ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

Delhi MCD Election Results : ಎಎಪಿ ಕಚೇರಿಯಲ್ಲಿ ಕಂಡುಬಂದ ಬಲೂನ್‌, ಧನ್ಯವಾದದ ಪೋಸ್ಟರ್‌ಗಳು

|
Google Oneindia Kannada News

ನವದೆಹಲಿ, ಡಿಸೆಂಬರ್‌ 7: ದೆಹಲಿ ಎಂಸಿಡಿ ಚುನಾವಣಾ ಮತ ಎಣಿಕೆ ಪ್ರಕ್ರಿಯೆ ಚಾಲ್ತಿಯಲ್ಲಿದೆ. ಆರಂಭಿಕ ಎಣಿಕೆ ಪ್ರಕ್ರಿಯೆಯನ್ನು ನೋಡಿದರೆ, ಎಎಪಿ ಹಾಗೂ ಬಿಜೆಪಿ ನಡುವೆ ತೀವ್ರ ಹಣಾಹಣಿ ಏರ್ಪಟ್ಟಿರುವಂತೆ ಕಂಡುಬರುತ್ತಿದೆ. ಹದಿನೈದು ವರ್ಷಗಳ ಕಾಲ ದೆಹಲಿ ಮಹಾನಗರ ಪಾಲಿಕೆಯಲ್ಲಿ ಬಿಜೆಪಿ ಅಧಿಕಾರದಲ್ಲಿತ್ತು. ಈ ಬಾರಿ ಎಎಪಿ ಅಧಿಕಾರದ ಗದ್ದುಗೆ ಏರುವ ಎಲ್ಲ ಸಾಧ್ಯತೆಗಳನ್ನು ಹೊಂದಿದೆ.

ನಿರೀಕ್ಷೆಗೆ ತಕ್ಕಂತೆ ಫಲಿತಾಂಶ ಬರುತ್ತಿಲ್ಲ ಎಂಬುದು ಎಎಪಿ ನಾಯಕರನ್ನು ಸ್ಪಷ್ಟ ಮಟ್ಟಿಗೆ ಚಿಂತೆಗೀಡು ಮಾಡಿದೆ. ಆ ಕಾರಣಕ್ಕಾಗಿ, ದೆಹಲಿ ಸಿಎಂ ಅರವಿಂದ್‌ ಕೇಜ್ರಿವಾಲ್‌, ಉಪ ಮುಖ್ಯಮಂತ್ರಿ ಮನೀಶ್‌ ಸಿಸೋಡಿಯಾ ಹಾಗೂ ರಾಜ್ಯಸಭಾ ಸದಸ್ಯ ರಾಘವ್‌ ಚಡ್ಆ ಅವರು ಬೆಳಿಗ್ಗೆಯೇ ಸಭೆಗಳನ್ನು ನಡೆಸಿದ್ದಾರೆ. ಬಿಜೆಪಿಯನ್ನು ಸೋಲಿಸುವುದು ಅಷ್ಟು ಸುಲಭವಲ್ಲ ಎಂಬುದು ಎಎಪಿ ನಾಯಕರ ತಲೆಬಿಸಿ ಮಾಡಿದೆ.

ಎಣಿಕೆ ಪ್ರಕ್ರಿಯೆ ಪ್ರಗತಿಯಲ್ಲಿರುವಾಗಲೇ ದೆಹಲಿಯ ಎಎಪಿ ಕಚೇರಿಗಳಲ್ಲಿ ಬಲೂನ್‌ಗಳು, ಸಂಭ್ರಮ ಹಾಗೂ ಧನ್ಯವಾದಗಳನ್ನು ಸಲ್ಲಿಸುವ ಪೋಸ್ಟರ್‌ಗಳು ಕಂಡುಬಂದಿವೆ.

Delhi MCD Election AAP Leaders In Huddle, Balloons Ready Amid Close

ಆದಾಗ್ಯೂ, ಎಣಿಕೆ ಪ್ರಗತಿಯಲ್ಲಿರುವಂತೆ ಸ್ವಿಂಗ್ ಟ್ರೆಂಡ್‌ಗಳ ನಡುವೆ ದೆಹಲಿಯ ಎಎಪಿ ಕಚೇರಿಯಲ್ಲಿ ಬಲೂನ್‌ಗಳು ಮತ್ತು ಸಂಭ್ರಮದ ಪೋಸ್ಟರ್‌ಗಳು ಸಿದ್ಧವಾಗಿವೆ.

ದೆಹಲಿಯ ಎಎಪಿ ಕೇಂದ್ರ ಕಚೇರಿಯಲ್ಲಿನ ಪೋಸ್ಟರ್‌ಗಳಲ್ಲಿ ಅರವಿಂದ್ ಕೇಜ್ರಿವಾಲ್ ಮುಗುಳ್ನಗುತ್ತಿರುವುದನ್ನು ಕಾಣಬಹುದು. ಅವರು ದೆಹಲಿ ಜನತೆಗೆ ಧನ್ಯವಾದ ಅರ್ಪಿಸುತ್ತಿರುವುದು ಪೋಸ್ಟರ್‌ಗಳಲ್ಲಿ ಗಮನಿಸಬಹುದು.

Delhi MCD Election AAP Leaders In Huddle, Balloons Ready Amid Close

'ಎಂಸಿಡಿಯಲ್ಲಿಯೂ ಕೇಜ್ರಿವಾಲ್' ಎಂಬ ಹಿಂದಿ ಘೋಷಣೆಗಳನ್ನು ಪೋಸ್ಟರ್‌ಗಳಲ್ಲಿ ಬರೆಯಲಾಗಿದೆ.

ದೆಹಲಿ ಮಹಾನಗರ ಪಾಲಿಕೆ ಚುನಾವಣೆಯ ಮತ ಎಣಿಕೆ ಪ್ರಕ್ರಿಯೆ ಇಂದು ಬೆಳಿಗ್ಗೆ 8 ಗಂಟೆಗೆ ಪ್ರಾರಂಭವಾಗಿದೆ. ಬೆಳಿಗ್ಗೆ 11 ಗಂಟೆಯ ಪ್ರಕಾರ, ಎಎಪಿ ಬಿಜೆಪಿಗಿಂತ ಮುಂದಿದೆ.

ಎಲ್ಲಾ 250 ಸ್ಥಾನಗಳಲ್ಲಿ ಎಎಪಿ ಹಾಗೂ ಬಿಜೆಪಿ ಮುನ್ನಡೆ ಸಾಧಿಸಿದೆ. ಎಎಪಿ 135 ಕ್ಷೇತ್ರಗಳಲ್ಲಿ ಎಎಪಿ ಮುನ್ನಡೆ ಸಾಧಿಸಿದೆ. ಬಿಜೆಪಿ 111 ಸ್ಥಾನಗಳಲ್ಲಿ ಮುನ್ನಡೆ ಹೊಂದಿದೆ. ಕೇವಲ 9 ಕ್ಷೇತ್ರಗಳಲ್ಲಿ ಕಾಂಗ್ರೆಸ್‌ ಮುಂದಿದೆ. 4 ಕ್ಷೇತ್ರಗಳಲ್ಲಿ ಪಕ್ಷೇತರರು ಮುನ್ನೆಡೆ ಸಾಧಿಸಿದ್ದಾರೆ. ಒಟ್ಟು 250 ಕ್ಷೇತ್ರಗಳಿಗೆ ಚುನಾವಣೆ ನಡೆದಿದೆ.

English summary
The Aam Aadmi Party went into a huddle at Chief Minister Arvind Kejriwal's home this morning after the Delhi MCD poll results were not quite lining up with its expectations in early trends. His deputy, Manish Sisodia, and senior leader Raghav Chadha were there for the meeting, as the AAP and BJP switched places constantly,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X