Live

Delhi Election Exit Poll 2025 Live: ಬಹುತೇಕ ಸಮೀಕ್ಷೆಗಳ ಪ್ರಕಾರ ದೆಹಲಿಯಲ್ಲಿ ಬಿಜೆಪಿ ಗೆಲುವು

ನವದೆಹಲಿ, ಫೆಬ್ರವರಿ 05: ದೆಹಲಿ ರಾಜ್ಯದ ವಿಧಾನಸಭಾ ಚುನಾವಣೆ 2025ಯ ಮತದಾನ ಪ್ರಕ್ರಿಯೆ ಬುಧವಾರ (ಫೆಬ್ರವರಿ 05) ಸಂಜೆ ಪೂರ್ಣಗೊಂಡಿದೆ. ಸಂಜೆ 6.30ಕ್ಕೆ ದೆಹಲಿ ಚುನಾವಣೋತ್ತರ ಸಮೀಕ್ಷೆಗಳ ಫಲಿತಾಂಶ (Exit Poll 2025) ಪ್ರಕಟಗೊಂಡಿದೆ. ಯಾವುದೇ ಪಕ್ಷ ಅಧಿಕಾರ ಗದ್ದುಗೆ ಏರಲು 70 ಸೀಟುಗಳಲ್ಲಿ 36 ಸೀಟು ಪಡೆಯಲೇಬೇಕಿದೆ. ಕಣದಲ್ಲಿ ಎಎಪಿ, ಬಿಜೆಪಿ ಮಧ್ಯೆ ತೀವ್ರ ಪೈಪೋಟಿ ಏರ್ಪಟ್ಟಿದ್ದು, ಎಷ್ಟು ಸೀಟುಗಳು ಯಾರ ಪಾಲು ಎಂಬುದೇ ಕುತೂಹಲ ಕೆರಳಿಸಿದೆ. ಹಾಗಾದರೆ ಯಾವ ಪಕ್ಷಕ್ಕೆ ಹೆಚ್ಚಿನ ಸೀಟು ಬರಲಿವೆ? ಜನ ಯಾರಿಗೆ ಮಣೆ ಹಾಕಿದ್ದಾರೆ ಎಂಬ ಮುನ್ಸೂಚನೆ ನಿಮಗೆ ಈ ಎಕ್ಸಿಟ್ ಪೋಲ್ ನಿಂದ ಸಿಗಬಹುದು.

ದೆಹಲಿಯ ಎಲ್ಲ ಸೀಟುಗಳಿಗೆ ಬುಧವಾರ ಒಂದೇ ಹಂತದಲ್ಲಿ ಮತದಾನ ನಡೆದಿದೆ. ಮಧ್ಯಾಹ್ನ 11 ಗಂಟೆ ಹೊತ್ತಿಗೆ ಒಟ್ಟು 3 ಸಾವಿರ ಮತಗಟ್ಟೆಗಳಲ್ಲಿ ಶೇ 18ರಷ್ಟು ಮತದಾನ ಆಗಿದೆ. ಎಕ್ಸಿಟ್ ಪೋಲ್ ಫಲಿತಾಂಶ ತಾತ್ಕಲಿಕವಾಗಿದ್ದು, ಶನಿವಾರ (ಫೆ.8) ಕೇಂದ್ರ ಚುನಾವಣೆ ಆಯೋಗವೇ ಅಧಿಕೃತ ಫಲಿತಾಂಶ ಪ್ರಕಟಿಸಲಿದೆ. ಅಂದು ದೆಹಲಿ ರಾಜಕೀಯ ಭವಿಷ್ಯ ಯಾವ ಪಕ್ಷಗೆ ದೊರೆಯಲಿದೆ ಎಂಬುದು ಗೊತ್ತಾಗಲಿದೆ.

Delhi Election 2025 Exit Poll Live Updates AAP BJP Congress Kannada

Feb 05, 2025, 11:01 pm IST

ಎನ್‌ಡಿಟಿವಿ ಪೋಲ್ ಆಫ್ ಪೋಲ್‌ ಸಮೀಕ್ಷೆಗಳ ಪ್ರಕಾರ ದೆಹಲಿಯಲ್ಲಿ ಬಿಜೆಪಿ 39 ಸ್ಥಾನಗಳಲ್ಲಿ ಗೆಲುವು ಸಾಧಿಸುವ ಸಾಧ್ಯತೆ ಇದ್ದು, ಆಮ್ ಆದ್ಮಿ ಪಕ್ಷ 30 ಸ್ಥಾನಗಳಲ್ಲಿ ಗೆಲ್ಲುವ ಸಾಧ್ಯತೆ ಇದೆ. ಕಾಂಗ್ರೆಸ್ ಒಂದು ಸ್ಥಾನದಲ್ಲಿ ಗೆಲ್ಲಬಹುದು ಎಂದು ಹೇಳಿದೆ.
Feb 05, 2025, 10:51 pm IST

ದೆಹಲಿ ವಿಧಾನಸಭೆ ಚುನಾವಣೋತ್ತರ ಸಮೀಕ್ಷೆಗಳು ಕಾಂಗ್ರೆಸ್‌ಗೆ ದೊಡ್ಡ ಆಘಾತ ಕೊಟ್ಟಿವೆ. ಈ ಬಾರಿ ಕಾಂಗ್ರೆಸ್ ಖಾತೆ ತೆರೆಯುವ ಸಾಧ್ಯತೆ ಇಲ್ಲ ಎಂದು ಸಮೀಕ್ಷೆಗಳು ತಿಳಿಸಿವೆ.
Feb 05, 2025, 8:46 pm IST

ದೆಹಲಿ ವಿಧಾನಸಭೆ ಚುನಾವಣೆಯ ಎಕ್ಸಿಟ್ ಪೋಲ್‌ ಸಮೀಕ್ಷೆಗಳನ್ನು ಆಮ್ ಆದ್ಮಿ ಪಕ್ಷ ತಿರಸ್ಕರಿಸಿದೆ. ಎಎಪಿ ಕಾರ್ಯಕ್ಷಮತೆಯನ್ನು ಕಡಿಮೆ ಅಂದಾಜು ಮಾಡಲಾಗಿದೆ ಎಂದು ಎಎಪಿ ಹೇಳಿದ್ದು, ಎಕ್ಸಿಟ್‌ ಪೋಲ್‌ನಲ್ಲಿ ನೀಡಿರುವ ಸಂಖ್ಯೆಗಿಂತ ಹೆಚ್ಚಿನ ಸೀಟುಗಳನ್ನು ಗೆಲ್ಲುವುದಾಗಿ ವಿಶ್ವಾಸ ವ್ಯಕ್ತಪಡಿಸಿದೆ.
Feb 05, 2025, 7:44 pm IST

ಟೈಮ್ಸ್ ನೌ ನವಭಾರತ್- ಜೆವಿಸಿ ಎಕ್ಸಿಟ್ ಪೋಲ್ ಪ್ರಕಾರ, ದೆಹಲಿ ಚುನಾವಣೆಯಲ್ಲಿ ಬಿಜೆಪಿಗೆ 39-45 ಸ್ಥಾನ ಪಡೆಯಲಿದೆ. ಎಎಪಿಗೆ 22-31 ಸ್ಥಾನಗಳು ಬರಲಿದ್ದು, ಕಾಂಗ್ರೆಸ್‌ಗೆ 0-2 ಸ್ಥಾನಗಳು ಮತ್ತು ಇತರರಿಗೆ 0-1 ಸ್ಥಾನ ಬರಬಹುದು ಎಂದು ಭವಿಷ್ಯ ನುಡಿದಿದೆ.
Feb 05, 2025, 7:24 pm IST

ದೆಹಲಿ ಚುನಾವಣೋತ್ತರ 'ಅಬ್ಸಲ್ಯೂಟ್ ಪಾಲಿಟಿಕೋ' 2025 ಸಮೀಕ್ಷೆ ಪ್ರಕಾರ, ಬಿಜೆಪಿ ಈ ಬಾರಿ ಅಧಿಕಾರ ಹಿಡಿಯಲಿದೆ ಎಂದಿದೆ. ಎಎಪಿ 15-17 ಸೀಟು ಗೆದ್ದು ಸೋಲಲಿದೆ, ಬಿಜೆಪಿಯು 43ರಿಂದ 52 ಸ್ಥಾನ ಗಳಿಸುವ ಮೂಲಕ ಅಧಿಕಾರ ಹಿಡಿಯಲಿದೆ. ಕಾಂಗ್ರೆಸ್‌ ಎರಡು ಸ್ಥಾನಕ್ಕೆ ತೃಪ್ತಿಪಟ್ಟುಕೊಳ್ಳಲಿದೆ ಎಂದು ತಿಳಿಸಿದೆ.
Feb 05, 2025, 7:12 pm IST

ಚುನಾವಣೋತ್ತರ ಸಮೀಕ್ಷೆಗಳ ಕುರಿತು ಮಾತನಾಡಿರುವ ದೆಹಲಿ ಬಿಜೆಪಿ ಅಧ್ಯಕ್ಷ ವೀರೇಂದ್ರ ಸಚ್‌ದೇವ ಅವರು, 'ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಯ ಸಾಧನೆಯ ಬಗ್ಗೆ ನನಗೆ ವಿಶ್ವಾಸವಿದೆ. ದೆಹಲಿಯ ಜನರು ಭ್ರಷ್ಟಾಚಾರ ಮುಕ್ತ ಸರ್ಕಾರವನ್ನು ಬಯಸುತ್ತಿದ್ದಾರೆ' ಎಂದು ಹೇಳಿದರು. 'ನಮಗೆ ಪ್ರೀತಿ ಮತ್ತು ಆಶೀರ್ವಾದ ನೀಡಿದ್ದಕ್ಕಾಗಿ ದೆಹಲಿಯ ಜನರನ್ನು ನಾನು ಅಭಿನಂದಿಸಲು ಬಯಸುತ್ತೇನೆ. ಆಮ್‌ ಆದ್ಮಿ ಪಾರ್ಟಿಯು ದೆಹಲಿಯನ್ನು ತೊರೆಯುತ್ತಿದೆ ಮತ್ತು ಇಲ್ಲಿ ಬಿಜೆಪಿ ಅಧಿಕಾರಕ್ಕೆ ಬರುತ್ತಿದೆ. ದೆಹಲಿಯ ಜನರು ಭ್ರಷ್ಟಾಚಾರ ಮುಕ್ತ ಸರ್ಕಾರವನ್ನು ಬಯಸಿದ್ದಾರೆ' ಎಂದು ಅವರು ತಿಳಿಸಿದರು.
Feb 05, 2025, 7:05 pm IST

Dainik Bhaskar exit poll: ದೈನಿಕ್ ಬಾಸ್ಕರ್ ಎಕ್ಸಿಟ್ ಪೋಲ್ ಪ್ರಕಾರ, ಎಎಪಿ 43-47 ಬಿಜೆಪಿ 23-27 ಹಾಗೂ ಕಾಂಗ್ರೆಸ್ ಕೇವಲ 01 ಸೀಟು ಗೆಲ್ಲಬಹುದೆಂದು ತನ್ನ ಫಲಿತಾಂಶದಲ್ಲಿ ತಿಳಿಸಿದೆ.
Feb 05, 2025, 6:59 pm IST

ಈ ಬಾರಿಯೂ ದೆಹಲಿ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ ಕಳಪೆ ಸಾಧನೆ ಮಾಡಿದೆ. ಎಕ್ಸಿಟ್‌ ಪೋಲ್‌ ಫಲಿತಾಂಶಗಳ ಪ್ರಕಾರ ಯಾವುದೇ ಎಕ್ಸಿಟ್‌ ಪೋಲ್‌ನಲ್ಲೂ ಕಾಂಗ್ರೆಸ್‌ಗೆ ಕನಿಷ್ಠ 5 ಸೀಟುಗಳು ಸಹ ಬಂದಿಲ್ಲ!
Feb 05, 2025, 6:56 pm IST

ವಿವಿಧ ಎಕ್ಸಿಟ್ ಪೋಲ್ ಫಲಿತಾಂಶಗಳ ಪ್ರಕಾರ ಈ ಬಾರಿ ದೆಹಲಿಯಲ್ಲಿ ಎಎಪಿ ಅಧಿಕಾರ ಕಳೆದುಕೊಳ್ಳಲಿದ್ದು. ಬಿಜೆಪಿ ಅಧಿಕಾರಕ್ಕೆ ಬರಲಿದೆ. ಎಎಪಿ ದೆಹಲಿಯಲ್ಲಿ ಮೂರನೇ ಬಾರಿ ಅಧಿಕಾರಕ್ಕೆ ಬರುವ ಕನಸು ಕಂಡಿತ್ತು. ದೆಹಲಿಯಲ್ಲಿ ಒಟ್ಟು 70 ವಿಧಾನಸಭಾ ಕ್ಷೇತ್ರಗಳಿದ್ದು 36 ಮ್ಯಾಜಿಕ್‌ ಸಂಖ್ಯೆ ಆಗಿದೆ
Feb 05, 2025, 6:55 pm IST

ವೀಪ್ರೆಸೈಡ್ ಎಕ್ಸಿಟ್ ಪೋಲ್ ಫಲಿತಾಂಶ ಬಿಡುಗಡೆ ಆಗಿದ್ದು, ಆಡಳಿತಾರೂಢ ಆಮ್ ಆದ್ಮಿ ಪಕ್ಷ (ಎಎಪಿ) ಪರವಾಗಿ ಅಧಿಕ ಸಂಖ್ಯೆ ಪ್ರಕಟಿಸಿದೆ. ಈ ಬಾರಿ ಅರವಿಂದ್ ಕೇಜ್ರಿವಾಲ್ ಅವರ ಪಕ್ಷಕ್ಕೆ 46 ರಿಂದ 52 ಸ್ಥಾನಗಳು ಸಿಗುತ್ತವೆ. ಬಿಜೆಪಿ 18 ರಿಂದ 25 ಸ್ಥಾನಗಳನ್ನು ಪಡೆಯುವ ಸಾಧ್ಯತೆಯಿದೆ. ಕಾಂಗ್ರೆಸ್ ಕೂಡ 1 ಸ್ಥಾನವನ್ನು ಪಡೆಯಬಹುದು ಎಂದಿದೆ.
Feb 05, 2025, 6:53 pm IST

ದೆಹಲಿ ಚುನಾವಣೆಗೆ ಸಂಬಂಧಿಸಿದಂತೆ ಪಿ-ಮಾರ್ಕ್ ಎಕ್ಸಿಟ್ ಪೋಲ್ ಫಲಿತಾಂಶ ಪ್ರಕಟಿಸಿದ್ದು, ಎಎಪಿ 18-25 ಸೀಟುಗಳು ಮತ್ತು ಬಿಜೆಪಿಯು ಬಿಜೆಪಿಯು 42-50 ಸೀಟು ಪಡೆಯಲಿದೆ ಎಂದು ತಿಳಿಸಿದೆ. ಕಾಂಗ್ರೆಸ್ ಗೆ ದೆಹಲಿಯಲ್ಲಿ ಭಾರೀ ಹಿನ್ನಡೆ ಆಗಲಿದೆ ಎಂದು ಭವಿಷ್ಯ ನುಡಿದಿದೆ.
Feb 05, 2025, 6:53 pm IST

ದೆಹಲಿ ಚುನಾವಣೆಗೆ ಸಂಬಂಧಿಸಿದಂತೆ ಪಿ-ಮಾರ್ಕ್ ಎಕ್ಸಿಟ್ ಪೋಲ್ ಫಲಿತಾಂಶ ಪ್ರಕಟಿಸಿದ್ದು, ಎಎಪಿ 18-25 ಸೀಟುಗಳು ಮತ್ತು ಬಿಜೆಪಿಯು ಬಿಜೆಪಿಯು 42-50 ಸೀಟು ಪಡೆಯಲಿದೆ ಎಂದು ತಿಳಿಸಿದೆ. ಕಾಂಗ್ರೆಸ್ ಗೆ ದೆಹಲಿಯಲ್ಲಿ ಭಾರೀ ಹಿನ್ನಡೆ ಆಗಲಿದೆ ಎಂದು ಭವಿಷ್ಯ ನುಡಿದಿದೆ.
Feb 05, 2025, 6:50 pm IST

ದೆಹಲಿ ಚುನಾವಣೆಗೆ ಸಂಬಂಧಿಸಿದಂತೆ ಪೋಲ್ ಡೈರಿ ಎಕ್ಸಿಟ್ ಪೋಲ್ ಫಲಿತಾಂಶ ಪ್ರಕಟಿಸಿದ್ದು, ಎಎಪಿ 18-25 ಸೀಟುಗಳು ಮತ್ತು ಬಿಜೆಪಿಯು 42-50 ಸೀಟು ಪಡೆಯಲಿದೆ ಎಂದು ತಿಳಿಸಿದೆ. ಕಾಂಗ್ರೆಸ್ ದೆಹಲಿಯಲ್ಲಿ ಮತ್ತೆ ನೆಲಕಚ್ಚಲಿದೆ.
Feb 05, 2025, 6:49 pm IST

ದೆಹಲಿ ವಿಧಾನಸಭೆ ಚುನಾವಣೆಯ ಮತದಾನೋತ್ತರ ಸಮೀಕ್ಷೆಗಳು ಹೊರಬಿದ್ದಿದ್ದು, ಮಾರ್ಟೈಜ್‌ ಸಮೀಕ್ಷೆ ಪ್ರಕಾರ ಎಎಪಿ 32-37, ಬಿಜೆಪಿ 35-40, ಕಾಂಗ್ರೆಸ್‌ 0-1 ಸ್ಥಾನಗಳನ್ನು ಪಡೆಯಲಿದೆ.
Feb 05, 2025, 6:46 pm IST

ದೆಹಲಿ ವಿಧಾನಸಭೆ ಚುನಾವಣೆಯ ಮತದಾನೋತ್ತರ ಸಮೀಕ್ಷೆಗಳು ಹೊರಬಿದ್ದಿದ್ದು, ಎಎಪಿ ಸಮೀಕ್ಷೆ ಪ್ರಕಾರ ಎಎಪಿ 32-37, ಬಿಜೆಪಿ 35-40, ಕಾಂಗ್ರೆಸ್‌ 0-1 ಸ್ಥಾನಗಳನ್ನು ಪಡೆಯಲಿದೆ.
Feb 05, 2025, 6:46 pm IST

ಜೆವಿಸಿ ದೆಹಲಿ ಚುನಾವಣೆ ಎಕ್ಸಿಟ್ ಪೋಲ್ ಪ್ರಕಾರ, ಬಿಜೆಪಿಯು 39-45 ಸ್ಥಾನಗಳು ಹಾಗೂ ಆಮ್ ಆದ್ಮಿ ಪಕ್ಷವು 22-31 ಸ್ಥಾನ ಗೆಲ್ಲಬಹುದು ಎಂದು ಹೇಳಿದೆ
Feb 05, 2025, 6:43 pm IST

ಜೆವಿಸಿ ದೆಹಲಿ ಚುನಾವಣೆ ಎಕ್ಸಿಟ್ ಪೋಲ್ ಪ್ರಕಾರ, ಬಿಜೆಪಿಯು 39-45 ಸ್ಥಾನಗಳು ಹಾಗೂ ಆಮ್ ಆದ್ಮಿ ಪಕ್ಷವು 22-31 ಸ್ಥಾನ ಗೆಲ್ಲಬಹುದು ಎಂದು ಹೇಳಿದೆ
Feb 05, 2025, 6:42 pm IST

ಚಾಣಕ್ಯ ಸ್ಟಾಟರ್ಜಿಸ್ ಎಕ್ಸಿಟ್ ಪೋಲ್ ಪ್ರಕಾರ, ದೆಹಲಿ 70 ಸ್ಥಾನಗಳಲ್ಲಿ ಬಿಜೆಪಿಯು 39-44 ಸ್ಥಾನಗಳು ಹಾಗೂ ಆಮ್ ಆದ್ಮಿ ಪಕ್ಷವು 25-28 ಸ್ಥಾನ ಗೆಲ್ಲಬಹುದು ಎಂದು ತಿಳಿಸಿದೆ. ಕಾಂಗ್ರೆಸ್ ಒಂದೇ ಒಂದು ಸ್ಥಾನ ಗೆಲ್ಲುವುದು ಅನುಮಾನ ಎಂದು ಈ ಸಮೀಕ್ಷೆ ತಿಳಿಸಿದೆ.
Feb 05, 2025, 6:42 pm IST

ದೆಹಲಿ ಚುನಾವಣೆ ಕುರಿತು ಪಿಪಲ್ ಪಲ್ಸ್ ಎಕ್ಸಿಟ್ ಪೋಲ್ ಪ್ರಕಾರ, 70 ಸೀಟುಗಳಲ್ಲಿ ಬಿಜೆಪಿಯು 51-60 ಸೀಟು ಮತ್ತು ಆಮ್ ಆದ್ಮಿ ಪಕ್ಷವು 10-19 ಸೀಟು ಗೆಲ್ಲಬಹುದು ಎಂದು ತಿಳಿಸಿದೆ. ಈ ಸಮೀಕ್ಷೆ ಪ್ರಕಾರ, ಕಾಂಗ್ರೆಸ್‌ಗೆ ಒಂದು ಸ್ಥಾನ ಬಾರದು ಎಂದು ಹೇಳಲಾಗುತ್ತಿದೆ.
Feb 05, 2025, 6:38 pm IST

ದೆಹಲಿ ಚುನಾವಣೆಯ ಪೋಲ್ ಆಫ್ ಪೋಲ್ ಎಕ್ಸಿಟ್ ಪೋಲ್ ಪ್ರಕಾರ, 70 ಕ್ಷೇತ್ರಗಳಲ್ಲಿ ಬಿಜೆಪಿಯು 43-50 ಸೀಟು ಹಾಗೂ ಆಮ್ ಆದ್ಮಿ ಪಕ್ಷವು 21-28 ಸೀಟು ಗೆಲ್ಲಬಹುದು ಎಂದು ತಿಳಿಸಿದೆ. ಈ ಮೂಲಕ ಬಿಜೆಪಿ ಕಮಾಲ್ ಮಾಡುವ ಸಾಧ್ಯತೆ ಇದೆ.
Feb 05, 2025, 6:37 pm IST

Matrize ABP exit poll ಪ್ರಕಾರ, ದೆಹಲಿ ಚುನಾವಣೆಯಲ್ಲಿ, ದೆಹಲಿಯಲ್ಲಿ ಬಿಜೆಪಿ 35 ರಿಂದ 40 ಸೀಟು ಗೆಲ್ಲಲಿದೆ. ಆಮ್ ಆದ್ಮಿ ಪಕ್ಷವು 32 ರಿಂದ 37 ಸ್ಥಾನ ಗಳಿಸುವ ಸಾಧ್ಯತೆ ಇದೆ. ಕಾಂಗ್ರೆಸ್ ಕನಿಷ್ಠ 1 ಕ್ಷೇತ್ರ ಗೆಲ್ಲಬಹುದು ಎಂದು ಎಕ್ಸಿಟ್ ಪೋಲ್ ತಿಳಿಸಿದೆ.
Feb 05, 2025, 6:05 pm IST

ಬಹುನಿರೀಕ್ಷೆಯ ದಹಲಿ ವಿಧಾನಸಭೆ ಚುನಾವಣೆಯು ಅಂತಿಮಗೊಂಡಿದೆ. ಸಂಜೆ 5 ಗಂಟೆಯ ತನಕ ಶೇಕಡಾ 57ರಷ್ಟು ಮತದಾನ ಆಗಿದೆ ಎಂದು ಕೇಂದ್ರ ಲೋಕಸೇವಾ ಆಯೋಗ ತಿಳಿಸಿದೆ. ದೆಹಲಿಯ 70 ಕ್ಷೇತ್ರಗಳಿಗೆ ಒಂದೇ ಹಂತದಲ್ಲಿ ಮತದಾನ ಆಗಿದೆ. ಫೆಬ್ರವರಿ 8ರಂದು ಫಲಿತಾಂಶ ಪ್ರಕಟಗೊಳ್ಳಲಿದೆ.
Feb 05, 2025, 3:45 pm IST

* ದೆಹಲಿಯಲ್ಲಿ 2025ರ ಚುನಾವಣೆಯಲ್ಲಿ ಮತ್ತೆ ಆಮ್ ಆದ್ಮಿ ಪಕ್ಷ (ಎಎಪಿ) ಅಧಿಕಾರಕ್ಕೆ ಬಂದರೆ ಮತ್ತೆ ಮಾಜಿ ಸಿಎಂ ಅರವಿಂದ್ ಕೇಜ್ರಿವಾಲ್ ಅವರನ್ನೇ ಮುಖ್ಯಮಂತ್ರಿಯನ್ನಾಗಿ ಮಾಡಲು ಪಕ್ಷದ ನಾಯಕರು ಈಗಾಗಲೇ ತಿರ್ಮಾನಿಸಿ ಘೋಷಿಸಿದ್ದಾರೆ.
Feb 05, 2025, 3:43 pm IST

* ದೆಹಲಿಯಲ್ಲಿ ಕಳೆದ ಎರಡು ಚುನಾವಣೆಗಳಲ್ಲಿ ಆಮ್ ಆದ್ಮಿ ಪಕ್ಷವೇ ಅಧಿಕಾರಕ್ಕೆ ಬಂದಿದೆ. 2015 ಮತ್ತು 2020ರಲ್ಲಿ ಕಾಂಗ್ರೆಸ್ ಒಂದೇ ಒಂದು ಕ್ಷೇತ್ರ ಗೆಲ್ಲಲು ಸಾಧ್ಯವಾಗಿಲ್ಲ. ಎಎಪಿ ಮುಂದೆ ಬಿಜೆಪಿ ಗೆಲ್ಲಲು ಆಗದೇ ವಿಪಕ್ಷ ಸ್ಥಾನದಲ್ಲಿ ಕುಳಿತಿದೆ.
Feb 05, 2025, 3:41 pm IST

* ದೆಹಲಿ ಚುನಾವಣೆಗಾಗಿ ಒಟ್ಟು 70 ಕ್ಷೇತ್ರಗಳಿಂದ ಒಟ್ಟು 1040 ಅಭ್ಯರ್ಥಿಗಳಿಂದ ನಾಮಪತ್ರ ಸಲ್ಲಿಕೆ ಆಗಿದೆ. ಇದರಲ್ಲಿ 699 ಅಭ್ಯರ್ಥಿಗಳ ನಾಮಪತ್ರ ಫೈನಲ್ ಆದವು. ಅವರೆಲ್ಲರ ಭವಿಷ್ಯ ಫೆಬ್ರವರಿ 08ರಂದು ಫಲಿತಾಂಶ ದಿನ ಗೊತ್ತಾಗಲಿದೆ.
Feb 05, 2025, 3:41 pm IST

* ಬಹುನಿರೀಕ್ಷೆಯ ದೆಹಲಿ ವಿಧಾನಸಭಾ ಚುನಾವಣೆ 2025 ಮತದಾನ ಪ್ರಕ್ರಿಯೆ ಪೂರ್ಣಗೊಂಡಿದೆ. ಬೆಳಗ್ಗೆ 07 ಗಂಟೆಗೆ ಆರಂಭವಾದ ಮತದಾನ ಇಂದು ಸಂಜೆ 6 ಗಂಟೆಗೆ ಮತದಾನ ಪೂರ್ಣಗೊಂಡಿದೆ. ನಿರೀಕ್ಷಿತ ಮತದಾನ ಪ್ರಮಾಣ ದಾಖಲಾಗಿದೆ. ಫೆಬ್ರವರಿ 08ರಂದು ಮತ ಎಣಿಕೆ ನಡೆದು ಫಲಿತಾಂಶ ಹೊರ ಬೀಳಲಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+