

ಹಿಮ ಪ್ರವಾಹದಲ್ಲಿ 100ಕ್ಕೂ ಹೆಚ್ಚು ಕಾರ್ಮಿಕರು ಸಿಲುಕಿದ್ದಾರೆ. ಅಲ್ಪಾವಧಿಯಲ್ಲಿ ನೀರಿನ ತೀವ್ರತೆ ತಿಳಿದುಬಂದಿತ್ತು.ಇದು 2013ರಲ್ಲಿ ಕೇದಾರನಾಥದಲ್ಲಿ ನಡೆದ ಹಿಮಪಾತವನ್ನು ನೆನಪಿಸುತ್ತದೆ. ಬೆಳಗ್ಗೆ 11ರ ಸುಮಾರಿಗೆ ಜೋಶಿಮಠ ನೀರಿನ ಮಟ್ಟ 1388 ಮೀಟರ್‌ನಷ್ಟಿತ್ತು.

ಉತ್ತರಾಖಂಡ್ ಹಿಮಪಾತ: ಮೃತರ ಕುಟುಂಬಕ್ಕೆ 4 ಲಕ್ಷ ಪರಿಹಾರಉತ್ತರಾಖಂಡ್ ಹಿಮಪಾತ: ಮೃತರ ಕುಟುಂಬಕ್ಕೆ 4 ಲಕ್ಷ ಪರಿಹಾರ

2013ರ ಉತ್ತರಾಖಂಡ್ ಪ್ರವಾಹದ ಸಂದರ್ಭದಲ್ಲಿ ನೀರಿನ ಮಟ್ಟ1385.54 ಮೀಟರ್‌ನಷ್ಟಿತ್ತು. ಹಿಮ ಕುಸಿತ ಹಾಗೂ ಪ್ರವಾಹದಿಂದಾಗಿ ಚಿಮೋಲಿ ಹಳ್ಳಿಯಲ್ಲಿ ಭಾನುವಾರ ಅನೇಕ ಭಾನುಗಳು ನಾಶವಾಗಿದ್ದು, ಶ್ರೀನಗರ, ಹರಿದ್ವಾರ ಮತ್ತು ರಿಷಿಕೇಶಿಯಲ್ಲಿ ನೀರಿನ ಮಟ್ಟದಲ್ಲಿ ಹೆಚ್ಚಾಗುವ ಸಾಧ್ಯತೆಯಿರುವುದಾಗಿ ಉತ್ತರಾಖಂಡ ಪೊಲೀಸರು ಸಲಹೆ ನೀಡಿದ್ದಾರೆ.

ಶ್ರೀನಗರದಲ್ಲಿ ನೀರಿನ ಮಟ್ಟ

ಶ್ರೀನಗರದಲ್ಲಿ ನೀರಿನ ಮಟ್ಟ

ಸಂಜೆ ನಾಲ್ಕು ಗಂಟೆಗೆ ಶ್ರೀನಗರದಲ್ಲಿ ನೀರಿನ ಮಟ್ಟ 536 ಮೀಟರ್, ರಿಷಿಕೇಷಿಯಲ್ಲಿ 8 ಗಂಟೆಗೆ ಹೊತ್ತಿಗೆ 340.50 ಮೀ ಹಾಗೂ ಹರಿದ್ವಾರದಲ್ಲಿ 9 ಗಂಟೆಗೆ 294.00 ಮೀಟರ್ ಗೆ ನೀರಿನ ಮಟ್ಟ ಹೆಚ್ಚಳವಾಗುವ ಸಾಧ್ಯತೆಯಿದೆ. ಶ್ರೀನಗರ, ಹೃಷಿಕೇಶಿ ಮತ್ತು ಹರಿದ್ವಾರದಲ್ಲಿ ಅಪಾಯದ ಮಟ್ಟ ಮೀರಿ ನೀರು ಹರಿಯುವ ಸಾಧ್ಯತೆ ಇರುವುದಾಗಿ ಪೊಲೀಸರು ತಿಳಿಸಿದ್ದಾರೆ.

ರಕ್ಷಣಾ ಕಾರ್ಯಗಳು ನಡೆಯುತ್ತಿವೆ

ರಕ್ಷಣಾ ಕಾರ್ಯಗಳು ನಡೆಯುತ್ತಿವೆ

ಪರಿಹಾರ ಮತ್ತು ರಕ್ಷಣಾ ಕಾರ್ಯಗಳು ನಡೆಯುತ್ತಿರುವುದರಿಂದ ಜನರು ತಾಳ್ಮೆಯಿಂದಿರಿ ಎಂದು ಪೊಲೀಸರು ಹೇಳಿದ್ದಾರೆ. ರಾಜ್ಯ ವಿಪತ್ತು ನಿರ್ವಹಣಾ ಪಡೆಯ ಐದು ತಂಡಗಳನ್ನು ಪ್ರವಾಹ ಸ್ಥಳಕ್ಕೆ ಕಳುಹಿಸಲಾಗಿದೆ.

ಪ್ರವಾಹ ಬಾಧಿತ ಪ್ರದೇಶಗಳು

ಪ್ರವಾಹ ಬಾಧಿತ ಪ್ರದೇಶಗಳು

ಪ್ರವಾಹ ಭಾದಿತ ಪ್ರದೇಶಗಳಲ್ಲಿ ಸಿಲುಕಿದ್ದು, ಸಹಾಯ ಬೇಕಿದ್ದಲ್ಲಿ ವಿಪತ್ತು ಕಾರ್ಯಾಚರಣೆ ಸೆಂಟರ್ ನಂಬರ್ 1070 or 9557444486 ಸಂಪರ್ಕಿಸುವಂತೆ ಮುಖ್ಯಮಂತ್ರಿ ತ್ರಿವೇಂದ್ರ ಸಿಂಗ್ ರಾವತ್ ಮಾಹಿತಿ ನೀಡಿದ್ದಾರೆ.

ಹಾಳಾದ ವಿದ್ಯುತ್ ಯೋಜನೆ

ಹಾಳಾದ ವಿದ್ಯುತ್ ಯೋಜನೆ

ರೈನಿ ಗ್ರಾಮದಲ್ಲಿ ಹಿಮಕುಸಿತದಿಂದ ವಿದ್ಯುತ್ ಯೋಜನೆ ಹಾಳಾಗಿದೆ. ನದಿ ತೀರದಲ್ಲಿನ ಜನರು ಭಯಭೀತಗೊಂಡಿದ್ದು, ಅವರ ರಕ್ಷಣೆಗಾಗಿ ಐಟಿಬಿಪಿ ಸಿಬ್ಬಂದಿ ಆಗಮಿಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಗಂಗಾ ನದಿ ದಂಡೆ ಮೇಲೆ ತೆರಳದಂತೆ ಸಾರ್ವಜನಿಕರಿಗೆ ಎಚ್ಚರಿಕೆ ನೀಡಲಾಗಿದೆ.

ಚಮೋಲಿ ಜಿಲ್ಲೆಯ ರೆಣಿಯಲ್ಲಿರುವ ಜೋಶಿ ಮಠ ಪ್ರದೇಶದಲ್ಲಿ ಹಿಮಕುಸಿತ ಸಂಭವಿಸಿದೆ. ಪರಿಣಾಮವಾಗಿ ಅಣೆಕಟ್ಟಿನೊಳಗೆ ದೊಡ್ಡ ಪ್ರಮಾಣದ ನೀರು ಹರಿಯಿತು. ಈ ಹರಿವು ಧೌಲಿಗಂಗಾ ನದಿಯ ರಿಷಿ ಗಂಗಾ ವಿದ್ಯುತ್ ಯೋಜನೆಗೆ ಹೆಚ್ಚಿನ ಹಾನಿಯನ್ನುಂಟು ಮಾಡಿತು. ಈ ಅಣೆಕಟ್ಟಿನ ಗೋಡೆಯು ಧ್ವಂಸಗೊಂಡಿದ್ದರಿಂದ ಧೌಲಿಗಂಗಾ ನದಿಯ ನೀರಿನ ಮಟ್ಟವು ಭಾರಿ ಹೆಚ್ಚಳ ಕಂಡಿದೆ. ಒಮ್ಮಿಂದೊಮ್ಮೆಲೆ ಪ್ರವಾಹ ಬಂದಿದ್ದರಿಂದ ನದಿಯ ದಡದಲ್ಲಿರುವ ಮನೆಗಳಿಗೆ ಹಾನಿಯಾಗಿದ್ದು ಅನೇಕರು ನಾಪತ್ತೆಯಾಗಿದ್ದಾರೆ.

ಅಲಕನಂದಾ ನದಿಗೆ ಪ್ರವಾಹ ಬರಬಾರದೆಂದು ಮುನ್ನೆಚ್ಚರಿಕೆ ಕ್ರಮವಾಗಿ ಭಾಗೀರಥಿ ನದಿಯ ಹರಿವನ್ನು ಮುಚ್ಚಲಾಗಿದೆ ಎಂದು ಮುಖ್ಯಮಂತ್ರಿ ತ್ರಿವೇಂದ್ರ ಸಿಂಗ್ ರಾವತ್ ಹೇಳಿದ್ದಾರೆ. ರಾವತ್ ಕೂಡ ಘಾಟನಾಸ್ಥಳಕ್ಕೆ ಧಾವಿಸಿದ್ದಾರೆ.

English summary
The water level of the Dhauli Ganga river at Joshimath flowed at a perilously high level, breaching all records, Central Water Commission officials said after a part of Nanda Devi glacier broke off in Uttarakhand's Chamoli district leading to massive floods.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X