Delhi Election 2025: ತ್ರಿಕೋನ ಸ್ಪರ್ಧೆ, ಫೆ.8ಕ್ಕೆ ಫಲಿತಾಂಶ

ನವದೆಹಲಿ, ಫೆಬ್ರವರಿ 05: ರಾಷ್ಟ್ರ ರಾಜಧಾನಿ ದೆಹಲಿ ರಾಜ್ಯದಲ್ಲಿ 70 ವಿಧಾನಸಭಾ ಸೀಟುಗಳಿಗೆ ಇಂದು ಜನವರಿ 5ರಂದು ಬುಧವಾರ ಚುನಾವಣೆ ನಡೆಯುತ್ತಿದೆ. ಚುನಾವಣೆ ಬರದಿಂದ ಸಾಗಿದೆ. ಅಖಾಡಲ್ಲಿರುವ ಎಲ್ಲ 699 ನಾಯಕರಲ್ಲಿ ಬಿಜೆಪಿ, ಕಾಂಗ್ರೆಸ್, ಬಿಎಸ್‌ಪಿ, ಆಮ್ ಆದ್ಮಿ ಪಕ್ಷ ಸೇರಿದಂತೆ ವಿವಿಧ ಪಕ್ಷಗಳ ನಾಯಕರು ಸ್ಪರ್ಧಿಸಿದ್ದಾರೆ. ಪಕ್ಷೇತರ ಕ್ಯಾಂಡಿಡೇಟ್‌ಗಳು ಇಲ್ಲಿದ್ದಾರೆ. ಈ ಪೈಕಿ ಎಎಪಿ, ಕಾಂಗ್ರೆಸ್ ಮತ್ತು ಬಿಜೆಪಿ ಮಧ್ಯೆ ತ್ರಿಕೋನ ಸ್ಪರ್ಧೆ ಏರ್ಪಟ್ಟಿದೆ. ಇಂಡಿಯಾ ಮೈತ್ರಿಕೂಟದ ಪಕ್ಷಗಳೇ ಕಣದಲ್ಲಿ ಎದುರುಬದುರಾಗಿವೆ.

ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಕಾಂಗ್ರೆಸ್, ಟಿಎಂಸಿ, ಎಎಪಿ, ಬಿಎಸ್‌ಪಿ ಸೇರಿದಂತೆ ಅನೇಕ ಪಕ್ಷಗಳು ಕೇಂದ್ರ ಆಡಳಿತ ಪಕ್ಷ ಬಿಜೆಪಿ ವಿರುದ್ಧ ಒಟ್ಟಾಗಿದ್ದವರು. ಇಂಡಿಯಾ ಮೈತ್ರಿಕೂಟ ರಚಿಸಿದ್ದವು. ಬಿಜೆಪಿಯನ್ನು ಅಧಿಕಾರದಿಂದ ದೂರವಿಡಲು ಪ್ಲಾನ್ ಮಾಡಿಕೊಂಡು, ಪ್ರಧಾನಿ ನರೇಂದ್ರ ಮೋದಿ ವಿರುದ್ಧ ತೊಡೆ ತಟ್ಟಿದ್ದವು. ಆದರೆ ಮತ್ತೆ ಬಿಜೆಪಿ ಅಧಿಕಾರ ಹಿಡಿಯುವಲ್ಲಿ ಯಶಸ್ವಿಯಾಗಿದ್ದು ಗೊತ್ತೇ ಇದೆ.

Delhi Assembly Election 2025 Triangular Competition Results on Feb 8

ಮೈತ್ರಿಗೆ ಇಂಡಿಯಾ ಸದಸ್ಯ ಪಕ್ಷಗಳ ನಿರಾಸಕ್ತಿ

ಆದರೆ ಇಂಡಿಯಾ ಮೈತ್ರಿಕೂಟದಲ್ಲಿ ಒಂದಾಗಿದ್ದ ಪಕ್ಷಗಳ ಪೈಕಿ ಬಹುಜನ ಸಮಾಜ ಪಕ್ಷ (ಬಿಎಸ್‌ಪಿ), ಕಾಂಗ್ರೆಸ್, ಆಮ್‌ ಆದ್ಮಿ ಪಕ್ಷಗಳು ಪ್ರತ್ಯೇಕವಾಗಿ ದೆಹಲಿ ಚುನಾವಣೆ ಎದುರಿಸಿವೆ. ಯಾರೊಂದಿಗೂ ಮೈತ್ರಿ ಮಾಡಿಕೊಳ್ಳುವುದಿಲ್ಲ ಎಂದು ಬಿಎಸ್‌ಪಿ ರಾಷ್ಟ್ರಾಧ್ಯಕ್ಷೆ ಮಾಯಾವತಿ ಘೋಷಿಸಿದ್ದರು. ಎಎಪಿ ಸಹ ತಾನು ಯಾರೊಂದಿಗೂ ಕೈ ಜೋಡಿಸುವುದಿಲ್ಲ ಎಂದು ಕಾಂಗ್ರೆಸ್ ಬಗೆಗಿನ ನಿರಾಸಕ್ತಿಯನ್ನು ಹೊರಹಾಕಿತು.

ತ್ರಿಕೋನ ಸ್ಪರ್ಧೆ

ದೆಹಲಿಯ ಕಳೆದ ಎರಡು ಚುನಾವಣೆಯಲ್ಲಿ ಕಾಂಗ್ರೆಸ್ ಒಂದೇ ಒಂದು ಸ್ಥಾನ ಗೆದ್ದಿಲ್ಲ. ಹೀಗಾಗಿ ಈ ಬಾರಿ ಪ್ರತ್ಯೇಕವಾಗಿ ನಿಂತು ಸೀಟು ಗೆಲ್ಲುವ ವಿಶ್ವಾಸದಲ್ಲಿದೆ. ಇತ್ತ ಎಎಪಿ ದೆಹಲಿಯನ್ನು ಬಿಜೆಪಿಗೆ ಕೈಗೆ ನೀಡದಂತೆ ಪ್ಲಾನ್ ಮಾಡಿಕೊಂಡಿದೆ. ದೇಶದ ಹೃದಯಭಾಗದ ರಾಜ್ಯ ಎನ್ನಲಾಗುವ ದೆಹಲಿ ರಾಜ್ಯ ಸಣ್ಣ ಪಕ್ಷದ ಕೈಗೆ ಸಿಕ್ಕಿರುವುದಕ್ಕೆ ಬಿಜೆಪಿ ಸಹ ಟಕ್ಕರ್ ನೀಡಲು ಸಜ್ಜಾಗಿದೆ.

ಈ ಮೇಲಿನ ಕಾರಣಗಳಿಂದ ದೆಹಲಿ ರಾಜ್ಯದಲ್ಲಿ ಈ ಬಾರಿ ತ್ರಿಕೋನ ಸ್ಪರ್ಧೆ ಏರ್ಪಟ್ಟಿದೆ. ದೆಹಲಿ ಮಟ್ಟಿಗೆ ಬಿಜೆಪಿ ಮತ್ತು ಕಾಂಗ್ರೆಸ್ ಮಾತ್ರವಲ್ಲದೇ ಎಎಪಿ ಸಹ ಪ್ರಮುಖ ಹಾಗೂ ದೊಡ್ಡ ಪಕ್ಷವಾಗಿ ಗುರುತಿಸಿಕೊಂಡಿದೆ. ಒಂದೊಂದೆ ರಾಜ್ಯದಲ್ಲಿ ಎಎಪಿ ಅಧಿಕಾರ ಹಿಡಿಯುತ್ತಿದೆ.

ಮೂರನೇ ಭಾರಿಗೆ ಅಧಿಕಾರಕ್ಕೆ ಎಎಪಿ ಪ್ಲಾನ್

ಈಗಾಗಲೇ ದೆಹಲಿಯಲ್ಲಿ 2015ರಿಂದ ಎರಡು ಭಾರಿ ಅಧಿಕಾರ ಹಿಡಿದಿದೆ. ಮೂರನೇ ಭಾರಿ ಹಿಡಿಯಲು ಸಕಲ ಸಿದ್ಧತೆಯೊಂದಿಗೆ ಎಎಪಿ ಪಕ್ಷ ಮಾಜಿ ಸಿಎಂ ಅರವಿಂದ್ ಕೇಜ್ರಿವಾಲ್, ಸಿಎಂ ಅತಿಶಿ ಮರ್ಲೆನ ಹಾಗೂ ಹಿರಿಯ ನಾಯಕರ ನೇತೃತ್ವದಲ್ಲಿ ಚುನಾವಣೆ ಎದುರಿಸುತ್ತಿದೆ.

ಯಾವ ಪಕ್ಷವು ಎಷ್ಟಮಟ್ಟಿನ ಪೈಪೋಟಿ ಒಡ್ಡಿದೆ ಎಂಬುದು ಫೆಬ್ರವರಿ 08ರಂದು ಬಿಡುಗಡೆ ಆಗುವ ಫಲಿತಾಂಶ ಮೇಲೆ ಗೊತ್ತಾಗಲಿದೆ. ಏಕೆಂದರೆ ಈ ಬಾರಿಯು ಎಎಪಿ ಪರ ಒಲವು ಹೆಚ್ಚಿದೆ ಎನ್ನಲಾದರೂ ಸಹಿತ ಕೇಂದ್ರ ಆಡಳಿತ ಪಕ್ಷ ಬಿಜೆಪಿಯು ತೀವ್ರ ಪೈಪೋಟಿ ಒಡ್ಡಿದೆ. ಹೀಗಾಗಿ ತ್ರಿಕೋನ ಸ್ಪರ್ಧೆ ಖಚಿತವಾದರೂ ಪೈಪೋಟಿ ಹೇಗಿತ್ತು ಎಂಬುದು ಶೀಘ್ರವೇ ಗೊತ್ತಾಗಲಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+