• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಶ್ರೀಲಂಕಾ ಬಂದರಿನಲ್ಲಿ ಚೀನಾ ನೌಕೆ: ಎಲ್ಲಾ ಬೆಳವಣಿಗೆಯನ್ನು ಗಮನಿಸುತ್ತಿದ್ದೇವೆ ಎಂದ ಜೈಶಂಕರ್

|
Google Oneindia Kannada News

ನವದೆಹಲಿ, ಆಗಸ್ಟ್ 17: ಶ್ರೀಲಂಕಾದ ಆಯಕಟ್ಟಿನ ಬಂದರಿನಲ್ಲಿ ನಿಲುಗಡೆ ಮಾಡಿರುವ ಅತ್ಯಾಧುನಿಕ ಚೀನೀ ಸಂಶೋಧನಾ ನೌಕೆ ನಮ್ಮ ದೇಶದ ಭದ್ರತೆಯ ಮೇಲೆ ಪ್ರಭಾವ ಬೀರುವ ಭಾರತದ ನೆರೆಹೊರೆಯಲ್ಲಿ ನಡೆಯುವ ಯಾವುದೇ ಬೆಳವಣಿಗೆಯನ್ನು ಭಾರತವು ಮೇಲ್ವಿಚಾರಣೆ ಮಾಡುತ್ತದೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವ ಎಸ್ ಜೈಶಂಕರ್ ಬುಧವಾರ ಹೇಳಿದ್ದಾರೆ.

ಚೀನಾದ ಸಂಶೋಧನಾ ನೌಕೆ 'ಯುವಾನ್ ವಾಂಗ್ 5' ಶ್ರೀಲಂಕಾದ ಹಂಬಂಟೋಟ ಬಂದರಿನಲ್ಲಿ ನಿಲುಗಡೆಯಾದ ನಂತರ ಈ ಹೇಳಿಕೆಗಳು ಬಂದಿವೆ. 9ನೇ ಭಾರತ-ಥಾಯ್ಲೆಂಡ್ ಜಂಟಿ ಆಯೋಗದ ಸಭೆಯಲ್ಲಿ ಪಾಲ್ಗೊಳ್ಳಲು ಬ್ಯಾಂಕಾಕ್‌ಗೆ ಆಗಮಿಸಿದ ನಂತರ ಜೈಶಂಕರ್ ಈ ಹೇಳಿಕೆ ನೀಡಿದ್ದಾರೆ.

ಶ್ರೀಲಂಕಾದಲ್ಲಿ ಚೀನೀ ಬೇಹುಗಾರಿಕೆ ನೌಕೆ; ಭಾರತಕ್ಕೆ ಅಪಾಯಗಳೇನು?ಶ್ರೀಲಂಕಾದಲ್ಲಿ ಚೀನೀ ಬೇಹುಗಾರಿಕೆ ನೌಕೆ; ಭಾರತಕ್ಕೆ ಅಪಾಯಗಳೇನು?

"ನಮ್ಮ ನೆರೆಹೊರೆಯಲ್ಲಿ ಏನಾಗುತ್ತದೆ, ನಮ್ಮ ದೇಶದ ಭದ್ರತೆ ಮೇಲೆ ಪರಿಣಾಮ ಬೀರುವ ಯಾವುದೇ ಅಭಿವೃದ್ಧಿಯು ನಮಗೆ ಆಸಕ್ತಿಯನ್ನುಂಟು ಮಾಡುತ್ತದೆ. ನಮ್ಮ ಹಿತಾಸಕ್ತಿಗಳ ಮೇಲೆ ಪ್ರಭಾವ ಬೀರುವ ಯಾವುದೇ ಬೆಳವಣಿಗೆಯನ್ನು ನಾವು ನಿಸ್ಸಂಶಯವಾಗಿ ಬಹಳ ಎಚ್ಚರಿಕೆಯಿಂದ ಗಮನಿಸುತ್ತೇವೆ" ಎಂದು ಜೈಶಂಕರ್ ಹೇಳಿರುವುದಾಗಿ ಪಿಟಿಐ ವರದಿ ಮಾಡಿದೆ.

ಬ್ಯಾಲಿಸ್ಟಿಕ್ ಕ್ಷಿಪಣಿ ಮತ್ತು ಉಪಗ್ರಹ ಟ್ರ್ಯಾಕಿಂಗ್ 'ಯುವಾನ್ ವಾಂಗ್ 5' ಹಡಗು ಮಂಗಳವಾರ ಶ್ರೀಲಂಕಾ ಸರ್ಕಾರದಿಂದ ಚೀನಾ ಗುತ್ತಿಗೆ ಪಡೆದಿರುವ ಆಯಕಟ್ಟಿನ ಪ್ರಮುಖವಾದ ಹಂಬನ್‌ಟೋಟ ಬಂದರನ್ನು ತಲುಪಿದೆ. ಹಡಗು ಮರುಪೂರಣಕ್ಕಾಗಿ ಆಗಸ್ಟ್ 22 ರವರೆಗೆ ಬಂದರಿನಲ್ಲಿ ನಿಲುಗಡೆ ಮಾಡಲಾಗುತ್ತದೆ.

 ಭೇಟಿ ಮುಂದೂಡಲು ಮನವಿ ಮಾಡಿದ್ದ ಶ್ರೀಲಂಕಾ

ಭೇಟಿ ಮುಂದೂಡಲು ಮನವಿ ಮಾಡಿದ್ದ ಶ್ರೀಲಂಕಾ

ಆಗಸ್ಟ್ 11 ರಂದು ಹಡಗು ಬಂದರಿಗೆ ಆಗಮಿಸಬೇಕಿತ್ತು ಆದರೆ ತನ್ನ ನೆರೆಹೊರೆಯಲ್ಲಿ ಹಡಗಿನ ಉಪಸ್ಥಿತಿಯ ಬಗ್ಗೆ ಭಾರತದ ಆತಂಕದ ನಡುವೆ ಭೇಟಿ ಮುಂದೂಡುವಂತೆ ಶ್ರೀಲಂಕಾ ಚೀನಾವನ್ನು ಕೇಳಿಕೊಂಡಿತ್ತು.

ಶ್ರೀಲಂಕಾವು ಅಂತಿಮವಾಗಿ ಶ್ರೀಲಂಕಾದ ವಿಶೇಷ ಆರ್ಥಿಕ ವಲಯ (EEZ) ಒಳಗೆ ಸ್ವಯಂಚಾಲಿತ ಗುರುತಿನ ವ್ಯವಸ್ಥೆ (AIS) ಅನ್ನು ಚಾಲನೆ ಮಾಡುತ್ತದೆ ಮತ್ತು ಶ್ರೀಲಂಕಾದ ಸರಹದ್ದಿನಲ್ಲಿ ಯಾವುದೇ ವೈಜ್ಞಾನಿಕ ಸಂಶೋಧನೆಗಳನ್ನು ನಡೆಸಬಾರದು ಎಂಬ ಷರತ್ತಿನ ಮೇಲೆ ಹಡಗಿಗೆ ಬಂದರು ಪ್ರವೇಶಕ್ಕೆ ಅನುಮತಿ ನೀಡಿದೆ ಎಂದು ಅದು ಹೇಳಿದೆ.

 ಭದ್ರತೆಯ ಬಗ್ಗೆ ಆತಂಕ ವ್ಯಕ್ತಪಡಿಸಿದ್ದ ಭಾರತ

ಭದ್ರತೆಯ ಬಗ್ಗೆ ಆತಂಕ ವ್ಯಕ್ತಪಡಿಸಿದ್ದ ಭಾರತ

ಹಡಗಿನ ಟ್ರ್ಯಾಕಿಂಗ್ ವ್ಯವಸ್ಥೆಗಳು ಭಾರತೀಯ ರಕ್ಷಣಾ ವ್ಯವಸ್ಥೆ ಮೇಲೆ ಕಣ್ಣಿಡಲು ಪ್ರಯತ್ನಿಸುವ ಸಾಧ್ಯತೆಯ ಬಗ್ಗೆ ಭಾರತ ಆತಂಕ ವ್ಯಕ್ತಪಡಿಸಿದೆ. ಈ ಹಡಗು ಚೀನಾದ ಪೀಪಲ್ಸ್ ಲಿಬರೇಶನ್ ಆರ್ಮಿ (ಪಿಎಲ್‌ಎ)ಯ ಅಧೀನದಲ್ಲಿದೆ ಮತ್ತು ಉಪಗ್ರಹಗಳು ಮತ್ತು ಕ್ಷಿಪಣಿ ಉಡಾವಣೆಗಳನ್ನು ಪತ್ತೆಹಚ್ಚುವ
ಸಾಮರ್ಥ್ಯವನ್ನು ಹೊಂದಿದೆ ಎಂದು ಯುಎಸ್ ರಕ್ಷಣಾ ಇಲಾಖೆ ಹೇಳಿದೆ.

ಭಾರತದ ಬ್ಯಾಲಿಸ್ಟಿಕ್ ಕ್ಷಿಪಣಿ ಪರೀಕ್ಷೆಗಳನ್ನು ಪತ್ತೆಹಚ್ಚುವ ಮೂಲಕ, ಚೀನಾವು ಕ್ಷಿಪಣಿಗಳ ಕಾರ್ಯಕ್ಷಮತೆ ಮತ್ತು ಅವುಗಳ ನಿಖರ ವ್ಯಾಪ್ತಿಯ ಮಾಹಿತಿಯನ್ನು ಸಂಗ್ರಹಿಸಲು ಸಾಧ್ಯವಾಗುತ್ತದೆ. ಇದು ಭದ್ರತೆಯ ದೃಷ್ಟಿಯಿಂದ ಭಾರತಕ್ಕೆ ಅಪಾಯಕಾರಿ ಎಂದು ಹೇಳಲಾಗುತ್ತಿದೆ.

 ಭದ್ರತೆಗೆ ಧಕ್ಕೆ ತರುವುದಿಲ್ಲ ಎಂದು ಚೀನಾ ವಾದ

ಭದ್ರತೆಗೆ ಧಕ್ಕೆ ತರುವುದಿಲ್ಲ ಎಂದು ಚೀನಾ ವಾದ

ಹಡಗನ್ನು ವೈಜ್ಞಾನಿಕ ಸಂಶೋಧನೆಗಾಗಿ ಬಳಸಲಾಗುತ್ತದೆ ಎಂದು ಚೀನಾ ಸಮರ್ಥನೆ ಮಾಡಿಕೊಂಡಿದೆ. ಚೀನಾದ ವಿದೇಶಾಂಗ ಸಚಿವಾಲಯವು ತನ್ನ ಹೈಟೆಕ್ ಹಡಗಿನ ಚಟುವಟಿಕೆಗಳು ಯಾವುದೇ ದೇಶದ ಭದ್ರತೆಯ ಮೇಲೆ ಪರಿಣಾಮ ಬೀರುವುದಿಲ್ಲ ಮತ್ತು ಹಡಗಿನ ಚಟುವಟಿಕೆಗಳಿಗೆ ಯಾವುದೇ ಮೂರನೇ ವ್ಯಕ್ತಿ ಅಡಚಣೆ ಮಾಡಬಾರದು ಎಂದು ಹೇಳಿದೆ.

"ಯುವಾನ್ ವಾಂಗ್-5 ಹಡಗಿನ ಸಮುದ್ರ ವೈಜ್ಞಾನಿಕ ಸಂಶೋಧನಾ ಚಟುವಟಿಕೆಗಳು ಅಂತರಾಷ್ಟ್ರೀಯ ಕಾನೂನು ಮತ್ತು ಅಂತರಾಷ್ಟ್ರೀಯ ಸಾಂಪ್ರದಾಯಿಕ ಅಭ್ಯಾಸಕ್ಕೆ ಅನುಗುಣವಾಗಿರುತ್ತವೆ" ಎಂದು ಚೀನಾದ ವಿದೇಶಾಂಗ ಸಚಿವಾಲಯದ ವಕ್ತಾರ ವಾಂಗ್ ವೆನ್ಬಿನ್ ಹೇಳಿದ್ದಾರೆ.

 99 ವರ್ಷಗಳ ಅವಧಿಗೆ ಬಂದರು ಗುತ್ತಿಗೆ ಪಡೆದಿರುವ ಚೀನಾ

99 ವರ್ಷಗಳ ಅವಧಿಗೆ ಬಂದರು ಗುತ್ತಿಗೆ ಪಡೆದಿರುವ ಚೀನಾ

ಚೀನಾಕ್ಕೆ ನೀಡಬೇಕಾದ ಸಾಲವನ್ನು ಮರುಪಾವತಿಸಲು ಸಾಧ್ಯವಾಗದ ಕಾರಣ ಶ್ರೀಲಂಕಾ 2017 ರಲ್ಲಿ ಪೂರ್ವ-ಪಶ್ಚಿಮ ಅಂತರಾಷ್ಟ್ರೀಯ ಹಡಗು ಮಾರ್ಗಗಳ ಉದ್ದಕ್ಕೂ ಇರುವ ಬಂದರನ್ನು ಚೀನಾದ ಕಂಪನಿಗೆ 99 ವರ್ಷಗಳ ಕಾಲ ಗುತ್ತಿಗೆ ನೀಡಿದೆ.

ಹಂಬಂಟೋಟಾ ಬಂದರು ಸೇರಿದಂತೆ ಮೂಲಸೌಕರ್ಯ ಯೋಜನೆಗಳಿಗಾಗಿ ಶ್ರೀಲಂಕಾ 1.4 ಬಿಲಿಯನ್ ಡಾಲರ್ ಸಾಲವನ್ನು ಚೀನಾದಿಂದ ಪಡೆದಿದೆ. ಶ್ರೀಲಂಕಾದಲ್ಲಿ ಚೀನಾ ತನ್ನ ಪ್ರಭಾವವನ್ನು ಬೀರುತ್ತಿರುವ ಬಗ್ಗೆ ಭಾರತ ಆಗಾಗ ಆತಂಕ ವ್ಯಕ್ತಪಡಿಸುತ್ತಲೇ ಬರುತ್ತಿದೆ.

English summary
External Affairs Minister S Jaishankar on Wednesday said that, What happens in our neighbourhood, any development, which has a bearing on our security issues, is of interest to us. The remarks come after a Chinese research vessel 'Yuan Wang 5' docked at the Hambantota port in Sri Lanka.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X