Get Updates
Get notified of breaking news, exclusive insights, and must-see stories!

Delhi Election 2025: ಅರವಿಂದ್‌ ಕೇಜ್ರಿವಾಲ್‌ಗೆ ಎಎಪಿ ಸಂಸದೆಯಿಂದಲೇ ಮುಖಭಂಗ!

Delhi Election 2025: ದೆಹಲಿ ವಿಧಾನಸಭೆ ಚುನಾವಣೆಗೆ ಇನ್ನು ಆರು ದಿನಗಳು ಮಾತ್ರ ಬಾಕಿ ಉಳಿದಿವೆ. ಈ ರೀತಿ ಇರುವಾಗಲೇ ದೆಹಲಿಯಲ್ಲಿ ಭಾರೀ ರಾಜಕೀಯ ಹೈಡ್ರಾಮಾಗಳು ನಡೆಯುತ್ತಿವೆ. ಚುನಾವಣೆ ಸಮೀಪಿಸುತ್ತಿರುವಾಗಲೇ ಆಮ್‌ ಆದ್ಮಿ ಪಾರ್ಟಿಯ ರಾಷ್ಟ್ರೀಯ ಸಂಚಾಲಕ ಹಾಗೂ ದೆಹಲಿಯ ಮಾಜಿ ಮುಖ್ಯಮಂತ್ರಿ ಅರವಿಂದ್‌ ಕೇಜ್ರಿವಾಲ್ ಅವರಿಗೆ ಮುಖಭಂಗವಾಗುವ ಪರಿಸ್ಥಿತಿಯೊಂದು ಎದುರಾಗಿದೆ. ಹೌದು ದೆಹಲಿಯಲ್ಲಿ ಕಳೆದ ಎರಡು ಅವಧಿಯಿಂದ ಎಎಪಿ ಅಧಿಕಾರದಲ್ಲಿ ಇದೆ. ಆದರೆ, ಮದ್ಯ ನೀತಿ ಹಗರಣ ಸೇರಿದಂತೆ ವಿವಿಧ ಕಾರಣಗಳಿಂದ ಈ ಬಾರಿ ದೆಹಲಿಯಲ್ಲಿ ಎಎಪಿ ಮರಳಿ ಅಧಿಕಾರಕ್ಕೆ ಬರುವುದು ಸವಾಲು ಎದುರಾಗಿದೆ. ಇದರ ನಡುವೆ ಎಎಪಿಯ ಸಂಸದೆಯಿಂದಲೇ ಎಎಪಿಗೆ ಭಾರೀ ಮುಖಭಂಗದ ಪರಿಸ್ಥಿತಿ ಎದುರಾಗಿದೆ. ಚುನಾವಣೆಯ ಹೊಸ್ತಿಲಿನಲ್ಲಿರುವಾಗಲೇ ಎಎಪಿ ಹಾಗೂ ಅರವಿಂದ್‌ ಕೇಜ್ರಿವಾಲ್‌ ಅವರು ಮುಜುಗರಕ್ಕೆ ಒಳಗಾಗಿದ್ದಾರೆ.

ದೆಹಲಿ ವಿಧಾನಸಭೆ ಚುನಾವಣೆಯು ಫೆಬ್ರವರಿ 5ಕ್ಕೆ ನಡೆಯಲಿದೆ. ಇನ್ನು ದೆಹಲಿ ವಿಧಾನಸಭೆ ಚುನಾವಣೆಯ ಫಲಿತಾಂಶ ಫೆಬ್ರವರಿ 8ಕ್ಕೆ ಪ್ರಕಟವಾಗಲಿದೆ. ಈ ನಡುವೆ ಚುನಾವಣೆಗೆ ಕೆಲವೇ ದಿನಗಳು ಬಾಕಿ ಉಳಿದಿರುವಾಗಲೇ ದೆಹಲಿಯಲ್ಲಿ ಭಾರೀ ರಾಜಕೀಯ ಹೈಡ್ರಾಮಾಗಳು ನಡೆಯುತ್ತಿವೆ. ದೆಹಲಿಯ ಮಾಜಿ ಮುಖ್ಯಮಂತ್ರಿ ಹಾಗೂ ರಾಷ್ಟ್ರೀಯ ಸಂಚಾಲಕರಾದ ಅರವಿಂದ್ ಕೇಜ್ರಿವಾಲ್ ಅವರ ದೆಹಲಿ ಮನೆಯ ಮುಂದೆಯೇ ಕಸ ಸುರಿದು ವಿನೂತನ ಪ್ರತಿಭಟನೆಯನ್ನು ಮಾಡಲಾಗಿದೆ.

Delhi Election 2025 Arvind Kejriwal Gets a Slap in Face from AAP MP

ಅಚ್ಚರಿ ಎಂದರೆ ಈ ರೀತಿ ಪ್ರತಿಭಟನೆ ಮಾಡಿದ್ದು ಬೇರೆ ಯಾರೂ ಅಲ್ಲ ಅವರದೇ ಪಕ್ಷದ ಸಂಸದೆ! ಹೌದು ದೆಹಲಿಯಲ್ಲಿ ಚುನಾವಣೆ ಸಮಯದಲ್ಲಿ ವಿರೋಧ ಪಕ್ಷಗಳಿಗಿಂತ ಅವರದೇ ಪಕ್ಷದವರಿಂದ ಮುಜುಗರಕ್ಕೆ ಒಳಗಾಗುವ ಪರಿಸ್ಥಿತಿ ಅರವಿಂದ್‌ ಕೇಜ್ರಿವಾಲ್‌ ಅವರಿಗೆ ಎದುರಾಗಿದೆ. ಕೇಜ್ರಿವಾಲ್ ಅವರ ಮನೆಯ ಮುಂದೆ ಕಸ ಚಲ್ಲಿದ ಆರೋಪದ ಮೇಲೆ ಗುರುವಾರ ದೆಹಲಿ ಪೊಲೀಸರು ಎಎಪಿ ಸಂಸದೆ ಸ್ವಾತಿ ಮಲಿವಾಲ್ ಅವರನ್ನು ಅರೆಸ್ಟ್‌ ಮಾಡಿದ್ದಾರೆ. ಈ ಬೆಳವಣಿಗೆ ದೆಹಲಿಯಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ.

ದೆಹಲಿಯನ್ನು ಕಸದ ತೊಟ್ಟಿಯಾಗಿ ಬದಲಾಯಿಸಲಾಗಿದೆ ಎಂದು ಎಎಪಿ ಸಂಸದೆ ಸ್ವಾತಿ ಮಲಿವಾಲ್ ಅವರು ಆರೋಪಿಸಿದ್ದು. ನಾನು ಅರವಿಂದ್ ಕೇಜ್ರಿವಾಲ್ ಅವರ ಬಳಿ ಮಾತನಾಡುವುದಕ್ಕೆ ಇಲ್ಲಿಗೆ ಬಂದಿದ್ದೆ. ನೀವು ಬದಲಾಗಬೇಕು ಇಲ್ಲವೇ ಜನರೇ ನಿಮ್ಮನ್ನು ಬದಲಾಯಿಸಲಿದ್ದಾರೆ ಎಂದು ಅವರಿಗೆ ಹೇಳುವುದಕ್ಕೆ ನಾನು ಇಷ್ಟಪಡುತ್ತೇನೆ. ನಾನು ಯಾವುದೇ ಕಾರಣಕ್ಕೂ ಅವರ ಪರವಾಗಿರುವ ಗೂಂಡಾಗಳಿಗೆ ಇಲ್ಲವೇ ಪೊಲೀಸರಿಗೆ ಹೆದರಿಕೊಳ್ಳುವುದಿಲ್ಲ ಅಂತ ಮಲಿವಾಲ್ ಅವರು ಅರವಿಂಗ್‌ ಕೇಜ್ರಿವಾಲ್‌ ಅವರಿಗೆ ಸವಾಲು ಹಾಕಿದ್ದಾರೆ.

ಚುನಾವಣೆ ಸಮೀಪಿಸುತ್ತಿರುವಾಗಲೇ ನಡೆದಿರುವ ಘಟನೆ ಭಾರೀ ಚರ್ಚೆಗೆ ಕಾರಣವಾಗಿದೆ. ಗುರುವಾರ ದೆಹಲಿಯ ಸ್ಥಳೀಯ ನಿವಾಸಿಗಳೊಂದಿಗೆ ಮಲಿವಾಲ್ ಅವರು ದೆಹಲಿಯ ವಿಕಾಸಪುರಿ ಎನ್ನುವ ಪ್ರದೇಶಕ್ಕೆ ಅವರು ಭೇಟಿ ನೀಡಿದರು. ಇದಾದ ಮೇಲೆ ಅಲ್ಲಿ ಕಸದ ಸಮಸ್ಯೆ ಹಾಗೂ ಸ್ವಚ್ಛತೆಯ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಿದರು. ನಂತರ ಅರವಿಂದ್‌ ಕೇಜ್ರಿವಾಲ್ ವಿರುದ್ಧ ಪ್ರತಿಭಟನೆ ನಡೆಸಿದ್ದಾರೆ.

ದೆಹಲಿ ಪರಿಸ್ಥಿತಿ ಸಂಪೂರ್ಣವಾಗಿ ಕೊಳಕು ಮಯವಾಗಿದೆ. ರಸ್ತೆಗಳು ಹಾಳಾಗಿವೆ, ಇಲ್ಲಿನ ಚರಂಡಿಗಳು ತುಂಬಿ ಹರಿಯುತ್ತಿವೆ ಅವ್ಯವಸ್ಥೆಯಿಂದ ಕೂಡಿದೆ ಎಂದು ದೂರಿದ್ದಾರೆ. ದೆಹಲಿಗೆ ಅವರು ಕೊಟ್ಟಿರುವ ಕೊಡುಗೆ ಕಸ, ಆ ಗಿಫ್ಟ್‌ ಅನ್ನು ನಾವು ಅವರಿಗೇ ಹಿಂದಿರುಗಿಸಲು ನಿರ್ಧರಿಸಿದ್ದೇವೆ ಎಂದು ಅವರು ಹೇಳಿದ್ದಾರೆ. ದೆಹಲಿ ಚುನಾವಣೆ ಸಮಯದಲ್ಲಿ ಅವರದೇ ಪಕ್ಷದ ಸಂಸದೆ ತಿರುಗಿ ಬಿದ್ದಿರುವುದು ಎಎಪಿಗೆ ಬಿಸಿ ತುಪ್ಪವಾಗಿ ಪರಿಣಮಿಸಿದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+