ರಸೀದಿ ಕೇಳಿದ ಮಹಿಳೆಗೆ ಇಟ್ಟಿಗೆ ಪೆಟ್ಟು ನೀಡಿದ ಪೇದೆ
ನವದೆಹಲಿ, ಮೇ. 11: ಸಾರಿಗೆ ನಿಯಮ ಮುರಿದ ಮಹಿಳೆ ದಂಡ ತುಂಬಿದಳು. ನಂತರ ಅದಕ್ಕೆ ರಸೀದಿ ನೀಡುವಂತೆ ಕೇಳಿದಳು. ಆದರೆ ಸಿಕ್ಕಿದ್ದು ಇಟ್ಟಿಗೆ ಏಟು.
ಇದು ನಡೆದಿರುವುದು ದೇಶದ ರಾಜಧಾನಿ ದೆಹಲಿಯಲ್ಲಿ. ದೆಹಲಿ ಮಹಿಳೆಯರಿಗೆ ಸುರಕ್ಷಿತವಲ್ಲ ಎಂಬುದು ಮತ್ತೊಮ್ಮೆ ಸಾಬೀತಾಗಿದೆ. ಆದರೆ ಇಲ್ಲಿ ಹಲ್ಲೆ ಮಾಡಿರುವುದು ರಕ್ಷಣೆ ಮಾಡಬೇಕಿದ್ದ ಆರಕ್ಷಕನೇ.[ಜೇನುಗೂಡಿಗೆ ಕಲ್ಲು ಹೊಡೆದ #MyChoice ಜಾಹೀರಾತು]

ಕೇಂದ್ರ ದೆಹಲಿಯ ಗಾಲ್ಫ್ ಲಿಂಕ್ ಪ್ರದೇಶದಲ್ಲಿ ಸೋಮವಾರ ಘಟನೆ ನಡೆದಿದ್ದು ಮಹಿಳೆಯ ಮೇಲೆ ನಡೆದ ಅಮಾನವೀಯವಾಗಿ ಹಲ್ಲೆ ಸಿಸಿಟಿವಿಯಲ್ಲಿ ದಾಖಲಾಗಿದೆ. ಆರೋಪಿ ಹೆಡ್ ಕಾನ್‌ಸ್ಟೆಬಲ್‌ನನ್ನು ಸೇವೆಯಿಂದ ವಜಾ ಮಾಡಲಾಗಿದ್ದು ಆತನ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಲಾಗಿದೆ ಎಂದು ದೆಹಲಿ ಕಮಿಷನರ್ ಬಿ ಎಸ್ ಬಸ್ಸಿ ತಿಳಿಸಿದ್ದಾರೆ.
ಸಂತ್ರಸ್ತ ಮಹಿಳೆ ಹೇಳುವಂತೆ, ಹೆಡ್ ಕಾನ್‌ಸ್ಟೆಬಲ್ ಆಕೆಯ ವಾಹನವನ್ನು ಸಾರಿಗೆ ನಿಯಮ ಉಲ್ಲಂಘನೆಗಾಗಿ ತಡೆದಿದ್ದಾನೆ. ದಂಡದ ಹಣಕ್ಕೆ ರಸೀದಿ ಕೊಟ್ಟಿಲ್ಲ. ರಸೀದಿ ಕೇಳಿದ್ದಕ್ಕೆ ರಸ್ತೆಯಲ್ಲಿ ಬಿದ್ದಿದ್ದ ಇಟ್ಟಿಗೆ ತೆಗೆದುಕೊಂಡು ಹಲ್ಲೆ ಮಾಡಿದ್ದಾನೆ. ಪರಿಣಾಮ ಆಕೆಯ ಮಗು ಕೂಡ ಗಾಯಗೊಂಡಿದ್ದು ವಾಹನಕ್ಕೂ ಹಾನಿಯಾಗಿದೆ.
ಪೊಲೀಸ್ ಕಮಿಷನರ್ ಸಹ ಘಟನೆ ಬಗ್ಗೆ ಕ್ಷಮೆಯಾಚಿಸಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲೂ ಘಟನೆಗೆ ತೀವ್ರ ವಿರೋಧ ವ್ಯಕ್ತವಾಗಿದ್ದು ನಾಗರೀಕರು ಟ್ವಿಟ್ಟರ್ ಮತ್ತು ಫೇಸ್ ಮೂಲಕ ತಮ್ಮ ಆಕ್ರೋಶ ಹೊರಹಾಕಕಿದ್ದಾರೆ.
Delhi: Woman thrashed by a traffic policeman (Source: Amateur video) https://t.co/kzF0sykBL4
— ANI (@ANI_news) May 11, 2015 











Click it and Unblock the Notifications