ಸೋತು ಗೆದ್ದ ಕಾಂಗ್ರೆಸ್, ಗುಜರಾತ್ ನಲ್ಲಿ ಹೆಚ್ಚಿದ 'ಕೈ' ಮತಗಳಿಕೆ
ಅಹಮದಾಬಾದ್, ಡಿಸೆಂಬರ್ 18: ಗುಜರಾತ್ ವಿಧಾನಸಭೆ ಚುನಾವಣೆಯ ಫಲಿತಾಂಶ ಹೊರಬಿದ್ದಿದ್ದು ಕಾಂಗ್ರೆಸ್ ಸೋತು ಗೆದ್ದಿದೆ. ಸತತ ಆರನೇ ಬಾರಿಗೆ ಬಿಜೆಪಿ ಮಡಿಲಿಗೆ ಗುಜರಾತ್ ರಾಜ್ಯವನ್ನು ಕಾಂಗ್ರೆಸ್ ಅರ್ಪಿಸಿದೆ. ಆದರೆ ಮತಗಳಿಕೆ ಹೆಚ್ಚಿಸಿಕೊಂಡು ಸೋಲಿನಲ್ಲೂ ಕೈ ಪಕ್ಷ ಗೆಲುವಿನ ನಗೆ ಬೀರಿದೆ.
2014ರ ಲೋಕಸಭೆ ಚುನಾವಣೆಯಲ್ಲಿ ಗುಜರಾತ್ ನಲ್ಲಿ ಕಾಂಗ್ರೆಸ್ ಶೇಕಡಾ 32.9 ಮತಗಳಿಸಿತ್ತು. ಈ ಚುನಾವಣೆಯಲ್ಲಿ ಬಿಜೆಪಿ ಶೇ. 59.1 ಮತಗಳನ್ನು ಪಡೆದಿತ್ತು.
2012ರ ವಿಧಾನಸಭೆ ಚುನಾವಣೆ ವೇಳೆಗೆ ಕಾಂಗ್ರೆಸ್ ಶೇಕಡಾ 38.9 ಮತಗಳನ್ನು ಪಡೆದುಕೊಂಡರೆ ಬಿಜೆಪಿ ಶೇಕಡಾ 47.9 ಮತಗಳನ್ನು ಪಡೆದುಕೊಂಡಿತ್ತು.

ಸದ್ಯ ತನ್ನ ಮತಗಳಿಕೆ ಹೆಚ್ಚಿಸಿಕೊಂಡಿರುವ ಕಾಂಗ್ರೆಸ್ 2017ರಲ್ಲಿ 41.4 ಮತಗಳನ್ನು ಪಡೆದುಕೊಂಡಿದೆ. ಬಿಜೆಪಿಯೂ ತನ್ನ ಪ್ರದರ್ಶನವನ್ನು ಉತ್ತಮಗೊಳಿಸಿದ್ದು ಶೇಕಡಾ 49.1ಮತಗಳನ್ನು ಬುಟ್ಟಿಗೆ ಹಾಕಿಕೊಂಡಿದೆ. ಒಟ್ಟಾರೆ ಬಿಜೆಪಿ ಮತ್ತು ಕಾಂಗ್ರೆಸ್ ನಡುವೆ ಮತಗಳಿಕೆಯಲ್ಲಿ ಶೇಕಡಾ 7.5ರಷ್ಟು ವ್ಯತ್ಯಾಸವಿದೆ.
ಗುಜರಾತ್ ನಲ್ಲಿ ಬಿಜೆಪಿ ಪರ 1,46,20,192 ಹಾಗೂ ಕಾಂಗ್ರೆಸ್ ಪರ 1,23,32,719 ಮತಗಳು ಚಲಾವಣೆಯಾಗಿವೆ. ಇಲ್ಲಿ ನಾಲ್ಕನೇ ಸ್ಥಾನವನ್ನು ನೋಟಾ (NOTA - None of the Above) ಪಡೆದುಕೊಂಡಿದ್ದು ರಾಷ್ಟ್ರೀಯ ಪಕ್ಷಗಳಾದ ಎನ್.ಸಿ.ಪಿ ಮತ್ತು ಬಿಎಸ್ಪಿಯನ್ನೇ ಹಿಂದಿಕ್ಕಿದೆ. ಗುಜರಾತ್ ಚುನಾವಣೆಯಲ್ಲಿ ಶೇಕಡಾ 1.8 ನೋಟಾ ಮತಗಳು ಚಲಾವಣೆಯಾಗಿವೆ. ಒಟ್ಟು 5,24,709 ಜನರು ನೋಟಾ ಗುಂಡಿ ಒತ್ತಿದ್ದಾರೆ.

ಇನ್ನು ಪಕ್ಷೇತರ ಅಭ್ಯರ್ಥಿಗಳು ಶೇಕಡಾ 4.3 ಮತಗಳನ್ನು ಪಡೆದಿದ್ದಾರೆ. ಒಟ್ಟು 12,24,216 ಮತದಾರರು ಪಕ್ಷೇತರರಿಗೆ ಮತದಾನ ಮಾಡಿದ್ದಾರೆ. ಬಿಟಿಪಿ, ಬಿಎಸ್ಪಿ, ಎನ್.ಸಿ.ಪಿ, ಎಐಎನ್ಎಚ್ ಸಿಪಿ, ಆರ್.ಎಸ್.ಪಿ.ಎಸ್ ಪಕ್ಷಗಳು ಕ್ರಮವಾಗಿ ಶೇ. 0.8, 0.7, 0.6, 0.3, 0.2 ಮತಗಳನ್ನು ಪಡೆದಿವೆ.
ಅಂತಿಮವಾಗಿ ಗುಜರಾತ್ ನಲ್ಲಿ ಕಾಂಗ್ರೆಸ್ ಕಳೆದ ಬಾರಿಗಿಂತ 16 ಹೆಚ್ಚಿನ ಸ್ಥಾನಗಳನ್ನು ಗೆದ್ದು 77ರಲ್ಲಿ (ಕಾಂಗ್ರೆಸ್ + ಸಹ ಪಕ್ಷಗಳು 80) ಗೆಲುವಿನ ಬಾವುಟ ಹಾರಿಸಿದೆ. ಬಿಜೆಪಿ ಕಳೆದ ಬಾರಿಯ 16 ಸ್ಥಾನಗಳನ್ನು ಕಳೆದುಕೊಂಡು 99 ಕ್ಷೇತ್ರಗಳಲ್ಲಷ್ಟೇ ಗೆಲುವಿನ ನಗೆ ಬೀರಿದೆ. ಜಿಗ್ನೇಶ್ ಮೆವಾನಿ ಸೇರಿ 9 ಇತರರು ಇಲ್ಲಿ ಗೆದ್ದಿದ್ದಾರೆ.
ಹಿಮಾಚಲದಲ್ಲೂ ಬಿಜೆಪಿ ಮುಂದು
ಹಿಮಾಚಲ ಪ್ರದೇಶದಲ್ಲಿ ಭರ್ಜರಿ ಜಯ ದಾಖಲಿಸಿರುವ ಬಿಜೆಪಿ ಶೇಕಡಾ 48.6 ಮತಗಳನ್ನು ಪಡೆದಿದೆ. ಮತ್ತು ಕೇಸರಿ ಪಕ್ಷಕ್ಕೆ 17,51,490 ಜನರು ಮತ ಚಲಾಯಿಸಿದ್ದಾರೆ. ಕಾಂಗ್ರೆಸ್ ಶೇಕಡಾ 41.9 ಮತಗಳನ್ನು ಪಡೆದಿದ್ದು 15,09,688 ಮತಗಳನ್ನು ಗಳಿಸಿದೆ.
ಇಲ್ಲಿ ನೋಟಾ ಐದನೇ ಸ್ಥಾನ ಪಡೆದುಕೊಂಡಿದೆ. ಶೇಕಡಾ 0.9 ಮತದಾರರು ನೋಟಾಗೆ ಮತ ಹಾಕಿದ್ದಾರೆ. ಹೀಗೆ ಬಿದ್ದಿರುವ ಒಟ್ಟು ನೋಟಾ ಮತಗಳ ಸಂಖ್ಯೆ 32,882. ಪಕ್ಷೇತರರ ಪರ ಶೇಕಡಾ 6.4, ಸಿಪಿಎಂ ಪರ ಶೇಕಡಾ 1.6, ಬಿಎಸ್ಪಿ ಪರ ಶೇಕಡಾ 0.5 ಮತಗಳು ಚಲಾವಣೆಯಾಗಿವೆ.
ಇಲ್ಲಿ ಕಾಂಗ್ರೆಸ್ ಕಳೆದ ಬಾರಿಗಿಂತ 15 ಸ್ಥಾನಗಳನ್ನು ಕಡಿಮೆ ಗೆದ್ದಿದ್ದು ಕೇವಲ 21 ಸ್ಥಾನಗಳನ್ನು ಪಡೆದುಕೊಂಡಿದೆ. ಬಿಜೆಪಿ 18 ಸ್ಥಾನಗಳನ್ನು ಹೆಚ್ಚುವರಿಯಾಗಿ ತನ್ನ ಬುಟ್ಟಿಗೆ ಹಾಕಿಕೊಂಡಿದ್ದು 44 ಕ್ಷೇತ್ರಗಳಲ್ಲಿ ಗೆದ್ದಿದೆ. ಸಿಪಿಎಂ 1 ಹಾಗೂ ಇತತರು 5 ಸ್ಥಾನಗಳಲ್ಲಿ ಇಲ್ಲಿ ಗೆಲುವು ಸಾಧಿಸಿದ್ದಾರೆ.
-
Annamalai: ಅಣ್ಣಾಮಲೈ ಮತ್ತು ರಾಜಕೀಯ ಉನ್ಮಾದ: ಶಿವಕುಮಾರ್ ಮೆಣಸಿನಕಾಯಿ ಬರಹ -
Baglkot By Poll:9 ವರ್ಷ ಅಧಿಕಾರದಲ್ಲಿದ್ದ ಬಿಜೆಪಿ ಸಾಧನೆ ಶೂನ್ಯ: ಗ್ಯಾರಂಟಿ ಯೋಜನೆಗಳ ಲೆಕ್ಕ ಕೊಟ್ಟ ಸಿದ್ದರಾಮಯ್ಯ -
Bagalkote: ಕೃಷ್ಣ ಮೇಲ್ದಂಡೆ ಯೋಜನೆ ವಿಳಂಬಕ್ಕೆ ಕಾಂಗ್ರೆಸ್ಸೇ ಕಾರಣ: ವಿವರ ಬಿಚ್ಚಿಟ್ಟ ಬಸವರಾಜ ಬೊಮ್ಮಾಯಿ -
ಕೇರಳದಲ್ಲಿ ಬದಲಾವಣೆಯ ಪರ್ವ ಆರಂಭ: ಅಭಿವೃದ್ಧಿಗಾಗಿ ಜನ ಕಾಂಗ್ರೆಸ್ ಕೈಹಿಡಿಯಲಿದ್ದಾರೆ-ಡಿ.ಕೆ.ಶಿವಕುಮಾರ್ ಭವಿಷ್ಯ -
Bengaluru Rent: ಬೆಂಗಳೂರಿನಲ್ಲಿ ಕಡಿಮೆ ಬೆಲೆಗೆ ಬಾಡಿಗೆ ಮನೆಗಳು ಸಿಗುವ 6 ಪ್ರಮುಖ ಪ್ರದೇಶಗಳು -
ನೌಕರಿ ಬಿಟ್ಟು ಸ್ವಂತ ಉದ್ಯಮ: ಹುಣಸೆ ಸಿಹಿತಿಂಡಿಗೆ ಪೇಟೆಂಟ್ ಪಡೆದ ಬೈಲಹೊಂಗಲದ ಟೆಕ್ಕಿ; 17 ದೇಶಗಳಿಗೆ ರಫ್ತು -
Karnataka Rain: ಕರ್ನಾಟಕದಲ್ಲಿ ಮಳೆ ಕೊರತೆ ಈ ಬಾರಿ ಈ ಭಾಗಗಳಲ್ಲಿ ಸಂಕಷ್ಟ, ಕುಡಿಯುವ ನೀರಿಗೂ ಹಾಹಾಕಾರ -
ಶೀಘ್ರದಲ್ಲೇ ದ್ವಿತೀಯ PUC ಫಲಿತಾಂಶ ಪ್ರಕಟ: ರಿಸಲ್ಟ್ ಡೇಟ್, ಚೆಕ್ ಮಾಡುವ ವಿಧಾನ ಸೇರಿ ಸಂಪೂರ್ಣ ಮಾಹಿತಿ ಇಲ್ಲಿದೆ -
Viral Video: ಶಿಕ್ಷಕಿ ಬಿಟ್ಟುಹೋಗುವ ಸುದ್ದಿ ಕೇಳಿ ಕಣ್ಣೀರಿಟ್ಟ ಮಕ್ಕಳ ಮನಮುಟ್ಟುವ ವಿಡಿಯೋ ವೈರಲ್ -
NR Narayana Murthy: ಬೆಂಗಳೂರಿನ ಯುಬಿ ಸಿಟಿಯಲ್ಲಿ ಬರೋಬ್ಬರಿ ಇಷ್ಟು ಕೋಟಿ ಐಷಾರಾಮಿ ಮನೆ ಖರೀದಿ ಮಾಡಿದ ದಂಪತಿ -
ಮಾಂಗಲ್ಯ ಧಾರಣೆಗೆ 5 ನಿಮಿಷ ಬಾಕಿ ಇರುವಾಗ ಮದುವೆ ನಿಲ್ಲಿಸಿದ ವಧು! ವರನ ನಡೆಗೆ ನೆಟ್ಟಿಗರು ಫಿದಾ -
Bengaluru property: ಬೆಂಗಳೂರಿನಲ್ಲಿ ಕಡಿಮೆ ಬೆಲೆಗೆ ಪ್ರಾಪರ್ಟಿ ಸಿಗುವ 10 ಪ್ರದೇಶಗಳು, ಬಡವರೂ ಭೂಮಿ ಖರೀದಿಸಬಹುದು












Click it and Unblock the Notifications