ನೋಟು ನಿಷೇಧದ 50ದಿನ: ಸಮೀಕ್ಷೆಯಲ್ಲಿ ಮತ್ತೆ ಮೋದಿಗೆ ಉಘೇ..ಉಘೇ..

Written By:
Subscribe to Oneindia Kannada

ಅಪನಗದೀಕರಣದ ಬಿಸಿ ಹೆಚ್ಚುಕಮ್ಮಿ ಸರಿದಾರಿಗೆ ಬರುತ್ತಿರವ ಬೆನ್ನಲ್ಲೇ ಸಾಮಾಜಿಕ ಕೆಲಸದಲ್ಲಿ ಗುರುತಿಸಿಕೊಂಡಿರುವ ಸಂಸ್ಥೆಯೊಂದು ನಡೆಸಿದ ಸಮೀಕ್ಷೆಯಲ್ಲಿ ಪ್ರಧಾನಿ ಮೋದಿಗೆ ಅಭೂತಪೂರ್ವ ಬೆಂಬಲ ಸಿಕ್ಕಿದೆ.

ನೋಟು ನಿಷೇಧದ 50ದಿನದ ನಂತರ ಆನ್ಲೈನ್ ಮೂಲಕ ನಡೆಸಿದ ಸಮೀಕ್ಷೆಯಲ್ಲಿ ಭಾಗವಹಿಸಿದ ಜನ, ಪ್ರಧಾನಿ ಬೆನ್ನಿಗೆ ನಿಂತಿದ್ದಾರೆ. ಈ ಸಮೀಕ್ಷೆಯಲ್ಲಿ ಊಹಿಸಲೂ ಅಸಾಧ್ಯವಾದ ರೀತಿಯಲ್ಲಿ ಮೋದಿಗೆ ಜನಬೆಂಬಲ ವ್ಯಕ್ತವಾಗಿರುವುದು ಗಮನಿಸಬೇಕಾದ ಅಂಶ.

ಸಾಮಾಜಿಕ ಸಂಸ್ಥೆ 'ಲೋಕಲ್ ಸರ್ಕಲ್ಸ್' ಸುಮಾರು 3.5ಲಕ್ಷ ಜನರ ಅಭಿಪ್ರಾಯವನ್ನು ಕ್ರೋಢೀಕರಿಸಿ ಈ ಸಮೀಕ್ಷೆಯನ್ನು ಸಿದ್ದಪಡಿಸಿದೆ.

ಸಮೀಕ್ಷೆಯಲ್ಲಿನ ಕುತೂಹಲಕಾರಿ ಅಂಶವೇನಂದರೆ ನವೆಂಬರ್ 8ರಂದು ನೋಟು ನಿಷೇಧಗೊಳಿಸಿದ ನಂತರ ಏನು ಜನಬೆಂಬಲ ಮೋದಿಗೆ ವ್ಯಕ್ತವಾಗಿತ್ತೋ, ಅಷ್ಟೇ ಜನಬೆಂಬಲ ಐವತ್ತು ದಿನದ ನಂತರವೂ ಸರ್ವೇಯಲ್ಲಿ ಪಾಲ್ಗೊಂಡವರು ಮೋದಿ ಪರವಾಗಿ ನಿಂತಿರುವುದು.

ಸರ್ವೇ ಪ್ರಕಾರ ಶೇ. 97ರಷ್ಟು ಜನ ಅಪನದೀಕರಣದ ಪರವಾಗಿ ನಿಂತಿದ್ದರೆ, ಶೇ. 75ರಷ್ಟು ಜನ ನೋಟು ನಿಷೇಧದ ನಂತರ ಸಾರ್ವಜನಿಕರಿಗೆ ಆಗುತ್ತಿದ್ದ ತೊಂದರೆಗೆ ಸರಕಾರೀ ಅಧಿಕಾರಿಗಳೇ ಕಾರಣ ಎಂದು ಅಭಿಪ್ರಾಯ ವ್ಯಕ್ತ ಪಡಿಸಿದ್ದಾರೆ.

ಸಮೀಕ್ಷೆಯ ಹೈಲೆಟ್ಸ್, ಮುಂದೆ ಓದಿ..

ಲೋಕಲ್ ಸರ್ಕಲ್ಸ್

ಲೋಕಲ್ ಸರ್ಕಲ್ಸ್

ಈ ಸಮೀಕ್ಷೆಯಲ್ಲಿ 3.5ಲಕ್ಷ ಜನ ಭಾಗವಹಿಸಿದ್ದರೆ, ಸುಮಾರು ಒಂದು ಲಕ್ಷ ಜನ ಸಂವಾದದಲ್ಲಿ ಭಾಗವಹಿಸಿದ್ದರು. ನೋಟು ನಿಷೇಧದ ಮೂರನೇ ವಾರದಿಂದ ಐವತ್ತು ದಿನದವರೆಗೂ, ಶೇ. 97ರಷ್ಟು ಸಮೀಕ್ಷೆಯಲ್ಲಿ ಭಾಗವಹಿಸಿದ್ದವರು ನೋಟು ಬ್ಯಾನ್ ಮಾಡಿರುವುದು ಸರಿಯಾದ ನಿರ್ಧಾರ ಎಂದು ಅಭಿಪ್ರಾಯ ವ್ಯಕ್ತ ಪಡಿಸಿದ್ದಾರೆ.

ಐನೂರು ರೂಪಾಯಿ ನೋಟು

ಐನೂರು ರೂಪಾಯಿ ನೋಟು

ಸಮೀಕ್ಷೆಯಲ್ಲಿ ಭಾಗವಹಿಸಿದ ಶೇ. 68ರಷ್ಟು ಜನ ಇದುವರೆಗೂ ಕಡಿಮೆ ಮೊತ್ತದ ಕರೆನ್ಸಿ ಎಟಿಎಂ ಮತ್ತು ಬ್ಯಾಂಕುಗಳಲ್ಲಿ ಲಭ್ಯವಾಗುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದಾರೆ. ಇದರಲ್ಲಿ ಐನೂರು ರೂಪಾಯಿ ನೋಟಿನ ಮುಖವನ್ನೂ ನೋಡಿಲ್ಲ ಎನ್ನುವವರ ಸಂಖ್ಯೆಯೂ ಇದೆ.

ಎರಡು ಸಾವಿರ ರೂಪಾಯಿ ನೋಟು

ಎರಡು ಸಾವಿರ ರೂಪಾಯಿ ನೋಟು

ಎರಡು ಸಾವಿರ ರೂಪಾಯಿ ನೋಟನ್ನು ಯಾವ ರೀತಿ ಬಳಸಿಕೊಳ್ಳುತ್ತಿದ್ದೀರಿ ಎನ್ನುವ ಪ್ರಶ್ನೆಗೆ ತೀರಾ ಅಗತ್ಯಬಿದ್ದರೆ ಮಾತ್ರ ಬಳಸಿಕೊಳ್ಳುತ್ತಿದ್ದೇವೆ ಎನ್ನುವವರು ಶೇ. 45, ಹೆಚ್ಚಾಗಿ ಬಳಸಿಕೊಳ್ಳುತ್ತಿದ್ದೇವೆ ಎನ್ನುವವರು ಶೇ.41 ಮತ್ತು ಉಳಿತಾಯ ಮಾಡುತ್ತಿದ್ದೇವೆ ಎನ್ನುವವರ ಸಂಖ್ಯೆ ಶೇ. 14.

ಕರೆನ್ಸಿ ಅಭಾವ

ಕರೆನ್ಸಿ ಅಭಾವ

ಅಪನಗದೀಕರಣದಿಂದ ಕರೆನ್ಸಿ ಅಭಾವ ಉಂಟಾಗಲು ಯಾರು ಕಾರಣ ಎನ್ನುವ ಪ್ರಶ್ನೆಗೆ:
ರಿಸರ್ವ್ ಬ್ಯಾಂಕ್ - ಶೇ. 28
ಹಣಕಾಸು ಸಚಿವಾಲಯ - ಶೇ. 23
ಪ್ರಧಾನಮಂತ್ರಿ - ಶೇ. 25
ಬ್ಯಾಂಕುಗಳು - ಶೇ. 24

ಪ್ರಧಾನಿ ಮೋದಿ

ಪ್ರಧಾನಿ ಮೋದಿ

ನೋಟು ನಿಷೇಧಗೊಂಡ ಮೊದಲ ವಾರದಲ್ಲಿ ಮೋದಿಗೆ ವಿವಿಧ ಸಮೀಕ್ಷೆಯಲ್ಲಿ ಉತ್ತಮ ಬೆಂಬಲ ವ್ಯಕ್ತವಾಗಿತ್ತು. ನಂತರದ ದಿನಗಳಲ್ಲಿ ಇದೊಂದು ಒಳ್ಳೆಯ ನಿರ್ಧಾರವಾದರೂ, ಪೂರ್ವ ತಯಾರಿ ಮಾಡಿಕೊಂಡಿರಲಿಲ್ಲ ಎನ್ನುವವರ ಕೂಗು ಹೆಚ್ಚಾಗ ತೊಡಗಿತ್ತು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
Still 97 per cent support Prime Minister Narendra Modi over demonetisation, 75 per cent blame others for cash crunch: Survey by LocalCircles.
Please Wait while comments are loading...