ವೈದ್ಯ ಲೋಕದ ಅಚ್ಚರಿ; 7.4 ಕೆ.ಜಿ. ಕಿಡ್ನಿ ಹೊರತೆಗೆದ ವೈದ್ಯರು!

ನವದೆಹಲಿ, ನವೆಂಬರ್ 26 : ವೈದ್ಯಕೀಯ ಲೋಕವೇ ಅಚ್ಚರಿ ಪಡುವಂತಹ ಶಸ್ತ್ರ ಚಿಕಿತ್ಸೆಯನ್ನು ದೆಹಲಿಯ ವೈದ್ಯರು ಮಾಡಿದ್ದಾರೆ. ರೋಗಿಯೊಬ್ಬರ ದೇಹದಿಂದ 7.4 ಕೆ.ಜಿ. ತೂಕದ ಕಿಡ್ನಿಯನ್ನು ಹೊರತೆಗೆದಿದ್ದಾರೆ. 7.2 ಕೆ. ಜಿ. ಕಿಡ್ನಿಯನ್ನು ಬೆಂಗಳೂರಿನಲ್ಲಿ ಹಿಂದೆ ಹೊರತೆಗೆಯಲಾಗಿತ್ತು.

ದೆಹಲಿಯ ಶ್ರೀ ಗಂಗಾರಾಮ್ ಆಸ್ಪತ್ರೆ ಇಂತಹ ಅಪರೂಪದ ಶಸ್ತ್ರ ಚಿಕಿತ್ಸೆಗೆ ಸಾಕ್ಷಿಯಾಗಿದೆ. Autosomal Dominant Polycystic ಎಂಬ ಕಿಡ್ನಿ ಸಂಬಂಧಿತ ರೋಗದಿಂದ ಬಳಲುತ್ತಿದ್ದ ರೋಗಿಯ ಕಿಡ್ನಿ 7.4 ಕೆ. ಜಿ. ಇತ್ತು.

ಸಾಮಾನ್ಯ ವ್ಯಕ್ತಿಯ ದೇಹದಲ್ಲಿನ ಕಿಡ್ನಿ 120-150 ಗ್ರಾಂ ಇರುತ್ತದೆ. 7.4 ಕೆ. ಜಿ. ಎಂದರೆ ಎರಡು ನವಜಾತ ಶಿಶುಗಳ ತೂಕವಾಗುತ್ತದೆ. ಇದು ಭಾರತದಲ್ಲಿ ನಡೆದ ಅತಿ ದೊಡ್ಡ ಕಿಡ್ನಿ ಶಸ್ತ್ರ ಚಿಕಿತ್ಸೆ ಎಂದು ದಾಖಲಾಗುವ ಸಾಧ್ಯತೆ ಇದೆ.

Delhi Doctors Remove 7.4 Kg Kidney From Patient

ಶಸ್ತ್ರ ಚಿಕಿತ್ಸೆಯಲ್ಲಿ ಪಾಲ್ಗೊಂಡಿದ್ದ ಡಾ. ಸಚಿನ್, "ಸೋಂಕು ಮತ್ತು ರಕ್ತಸ್ರಾವ ಉಂಟಾಗದಿದ್ದರೆ ವೈದ್ಯರು ಅಂಗಾಂಗಳನ್ನು ತೆಗೆಯುವುದಿಲ್ಲ. ಅಂಗ ಕಾರ್ಯ ನಿರ್ವಹಣೆ ಮಾಡುವಂತೆ ಮಾಡಲು ಕೊನೆ ತನಕ ಹೋರಾಟ ಮಾಡುತ್ತೇವೆ" ಎಂದು ಹೇಳಿದ್ದಾರೆ.

"ರೋಗಿಯ ಕಿಡ್ನಿಯಲ್ಲಿ ಸೋಂಕು ಉಂಟಾಗಿತ್ತು. ಯಾವುದೇ ಔಷಧಗಳನ್ನು ನೀಡಿದರೂ ಅದು ನಿಯಂತ್ರಣಕ್ಕೆ ಬರಲಿಲ್ಲ. ಕಿಡ್ನಿಯ ಗಾತ್ರ ದೊಡ್ಡದಾಗಿತ್ತು, ಆದ್ದರಿಂದ ಅದನ್ನು ಕತ್ತರಿಸಿ ತೆಗೆಯಲಾಯಿತು" ಎಂದು ವೈದ್ಯ ಸಚಿನ್ ತಿಳಿಸಿದ್ದಾರೆ.

7.2 ಕೆ. ಜಿ. ತೂಕವಿದ್ದ ಕಿಡ್ನಿಯನ್ನು ಬೆಂಗಳೂರಿನ ಎಂ. ಎಸ್. ರಾಮಯ್ಯ ಆಸ್ಪತ್ರೆ ಮೂತ್ರಶಾಸ್ತ್ರ ವಿಭಾಗದ ವೈದ್ಯರು ಹೊರತೆಗೆದಿದ್ದರು. ಇದು ವಿಶ್ವದ ಅತಿ ದೊಡ್ಡ ಕಿಡ್ನಿ ಎಂದು ಅಂದಾಜಿಸಲಾಗಿತ್ತು. ಈಗ 7.4 ಕೆ. ಜಿ. ತೂಕದ ಕಿಡ್ನಿ ಹೊರತೆಗೆಯಲಾಗಿದೆ.

2016ರಲ್ಲಿ ದುಬೈನಲ್ಲಿ ವೈದ್ಯ ಡಾ. ಫರಿಬೋರ್ಜ್ ಬಘೇರಿ ಎಂಬುವವರು ರೋಗಿಯೊಬ್ಬನ ದೇಹದಿಂದ 4.25 ಕೆ. ಜಿ. ಕಿಡ್ನಿಯನ್ನು ಹೊರತೆಗೆಯಲಾಗಿತ್ತು. 2011ರಲ್ಲಿ ಮಹಾರಾಷ್ಟ್ರದ ಧುಲೆಯ ಯುರಾಲಜಿ ಇನ್ಸ್‌ಸ್ಟಿಟ್ಯೂಟ್‌ನಲ್ಲಿ ಹೊರತೆಗೆದ ಕಿಡ್ನಿ 2.14 ಕೆ. ಜಿ. ಇತ್ತು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+