ಕೊಲೆ ಪ್ರಕರಣ: ದೆಹಲಿ ವಿವಿ ಪ್ರೊ. ನಂದಿನಿ ಸುಂದರ್ ಆರೋಪಿ

Posted By:
Subscribe to Oneindia Kannada

ರಾಯಪುರ, ನವೆಂಬರ್, 8: ನಕ್ಸಲ್ ಪೀಡಿತ ರಾಜ್ಯ ಛತ್ತೀಸ್ ಗಢದಲ್ಲಿ ಆದಿವಾಸಿ ಸುಮುದಾಯದ ಗ್ರಾಮಸ್ಥರೊಬ್ಬರ ಕೊಲೆ ಪ್ರಕರಣದಲ್ಲಿ ಮಾವೋವಾದಿಗಳ ಜತೆಗೆ ದೆಹಲಿ ವಿವಿ ಪ್ರೊಫೆಸರ್ ನಂದಿನಿ ಸುಂದರ್ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.

ನಂದಿನಿ ಸುಂದರ್ ಅವರ ಜತೆಗೆ ಜವಾಹರ್ ಲಾಲ್ ವಿಶ್ವವಿದ್ಯಾಲಯದ (ಜೆ ಎನ್ ಯು) ಪ್ರಾಧ್ಯಾಪಕಿ ಅರ್ಚನಾ ಪ್ರಸಾದ್ ವಿರುದ್ಧವೂ ಸಹ ಪ್ರಕರಣ ದಾಖಲಿಲಾಗಿದೆ.

ಈ ವರ್ಷ ಏಪ್ರಿಲ್ ನಿಂದ ಆದಿವಾಸಿ ಸಮುದಾಯದ ಬಘೇಲ್ ಮತ್ತು ಅವರ ಸಹಚರರು ನಕ್ಸಲ್ ಚಟುವಟಿಕೆಗಳ ವಿರುದ್ಧ ಪ್ರತಿಭಟನೆ ನಡೆಸುತ್ತಿದ್ದರು.

Delhi University Pro. Nandini Sundar Accused in Chhattisgarh Murder

ಕಳೆದ ಶುಕ್ರವಾರ ಬಘೇಲ್ ಅವರನ್ನು ಹತ್ಯೆ ಮಾಡಲಾಗಿತ್ತು. ಬಘೇಲ್ ಹತ್ಯೆ ಹಿಂದೆ ನಕ್ಸಲರ ಕೈವಾಡವಿದೆ ಎಂದು ಆರೋಪಿಸಲಾಗಿತ್ತು.

ಪ್ರಾಧ್ಯಪಕರಾದ ನಂದಿನಿ ಸುಂದರ್, ಅರ್ಚನಾ ಪ್ರಸಾದ್ ಜತೆಗೆ ದೆಹಲಿಯ ಜೋಶಿ ಸಂಸ್ಥೆಯ ಅಧಿಕಾರಿ ವಿನೀಶ್ ತಿವಾರಿ, ಛತ್ತೀಸ್ ಘರ್ ಸಿಪಿಐ ಮಾರ್ಕಿಸ್ಟ್ ರಾಜ್ಯ ಕಾರ್ಯದರ್ಶಿ ಸಂಜಯ್ ಪರತೆ ವಿರುದ್ಧವೂ ಸಹ ಪ್ರಕರಣ ದಾಖಲಿಸಲಾಗಿದೆ.

ಕೊಲೆಯಾಗಿರುವ ಬಘೇಲ್ ಅವರ ಪತ್ನಿ ನೀಡಿರುವ ದೂರಿನ ಹಿನ್ನೆಲೆಯಲ್ಲಿ ಪ್ರಾಧ್ಯಪಕರು ಅಧಿಕಾರಿಗಳು ಸೇರಿದಂತೆ ಇನ್ನೂ ಕೆಲವು ಮಾವೋವಾದಿಗಳ ವಿರುದ್ಧವೂ ಸಹ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ಇಲ್ಲಿಯ ಬಸ್ತರ್ ಪ್ರದೇಶದ ಪೊಲೀಸ್ ಇನ್ಸ್ ಪೆಕ್ಟರ್ ಜನರಲ್ ಎಸ್ ಆರ್ ಪಿ ಕಲ್ಲೂರಿ ಹೇಳಿದ್ದಾರೆ.

ಆರೋಪಿಗಳ ವಿರುದ್ಧ ಕೊಲೆ ಗಲಭೆ, ಕ್ರಿಮಿನಲ್ ಪಿತೂರಿ ಆರೋಪಗಳನ್ನು ಹೊರಿಸಿ ತೊಂಗವಾಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, "ತನಿಖೆಯಲ್ಲಿ ತಪ್ಪು ಸಾಬೀತಾದರೆ ಕಠಿಣ ಶಿಕ್ಷೆ ನೀಡಲಾಗುವುದು ಎಂದು ಐಜಿ ತಿಳಿಸಿದ್ದಾರೆ.

ಈ ಹಿಂದೆ ಬಘೇಲ್ ಮತ್ತು ಇತರ ಗ್ರಾಮಸ್ಥರು ನಂದಿನಿ ಸುಂದರ್, ಅರಚನಾ ಪ್ರಸಾದ್, ತಿವಾರಿ, ಪರತೆ ವಿರುದ್ಧ ತೊಂಗವಾಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Delhi University professor Nandini Sundar, an activist and author noted for her work in Maoist-hit Chhattisgarh, has been labelled a "murder suspect" by the police in the state.
Please Wait while comments are loading...