ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಐದು ವರ್ಷದಲ್ಲೇ ಮೊದಲ ಬಾರಿ ಡಿಸೇಲ್ ದರ ಇಳಿಕೆ

|
Google Oneindia Kannada News

ನವದೆಹಲಿ, ಅ. 19 : ಕೇಂದ್ರ ಸರ್ಕಾರ ನಾಗರಿಕರಿಗೆ ಮತ್ತೊಂದು ದೀಪಾವಳಿ ಗಿಫ್ಟ್ ನೀಡಿದೆ. ನಿರಂತರವಾಗಿ ಪೆಟ್ರೋಲ್ ಬೆಲೆ ಇಳಿಸಿದ್ದ ಕೇಂದ್ರ ಸರ್ಕಾರ ಇದೀಗ ಡೀಸೆಲ್ ಬೆಲೆಯನ್ನು ಲೀಟರ್‌ಗೆ 3.37 ಇಳಿಕೆ ಮಾಡಿದ್ದು ಶನಿವಾರ ಮಧ್ಯರಾತ್ರಿಯಿಂದಲೇ ಹೊಸ ದರ ಜಾರಿಯಾಗಿದೆ.

ಅಲ್ಲದೇ ಡೀಸೆಲ್ ದರ ನಿಗದಿಯನ್ನು ಸರ್ಕಾರ ನಿಯಂತ್ರಣ ಮುಕ್ತಗೊಳಿಸಿದೆ. ಬೆಂಗಳೂರಿನಲ್ಲಿ 64.05 ರೂ. ಇದ್ದ ಡೀಸೆಲ್ ಗೆ ಈಗ 60 ರೂ. ನೀಡಿದರೆ ಸಾಕು. ಪ್ರಧಾನಿ ನರೇಂದ್ರ ಮೋದಿ ಅಧ್ಯಕ್ಷತೆಯಲ್ಲಿ ಶನಿವಾರ ನಡೆದ ಕೇಂದ್ರ ಸಂಪುಟ ಸಭೆ ಈ ನಿರ್ಧಾರ ಕೈಗೊಂಡಿದ್ದು ಕಳೆದ ಐದು ವರ್ಷಗಳಲ್ಲೇ ಇದು ಡಿಸೇಲ್‌ಗೆ ಮೊದಲ ಇಳಿಕೆ ಭಾಗ್ಯವಾಗಿದೆ.[ಹಣದುಬ್ಬರ ಕುಸಿತ, ಪೆಟ್ರೋಲ್ ಬೆಲೆ 1 ರೂ.ಇಳಿಕೆ]

 diesel

ಈ ಬಗ್ಗೆ ಮಾಹಿತಿ ನೀಡಿದ ಹಣಕಾಸು ಸಚಿವ ಅರುಣ್ ಜೇಟ್ಲಿ, ದರ ನಿಯಂತ್ರಣವನ್ನು ಸರ್ಕಾರ ಮುಕ್ತಮಾಡಿದೆ. ಹಾಗಾಗಿ ಇನ್ನು ಮುಂದೆ ಡೀಸೆಲ್‌ನ ಚಿಲ್ಲರೆ ದರ ಕೂಡ ಪೆಟ್ರೋಲ್‌ನಂತೆಯೇ ಅಂತಾರಾಷ್ಟ್ರೀಯ ಕಚ್ಚಾ ತೈಲ ದರದ ಏರಿಳಿತವನ್ನು ಅವಲಂಬಿಸಿರಲಿದೆ ಎಂದು ತಿಳಿಸಿದರು.[ಜನರಿಗೆ ದೀಪಾವಳಿ ಕೊಡುಗೆ ನೀಡಲಿದೆಯೇ ಕೇಂದ್ರ ಸರ್ಕಾರ]

ಜನವರಿ 29, 2009 ರಂದು ಡೀಸೆಲ್ ದರದಲ್ಲಿ ಲೀಟರ್‌ಗೆ 2 ರೂ. ಕಡಿತ ಮಾಡಿದ್ದೆ ಕೊನೆ. ನಂತರ ನಿರಂತರವಾಗಿ ಡಿಸೇಲ್‌ ಏರುತ್ತಲೇ ಇತ್ತು. ತೆರಿಗೆ ಹೊರೆ ಕಡಿಮೆ ಮಾಡಿಕೊಳ್ಳಲು ಯುಪಿಎ ಸರ್ಕಾರ ಡಿಸೇಲ್ ಬೆಲೆಯನ್ನು ಪ್ರತಿ ತಿಂಗಳು 50 ಪೈಸೆ ಹೆಚ್ಚಿಸುವಂತೆ ನಿಯಮವೊಂದನ್ನು ಜಾರಿಗೆ ತಂದಿತ್ತು. ಪರಿಣಾಮ 5 ವರ್ಷಗಳಲ್ಲಿ 30 ರೂ. ಇದ್ದ ಡಿಸೇಲ್‌ 60 ರೂಪಾಯಿಗೆ ತಲುಪಿತ್ತು. ಅಂದರೆ ದ್ವಿಗುಣಗೊಂಡಿತ್ತು.

English summary
In much-awaited reform, the government on Saturday deregulated diesel prices, a move that will result in cut of Rs 3.37 per litre diesel. Finance minister Arun Jaitely said the Cabinet in its meeting decided to deregulate or free diesel prices. As a result, retail diesel rates will now reflect international movement in oil prices.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X