ಜೂನ್ 20 ಬಳಿಕ ಸಂಚಾರಕ್ಕೆ ಸಜ್ಜು ದೆಹಲಿ-ಮುಂಬೈ ಎಕ್ಸ್‌ಪ್ರೆಸ್‌ವೇ: 12 ಗಂಟೆಗಳಲ್ಲಿ ಮುಂಬೈ ತಲುಪಬಹುದು!

Expressway Updates: ಭಾರತದ ಮಹತ್ವಾಕಾಂಕ್ಷೆಯ ರಸ್ತೆ ಯೋಜನೆಗಳಲ್ಲಿ ಒಂದಾದ ದೆಹಲಿ-ಮುಂಬೈ ಎಕ್ಸ್‌ಪ್ರೆಸ್‌ವೇ ಸಂಪೂರ್ಣವಾಗಿ ಕಾರ್ಯಾರಂಭ ಆರಂಭಿಸಲು ಸಜ್ಜಾಗಿದೆ. ರಾಜಸ್ಥಾನದ ಕೋಟಾ ಸಮೀಪ ನಿರ್ಮಾಣವಾಗುತ್ತಿದ್ದ 4.9 ಕಿಲೋಮೀಟರ್ ಉದ್ದದ ಎಂಟು ಲೇನ್ ಸುರಂಗ ಕಾಮಗಾರಿ ಪೂರ್ಣಗೊಂಡಿದ್ದು, ಯೋಜನೆಯ ಕೊನೆಯ ಪ್ರಮುಖ ಅಡಚಣೆಯೂ ನಿವಾರಣೆಯಾಗಿದೆ. ಅಧಿಕಾರಿಗಳ ಮಾಹಿತಿ ಪ್ರಕಾರ, ಜೂನ್ 20ರ ಬಳಿಕ ಎಕ್ಸ್‌ಪ್ರೆಸ್‌ವೇ ಸಂಪೂರ್ಣವಾಗಿ ಸಾರ್ವಜನಿಕ ಬಳಕೆಗೆ ಅನಾವರಣಗೊಳಿಸುವ ಸಾಧ್ಯತೆ ಇದೆ.

1 ಲಕ್ಷ ಕೋಟಿ ವೆಚ್ಚದ ಯೋಜನೆ

ದೆಹಲಿ-ಮುಂಬೈ ಎಕ್ಸ್‌ಪ್ರೆಸ್‌ವೇ ಯೋಜನೆಗೆ 2019 ರಲ್ಲಿ ಚಾಲನೆ ನೀಡಲಾಗಿತ್ತು. ಸುಮಾರು 1 ಲಕ್ಷ ಕೋಟಿ ರೂಪಾಯಿಗಳ ಬೃಹತ್ ವೆಚ್ಚದಲ್ಲಿ ನಿರ್ಮಾಣವಾಗುತ್ತಿರುವ ಈ ಹೆದ್ದಾರಿಯು ಒಟ್ಟು 1,386 ಕಿಲೋಮೀಟರ್ ಉದ್ದವನ್ನು ಹೊಂದಿದೆ. ದೇಶದ ರಾಜಧಾನಿ ದೆಹಲಿ ಹಾಗೂ ವಾಣಿಜ್ಯ ನಗರಿ ಮುಂಬೈ ನಡುವೆ ಅತಿ ವೇಗದ ರಸ್ತೆ ಸಂಪರ್ಕವನ್ನು ಕಲ್ಪಿಸುವ ಈ ಹೆದ್ದಾರಿ, ಉಭಯ ನಗರಗಳ ನಡುವಿನ ವ್ಯಾಪಾರ ಮತ್ತು ಸಂಚಾರವನ್ನು ಮತ್ತಷ್ಟು ಸುಲಭಗೊಳಿಸಲಿದೆ.

Delhi Mumbai Expressway

ಐದು ರಾಜ್ಯಗಳಿಗೆ ನೇರ ಸಂಪರ್ಕ

ಈ ಎಕ್ಸ್‌ಪ್ರೆಸ್‌ವೇ ಹರಿಯಾಣ, ರಾಜಾಸ್ಥಾನ, ಮದ್ಯಪ್ರವೇಶ ಗುಜರಾತ ಮತ್ತು ಮಹಾರಾಷ್ಟ್ರ ರಾಜ್ಯಗಳ ಮೂಲಕ ಸಾಗಲಿದೆ. ಇದರಿಂದ ವಿವಿಧ ರಾಜ್ಯಗಳ ನಡುವೆ ವೇಗವಾದ ರಸ್ತೆ ಸಂಪರ್ಕ ದೊರೆಯಲಿದ್ದು, ಪ್ರಯಾಣ ಮತ್ತು ಸರಕು ಸಾಗಣೆ ಸುಲಭವಾಗಲಿದೆ.

Bengaluru-Mysuru Expressway: ಟೋಲ್ ಶುಲ್ಕ ಪಾವತಿಗೆ ಹೊಸ ವ್ಯವಸ್ಥೆ, ಸವಾರರಿಗೆ ಹಣ ಉಳಿತಾಯ
Bengaluru-Mysuru Expressway: ಟೋಲ್ ಶುಲ್ಕ ಪಾವತಿಗೆ ಹೊಸ ವ್ಯವಸ್ಥೆ, ಸವಾರರಿಗೆ ಹಣ ಉಳಿತಾಯ

ಕೋಟಾ ಸುರಂಗ ಯೋಜನೆಯ ವಿಶೇಷತೆ

ರಾಜಸ್ಥಾನದ ಕೋಟಾ ಸಮೀಪದ ಮುಕುಂದ್ರಾ ಹಿಲ್ಸ್ ಟೈಗರ್ ರಿಸರ್ವ್ ಕೆಳಭಾಗದಲ್ಲಿ 4.9 ಕಿಲೋಮೀಟರ್ ಉದ್ದದ ಎಂಟು ಲೇನ್ ಸುರಂಗ ನಿರ್ಮಿಸಲಾಗಿದೆ. ಈ ಸುರಂಗದಿಂದಾಗಿ ಬೆಟ್ಟಗಳ ಸುತ್ತಲಿನ ಉದ್ದವಾದ ಮತ್ತು ತಿರುವು-ಮುರುವುಗಳಿಂದ ಕೂಡಿದ ಮಾರ್ಗವನ್ನು ತಪ್ಪಿಸಲು ಸಾಧ್ಯವಾಗಿದೆ. ಇದರಿಂದ ಪ್ರಯಾಣದ ದೂರ ಮತ್ತು ಸಮಯ ಎರಡೂ ಕಡಿಮೆಯಾಗಲಿದೆ.

ರಾಜಸ್ಥಾನದ ಕೋಟಾ ಸಮೀಪ ಮುಕುಂದ್ರಾ ಹಿಲ್ಸ್ ಟೈಗರ್ ರಿಸರ್ವ್‌ನ ಕೆಳಭಾಗದಲ್ಲಿ 4.9 ಕಿಲೋಮೀಟರ್ ಉದ್ದದ ಎಂಟು ಲೇನ್ ಸುರಂಗವನ್ನು ಯಶಸ್ವಿಯಾಗಿ ನಿರ್ಮಿಸಲಾಗಿದೆ. ಪರಿಸರ ಮತ್ತು ವನ್ಯಜೀವಿಗಳ ಮುಕ್ತ ಓಡಾಟಕ್ಕೆ ಯಾವುದೇ ಅಡ್ಡಿಯಾಗದಂತೆ ಈ ಸುರಂಗವನ್ನು ವಿನ್ಯಾಸಗೊಳಿಸಿರುವುದು ಇದರ ವಿಶೇಷ. ಈ ಹೊಸ ಮಾರ್ಗದಿಂದಾಗಿ ಪ್ರವಾಸಿಗರು ಮತ್ತು ನಿತ್ಯ ಪ್ರಯಾಣಿಕರು ಈ ಹಿಂದೆ ಬೆಟ್ಟಗಳ ಸುತ್ತಲೂ ಇದ್ದ ತಿರುವುಗಳ ದಾರಿಯಲ್ಲಿ ಸುತ್ತಿ ಬಳಸಿ ಹೋಗುವುದು ತಪ್ಪಲಿದ್ದು, ಇಂಧನ ಉಳಿತಾಯದೊಂದಿಗೆ ಸುರಕ್ಷಿತ ಪ್ರಯಾಣ ಸಾಧ್ಯವಾಗಲಿದೆ.

ಕರ್ನಾಟಕದ ಶರಾವತಿ ಸೇರಿದಂತೆ ನೀವು ಭೇಟಿ ನೀಡಲೇಬೇಕಾದ ಭಾರತದ ಈ 6 ಪ್ರಸಿದ್ಧ ಸೇತುವೆಗಳು
ಕರ್ನಾಟಕದ ಶರಾವತಿ ಸೇರಿದಂತೆ ನೀವು ಭೇಟಿ ನೀಡಲೇಬೇಕಾದ ಭಾರತದ ಈ 6 ಪ್ರಸಿದ್ಧ ಸೇತುವೆಗಳು

24 ಗಂಟೆಯ ಪ್ರಯಾಣ 12 ಗಂಟೆಗೆ

ಈ ಎಕ್ಸ್‌ಪ್ರೆಸ್‌ವೇ ಸಂಪೂರ್ಣವಾಗಿ ಕಾರ್ಯಾರಂಭಿಸಿದ ಬಳಿಕ ದೆಹಲಿಯಿಂದ ಮುಂಬೈಗೆ ರಸ್ತೆ ಮೂಲಕ ತಲುಪಲು ಈಗ ಬೇಕಾಗುವ ಸಮಯ 24 ಗಂಟೆಗಳಿಗಿಂತ ಹೆಚ್ಚು ಬೇಕಾಗುತ್ತಿತ್ತು ಆದರೆ ಸುಮಾರು 12 ಗಂಟೆಗಳಿಗೆ ಇಳಿಯುವ ನಿರೀಕ್ಷೆಯಿದೆ. ಇದರಿಂದ ಪ್ರಯಾಣಿಕರಿಗೆ ಮಾತ್ರವಲ್ಲ, ಸರಕು ಸಾಗಣೆ ಕ್ಷೇತ್ರಕ್ಕೂ ಮಹತ್ತರ ಲಾಭವಾಗಲಿದೆ.

ವ್ಯಾಪಾರ ಮತ್ತು ಆರ್ಥಿಕತೆಗೆ ಉತ್ತೇಜನ

ಈ ಹೆದ್ದಾರಿ ಕಾರ್ಯಾರಂಭಿಸಿದ ಬಳಿಕ ವಿವಿಧ ರಾಜ್ಯಗಳ ನಡುವೆ ವ್ಯಾಪಾರ ವಹಿವಾಟು ಮತ್ತಷ್ಟು ವೇಗ ಪಡೆಯಲಿದೆ. ಸರಕು ಸಾಗಣೆ ವೆಚ್ಚ ಕಡಿಮೆಯಾಗುವುದರ ಜೊತೆಗೆ, ಮಾರ್ಗದ ಸುತ್ತಮುತ್ತಲಿನ ನಗರಗಳು ಮತ್ತು ಕೈಗಾರಿಕಾ ಪ್ರದೇಶಗಳ ಆರ್ಥಿಕ ಅಭಿವೃದ್ಧಿಗೂ ಉತ್ತೇಜನ ಸಿಗುವ ನಿರೀಕ್ಷೆಯಿದೆ.

ದೆಹಲಿ-ಮುಂಬೈ ಎಕ್ಸ್‌ಪ್ರೆಸ್‌ವೇ ಭಾರತದ ರಸ್ತೆ ಮೂಲಸೌಕರ್ಯ ಕ್ಷೇತ್ರದಲ್ಲಿ ಹೊಸ ಮೈಲಿಗಲ್ಲು ಸ್ಥಾಪಿಸಲಿದ್ದು, ದೇಶದ ಎರಡು ಪ್ರಮುಖ ನಗರಗಳ ನಡುವಿನ ಸಂಪರ್ಕವನ್ನು ಮತ್ತಷ್ಟು ಬಲಪಡಿಸಲಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+