ಬ್ಯಾಂಕ್ ಕ್ಯೂನಲ್ಲೇ ಮಗು ಹೆತ್ತ ಮಹಿಳೆ: ಹೆಸರೇನಿಡೋಣ ಹೇಳಿ?

Posted By:
Subscribe to Oneindia Kannada

ಕಾನ್ಪುರ, ಡಿಸೆಂಬರ್, 3: ಅಧಿಕ ಮುಖಬೆಲೆಯ ನೋಟುಗಳನ್ನು ನಿಷೇಧಿಸಿದ ಪರಿಣಾಮ ಅಪರೂಪದ ಘಟನೆಯೊಂದು ಸಂಭವಿಸಿದೆ. ಹಣ ವಿತ್ ಡ್ರಾ ಮಾಡಿಕೊಳ್ಳಲು ಕಾನ್ಪುರ ದೆಹಾತ್ ಜಿಲ್ಲೆಯ, ಜಿಹಿಂಜಾಕ್ ಪ್ರದೇಶದಲ್ಲಿರುವ ಪಂಜಾಬ್ ನ್ಯಾಷನಲ್ ಬ್ಯಾಂಕ್ ಮುಂದೆ ಕ್ಯೂನಿಂತಿದ್ದ ಮಹಿಳೆಯೊಬ್ಬರು ಬ್ಯಾಂಕ್ ನಲ್ಲೇ ಪ್ರಸವಿಸಿರುವ ಘಟನೆ ಶುಕ್ರವಾರ ನಡೆದಿದೆ.

ಇಲ್ಲಯ ಸರ್ದಾಪುರದ ಮರ್ಜಾ ಶಾಪುರ್ ದೇರಾ ಪ್ರದೇಶದ ಸರ್ವೇಶಾ ದೇವಿ ಅವರು ಕ್ಯೂನಲ್ಲಿ ನಿಂತಿದ್ದ ವೇಳೆ ಅವರಿಗೆ ಪ್ರಸವ ವೇದನೆ ಕಾಣಿಸಿಕೊಂಡಿದೆ, ಅಲ್ಲಿದ್ದ ಗ್ರಾಹಕರು ಆಕೆ ಪ್ರಸವ ವೇದನೆಗೆ ಒಳಗಾಗಿರುವುದನ್ನು ಗಮನಿಸಿ ಸಹಾಯ ಮಾಡಿದ್ದಾರೆ. ಬ್ಯಾಂಕ್ ಆವರಣದಲ್ಲೇ ಮಹಿಳೆ ಪ್ರಸವಿಸಿದ್ದಾಳೆ.

Demonetisation: Kanpur woman delivers baby in bank queue

ಮಹಿಳೆ ಗಂಡು ಮಗುವಿಗೆ ಜನ್ಮ ನೀಡಿದ್ದು, ಇದು ಆಕೆಗೆ 5ನೇ ಮಗು ಎಂದು ಹೇಳಲಾಗಿದೆ. ಬ್ಯಾಂಕ್ ಸಿಬ್ಬಂದಿ ವಿಷಯವನ್ನು ಕೂಡಲೇ ಪೊಲೀಸರಿಗೆ ತಿಳಿಸಿದ್ದಾರೆ. ಜಿಹಿಂಜಾಕ್ ಸಮುದಾಯ ಆರೋಗ್ಯ ಕೇಂದ್ರದ ಸಿಬ್ಬಂದಿ ಘಟನಾ ಸ್ಥಳಕ್ಕೆ ದೌಡಾಯಿಸಿ ಮಹಿಳೆಗೆ ಚಿಕಿತ್ಸೆ ನೀಡಿದ್ದಾರೆ.

ಮಹಿಳೆಯು ಲೋಹಿಯಾ ಅವಾಸ್ ಲೋನ್ ಹಣ ಕಟ್ಟಲು ಬ್ಯಾಂಕ್ ನಿಂದ ರೂ. 5 ಸಾವಿರ ಹಣ ವಿತ್ ಡ್ರಾ ಮಾಡಲು ಬಂದಿದ್ದರು. ಶುಕ್ರವಾರ ಬೆಳಿಗ್ಗೆ 11 ಗಂಟೆಯಿಂದ ಕ್ಯೂ ನಲ್ಲಿ ನಿಂತಿದ್ದರು. ಮಧ್ಯಾಹ್ನ 3.45ರ ಸುಮಾರಿನಲ್ಲಿ ಮಹಿಳೆ ಮಗುವಿಗೆ ಜನ್ಮ ನೀಡಿದ್ದಾರೆ ಎಂದು ಬ್ಯಾಂಕ್ ಹಿರಿಯ ಅಧಿಕಾರಿಯೊಬ್ಬರು ಮಾಧ್ಯಮಗಳಿಗೆ ತಿಳಿಸಿದ್ದಾರೆ.

ಮಹಿಳೆಗೆ ಪ್ರಸವ ವೇದನೆ ಕಾಣಿಸಿಕೊಳ್ಳುತ್ತಿದ್ದಂತೆ ಗ್ರಾಹಕರು ಆ್ಯಂಬುಲೆನ್ಸ್ ಕರೆ ಮಾಡಿದ್ದಾರೆ, ಆದರೆ ಮಹಿಳೆಯ ನೋವಿನ ತೀವ್ರತೆ ಹೆಚ್ಚಾಗಿದ್ದರಿಂದ ಅಲ್ಲಿದ್ದ ಮಹಿಳಾ ಗ್ರಾಹಕರು ಸುತ್ತುವರಿದು ಮಹಿಳೆಗೆ ಹೆರಿಗೆ ಮಾಡಿಸಿದ್ದಾರೆ ಎಂದು ಅವರು ತಿಳಿಸಿದ್ದಾರೆ.

ಮಹಿಳೆ ಮತ್ತು ಮಗುವನ್ನು ಜಿಹಿಂಜಾಕ್ ಸಮುದಾಯ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಇಬ್ಬರೂ ಆರೋಗ್ಯದಿಂದ ಇದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ. ಮೂರು ತಿಂಗಳ ಹಿಂದಷ್ಟೇ ಮಹಿಳೆಯ ಪತಿ ತೀವ್ರ ಅನಾರೋಗ್ಯದಿಂದ ಸಾವನ್ನಪ್ಪಿದ್ದಾರೆ.

ಬ್ಯಾಂಕ್ ನಲ್ಲೇ ಜನ್ಮಿಸಿದ ಈ ಮಗುವಿಗೆ ಏನೆಂದು ಹೆಸರಿಡಿಬಹುದು ಯೋಚಿಸಿ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
In perhaps a first of its kind case since demonetisation, a woman delivered a child while standing in a queue to withdraw cash in front of Punjab National Bank in Jhinjhak area of Kanpur Dehat district on Friday.
Please Wait while comments are loading...