Delhi Liquor Shops Close: ಈ ದಿನ ದೆಹಲಿಯಲ್ಲಿ ಡ್ರೈ ಡೇ: ಮದ್ಯದಂಗಡಿಗಳು ಬಂದ್

ದೆಹಲಿ, ಜನವರಿ 22: ರಾಷ್ಟ್ರ ರಾಜಧಾನಿಯಲ್ಲಿ ಮದ್ಯ ಪ್ರಿಯರಿಗೆ ಶಾಕಿಂಗ್ ಸುದ್ದಿ ಹೊರ ಬಿದ್ದಿದೆ. ಚುನಾವಣೆ ಆಯೋಗವು ದೆಹಲಿಯ ಎಲ್ಲ ಸ್ಥಾನಗಳಿಗೆ ವಿಧಾನಸಭಾ ಚುನಾವಣೆ ಘೋಷಣೆ ಮಾಡಿದೆ. ಇದರ ಬೆನ್ನಲ್ಲೆ ದೆಹಲಿ ರಾಜ್ಯ ಸರ್ಕಾರವು ಫೆಬ್ರವರಿ 3 ರಿಂದ 5 ರವರೆಗೆ ಮದ್ಯ ಮಾರಾಟ, ಮದ್ಯದಂಗಡಿಗಳನ್ನು ಬಂದ್ ಮಾಡಿ ಆದೇಶಿಸಿದೆ. ಮದ್ಯ ಮಾರಾಟ ಮಾಡುವ ಯಾವುದೇ ಸಂಸ್ಥೆಗಳು ಇದ್ದರು ಬಂದ್ ಮಾಡುವಂತೆ ಸೂಚನೆ ನೀಡಿದೆ.

ದೆಹಲಿಯಲ್ಲಿ ಸದ್ಯ ಚುನಾವಣೆ ಪ್ರಕ್ರಿಯೆಗಳು ಶುರುವಾಗಿವೆ. ದೆಹಲಿ 70 ವಿಧಾನಸಭಾ ಕ್ಷೇತ್ರಗಳಿಗೆ ಒಂದೇ ಹಂತದಲ್ಲಿ ಫೆಬ್ರವರಿ 5ರಂದು ಮತದಾನ ನಡೆಯಲಿದೆ. ಫೆಬ್ರವರಿ 8ರಂದು ಮತ ಎಣಿಕೆಗೆ ನಡೆಯಲಿದೆ. ಈ ಸಂಬಂಧ ಫೆಬ್ರವರಿ 3 ರಿಂದ 5 ರವರೆಗೆ ಮದ್ಯ ಮಾರಾಟ ಬಂದ್ ಮಾಡಿ ಆದೇಶಿಸಿದೆ. ನಿಯಮ ಉಲ್ಲಂಘಿಸಿದರೆ ಕ್ರಮ ಕೈಗೊಳ್ಳಲಾಗುತ್ತದೆ.

Delhi Assembly Election 2025 Liquor Shop and Liquor Sale Closed on Feb 5th and 8th

ದೆಹಲಿ ಅಬಕಾರಿ ಆಯುಕ್ತರು ಇತ್ತೀಚೆಗೆ ಗೆಜೆಟ್ ಅಧಿಸೂಚನೆ ಹೊರಡಿಸಿದೆ. ಅದರಲ್ಲಿ 70 ಸ್ಥಾನಗಳು ಇರುವ ದೆಹಲಿ ವಿಧಾನಸಭೆ ಚುನಾವಣೆ ವೇಳೆ ಮತದಾನದ ದಿನ ಮತ್ತು ಎಣಿಕೆಯ ದಿನದಂದು ವಿವಿಧ ಅಬಕಾರಿ ಪರವಾನಗಿಗಳಿಗಾಗಿ ಅಬಕಾರಿ ನಿಯಮಗಳು-2010 ರ ಅಡಿಯಲ್ಲಿ "ಡ್ರೈ ಡೇಸ್" ಘೋಷಣೆ ಮಾಡಿದೆ.

ಮದ್ಯ ಮಾರಾಟ ಬಂದ್ ಸಮಯ

ರಾಜಧಾನಿಯಲ್ಲಿ ಫೆಬ್ರವರಿ 3 ರ ಸಂಜೆ 6 ರಿಂದ ಫೆಬ್ರವರಿ 5 ರ ಸಂಜೆ 6 ರವರೆಗೆ (ಮತದಾನದ ಮುಕ್ತಾಯಕ್ಕೆ ನಿಗದಿಪಡಿಸಿದ ಸಮಯದೊಂದಿಗೆ ಕೊನೆಗೊಳ್ಳುವ 48 ಗಂಟೆಗಳ ಅವಧಿಯಲ್ಲಿ) ಮದ್ಯ ಮಾರಾಟ ನಿಷೇಧಿದಲಾಗಿದೆ. ಈ ವೇಳೆ ಲಿಕ್ಕರ್‌ ಅಂಗಡಿಗಳು ತೆರೆದಿರುವುದಿಲ್ಲ.

ಈ ಡ್ರೈ ಡೇ ವೇಳೆ ಹೋಟೆಲ್, ರೆಸ್ಟೋರೆಂಟ್, ಲಿಕ್ಕರ್ ಶಾಪ್, ಎಂಎಸ್‌ಐಎಲ್, ಮದ್ಯ ಪೂರೈಕೆ ಸಂಸ್ಥೆಗಳಿಂದ ಎಣ್ಣೆ ಮಾರಾಟಕ್ಕೆ ಬ್ರೇಕ್ ಹಾಕಲಾಗಿದೆ ಎಂದು ಅಧಿಸೂಚನೆಯಲ್ಲಿ ವಿವರಿಸಲಾಗಿದೆ. ಈ ಸಂಬಂಧ ಅಗತ್ಯ ಕಟ್ಟೆಚ್ಚರ ವಹಿಸಿರುವ ಪೊಲೀಸರು, ಕ್ಲಬ್‌ಗಳು, ಸ್ಟಾರ್ ಹೋಟೆಲ್‌ಗಳು, ರೆಸ್ಟೋರೆಂಟ್ ಗಳ ಮೇಲೆ ಕಣ್ಣಿಡಲಿದ್ದಾರೆ.

1040 ನಾಮಪತ್ರ ಸ್ವೀಕೃತಿ

ದೆಹಲಿಯಲ್ಲಿ ಚುನಾವಣೆ ಪ್ರಯುಕ್ತ ವಿವಿಧ ರಾಜಕೀಯ ಪಕ್ಷಗಳು, ಪಕ್ಷೇತರ ಅಭ್ಯರ್ಥಿಗಳಿಂದ ಒಟ್ಟು 1040 ನಾಮಪತ್ರಗಳು ಸಲ್ಲಿಕೆ ಆಗಿವೆ. ಒಟ್ಟು 477 ಉಮೇದುವಾರಿಕೆಗಳು ತಿರಸ್ಕೃತಗೊಂಡಿವೆ. ಉಳಿದವರು ಸ್ವೀಕರಿಸಲಾಗಿದೆ. ಒಟ್ಟು 1.55 ಕೋಟಿ ನೋಂದಾಯಿತ ಮತದಾರರು ಇಲ್ಲಿದ್ದಾರೆ. ಅವರೆಲ್ಲರು ಫೆಬ್ರವರಿ 05ರಂದು ಮತದಾನ ಮಾಡಲಿದ್ದಾರೆ.

ಸದ್ಯ ರಾಜಕೀಯ ಪಕ್ಷಗಳಿಂದ ಬಿರುಸಿನ ಚುನಾವಣಾ ಪ್ರಚಾರ ನಡೆಸಿದೆ. ಮೂರನೇ ಭಾರಿ ಅಧಿಕಾರ ಹಿಡಿಯಲು ಮಾಜಿ ಸಿಎಂ ಅರವಿಂದ್ ಕೇಜ್ರಿವಾಲ್ ನೇತೃತ್ವದ ಆಮ್ ಆದ್ಮಿ ಪಕ್ಷ ಸಜ್ಜಾಗಿದೆ. ಎಎಪಿಯನ್ನು ಅಧಿಕಾರದಿಂದ ದೂರ ಇಡಲು, ತಾನು ದೆಹಲಿಯಲ್ಲಿ ಸರ್ಕಾರ ರಚಿಸಿ ಕಾಂಗ್ರೆಸ್ ಮತ್ತು ಬಿಜೆಪಿ ರಣತಂತ್ರ ರೂಪಿಸಿವೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+