ಮಹಿಳಾ ಕುಸ್ತಿಪಟುಗಳ ಮೇಲೆ ಲೈಂಗಿಕ ದೌರ್ಜನ್ಯ: ಬಿಜೆಪಿ ಸಂಸದನ ವಿರುದ್ಧ ಮಹತ್ವದ ಆದೇಶ
ಬೆಂಗಳೂರು, ಮೇ 10: ದೇಶದಲ್ಲಿ ಬಿಜೆಪಿ ಮುಖಂಡರೊಬ್ಬರು ಮಹಿಳಾ ಕುಸ್ತಿಪಟುಗಳ ಮೇಲೆ ಲೈಂಗಿಕ ಕಿರುಕುಳ ನೀಡಿದ್ದಾರೆ ಎಂಬ ಆರೋಪ ವಿಚಾರ ಭಾರೀ ಸದ್ದು ಮಾಡಿತ್ತು. ಅನೇಕ ಪ್ರತಿಭಟನೆಗಳು ಜರುಗಿದ್ದವು. ಇದೀಗ ಈ ಪ್ರಕರಣಕ್ಕೆ ಟ್ವಿಸ್ಟ್ ಸಿಕ್ಕಿದ್ದು, ದೆಹಲಿ ನ್ಯಾಯಾಲಯ ಮಹತ್ವದ ಆದೇಶ ನೀಡಿದೆ.
ಬಿಜೆಪಿ ಸಂಸದ ಬ್ರಿಜ್ ಭೂಷಣ್ ಶರಣ್ ಸಿಂಗ್ ವಿರುದ್ಧ 06 ಮಹಿಳಾ ಕುಸ್ತಿಪಟುಗಳು ಲೈಂಗಿಕ ದೌರ್ಜನ್ಯದ ಆರೋಪ ಮಾಡಿದ್ದರು. ಈ ಬಿಜೆಪಿ ಮುಖಂಡ ಕುಸ್ತಿ ಫೆಡರೇಶನ್ ಆಫ್ ಇಂಡಿಯಾ (WFO) ಮಾಜಿ ಮುಖ್ಯಸ್ಥರು ಆಗಿದ್ದಾರೆ. ಸದ್ಯ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಷ್ಟ್ರ ರಾಜಧಾನಿ ನವದೆಹಲಿ ನ್ಯಾಯಾಲಯ ಶುಕ್ರವಾರ ಸಂಸದ ವಿರುದ್ಧ ಆರೋಪಗಳನ್ನು ರೂಪಿಸಲು ಆದೇಶ ಹೊರಡಿಸಿ ಆಘಾತ ನೀಡಿದೆ.

ದೆಹಲಿಯ ACMM ನ್ಯಾಯಾಲಯದಲ್ಲಿ ವಿಚಾರಣೆ ವೇಳೆ ಪ್ರಿಯಾಂಕಾ ರಾಜ್‌ಪೂತ್ ಅವರು ಬಿಜೆಪಿ ಸಂಸದ ಬ್ರಿಜ್ ಭೂಷಣ್ ವಿರುದ್ಧ ಆರೋಪಗಳಿಗೆ ಸಾಕಷ್ಟು ಸಾಕ್ಷಿಗಳಿವೆ. ಮಹಿಳೆಯ ನಮ್ರತೆ ಮತ್ತು ಲೈಂಗಿಕ ಕಿರುಕುಳದ (ಐಪಿಸಿಯ ಸೆಕ್ಷನ್ 354 ಮತ್ತು 354A) ಐದು ಬಲಿಪಶುಗಳ ವಿರುದ್ಧದ ಅಪರಾಧಗಳಲ್ಲಿ ಆರೋಪ ಹೊರಿಸಲು ಸಾಕಷ್ಟು ವಸ್ತುಗಳಿವೆ ಎಂದು ತಿಳಿಸಿದರು.
ಆರೋಪ ಮಾಡಿರುವ ಆರು ಸಂತ್ರಸ್ತೆಯಲ್ಲಿ ಆರನೇಯವರಿಂದ ಸಂಸದ ಮೇಲೆ ಹೊರಿಸಲಾಗಿದ್ದ ಆರೋಪಗಳಿಂದ ಭೂಷನ್ ಬಿಡುಗಡೆ ಮಾಡಲಾಗಿದೆ ಎಂದು ಕೋರ್ಟ್ ಹೇಳಿದೆ. ಏಕೆಂದರೆ ಈ ಸಂತ್ರಸ್ತೆ ಮಾಡಿದ ಆರೋಪ ಸುಮಾರು ಎಂಟು ವರ್ಷಗಳ (2012) ಹಿಂದಿನದು ಎಂದು ಕೋರ್ಟ್ ತಿಳಿಸಿದೆ.
ಬ್ರೀಜ್ ಭೂಷಣ್ ವಿರುದ್ಧ ಸಾಕಷ್ಟು ಸಾಕ್ಷ್ಯಗಳಿವೆ
ಲೈಂಗಿಕ ಕಿರುಕುಳ ಆರೋಪಿತ ಬಿಜೆಪಿ ಮುಖಂಡನ ವಿರುದ್ಧ ಸಾಕಷ್ಟು ಸಾಕ್ಷ್ಯಗಳಿವೆ. ಇದೇ ಮೇ 21ರಂದು ನ್ಯಾಯಾಲವು ಔಪಚಾರಿಕ ಆರೋಪಗಳನ್ನು ರೂಪಿಸಲಿದೆ. ಆರೋಪಿ ಭೂಷಣ್ ಮಾತ್ರವಲ್ಲದೇ WFO ಸಹಾಯಕ ಕಾರ್ಯದರ್ಶಿ ವಿನೋದ್ ತೋಮರ್ ವಿರುದ್ಧವು ಇದೇ ರೀತಿಯ ಆರೋಪಗಳು ಕೇಳಿ ಬಂದಿವೆ.
ಆರೋಪಿ ಭೂಷಣ್ ವಿರುದ್ಧ ಈ ಹಿಂದೆ ದೆಹಲಿ ಪೊಲೀಸರು ಚಾರ್ಜ್ ಶೀಟ್ ಸಲ್ಲಿಸಿದ್ದರು. ಇನ್ನೂ ಅಪ್ರಾಪ್ತೆ ಕುಸ್ತಿಪಟು ಸಹ ಲೈಂಗಿಕ ಕಿರುಕುಳದ ಆರೋಪ ಮಾಡಿದ್ದರು. ಈ ಕುರಿತು ಬೇರೊಂದು ನ್ಯಾಯಾಲಯ ಮೇ 20 ರಂದು ವಿಚಾರಣೆ ನಡೆಸಿ ಆದೇಶಿಸುವ ಸಾಧ್ಯತೆಗಳು ಇವೆ.












Click it and Unblock the Notifications